ನೀವು ಕೃಷಿಯಲ್ಲಿ ಬಳಸುವ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ತಿಳುದಿಕೊಳ್ಳಿ
ಕೃಷಿಯಲ್ಲಿ ತಂತ್ರಜ್ಞಾನ
ಸಣ್ಣ ಗಾತ್ರದಿಂದ ಹಿಡಿದು ದೊಡ್ಡ ಗಾತ್ರದ ಹಲವಾರು ಯಂತ್ರಗಳನ್ನು ಕೃಷಿಯಲ್ಲಿ ಈಗಾಗಲೆ ನಾವು ಬಳಸುತ್ತಾ ಬಂದಿದ್ದೇವೆ. ತಂತ್ರಜ್ಞಾನ ಆಧಾರಿತ ಅದರಲ್ಲೂ ಮುಖ್ಯವಾಗಿ ವಿದ್ಯುನ್ಮಾನ ಆಧಾರಿತ ಹಲವು ಸಾಧನಗಳಿಂದ ಕೃಷಿ ಚಟುವಟಿಕೆಯಲ್ಲಿ ಉತ್ತಮ ಪ್ರಗತಿ, ಸಮಯಕ್ಕೆ ಸರಿಯಾದ ಮಾಹಿತಿ, ಆಯ್ಕೆ ಆದರದ ಮೇಲೆ ನೀರ್ಧಾರಗಳನ್ನು ಮಾಡಲು, ಇನ್ನೂ ಅನೇಕ ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸಾಧನಗಳು ಬಹು ಉಪಯೋಗಿ ಆಗಿವೆ ಮತ್ತು ಭವಿಷ್ಯದಲ್ಲಿ ಇನ್ನು ಜಾಸ್ತಿ ಬಳಸಲ್ಪಡುತ್ತವೆ ಅನ್ನಬಹುದು.
ಕೃಷಿಯ ಬೆಳವಣಿಗೆಗೆ, ಉತ್ತಮ ಇಳುವರಿ ಮತ್ತು ಸುಗ್ಗಿಯ ಸ್ಥಳಕ್ಕೆ ಕಾರಣವಾಗುವ ಅಂಶಗಳನ್ನು ಗುರುತಿಸುವುದು ಅವಶ್ಯಕ. ಕೃತಕ ಬುದ್ಧಿವಂತಿಕೆ (Artificial intelligence) ಉಪಕರಣಗಳು ಕೃಷಿಯಲ್ಲಿ ಹೊಸ ತಂತ್ರಜ್ಞಾನದ ಜಾಗವನ್ನು ಪ್ರವೇಶಿಸುತ್ತಿವೆ. ಇವುಗಳ ಸಹಾಯದಿಂದ ಹವಾಮಾನ ಪರಿಸ್ಥಿತಿಗಳು, ಬೆಳೆಗೆ ಯಾವ ರೀತಿಯ ಅಂಶಗಳ ಅಗತ್ಯವಿದೆ, ಹೆಚ್ಚು ಸೂಕ್ತವಾದ ಮಣ್ಣಿನ ಪ್ರಕಾರ ಇತ್ಯಾದಿಗಳ ಡೇಟಾವನ್ನು ಆಧರಿಸಿ ಅದಕ್ಕೆ ಸರಿಯಾದ ಪರಿಹಾರ ಕೊಡಲು ಸಾಧ್ಯವಾಗುತ್ತದೆ.
ವಿವಿಧ ರೀತಿಯ ಮೊಬೈಲ್ ಅಪ್ಲಿಕೇಶನ್ಸ್ ಕೃಷಿ ಕ್ಷೇತ್ರದಲ್ಲಿ ದಾಪುಗಾಲನ್ನು ಇಡುತ್ತಿವೆ. ಬೀಜ, ಗೊಬ್ಬರದ ಮಾಹಿತಿಯಿಂದ ಹಿಡಿದು, ಸುಗ್ಗಿ ಮಾಡಿದ ಬೆಳೆಯು ಸರಿಯಾದ ಮಾರಾಟಕ್ಕೆ ಕೂಡ ಅನೂಕೂಲವಾಗಿವೆ. ಅಷ್ಟೇ ಅಲ್ಲದೆ ಹವಾಮಾನ ವೈಪರೀತ್ಯದ ಮಾಹಿತಿ, ಇನ್ನು ಹಲವು ಮಾಹಿತಿ ನೀಡುವ ಆ್ಯಪ್ ಗಳು ಲಭ್ಯವಿವೆ.
ಡ್ರೋನ್‌ನ (Droan) ಸಹಾಯದಿಂದ ಬೆಳೆಗಳ ಡೇಟಾವನ್ನು ಸಂಗ್ರಹಿಸಬಹುದು. ಕೃಷಿ ಮಾಡುವಾಗ ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಡ್ರೋನ್‌ಗಳ (Droan) ನಿಖರ ಮಾಹಿತಿಯೊಂದಿಗೆ ಅನಿಶ್ಚಿತೆಯನ್ನು ಕಡಿಮೆ ಮಾಡುತ್ತವೆ. ಸರಿಯಾದ ಸಂವೇದಕಗಳನ್ನು (Sensors) ಬಳಸುವುದರ ಮೂಲಕ, ಡ್ರೋನ್‌ಗಳು (Droan) ರೈತರಿಗೆ ಬೆಳೆಗಳ ವಿವರ, ಮಣ್ಣಿನ ಗುಣಗಳು, ಒಣ ಪ್ರದೇಶ, ಬೆಳೆಗಳ ಸೋಂಕು ಇತ್ಯಾದಿ ವಿಷಯಗಳ ಕುರಿತು ಆಗಿಂದಾಗಲೇ ಮಾಹಿತಿಯನ್ನು ಪಡೆಯಬಹುದು.
ರಾಷ್ಟ್ರೀಯ ಕೃಷಿ ಮಾರುಕಟ್ಟೆ: ರಾಷ್ಟ್ರೀಯ ಕೃಷಿ ಮಾರುಕಟ್ಟೆ (NAM) ಅನ್ನು ಭಾರತದಾದ್ಯಂತ ಎಲೆಕ್ಟ್ರಾನಿಕ್ ಟ್ರೇಡಿಂಗ್ ಜಾಲತಾಣದಂತೆ ವಿನ್ಯಾಸಗೊಳಿಸಲಾಗಿದೆ. ಇದು ಕೃಷಿ ಸರಕುಗಳಿಗೆ ಏಕೀಕೃತ ರಾಷ್ಟ್ರೀಯ ಮಾರುಕಟ್ಟೆಯನ್ನು ರಚಿಸಲು ಸಹಾಯವಾಗುತ್ತದೆ. ಸದ್ಯಕ್ಕೆ ಅಸ್ತಿತ್ವದಲ್ಲಿರುವ ಎಪಿಎಂಸಿ ಮತ್ತು ಇತರ ಮಾರುಕಟ್ಟೆಗಳನ್ನು ಒಂದೇ ಜಾಲದಲ್ಲಿ ತರಲು ಪ್ರಯತ್ನಿಸುತ್ತದೆ.
ಬೆಳೆ ನೀರಾವರಿ ವ್ಯವಸ್ಥೆಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣದಲ್ಲಿ ಮೊಬೈಲ್ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಆಧುನಿಕ ತಂತ್ರಜ್ಞಾನದಿಂದ, ಒಬ್ಬ ರೈತ ತನ್ನ ನೀರಾವರಿ ವ್ಯವಸ್ಥೆಯನ್ನು ಪ್ರತಿ ಕ್ಷೇತ್ರಕ್ಕೆ ಹೋಗಿ ನೋಡುವ ಬದಲು ಫೋನ್ ಅಥವಾ ಕಂಪ್ಯೂಟರ್‌ನಿಂದ ನೀರಾವರಿ ವ್ಯವಸ್ಥೆಯನ್ನು ನಿಯಂತ್ರಿಸಬಹುದು. ನೆಲದಲ್ಲಿನ ತೇವಾಂಶ ಸಂವೇದಕಗಳು (Sensors) ಮಣ್ಣಿನಲ್ಲಿ ಕೆಲವು ಆಳದಲ್ಲಿರುವ ತೇವಾಂಶದ ಮಟ್ಟವನ್ನು ತಿಳಿಸಲು ಸಾಧ್ಯವಾಗುತ್ತದೆ.
ಜಮೀನಿನ ವಿವಿಧ ಭಾಗಗಳಲ್ಲಿ ಕ್ಯಾಮೆರಾಗಳನ್ನು ಕೂಡಿಸಿ. ಮೊಬೈಲ್ ಮತ್ತು ಇಂಟರ್ನೆಟ್ (Internet) ಸಹಾಯದಿಂದ ಹಲವಾರು ಕೃಷಿ ಚಟುವಟಿಕೆಗಳನ್ನು, ಬೆಳೆಯ ಸುರಕ್ಷತೆ , ಕೆಲಸಗಾರರು ಮಾಡುವ ಕೆಲಸದ ಪ್ರಗತಿ ಮತ್ತು ಇನ್ನು ಮುಂತಾದ ವಿಚಾರಗಳನ್ನು ಅವಲೋಕಿಸಿ, ನಿಯಂತ್ರಿಸಬಹುದು .
ಬೆಳೆ ಸಂವೇದಕಗಳು ರಸಗೊಬ್ಬರಗಳನ್ನು ಅತ್ಯಂತ ಪರಿಣಾಮಕಾರಿಯಾದ ರೀತಿಯಲ್ಲಿ ಬಳಸಲು ಸಹಾಯ ಮಾಡುತ್ತವೆ. ಅದು ಹೇಗೆಂದರೆ, ನೀವು ರಾಸಾಯನಿಕಗಳ ಸಿಂಪರಣೆಯ ಮೊದಲು, ಬೆಳೆ ಸಂವೇದಕಗಳು ಅಪ್ಲಿಕೇಶನ್ ಸಾಧನಗಳಿಗೆ ಆಗಿಂದಾಗೆ ಮಾಹಿತಿಯನ್ನು ಹೇಳುತ್ತವೆ. ಸಂವೇದಕಗಳು ಪ್ರತಿಫಲಿಸುವ ಬೆಳಕಿನ ಪ್ರಮಾಣವನ್ನು ಆಧರಿಸಿ ಸಸ್ಯಕ್ಕೆ ಎಷ್ಟು ರಸಗೊಬ್ಬರ ಬೇಕಾಗಬಹುದು ಎಂಬುದನ್ನು ತಿಳಿಯಲು ಸಹಾಯ ಮಾಡುತ್ತವೆ.
ಡಿಜಿಟಲ್ ಪ್ರೊಗ್ರಾಮೆಬಲ್ ಟೈಮರ್ ಸ್ವಿಚ್ (Digital programmable switch): ಈ ಸಾಧನದ ಸಹಾಯದಿಂದ ನಿಗದಿತ ಸಮಯಕ್ಕೆ ಅನುಗುಣವಾಗಿ ಸ್ವಯಂಚಾಲಿತವಾಗಿ ವಿವಿಧ ವಿದ್ಯುತ್ ಉಪಕರಣಗಳನ್ನು ಆನ್ / ಆಫ್ (On/Off) ಮಾಡಬಹುದು. ಕೃಷಿ ಉಪಕರಣಗಳು, ಕೃಷಿ ಸೌಲಭ್ಯಗಳು, ಇತ್ಯಾದಿಗಳಿಗೆ ಸೂಕ್ತವಾಗಿದೆ. ಈ ಸಾಧನವು ಕಾರ್ಯ ನಿರ್ವಹಿಸಲು ಬ್ಯಾಟರಿಯಿಂದ ಶಕ್ತಿಯನ್ನು ಪಡೆಯುತ್ತದೆ.
ನೀರಿನ ಮಟ್ಟ ನಿಯಂತ್ರಕ (Water level controller): ಈ ಸಾಧನವನ್ನು ಅಳವಡಿಸಿಕೊಳ್ಳುವುದರಿಂದ ಸರಿಯಾದ ನೀರಿನ ಮಟ್ಟವನ್ನು ಕಾಪಾಡಿಕೊಳ್ಳಬಹುದು ಮತ್ತು ಅನಗತ್ಯ ನೀರು ಪೋಲಾಗುವುದನ್ನು ತಪ್ಪಿಸಬಹುದು. ಇದರಲ್ಲಿ ಮುಖ್ಯವಾಗಿ ಮೂರು ಸಂವೇದಕಗಳು ಇರುತ್ತವೆ. ಒಂದು ಸಂವೇದಕವನ್ನು ಕೆಳಭಾಗದಲ್ಲಿ, ಮತ್ತೊಂದು ಸಂವೇದಕವನ್ನು ಮಧ್ಯದಲ್ಲಿ ಮತ್ತು ಇನ್ನೊಂದು ಸಂವೇದಕವನ್ನು ಟ್ಯಾಂಕ್‌ನ ಉನ್ನತ ಮಟ್ಟದಲ್ಲಿ ಇರಿಸಬೇಕಾಗುತ್ತದೆ. ತೊಟ್ಟಿಯಲ್ಲಿ ನೀರಿನ ಮಟ್ಟ ಕಡಿಮೆಯಾದಾಗ, ಮಧ್ಯಮ ಸಂವೇದಕದಿಂದ ನೀರು ಇಳಿಯುತ್ತದೆ, ಮೋಟಾರ್ ಸ್ವಯಂಚಾಲಿತವಾಗಿ ಸ್ವಿಚ್ ಆನ್ ಆಗುತ್ತದೆ. ಟ್ಯಾಂಕ್ ತುಂಬಲು ಪ್ರಾರಂಭಿಸುತ್ತದೆ. ನೀರಿನ ಮಟ್ಟವು ಉನ್ನತ ಮಟ್ಟಕ್ಕೆ ತಲುಪಿದಾಗ, ಉನ್ನತ ಮಟ್ಟದ ಸಂವೇದಕದಿಂದ ಮೋಟಾರ್ ಸ್ವಯಂಚಾಲಿತವಾಗಿ ಸ್ವಿಚ್ ಆಫ್ ಆಗುತ್ತದೆ.
ಮೊಬೈಲ್ ಮೋಟಾರ್ ಪಂಪ್ ನಿಯಂತ್ರಕ (Mobile motor pump Controller): ಮೈಕ್ರೊಕಂಟ್ರೋಲರ್ ಆಧಾರಿತ ಸುಧಾರಿತ ಎಂಬೆಡೆಡ್ (Embeded) ತಂತ್ರಜ್ಞಾನದ ಈ ಸಾಧನದ ಸಹಾಯದಿಂದ ಬಳಕೆದಾರರು Call / SMS / Android ಅಪ್ಲಿಕೇಶನ್ ಮೂಲಕ ವಿಶ್ವದ ಯಾವುದೇ ಮೂಲೆಯಿಂದ ಮೋಟಾರ್ ಪಂಪ್ ಅನ್ನು ನಿರ್ವಹಿಸಬಹುದು. ಏಕ ಅಥವಾ ಮೂರು ಫೇಸ್ ಮೋಟಾರ್ - ಮೊಬೈಲ್ ಮೋಟಾರ್ ಸ್ಟಾರ್ಟಗಳಿಗೆ ಇದು ಸೂಕ್ತವಾಗಿದೆ. ಮೋಟರ್ ಆನ್ / ಮೋಟರ್ ಆಫ್ ಆದಾಗ SMS ಎಚ್ಚರಿಕೆಗಳು. SMS ಮೂಲಕ ನೇರ ಮೋಟಾರ್ ಕಾರ್ಯಾಚರಣೆಯ ಸ್ಥಿತಿ ಲಭ್ಯವಾಗುತ್ತದೆ.
ವಿವಿಧ ಸಲಹೆಗಳು
ಹಲವಾರು ತಂತಜ್ಞಾನ ಆಧಾರಿತ ಉತ್ಪನ್ನ ಮತ್ತು ಸೇವೆಗಳಿಗೆ ಅನ್ವಯವಾಗುವಂತಹ ಸಲಹೆಗಳು:
ಯಾವುದೇ ಉತ್ಪನ್ನ ಅಥವಾ ಸೇವೆಯ ‘settings‘ ಅನ್ನು ಒಮ್ಮೆ ಚೆಕ್ ಮಾಡಿರಿ. ಇದರಿಂದ ಉಪಯೋಗದ ಹಲವು ಬಗೆಗಳು ಮತ್ತು ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗಬಹುದು.
ಬಳಕೆದಾರರ ಕೈಪಿಡಿ ಯನ್ನು ಓದಿರಿ. ಸಂಪೂರ್ಣ ಓದಲು ಸಾಧ್ಯವಾಗದಿದ್ದರೂ ಮುಖ್ಯ ಅಂಶಗಳನ್ನು ಖಂಡಿತವಾಗಿ ಓದಿರಿ.
ಶಟ್ ಡೌನ್ (Shut down) ಮಾಡಿ ಮತ್ತೆ ಆನ್ (On) ಮಾಡುವುದರಿಂದ ಕೆಲವು ಸಮಸ್ಯೆಗಳು ಬಗೆಹರಿಯುತ್ತವೆ. ಇದನ್ನು ಖಂಡಿತ ಗಮನದಲ್ಲಿಡಿ.
ಅರಿಯದೆ ಸ್ವಯಂ ನೀವೇ ಏನಾದ್ರು ದುರಸ್ತಿ ಮಾಡಲು ಹೋಗಬೇಡಿ.
ಸುರಕ್ಷತಾ ಕ್ರಮಗಳನ್ನು ಅರಿತು, ತಪ್ಪದೆ ಪಾಲನೆ ಮಾಡಿ.
ನೀವು ಬಳಸುವ ಉತ್ಪನ್ನ ಅಥವಾ ಸೇವೆಯು ಎಷ್ಟು ಶಕ್ತಿಯನ್ನು ಬಳಸುತ್ತಿದೆ ಅನ್ನುವುದರ ಅರಿವಿರಲಿ. ಸಾಧ್ಯವಾದಷ್ಟು ಶಕ್ತಿಯನ್ನು ಉಳಿಸೋಣ.
ಬಳಕೆಯಲ್ಲಿ ಇಲ್ಲದಿರುವಾಗ ಸ್ವಿಚ್ ಅನ್ನು (Switch) ಬಂದ್ ಮಾಡಿ ಮತ್ತು ಪ್ಲಗ್ ಅನ್ನು (Plug) ಹೊರತೆರೆಯಿರಿ.
ನೋಂದಣಿ ಮಾಡುವಾಗ ಅಥವಾ ಅರ್ಜಿತುಂಬುವಾಗ ಸಾಫ್ಟವೇರ್, ಅಂತರ್ಜಾಲ ತಾಣ, ಅಪ್ಲಿಕೇಶನ್ ಮತ್ತು ಇತರೆ ವ್ಯವಸ್ಥೆಗಳು ಪ್ರತಿ ಫೀಲ್ಡ್ನಲ್ಲಿ ಯಾವ ಬಗೆಯ ವಿವರವನ್ನು ಸ್ವೀಕರಿಸುತ್ತವೆ ಎಂದು ತಿಳಿದು ತುಂಬಿರಿ. ಕೆಲವು ಸಾಮಾನ್ಯವಾಗಿ ಬಳಸುವ ಫೀಲ್ಡ್ ಗಳನ್ನೂ ಕೆಳಗೆ ಕೊಡಲಾಗಿದೆ:
ತಂತ್ರಜ್ಞಾನ ಆಧಾರಿತ ಹಲವು ಉತ್ಪನ್ನಗಳು ಸಾಮಾನ್ಯವಾಗಿ ಹೆಚ್ಚು ಸಮಯ ಬಳಸಲ್ಪಟ್ಟಾಗ ಬಿಸಿಯಾಗುತ್ತವೆ. ಹೀಗೆ ಬಿಸಿಯಾದ ನಂತರವೂ ಹಾಗೆ ನಿರಂತರವಾಗಿ ಬಳಸುವುದರಿಂದ ಸಾಧನಕ್ಕೆ ಮತ್ತು ಇತರೆ ತೊಂದರೆಗಳು ಆಗಬಹುದು. ಆದ್ದರಿಂದ ಸಾಧನಗಳು ಬಿಸಿಯಾದಾಗ ಅವುಗಳನ್ನು ಸ್ವಲ್ಪ ಸಮಯ ಉಪಯೋಗಿಸದೆ ಇದ್ದು ನಂತರ ಉಪಯೋಗಿಸುವುದು ಉತ್ತಮ.
ದುಮ್ಮಾನ ಆಧಾರಿತ ವಿವಿಧ ಡಿಜಿಟಲ್ ಸಾಧನಗಳನ್ನು ನೇರವಾಗಿ ಬಿಸಿಲಿಗೆ ಒಡ್ಡಬೇಡಿ. ಮಾಯಾ ಸಾಧನಕ್ಕೆ ಅನ್ವಯವಾಗುವಂತಹ ಉಷ್ಣಾಂಶಗಳಲ್ಲಿ ಅವುಗಳನ್ನು ಬಳಸಿ.
ವಿವಿಧ ಸಾಧನ ಮತ್ತು ಉಪಕರಣಗಳನ್ನು ನೀರಿನಿಂದ ದೂರದಲ್ಲಿಡಿ. ನೀರು ಇರದಂತೆ ನೋಡಿಕೊಳ್ಳಿ.
ಸಾಧನೆಗಳನ್ನು ಉಪಯೋಗಿಸಿದ ನಂತರ ಪುನಃ ಅವುಗಳನ್ನು ಸರಿಯಾದ ಜಾಗದಲ್ಲಿ ಮತ್ತು ರೀತಿಯಲ್ಲಿ ಇಡಬೇಕು.
ಸಾಧನೆಗಳಿಗೆ ಬೆಂಬಲವಾಗುವಂತಹ ಬಿಡಿಭಾಗಗಳನ್ನು, ತಂತಿಗಳನ್ನು, ಚಾರ್ಜರ್ ಗಳನ್ನು ಇತ್ಯಾದಿ ಮಾತ್ರ ಬಳಸಿ.
ನಿಮಗೆ ನೀವೇ ಹಲವಾರು ಸೇವೆಗಳನ್ನು ಅಂತರ್ಜಾಲದ (website) ಮುಖಾಂತರ ಪಡೆದುಕೊಳ್ಳಬಹುದು. ಯಾವ್ಯಾವ ಸೇವೆಗಳು ಲಭ್ಯವಿವೆ ಎಂದು ಅರಿತುಕೊಂಡು ತಪ್ಪದೇ ಬಳಸಿ ಬೇರೊಬ್ಬರಿಗೆ ಬಳಸಲು ಪ್ರೋತ್ಸಾಹಿಸಿ. ಉದಾಹರಣೆಗೆ ನೀವೇ ಸ್ವತಃ ಪ್ಯಾನ್ ಕಾರ್ಡ್ (Pan card) ಮಾಡಿಕೊಳ್ಳಬಹುದು, ಆಧಾರ್ ಕಾರ್ಡ್ ಮಾಹಿತಿ ಬದಲಾಯಿಸಬಹುದು, ಮತ್ತು ಇತ್ಯಾದಿ.
BEE ಎನ್ನುವುದರ ವಿಸ್ತೃತ ರೂಪ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ (Bureau of energy efficiency) ನೀವು ಯಾವುದಾದರೂ ಉತ್ಪನ್ನವನ್ನು ಖರೀದಿಸುವಾಗ, ಆಯಾ ಉತ್ಪನ್ನಗಳಿಗೆ ಅನ್ವಯವಾಗುವಂತೆ ತಪ್ಪದೇ BEE ಚುಕ್ಕಿಗಳನ್ನು (Star rating) ಪರೀಕ್ಷಿಸಿ. ಹೆಚ್ಚು ಚುಕ್ಕಿಗಳು ಇದ್ದಷ್ಟು ಉತ್ಪನ್ನವು ಹೆಚ್ಚಿನ ಶಕ್ತಿಯ ಕ್ಷಮತೆಯನ್ನು ಹೊಂದಿದೆ ಎಂದು ಅರ್ಥ. ಇದರಿಂದ ಆ ಉತ್ಪನ್ನವನ್ನು ಬಳಸುವುದರಿಂದ ಕಡಿಮೆ ಪ್ರಮಾಣದ ಶಕ್ತಿಯು ಬಳಸಲ್ಪಡುತ್ತದೆ. ತಂತ್ರಜ್ಞಾನ ಆಧಾರಿತ ಉತ್ಪನ್ನಗಳನ್ನು ಬಳಸುವುದು ಎಷ್ಟು ಮುಖ್ಯವೋ ಅದಕ್ಕಿಂತ ಶಕ್ತಿಯ ಮಿತವ್ಯಯ ಕೂಡ ಮುಖ್ಯ. ನೆನಪಿರಲಿ, ಈ ಸ್ಟಾರ್ ರೇಟಿಂಗ್ ಗಳು ಬದಲಾವಣೆ ಆಗುತ್ತಿರುತ್ತವೆ.
ಕಾಮೆಂಟ್‌ಗಳಿಲ್ಲ