ವಾಹನಗಳ ಬಳಕೆ ಮತ್ತು ನಿರ್ವಹಣೆಯ ಸಲಹೆಗಳಬಗ್ಗೆ ಮಾಹಿತಿ ತಿಳುದಿಕೊಳ್ಳಿ
ವಾಹನಗಳ ನಿರ್ವಹಣೆ
ಆಧುನಿಕ ಜಗತ್ತಿನಲ್ಲಿ ಸಾರಿಗೆಯು ಒಂದು ಮಹತ್ವಪೂರ್ಣ ವಿಷಯವಾಗಿದೆ. ಪ್ರತಿಯೊಬ್ಬರೂ ಒಂದಿಲ್ಲೊಂದು ಕಾರ್ಯನಿರತರಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣ ಮಾಡುವುದು ಅನಿವಾರ್ಯ. ಸಾರ್ವಜನಿಕ ಸಾರಿಗೆ, ಮೆಟ್ರೋ, ರೈಲುಗಳು, ಟ್ಯಾಕ್ಸಿಗಳು, ಆಟೋ ರೀಕ್ಷಾಗಳು ಇತ್ಯಾದಿ ಸೇವೆಗಳು ಲಭ್ಯವಿದ್ದರೂ, ಎಲ್ಲಾ ಸಮಯ, ಎಲ್ಲಾ ಸ್ಥಳಗಳಿಗೆ, ನಮಗೆ ಬೇಕೆಂದಾಗ ಅನುಕೂಲಕರವಾಗಿ ಪ್ರಯಾಣ ಮಾಡಲು ನಮ್ಮ ಬಳಿ ವಾಹನ ಇರುವುದು ಅವಶ್ಯಕವಾಗಿದೆ. ದಿನನಿತ್ಯದ ಓಡಾಟಗಳಿಗಾಗಿ ಮತ್ತು ಅವಶ್ಯಕತೆ ಇದ್ದಾಗ ಬೇರೆ ಊರುಗಳಿಗೆ ಪ್ರಯಾಣ ಮಾಡಲು ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ಬಳಸುತ್ತೇವೆ. ವಾಹನಗಳನ್ನು ಬೇಕೆಂದಾಗ ಬಳಸಲು, ಉತ್ತಮ ದಕ್ಷತೆಗಾಗಿ, ಒಳ್ಳೆಯ ಕಾರ್ಯಕ್ಷಮತೆಗಾಗಿ, ಇಂಧನದ ಉಳಿತಾಯ, ಧೀರ್ಘಬಾಳಿಕೆಗಾಗಿ ಸರಿಯಾದ ಬಳಕೆ ಮತ್ತು ಸಮರ್ಪಕ ನಿರ್ವಹಣೆ ಅತ್ಯಗತ್ಯ.
ದ್ವಿಚಕ್ರ ವಾಹನಗಳ ಬಳಕೆ ಮತ್ತು ನಿರ್ವಹಣೆಯ ಸಲಹೆಗಳು:
ನಿಮ್ಮ ಹೆಲ್ಮೆಟ್‌ನ (Helmet) ಮೇಲೆ ಪ್ರತಿಫಲಿತ ಬ್ಯಾಂಡ್‌ಗಳನ್ನು ಇರುವಂತೆ ನೋಡಿಕೊಳ್ಳಿ ಮತ್ತು ಹೊಳೆಯುವ ಬಣ್ಣ ಹೊಂದಿರುವ ಹೆಲ್ಮೆಟ್ (Helmet) ಧರಿಸಿರಿ. ನಿಮ್ಮ ದ್ವಿಚಕ್ರ ವಾಹನದ ಬದಿಗಳಲ್ಲಿ ಮತ್ತು ಹಿಂಭಾಗದಲ್ಲಿ ಪ್ರತಿಫಲಿತ ಬ್ಯಾಂಡ್‌ಗಳನ್ನು ಇವೆಯೇ ಏನು ಪರಿಶೀಲಿಸಿ. ಚಾಲನೆ ಮಾಡುವಾಗ ತೆಗ್ಗು, ಗುಂಡಿಗಳಲ್ಲಿ ಸುರಕ್ಷಿತವಾಗಿ ಓಡಿಸಿ. ಟ್ರಕ್ಕು, ಬಸ್ಸು ಮತ್ತು ಇತರೆ ವಾಹನಗಳಿಂದ ನೀವು ದೂರವಿರುವುದನ್ನು ಖಚಿತಪಡಿಸಿಕೊಳ್ಳಿ.
ಅಡೆತಡೆಗಳು ಮತ್ತು ರಸ್ತೆ ಅಪಾಯಗಳನ್ನು ಅವಲೋಕಿಸಿ. ಕಸದ ರಾಶಿಗಳು, ಸ್ಪೀಡ್ ಬ್ರೇಕರ್‌ಗಳು, ತೈಲ ಸೋರಿಕೆ ಜಾಗಗಳು, ಪಾಟ್-ಹೋಲ್‌ಗಳು, ರೈಲ್ವೆ ಕ್ರಾಸಿಂಗ್‌ಗಳು, ಕಚ್ಚಾ ರಸ್ತೆಗಳು, ದಾರಿತಪ್ಪಿದ ಪ್ರಾಣಿಗಳು ಇವೆಲ್ಲವುದರಿಂದ ನಾವು ಜಾಗರೂಕರಾಗಿರದಿದ್ದರೆ ಗಂಭೀರ ಅಪಾಯವನ್ನುಂಟು ಮಾಡಬಹುದು.
ಪ್ರತಿ ಸವಾರಿಯ ಮೊದಲು ನೀವೇ ಪರೀಕ್ಷಿಸಲು ಪ್ರಯತ್ನಿಸಿ. ಬ್ರೇಕ್‌ಗಳ ಸ್ಥಿತಿ, ಗಾಳಿಯ ಒತ್ತಡ, ಟೈರ್ ಸ್ಥಿತಿ, ಹಾರ್ನ್, ಕ್ಲಚ್, ದೀಪಗಳು, ಇತ್ಯಾದಿಗಳ ಬಗ್ಗೆ ಗಮನಹರಿಸಿ. ನಿಮ್ಮ ಬೈಕು ಉತ್ತಮ ಸ್ಥಿತಿಯಲ್ಲಿದ್ದರೆ, ಅದು ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಅಪಘಾತಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಬೈಕ್ನ (Bike) ಹೊರಭಾಗವನ್ನು ಕಾಪಾಡಿಕೊಳ್ಳಲು, ಮೇಲ್ಮೈಯನ್ನು ನಿಯಮಿತವಾಗಿ ವೆಚ್ಚಗೊಳಿಸುತ್ತಿರಬೇಕು. ಅಲ್ಲದೆ, ನಿಮ್ಮ ಬೈಕ್‌ನ್ನು (Bike) ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ, ಆದಷ್ಟು ಬೈಕ್‌ನ್ನು (Bike) ನೆರಳಿನ ಬಳಿ ನಿಲ್ಲಿಸಲು ಪ್ರಯತ್ನಿಸಿ. ಸೂರ್ಯನ ಬೆಳಕಿಗೆ ಜಾಸ್ತಿ ಒಡ್ಡುವುದರಿಂದ ಬೈಕ್ನ ಹೊಳಪು ಕಡಿಮೆಯಾಗಬಹುದು.
ನಿಮ್ಮ ಬೈಕ್ ನ್ನು (Bike) ಚೆನ್ನಾಗಿ ನೋಡಿಕೊಳ್ಳಿ. ನಿಯಮಿತವಾಗಿ ಸೇವೆ (Service) ಮಾಡಿಸಿ. ಇಂಜಿನ್ ಮತ್ತು ಗೇರ್‌ಬಾಕ್ಸ್‌ಗೆ ಸರಾಗವಾಗಿ ಚಲಿಸಲು ಲೂಬ್ರಿಕೇಷನ್ ಅಗತ್ಯವಿರುತ್ತದೆ. ತಯಾರಕರು ನೀಡಿದ ಬಳಕೆದಾರರ ಕೈಪಿಡಿಯಲ್ಲಿ ಸೂಚಿಸಿದಂತೆ ನಿಮ್ಮ ವಾಹನ ಸೇವೆ ಮಾಡಿಸುವುದರಿಂದ ಇಂಧನದ ದಕ್ಷತೆ ಮತ್ತು ನಿಮ್ಮ ಬೈಕ್‌ನ ಒಟ್ಟಾರೆ ಕಾರ್ಯನಿರ್ವಹಣೆಯನ್ನು ಸುಧಾರಿಸಬಹುದು.
ಟೈರ್ ಒತ್ತಡವನ್ನು ಶಿಫಾರಸ್ಸು ಮಾಡಿರುವ ಮಟ್ಟದಲ್ಲಿ ಇರುವಂತೆ ನೋಡಿಕೊಳ್ಳಿ. ಇದು ನಿಮ್ಮ ಬೈಕ್ ಟೈರ್‌ಗಳ ಜೀವಿತಾವಧಿಯನ್ನು ಹೆಚ್ಚಿಸುವುದಲ್ಲದೆ ನಿಮ್ಮ ವಾಹನದ ಒಟ್ಟಾರೆ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ.
ನಿಮ್ಮ ಟೈರ್ ಚಕ್ರದ ಹೊರಮೈಗಳನ್ನು ವಾರಕ್ಕೊಮ್ಮೆಯಾದರೂ ಪರೀಕ್ಷಿಸಲು ಮರೆಯಬೇಡಿ. ಚಕ್ರ ಸಮತೋಲನ ಮತ್ತು ಜೋಡಣೆಯನ್ನು ಸಹ ಪರಿಶೀಲಿಸಿ.
ನಿಮ್ಮ ಬೈಕ್ ಗೆ ಬೆಳಗಿನ ಸಮಯ ಅಥವಾ ತುಂಬಾ ದಿನಗಳ ನಂತರ ಉಪಯೋಗಿಸುವಾಗ ಒತ್ತಡ ಹಾಕುವುದನ್ನು ( ಜೋರಾಗಿ ಓಡಿಸುವುದನ್ನು ) ತಪ್ಪಿಸಿ. ಇಂಜಿನ್ ಸರಿಯಾಗಿ ಬಿಸಿಯಾಗಲು ಸಮಯ ನೀಡಿ ಮತ್ತು ಕನಿಷ್ಠ 2 ರಿಂದ 5 ಕಿಲೋಮೀಟರ್‌ಗಳವರೆಗೆ ಸಾವಕಾಶವಾಗಿ ಓಡಿಸಿ.
ಇಂಧನ ಬಳಕೆಯನ್ನು ಕಡಿಮೆ ಮಾಡಲು ಹಾಗೂ ಬೈಕ್ ಉತ್ತಮ ಸ್ಥಿತಿಯಲ್ಲಿರಲು ಸವಾರಿಯ ವೇಗವನ್ನು 40 ರಿಂದ 60 ಕಿಲೋಮೀಟರ್ ವರೆಗೆ ಇರಿಸಲು ಪ್ರಯತ್ನಿಸಿ.
ನಿಮ್ಮ ವಾಹನವು ಬಳಕೆಯಲ್ಲಿಲ್ಲದಿದ್ದಾಗ ಇಂಜಿನ್ ಅನ್ನು ಆನ್ ಮಾಡುವುದರಿಂದ ಬಹಳಷ್ಟು ಇಂಧನ ವ್ಯರ್ಥವಾಗುತ್ತದೆ. ನೀವು ಹತ್ತಕ್ಕಿಂತ ಹೆಚ್ಚು ಸೆಕೆಂಡುಗಳಿಗಿಂತ ಹೆಚ್ಚು ಕಾಲ ಕಾಯುವ ಸಂಧರ್ಭವಿದ್ದಾಗ, ಇಂಜಿನ್ ಚಾಲನೆಯಲ್ಲಿರುವುದಕ್ಕಿಂತ ಸ್ವಿಚ್ ಆಫ್ ಮಾಡುವುದು ಉತ್ತಮ.
ಹೆಚ್ಚಿನ ಬೈಕ್ ಅಥವಾ ಸ್ಕೂಟರ್ ಸವಾರರು ಕ್ಲಚ್ ಅಗತ್ಯವಿಲ್ಲದಿದ್ದರೂ ಅದನ್ನು ಬಳಸುತ್ತಲೇ ಇರುತ್ತಾರೆ. ಸರಿಯಾದ ಗೇರ್‌ಗಳನ್ನು ಬಳಸಿ ಮತ್ತು ಅಗತ್ಯವಿದ್ದಾಗ ಕ್ಲಚ್ ನ್ನು ಸರಿಯಾಗಿ ಬಳಸಿ. ಇದು ಕ್ಲಚ್ ಪ್ಲೇಟ್‌ನ ಧೀರ್ಘಾಯುಷ್ಯವನ್ನು ಹೆಚ್ಚಿಸುತ್ತದೆ ಮತ್ತು ಗಮನಾರ್ಹ ಪ್ರಮಾಣದ ಇಂಧನವನ್ನು ಉಳಿಸಲು ಸಹಾಯ ಮಾಡುತ್ತದೆ.
ಸಾಧ್ಯವಾದರೆ ಬೆಳಿಗಿನ ಸಮಯ ದ್ವಿಚಕ್ರ ವಾಹನಕ್ಕೆ ಇಂಧನ ತುಂಬಿಸಿ. ತಾಪಮಾನ ಕಡಿಮೆಯಾದಾಗ ಬೆಳಿಗ್ಗೆ ಇಂಧನ ಸಾಂಧ್ರವಾಗಿರುತ್ತದೆ. ದಿನ ಕಳೆದಂತೆ ತಾಪಮಾನದ ಹೆಚ್ಚಳದೊಂದಿಗೆ, ಇಂಧನವು ವಿಸ್ತರಿಸಲು ಪ್ರಾರಂಭಿಸುತ್ತದೆ. ಈ ಸರಳ ಉಪಾಯವನ್ನು ಅನುಸರಿಸಿ.
ಸಾಧ್ಯವಾದರೆ ಪ್ರತಿ ಬಾರಿಯೂ ಒಂದೇ ಪೆಟ್ರೋಲ್ ಪಂಪ್‌ನಿಂದ ಇಂಧನವನ್ನು ಬರ‍್ತಿ ಮಾಡಿ. ವೈವಿಧ್ಯಮಯ ಇಂಧನ ಪಂಪ್‌ಗಳಿಂದ ತುಂಬಿದಾಗ ಇಂಧನಗಳ ನಡುವೆ ಇರುವ ಸ್ವಲ್ಪ ವ್ಯತ್ಯಾಸವನ್ನು ಇಂಜಿನ್ ನಿಭಾಯಿಸುವುದನ್ನು ಇದು ತಡೆಯುತ್ತದೆ.
ಸರಪಣಿಯನ್ನು (Chain) ಲೂಬ್ರಿಕೇಷನ್ ಮಾಡಲು ಮರೆಯಬೇಡಿ. ಸರಪಣಿಯನ್ನು (Chain) ಮೋಟಾರ್ ಸೈಕಲ್‌ನ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ನಿಮ್ಮ ಮೋಟಾರ್ ಸೈಕಲ್ ಅಥವಾ ಸ್ಕೂಟರ್‌ನ ಸರಪಳಿಯು ತುಂಬಾ ಬಿಗಿಯಾಗಿರಾದಂತೆ ಮತ್ತು ತುಂಬಾ ಸಡಿಲವಾಗಿಲ್ಲದಂತೆ ನೋಡಿಕೊಳ್ಳಿ. ಸವಾರಿಯಿಂದ ಹಿಂತಿರುಗಿದ ಕೂಡಲೇ ಲೂಬ್ರಿಕೇಷನ್ ಮಾಡಿದರೆ ಉತ್ತಮ. ಯಾಕೆಂದರೆ ಅದು ಬೆಚ್ಚಗಿರುವಾಗ ಲೂಬ್ರಿಕಂಟ್ ಅನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ.
ನಿಮ್ಮ ವಾಹನದ ಬ್ಯಾಟರಿ ಸಹ ಒಂದು ಪ್ರಮುಖ ಭಾಗವಾಗಿದೆ. ನಿಮ್ಮ ಬ್ಯಾಟರಿಯ ಟರ್ಮಿನಲ್‌ಗಳು ತುಕ್ಕು ಮುಕ್ತವಾಗಿಯೇ ಎಂದು ಖಚಿತಪಡಿಸಿಕೊಳ್ಳಿ. ಅಲ್ಲದೆ, ಬ್ಯಾಟರಿಯ ಕನೆಕ್ಟರ್‌ಗಳು ಸಡಿಲವಾಗಿರಬಾರದು ಮತ್ತು ಅವು ಸಡಿಲವಾಗಿದ್ದರೆ, ಮೋಟಾರ್ ಸೈಕಲ್ ಪ್ರಾರಂಭ (Start)ವಾಗುವುದಿಲ್ಲ.
ನಾಲ್ಕು ಚಕ್ರ (ಕಾರು) ಬಳಕೆ ಮತ್ತು ನಿರ್ವಹಣೆಯ ಸಲಹೆಗಳು :
ನೀವು ಸ್ಥಿರವಾದ ರೀತಿಯಲ್ಲಿ ವೇಗವನ್ನು ಹೆಚ್ಚಿಸಬೇಕು ಮತ್ತು ಸಾಧ್ಯವಾದಷ್ಟು ವೇಗವರ್ಧಕ (Accelerator) ವನ್ನು ಮೃದುವಾಗಿ ತಳ್ಳಬೇಕು. ವೇಗವನ್ನು ಹೆಚ್ಚಿಸಿ ಮತ್ತು ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುವುದರಿಂದ ಸಾವಧಾನದಿಂದ ವಾಹನ ಚಲಾಯಿಸುವುದಕ್ಕಿಂತ ಹೆಚ್ಚಿನ ಇಂಧನವನ್ನು ಬಳಸುತ್ತದೆ.
ವಾಹನ ಚಾಲನೆಯಲ್ಲಿ ಇಲ್ಲದೆ ಇರುವಾಗಲು ಇಂಜಿನ್ ಆನ್ (Engine on) ಇಡುವುದರಿಂದ ಅಮೂಲ್ಯವಾದ ಇಂಧನವನ್ನು ವ್ಯರ್ಥ ಮಾಡುವುದಲ್ಲದೆ ಪರಿಸರವನ್ನು ಕಲುಷಿತಗೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಟ್ರಾಫಿಕ್ ದೀಪಗಳು ಸಿಗ್ನಲ್ (signal) ಹಸಿರು ಬಣ್ಣಕ್ಕೆ ಬರುವ ಮೊದಲು ಎಷ್ಟು ಸೆಕೆಂಡುಗಳು ಉಳಿದಿವೆ ಎಂಬುದನ್ನು ಪ್ರದರ್ಶಿಸುತ್ತದೆ. ನೀವು ಸಾಕಷ್ಟು ಸಮಯ ಕಾಯಬೇಕಿದ್ದರೆ ಇಂಜಿನ್ ಆಫ್ ಮಾಡುವುದು ಒಳಿತು.
ಕಡಿಮೆ ಟೈರ್ ಒತ್ತಡವು ಪ್ರತಿರೋಧವನ್ನು ಹೆಚ್ಚಿಸುತ್ತದೆ, ಇದರಿಂದ ಇಂಜಿನ್ ಹೆಚ್ಚು ಕೆಲಸ ಮಾಡಬೇಕಾಗುತ್ತದೆ, ಇದು ಇಂಧನ ಬಳಕೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಟೈರ್‌ಗಳನ್ನು ಅವಶ್ಯಕ ಗಾಳಿಯ ಒತ್ತಡ ಮಟ್ಟದಲ್ಲಿ ಇಡುವುದು ಮುಖ್ಯ. ವಾರಕ್ಕೊಮ್ಮೆ ಮತ್ತು ದೂರ ಪ್ರಯಾಣ ಮಾಡುವ ಮೊದಲು ಟೈರ್ ಒತ್ತಡವನ್ನು ತಪ್ಪದೆ ಪರಿಶೀಲಿಸಿ. ವಾಹನದ ಸರಿಯಾದ ಟೈರ್ ಒತ್ತಡದ ಮಾಹಿತಿಯನ್ನು ಸಾಮಾನ್ಯವಾಗಿ ಚಾಲಕನ ಪಕ್ಕದ ಬಾಗಿಲಲ್ಲಿ ಉಲ್ಲೇಖಿಸಲಾಗಿರುತ್ತದೆ. ಚಕ್ರಗಳನ್ನು ಸಮತೋಲಿತವಾಗಿ ಮತ್ತು ಸರಿಯಾಗಿ ಇರುವಂತೆ ನೋಡಿಕೊಳ್ಳಿ.
ವಿಂಡ್‌ಸ್ಕ್ರೀನ್ ವಾಷರ್ ಪೆಟ್ಟಿಗೆಯಲ್ಲಿ ಸಾಕಷ್ಟು ನೀರು ಇದೆ ಎಂದು ಖಚಿತಪಡಿಸಿಕೊಳ್ಳಿ ಮತ್ತು ನಿಮ್ಮ ವೈಪರ್ ಬ್ಲೇಡ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಅನ್ನುವುದನ್ನು ಪರಿಶೀಲಿಸಿ. ನಿಮ್ಮ ವೈಪರ್ ಬ್ಲೇಡ್‌ಗಳನ್ನು ಹೆಚ್ಚಾಗಿ ಬಳಸದಿದ್ದರೂ ಸಹ ಪ್ರತಿ ಆರು ತಿಂಗಳಿಗೊಮ್ಮೆ ಬದಲಾಯಿಸಬೇಕು, ಏಕೆಂದರೆ ರಬ್ಬರ್ ವಾತಾವರಣ ಬದಲಾದಂತೆ ಹಾಳಾಗಿ ಹೋಗುತ್ತದೆ.
ವಾಹನದ ಇಂಧನ ಬಳಕೆ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಅವುಗಳಲ್ಲಿ ಕೆಲವು ಸಂಚಾರ ದಟ್ಟಣೆ ಮತ್ತು ರಸ್ತೆ ಪರಿಸ್ಥಿತಿಗಳು ನಿಮ್ಮ ನಿಯಂತ್ರಣದಲ್ಲಿರುವುದಿಲ್ಲ. ಆದರೆ ನಿಮ್ಮ ಚಾಲನೆಯ ಶೈಲಿಯನ್ನು ಸುಧಾರಿಸುವುದರಿಂದ ಮತ್ತು ನಿಮ್ಮ ಕಾರನ್ನು ಉತ್ತಮ ಸ್ಥಿತಿಯಲ್ಲಿಡುವುದರಿಂದ ಉತ್ತಮ ಇಂಧನದ ಬಳಕೆಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಪ್ರತಿ ಲೀಟರ್ ಇಂಧನದಿಂದ ಹೆಚ್ಚು ಕಿಲೋಮೀಟರ್ ಹೊರತೆಗೆಯಲು ಪ್ರಯತ್ನಿಸಿ.
ಯಾವುದೇ ಸೋರಿಕೆಯನ್ನು ನೀವು ಗಮನಿಸಿದರೆ, ಕಾರನ್ನು ತಪ್ಪದೆ ಸೇವಾ ಕೇಂದ್ರದಲ್ಲಿ ಪರೀಕ್ಷಿಸಿಕೊಳ್ಳಿ.
ಕಾರಿನಲ್ಲಿ ಅನಗತ್ಯವಾದ, ಬಾರವಾದ ವಸ್ತುಗಳಿದ್ದರೆ ತೆಗೆದು ಬಿಡಿ.
ಕೆಂಪು ದೀಪವು ದೂರದಿಂದ ನೀವು ನೋಡಿದರೆ, ಅದರ ಕಡೆಗೆ ವೇಗವಾಗಿ ಹೋಗುವುದರಲ್ಲಿ ಅರ್ಥವಿಲ್ಲ. ಬದಲಾಗಿ, ನಿಮ್ಮ ಕಾರನ್ನು ಟ್ರಾಫಿಕ್ ಜಂಕ್ಷನ್ ಕಡೆಗೆ ಸರಾಗವಾಗಿ ಹೋಗುವಂತೆ ನೀವು ನೋಡಿಕೊಳ್ಳಬಹುದು. ಇದರಿಂದ ಇಂಧನ ಉಳಿತಾಯ ಮತ್ತು ಸುರಕ್ಷತೆ ಸಾಧ್ಯವಾಗುತ್ತದೆ.
ಕಾರನ್ನು ಸ್ವಚ್ಚವಾಗಿಡಿ, ಉಪಯೋಗಿಸದೆ ಇದ್ದಾಗ ಹೊದಿಕೆಯನ್ನು ಹಾಕಿರಿ. ಕಾರಿನ ಬಣ್ಣಕ್ಕೆ ಹಾನಿಯಾಗುವುದನ್ನು ತಪ್ಪಿಸಲು, ವ್ಯಾಕ್ಸ್ ಪಾಲಿಶ್ ಅನ್ನು ವರ್ಷಕ್ಕೆ ಕನಿಷ್ಠ ಎರಡು ಮೂರು ಬಾರಿ ಮಾಡಿಸಿ. ಅಧಿಕ ಒತ್ತಡದ ಜೆಟ್‌ನಿಂದ ಅಥವಾ ಸಾಂಧರ್ಭಿಕವಾಗಿ ವೃತ್ತಿಪರ ಕಾರ್‌ವಾಶ್ ಸೌಲಭ್ಯಕ್ಕೆ ಕರೆದೊಯ್ಯುವ ಮೂಲಕ ಕಾರನ್ನು ನಿಯಮಿತವಾಗಿ ಸ್ವಚ್ಚಗೊಳಿಸಿ.
ನಿಮ್ಮ ಬ್ರೇಕ್ ದೀಪಗಳು ಮತ್ತು ಸೂಚಕಗಳನ್ನು (Indicator) ಹೆಡ್‌ಲೈಟ್‌ಗಳೊಂದಿಗೆ ಆನ್ ಮತ್ತು ಆಫ್ ಮಾಡಿ ಅವಾಗವಾಗ ಪರಿಶೀಲಿಸಿ.
ನೀವು ಪ್ರತಿದಿನ ಕೆಲಸದ ನಂತರ ಮನೆಗೆ ಬಂದಾಗ ರಿವರ್ಸ್ ಪಾರ್ಕ್ ಮಾಡಿ ಕಾರು ನಿಲ್ಲಿಸಲು ಪ್ರಯತ್ನಿಸಿ. ಇದರಿಂದ ಪ್ರತಿದಿನ ಅಮೂಲ್ಯವಾದ ಇಂಧನವನ್ನು ಉಳಿಸಬಹುದು. ಬೆಳಗಿನ ಜಾವ ಇಂಜಿನ್ ತಂಪಾಗಿರುವಾಗ ಕಾರು ಹೊರತೆಗೆಯುವುದು ಇಂಜಿನ್ ಗೆ ಹೆಚ್ಚು ಶ್ರಮದಾಯಕವಾಗಿರುತ್ತದೆ.
ಪಾರ್ಕಿಂಗ್ ಅಥವಾ ಹ್ಯಾಂಡ್ ಬ್ರೇಕ್‌ಗಳನ್ನು ಸಂಧರ್ಭಕ್ಕೆ ಸರಿಯಾಗಿ ಬಳಸಿ, ವಿಶೇಷವಾಗಿ ನೀವು ಇಳಿಜಾರಿನಲ್ಲಿದ್ದರೆ, ಬೆಟ್ಟಗಳಲ್ಲಿ ಪ್ರಯಾಣಿಸುವಾಗ ಇದು ವಾಹನದ ಹಿಂಭಾಗದಲ್ಲಿ ಬ್ರೇಕ್‌ಗಳನ್ನು ಸರಿಹೊಂದಿಸಲು ಸಹಾಯ ಮಾಡುತ್ತದೆ ಮತ್ತು ಬ್ರೇಕ್ಗಳ ಬಾಳಿಕೆಯನ್ನು ಹೆಚ್ಚಿಸುತ್ತದೆ.
ನಿಮ್ಮ ಕಾರನ್ನು ನಿಯಮಿತವಾಗಿ ಪರಿಶೀಲಿಸಬೇಕು ಮತ್ತು ತಪ್ಪದೆ ಸೇವೆಯನ್ನು (Service) ಮಾಡಿಸಬೇಕು. ಅನಗತ್ಯ, ಕೊನೆಯ ನಿಮಿಷದ ರಿಪೇರಿಗಳನ್ನು ತಪ್ಪಿಸಲು ಕಾರಿನ ನಿಯಮಿತ ಕಾಳಜಿ ನಿಮಗೆ ಸಹಾಯ ಮಾಡುತ್ತದೆ.
ಕಾಮೆಂಟ್‌ಗಳಿಲ್ಲ