ಮಕ್ಕಳಿಗೆ ಆನ್ ಲೈನ್ ಅಲ್ಲಿ ಶಿಕ್ಷಣ ಉತ್ತಮವೇ ಇದರ ಬಗ್ಗೆ ಮಾಹಿತಿ ತಿಳುದಿಕೊಳ್ಳಿ
ಆನ್ ಲೈನ್ ಅಲ್ಲಿ ಶಿಕ್ಷಣ (Online Education):
ನಮ್ಮ ದೇಶದ ಹಳ್ಳಿಗಳಲ್ಲಿರುವ, ಪುಟ್ಟ ಪಟ್ಟಣಗಳಲ್ಲಿ ಇರುವವರು ಒಳ್ಳೆಯ ಶೈಕ್ಷಣಿಕ ಕಲಿಕೆಯ ಉದ್ದೇಶಕ್ಕಾಗಿ ದೊಡ್ಡ ನಗರಗಳಿಗೆ ಮತ್ತು ಹೊರದೇಶಕ್ಕೆ ಹೋಗುತ್ತಿದ್ದಾರೆ. ಆದರೆ ಹೀಗೆ ದೊಡ್ಡ ನಗರಗಳಿಗೆ, ದೂರ ಹೋಗಿ ಶಿಕ್ಷಣವನ್ನು ಮುಂದುವರಿಸುವುದು ಹಣಕಾಸಿನ ದೃಷ್ಟಿಯಿಂದ ಮತ್ತು ಇತರ ದೃಷ್ಟಿಗಳಿಂದ ಕಷ್ಟವಾಗಿದೆ. ಆಧುನಿಕ ತಂತ್ರಜ್ಞಾನವು ಶಿಕ್ಷಣ ವ್ಯವಸ್ಥೆಯು ಸ್ಪರ್ಶ ನೀಡಿರುವ ಕಾರಣ ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರ್ ಬಳಸಿ, ಅಂತರ್ಜಾಲ ಸಹಾಯದಿಂದ ನಾವಿರುವ ಜಾಗದಿಂದಲೇ ಹೊಸ ವಿಷಯಗಳನ್ನು ಕಲಿಯಬಹುದು, ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುವವರು ಆನ್ ಲೈನ್ ಶಿಕ್ಷಣದ (Online Education) ಉಪಯೋಗವನ್ನು ಪಡೆದುಕೊಂಡು ಉತ್ತಮ ರೀತಿಯಲ್ಲಿ ಪರೀಕ್ಷೆಗೆ ತಯಾರಾಗಬಹುದು. ಬನ್ನಿ, ಈ ಅಧ್ಯಾಯದಲ್ಲಿ ಆನ್ ಲೈನ್ ಶಿಕ್ಷಣ (Online Education) ವ್ಯವಸ್ಥೆಗಳ ಕುರಿತು ಒಂದಿಷ್ಟು ವಿಷಯ ಮತ್ತು ಅವಕಾಶಗಳ ಬಗ್ಗೆ ತಿಳಿಯೋಣ.
ಮಕ್ಕಳ ಕಲಿಕೆಗಾಗಿ ಮೊಬೈಲ್ ಆ್ಯಪ್ಸ್ (Mobile apps)
ಈಗ ಮಕ್ಕಳು ಮೊಬೈಲ್ ನನ್ನು ಕೇವಲ ಆಟ ಆಡಲು ಮತ್ತು ಮನರಂಜನೆಗೆ ಮಾತ್ರ ಬಳಸಬೇಕೆಂದು ಏನು ಇಲ್ಲ. ನಿಮ್ಮ ಮಕ್ಕಳು ಓದುತ್ತಿರುವ ಶಾಲೆ ಯಾವುದೇ ಇರಬಹುದು, ಯಾವುದೇ ಊರಿನಲ್ಲಿ ಇರಬಹುದು, ಅವರಿಗೆ ಅಷ್ಟೇನೂ ಗುಣಮಟ್ಟದ ಶಿಕ್ಷಣ ಲಭ್ಯವಾಗುತ್ತಿಲ್ಲದೆ ಇರಬಹುದು, ಇನ್ನೂ ಅನೇಕ ಸಮಸ್ಯೆಗಳು ಅಥವಾ ಅಡೆತಡೆಗಳು ಮಕ್ಕಳ ಸಂಪೂರ್ಣ ಕಲಿಕೆಗೆ ತೊಡಕಾಗಬಹುದು. ಆದರೆ ಇವೆಲ್ಲ ತೊಡಕುಗಳನ್ನು ದೂರ ಹಾಕಲು ಶಿಕ್ಷಣಕ್ಕಾಗಿ ರೂಪಿಸಿರುವ ಹಲವಾರು ಮೊಬೈಲ್ ಅಪ್ಲಿಕೇಶನ್ ಗಳ ಸಹಾಯದಿಂದ ಮಕ್ಕಳು ವಿವಿಧ ರೀತಿಯ ವಿಷಯಗಳನ್ನು ವಿಭಿನ್ನವಾಗಿ ಮತ್ತು ವಿಶೇಷವಾಗಿ ಕಲಿಯಲು ಸಾಧ್ಯವಾಗುತ್ತದೆ. ಮೊಬೈಲ್ ಆ್ಯಪ್ ಬಳಸುವುದರ ಮೂಲಕ ಮಕ್ಕಳು ಆಟವಾಡುತ್ತಾ, ಯೋಚಿಸುತ್ತಾ, ಸಂತೋಷಪಡುತ್ತ, ವಿವಿಧ ದೃಷ್ಟಿಕೋನದಿಂದ ಕಲಿಯಲು ಸಹಾಯಮಾಡುತ್ತವೆ. ಸರ್ಕಾರದಿಂದ ನಿರ್ಮಿತವಾಗಿರುವ (NCERT ಯವರ ಈ-ಪಾಠಶಾಲಾ), ಮತ್ತು ಖಾಸಗಿಯಾಗಿಯವರಿಂದ ನಿರ್ಮಿತವಾಗಿರುವ ಹಲವಾರು ಅಪ್ಲಿಕೇಶನ್ ಗಳು ಉಚಿತವಾಗಿ ಲಭ್ಯವಿವೆ. ಕೆಲವು ಅಪ್ಲಿಕೇಶನ್ ಗಳಿಗೆ ಶುಲ್ಕ ಕೊಟ್ಟು ಬಳಸಬೇಕಾಗುತ್ತದೆ.
ಈ-ಗ್ರಂಥಾಲಯ (E-Library):
ಮೊದಲೆಲ್ಲಾ ಪುಸ್ತಕಗಳು ಬೇಕೆಂದರೆ ನೀವು ಗ್ರಂಥಾಲಯಕ್ಕೆ ಹೋಗಿ ಪಡೆಯಬೇಕಿತ್ತು. ಅಲ್ಲಿಯೂ ಕೂಡ ನಿಮಗೆ ಬೇಕಾಗಿರುವ ಎಲ್ಲ ಪುಸ್ತಕಗಳು ಸಿಗದೇ ಇರುವ ಪರಿಸ್ಥಿತಿ ಇರುತ್ತಿತ್ತು. ಮತ್ತು ಕೆಲವೇ ಕೆಲವು ಪುಸ್ತಕಗಳ ಇರುವುದರಿಂದ ಲಭ್ಯತೆಯು ಕಡಿಮೆ ಇರುತ್ತಿತ್ತು. ಆದರೆ ಈಗ ಎಷ್ಟೊಂದು ಉಪಯುಕ್ತ ಪುಸ್ತಕಗಳು ಈ-ಗ್ರಂಥಾಲಯ ರೂಪದಲ್ಲಿ ಲಭ್ಯವಿವೆ. ಹಲವಾರು ಪುಸ್ತಕಗಳನ್ನು ಡಿಜಿಟಲ್ ರೂಪದಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ, ಜಾಲತಾಣದ ಮೂಲಕ ನಾವು ಓದಬಹುದು. ಅಷ್ಟೇ ಅಲ್ಲದೆ, ಕೆಲವು ಅಪ್ಲಿಕೇಶನ್ಗಳಲ್ಲಿ ಪುಸ್ತಕಗಳನ್ನು ಡೌನ್ ಲೋಡ್ ಮಾಡಿ ಇಟ್ಟುಕೊಳ್ಳಬಹುದು. ಬೇಕೆಂದರೆ ಅವುಗಳನ್ನು ಮುದ್ರಿಸಿಕೊಂಡು ಓದಬಹುದು. ಬಳಸಬಹುದಾದ ಕೆಲವು ಆ್ಯಪ್ ಗಳು ನ್ಯಾಷನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ (National digital library of india), ಇ-ಸಾರ್ವಜನಿಕ ಗ್ರಂಥಾಲಯ, ಕರ್ನಾಟಕ ಪಠ್ಯಪುಸ್ತಕ ಸಂಘ ಜಾಲತಾಣ (Website) ಇತ್ಯಾದಿ.
edx ಜಾಲತಾಣ:
edx ಶಿಕ್ಷಣ ಮತ್ತು ಕಲಿಕೆಗೆ ವಿಶ್ವಾಸಾರ್ಹ ವೇದಿಕೆಯಾಗಿದೆ. ಹಾರ್ವರ್ಡ್ ಮತ್ತು ಎಂಐಟಿಯಿಂದ ಸ್ಥಾಪಿಸಲ್ಪಟ್ಟ edx ಕಲಿಯುವ ಆಸಕ್ತಿಯುಳ್ಳವರಿಗೆ ದೊಡ್ಡ ನೆಲೆಯಾಗಿದೆ. edx ಸಾಂಪ್ರದಾಯಿಕ ಶಿಕ್ಷಣವನ್ನು (ವೆಚ್ಚ, ಸ್ಥಳ ಮತ್ತು ಪ್ರವೇಶದ ಅಡೆತಡೆಗಳನ್ನು ತೆಗೆದುಹಾಕುತ್ತದೆ) ಪರಿವರ್ತಿಸುವಲ್ಲಿ ಸಹಕಾರಿಯಾಗಿದೆ ಮತ್ತು ಜಾಗತಿಕ ಲಾಭರಹಿತ ಸಂಸ್ಥೆಯಾಗಿ ಸೇವೆಯನ್ನು ಕೊಡುತ್ತಿದೆ. ಶಿಕ್ಷಣದ ಸಾಧ್ಯತೆಗಳನ್ನು ಒಳಗೊಂಡಂತೆ ಉನ್ನತ-ಗುಣಮಟ್ಟದ, ಸ್ಥಿರವಾದ ಕಲಿಕೆಯ ಅನುಭವಗಳನ್ನು ಒದಗಿಸುತ್ತದೆ. ಓಪನ್ edx ಎನ್ನುವುದು ಎಲ್ಲರೂ ಉಚಿತವಾಗಿ ಬಳಸಬಹುದಾದ (Open source platform) ವೇದಿಕೆ ಆಗಿದೆ .
ಆನ್ ಲೈನ್ ಅಲ್ಲಿ ಪದವಿ (Online Degree):
ಹಲವಾರು ಶಿಕ್ಷಣ ಸಂಸ್ಥೆಗಳು ಆನ್ ಲೈನ್ ಮೂಲಕ ಸರ್ಟಿಫೀಕೆಟ್ ಕೋರ್ಸ್, ಕೌಶಲ್ಯ ಅಭಿವೃದ್ಧಿ ಕೋರ್ಸ್ ಗಳನ್ನು, ಡಿಪ್ಲೋಮ ಕೋರ್ಸ್ ಗಳನ್ನು, ಪದವಿ ಕೋರ್ಸ್ ಗಳನ್ನು ಕಲಿಯಲು ಬಯಸುವವರಿಗೆ ಒದಗಿಸುತ್ತವೆ. ನೀವು ಏನಾದರೂ ಓದಿರಬಹುದು, ಉದ್ಯೋಗ ಮಾಡುತ್ತಿರಬಹುದು, ಅಥವಾ ಇನ್ನಷ್ಟು ಹೆಚ್ಚಿನ ವ್ಯಾಸಂಗ ಮಾಡಲು ಬಯಸುತ್ತಿರಬಹುದು ಹೀಗೆ ಕಲಿಯಲು ಆಸಕ್ತಿ ಇರುವವರಿಗೆಲ್ಲ ಈ ವೇದಿಕೆಗಳು ವರದಾನವೇ ಸರಿ. ದೂರ ಶಿಕ್ಷಣವನ್ನು ನೀಡುತ್ತಿದ್ದ ಇಗ್ನೋ (Ignou) ಆನ್ ಲೈನ್ ಮೂಲಕವೂ ಹಲವಾರು ಕೋರ್ಸ್ ಗಳನ್ನು, ಡಿಪ್ಲೋಮಾ, ಪದವಿಗಳನ್ನು ಕೊಡುತ್ತಿದೆ. ಹೀಗೆ ಇನ್ನೂ ಹಲವಾರು ಸಂಸ್ಥೆಗಳು ಆನ್ ಲೈನ್ ಮೂಲಕ ಶಿಕ್ಷಣವನ್ನು ನೀಡುತ್ತವೆ.
ಆನ್ ಲೈನ್ ಮೂಲಕ ಕಲಿಕೆಗೆ ಸರ್ಕಾರದಿಂದ ಲಭ್ಯವಿರುವ ವಿವಿಧ ಅಂತರ್ಜಾಲ ತಾಣಗಳು:
SWAYAM (https://swayam.gov.in/) 140 ವಿಶ್ವವಿದ್ಯಾಲಯಗಳ ಅನುಮೋದಿತ ಕ್ರೆಡಿಟ್ ವರ್ಗಾವಣೆ ವೈಶಿಷ್ಟ್ಯತೆಯೊಂದಿಗೆ ಬೃಹತ್ ಮುಕ್ತ ಆನ್‌ಲೈನ್ ಕೋರ್ಸ್ ಗಳನ್ನು ಇದು ಒದಗಿಸುತ್ತದೆ.
FOSSEE (https://fossee.in/) ಎನ್ನುವುದು ಶಿಕ್ಷಣಕ್ಕಾಗಿ ಉಚಿತ ಓಪನ್ ಸೋರ್ಸ್ ಸಾಫ್ಟ್‌ವೇರ್‌ನ (Open sourcs software) ಸಂಕ್ಷಿಪ್ತ ರೂಪವಾಗಿದೆ, ಇದು ಶಿಕ್ಷಣಕ್ಕಾಗಿ ಮತ್ತು ವೃತ್ತಿಪರ ಬಳಕೆಗಾಗಿ ಮುಕ್ತ ಮೂಲ ಸಾಫ್ಟ್‌ವೇರ್‌ಗಳನ್ನು ಅಭಿವೃದ್ಧಿಪಡಿಸಿ, ಉತ್ತೇಜಿಸುತ್ತದೆ.
e-gyankosh (https://egyankosh.ac.in/) ನ್ಯಾಷನಲ್ ಡಿಜಿಟಲ್ ರೆಪೊಸಿಟರಿ ಡಿಜಿಟಲ್ ಕಲಿಕಾ ಸಂಪನ್ಮೂಲಗಳನ್ನು ಸಂಗ್ರಹಿಸಿ ಮತ್ತು ಹಂಚಿಕೊಳ್ಳುತ್ತದೆ. ಇದನ್ನು ದೇಶದ ಮುಕ್ತ ಮತ್ತು ದೂರಶಿಕ್ಷಣ ಸಂಸ್ಥೆಗಳು ಅಭಿವೃದ್ಧಿಪಡಿಸಿವೆ.
ಕಾಮೆಂಟ್‌ಗಳಿಲ್ಲ