ಆನ್ ಲೈನ್ ನಲ್ಲಿ ಖರೀದಿ ಮಾಡುವದರ ಬಗ್ಗೆ ಮಾಹಿತಿ ತಿಳುದಿಕೊಳ್ಳಿ
ಆನ್ ಲೈನ್ ನಲ್ಲಿ ಖರೀದಿ (Online Shopping)
ಆನ್ ಲೈನ್ ನಲ್ಲಿ (Online) ಖರೀದಿ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ತುಂಬಾ ಅನುಕೂಲಕರವಾಗಿದೆ. . ಮುಂಚೆ ಮಹಾನಗರಗಳಿಗೆ ಅಷ್ಟೇ ಲಭ್ಯವಾಗಿದ್ದ ಆನ್ ಲೈನ್ ಶಾಪಿಂಗ್ (Online Shooping) ಈಗ ದೇಶದ ಪುಟ್ಟ ಗ್ರಾಮಗಳಿಗೂ ತಲುಪಿದೆ. ಸಾಂಪ್ರದಾಯಿಕವಾಗಿ ನಾವು ಏನನ್ನಾದರೂ ಖರೀದಿ ಮಾಡುವಾಗ ಅದನ್ನು ಕಣ್ಣಿಂದ ನೋಡಿ, ಕೈಯಿಂದ ಮುಟ್ಟಿ ಮತ್ತು ಸಂಪೂರ್ಣವಾಗಿ ಅವಲೋಕಿಸಿದ ಮೇಲೆ ಖರೀದಿ ಮಾಡುವುದು ರೂಢಿಯಾಗಿದೆ. ಆದರೆ ಆನ್ ಲೈನ್ (Online) ಖರೀದಿಯಲ್ಲಿ ಈ ತರದ ಅನುಕೂಲ ಲಭ್ಯವಿರುವುದಿಲ್ಲ, ಆದರೂ ಹಲವಾರು ವಸ್ತುಗಳನ್ನು ಖರೀದಿ ಮಾಡಲು ಆನ್ ಲೈನ್ (Online) ಕೂಡ ಒಂದು ದೊಡ್ಡ ವೇದಿಕೆಯಾಗಿದೆ.
ಏನನ್ನಾದರೂ ಖರೀದಿಸಲು ಮನೆಯಿಂದ ಮಾರುಕಟ್ಟೆಗೆ ಹೋಗಬೇಕಾಗುತ್ತದೆ. ಮತ್ತು ಅಲ್ಲಿ ಹೋದ ನಂತರ ಒಂದು ವಸ್ತುವಿಗಾಗಿ ಅಥವಾ ಹಲವಾರು ವಸ್ತುಗಳಿಗಾಗಿ ಮಾರುಕಟ್ಟೆಯ ವಿವಿಧ ಅಂಗಡಿಗಳಿಗೆ ಅಲೇಯಬೇಕಾಗುತ್ತದೆ. ಅಷ್ಟೇ ಅಲ್ಲದೆ ವಸ್ತುವಿನ ನಿಜವಾದ ಬೆಲೆ ಮತ್ತು ಅವರು ನೀಡುವ ರಿಯಾಯಿತಿಯು ಅಷ್ಟು ಪಾರದರ್ಶಕವಾಗಿ ಲಭ್ಯವಾಗದೇ ಇರಬಹುದು. ಅದಾದನಂತರ ಖರೀದಿಸಿದ ಮೇಲೆ ತುಂಬಾ ವಸ್ತುಗಳಿದ್ದರೆ ಅಥವಾ ಒಂದೇ ಭಾರವಾದ ವಸ್ತು ಇದ್ದರೆ ಅದನ್ನು ಹೊತ್ತುಕೊಂಡು ಮನೆಗೆ ಬರಬೇಕಾಗಿರುವುದು ನಮ್ಮ ಜವಾಬ್ದಾರಿ. ನಮಗೆ ಇಷ್ಟವಾದ ವಸ್ತುವನ್ನು ಖರೀದಿಸಿದ ನಂತರ ತಡಮಾಡದೆ ನೇರವಾಗಿ ಮನೆಗೆ ತರಬಹುದು.
ಆದರೇ ಆನ್ ಲೈನ್ (Online) ಖರೀದಿಯಲ್ಲಿ ನೀವು ಕುಳಿತಿರುವ ಜಾಗದಿಂದಲೇ ಮೊಬೈಲ್, ಕಂಪ್ಯೂಟರ್, ಟ್ಯಾಬ್ಲೆಟ್ ಅಥವಾ ಕರೆ ಮಾಡುವುದರ ಮೂಲಕ ವಸ್ತು ಮತ್ತು ಸೇವೆಗಳನ್ನು ಖರೀದಿಸಬಹುದು. ವಸ್ತುಗಳ ಆಯ್ಕೆಯಲ್ಲಿ ನಮಗೆ ಸಾಕಷ್ಟು ಬಗೆಯ ಕಂಪನಿಗಳ ಉತ್ಪನ್ನಗಳು ಇರುತ್ತವೆ. ಹೀಗಾಗಿ ನಾವು ವಿವಿಧ ವೈಶಿಷ್ಟ್ಯತೆಗಳಿಂದ ಕೂಡಿದ ಮತ್ತು ನಮಗೆ ಬೇಕಾದ ವಸ್ತುಗಳನ್ನು ಖರೀದಿಸಬಹುದು. ಖರೀದಿ ಮಾಡಿದ ನಂತರ ವಸ್ತುಗಳು ನಾವು ಕೊಟ್ಟಿರುವ ವಿಳಾಸಕ್ಕೆ ಕೆಲ ದಿನಗಳ ನಂತರ ಬಂದು ಸೇರುತ್ತವೆ. ಮಹಾನಗರಗಳಲ್ಲಿ ಈಗ ಕೆಲವು ದಿನಸಿ ಮತ್ತು ತರಕಾರಿಗಳು ನಾಲ್ಕು ಗಂಟೆಯ ಒಳಗೆ ಮನೆಗೆ ಬಂದು ತಲುಪುವ ವ್ಯವಸ್ಥೆಯು ಬರುತ್ತಿದೆ.
ಆನ್ ಲೈನ್ (ONLINE) ಖರೀದಿ ಮಾಡುವಾಗ ನೆನಪಿಡಬೇಕಾದ ಅಂಶಗಳು:
ಆನ್ ಲೈನ್ ಆದರೇ ಆನ್ ಲೈನ್ (Online) ಖರೀದಿಯಲ್ಲಿ ನೀವು ಕುಳಿತಿರುವ ಜಾಗದಿಂದಲೇ ಮೊಬೈಲ್, ಕಂಪ್ಯೂಟರ್, ಟ್ಯಾಬ್ಲೆಟ್ ಅಥವಾ ಕರೆ ಮಾಡುವುದರ ಮೂಲಕ ವಸ್ತು ಮತ್ತು ಸೇವೆಗಳನ್ನು ಖರೀದಿಸಬಹುದು. ವಸ್ತುಗಳ ಆಯ್ಕೆಯಲ್ಲಿ ನಮಗೆ ಸಾಕಷ್ಟು ಬಗೆಯ ಕಂಪನಿಗಳ ಉತ್ಪನ್ನಗಳು ಇರುತ್ತವೆ. ಹೀಗಾಗಿ ನಾವು ವಿವಿಧ ವೈಶಿಷ್ಟ್ಯತೆಗಳಿಂದ ಕೂಡಿದ ಮತ್ತು ನಮಗೆ ಬೇಕಾದ ವಸ್ತುಗಳನ್ನು ಖರೀದಿಸಬಹುದು. ಖರೀದಿ ಮಾಡಿದ ನಂತರ ವಸ್ತುಗಳು ನಾವು ಕೊಟ್ಟಿರುವ ವಿಳಾಸಕ್ಕೆ ಕೆಲ ದಿನಗಳ ನಂತರ ಬಂದು ಸೇರುತ್ತವೆ. ಮಹಾನಗರಗಳಲ್ಲಿ ಈಗ ಕೆಲವು ದಿನಸಿ ಮತ್ತು ತರಕಾರಿಗಳು ನಾಲ್ಕು ಗಂಟೆಯ ಒಳಗೆ ಮನೆಗೆ ಬಂದು ತಲುಪುವ ವ್ಯವಸ್ಥೆಯು ಬರುತ್ತಿದೆ.
ಖರೀದಿ ಮಾಡುವಾಗ ಇ-ಕಾಮರ್ಸ್ (E-Commerce) ಜಾಲತಾಣಕ್ಕೆ (WEBSITE) ನಾವು ನೀಡಬೇಕಾಗುತ್ತದೆ. ಇ-ಕಾಮರ್ಸ್ (E-COMMERCE) ಜಾಲತಾಣವು (WEBSITE) ಒಂದು ವೇದಿಕೆ ಆಗಿರುತ್ತದೆ. ಅವರು ಯಾವುದೇ ಒಂದು ಉತ್ಪನ್ನ ಅಥವಾ ಸೇವೆಯನ್ನು ನೇರವಾಗಿ ನಮಗೆ ಕೊಡದೆ ಇರಬಹುದು. ಅಂದರೆ ಹಲವಾರು ಮಾರಾಟಗಾರರು ಈ ವೇದಿಕೆಗೆ ಬಂದು ತಾವು ತಯಾರಿಸುವ ಅಥವಾ ಮಾರುವ ವಸ್ತುಗಳನ್ನು ಇ-ಕಾಮರ್ಸ್ (E-Commerce) ಜಾಲತಾಣ (Website) ವೇದಿಕೆಯಲ್ಲಿ ನೊಂದಾಯಿಸಿಕೊಂಡು ಉತ್ಪನ್ನಗಳನ್ನು ಮಾರಾಟಕ್ಕೆ ಇಡುತ್ತಾರೆ. ಮತ್ತು ಗ್ರಾಹಕರು (Customers) ಈ ವೇದಿಕೆಗೆ ಬಂದು ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಾರೆ.
ನಿಮಗೆ ಗೊತ್ತಿರುವ ಮತ್ತು ಪ್ರಚಲಿತ ಇ-ಕಾಮರ್ಸ್ (E-Commerce) ಜಾಲತಾಣಗಳಲ್ಲಿ (Website) ಮಾತ್ರ ನೊಂದಾಯಿಸಿಕೊಳ್ಳಿ.
ಯಾವುದೇ ವಸ್ತುವನ್ನು ಖರೀದಿಸುವ ಮುನ್ನ ಅದರ ರೇಟಿಂಗ್ (RATING), ರಿವ್ಯೂವ್ (RIVIEW), ಇದುವರೆಗೂ ಎಷ್ಟು ಜನ ಖರೀದಿ ಮಾಡಿದ್ದಾರೆ, ಚಿತ್ರಗಳು ಮತ್ತು ಸಂಬಂಧಪಟ್ಟಂತಹ ದೃಶ್ಯಗಳನ್ನು ತಪ್ಪದೇ ನೋಡಿ ಎಷ್ಟು ಚೆನ್ನಾಗಿದೆ ಎಂದು ಖಚಿತಪಡಿಸಿಕೊಳ್ಳಿ.
ಖರೀದಿಸಿದ ವಸ್ತುವಿನಲ್ಲಿ ಏನಾದರೂ ತೊಂದರೆ ಇದ್ದಲ್ಲಿ ತಿರುಗಿ ಕಳುಹಿಸುವ ಬಗ್ಗೆ ಶರತ್ತುಗಳನ್ನು ತಿಳಿದುಕೊಳ್ಳಿ. ಹಲವು ಇ-ಕಾಮರ್ಸ್ (E-Commerce) ಜಾಲತಾಣಗಳಲ್ಲಿ (Website) ತಿರುಗಿ ವಸ್ತುಗಳನ್ನು ನೀಡುವ ಆಯ್ಕೆ ಇರುವುದಿಲ್ಲ, ಆದರೆ ಪರ್ಯಾಯವಾಗಿ ವಸ್ತು ಏನಾದರೂ ಹಾಳಾಗಿದ್ದರೆ ಅವರು ಅದಕ್ಕೆ ಹಣ ಹಿಂದಿರುಗಿಸುತ್ತಾರೆ (Refund). ಹಣ ಹಿಂತಿರುಗಿ (Refund) ಪಡೆಯಲು ನಿಮಗೆ ಆಗಿರುವ ಅನುಭವವನ್ನು ಸಂಯಮದಿಂದ ಅವರಿಗೆ ಸಂಪೂರ್ಣ ವಿವರಗಳೊಂದಿಗೆ ಮತ್ತು ಚಿತ್ರದಿಂದ ಇ-ಕಾಮರ್ಸ್ (E-Commerce) ಜಾಲತಾಣದವರಿಗೆ (Website) ತಿಳಿಸಿದರೆ ಅವರು ಹಣ ಮರಳಿಸಲು ಸಹಾಯ ಮಾಡುತ್ತಾರೆ.
ನಿಗದಿತ ಸಮಯದಲ್ಲಿ ವಸ್ತು ನಿಮಗೆ ತಲುಪದಿದ್ದರೆ ಖಂಡಿತವಾಗಿ ಇ-ಕಾಮರ್ಸ್ ಜಾಲತಾಣದವರಿಗೆ ಕರೆ ಮಾಡಿ ತಿಳಿಸಿರಿ.
ಚಂದಾದಾರ ಸೇವೆ - ಕೆಲವು ಇ-ಕಾಮರ್ಸ್ ಜಾಲತಾಣಗಳಲ್ಲಿ ಈಗಾಗಲೇ ಈ ಸೇವೆ ಪ್ರಾರಂಭವಾಗಿದೆ. ಪ್ರತಿ ತಿಂಗಳು ನೀವೇನಾದರೂ ಕೆಲ ವಸ್ತುಗಳನ್ನು ಖರೀದಿ ಮಾಡಬೇಕೆಂದು ಕೊಂಡಿದ್ದರೆ, ಆ ವಸ್ತುಗಳನ್ನು ನೀವು ಪ್ರತಿಬಾರಿ ಖರೀದಿ ಮಾಡದೆ ಒಂದೇ ಸಲಕ್ಕೆ ಚಂದಾದಾರರಾಗಿ ನಿಮಗೆ ಪ್ರತಿ ತಿಂಗಳು ವಸ್ತುಗಳು ಮನೆಗೆ ಬಂದು ತಲುಪುವಂತೆ ಮಾಡಬಹುದು ಮತ್ತು ಈ ಸೇವೆಯ ಮೇಲೆ ಕೆಲವೊಮ್ಮೆ ರಿಯಾಯಿತಿಯು ಸಿಗುತ್ತದೆ. ಪದೇ ಪದೇ ಖರೀದಿ ಮಾಡುವ ಗೋಜು ಇರುವುದಿಲ್ಲ. ಆದರೆ ಅವಶ್ಯವಾಗಿ ನಿಮ್ಮ ವ್ಯಾಲೆಟ್ ಅಲ್ಲಿ ಅಥವಾ ಅಕೌಂಟ್ನಲ್ಲಿ ಹಣ ಇರುವುದನ್ನು ಖಚಿತಪಡಿಸಿಕೊಳ್ಳಿ.
ಯಾವುದೇ ವಸ್ತುವನ್ನು ಖರೀದಿ ಮಾಡುವ ಮೊದಲು ಅದಕ್ಕೆ ಸಂಬಂಧಪಟ್ಟಂತೆ ಬೆಲೆಗಳು ಬೇರೆ ಬೇರೆ ತಾಣಗಳಲ್ಲಿ ಎಷ್ಟಿದೆ ಎಂಬುದು ತಿಳಿದುಕೊಳ್ಳಿ. ಯಾವ ತಾಣದಲ್ಲಿ ಬೆಲೆ ಮತ್ತು ಒಳ್ಳೆಯ ವಿಮರ್ಶೆ ಇರುವುದೋ ಅಲ್ಲಿ ಖರೀದಿಸಿ.
ಹಾಗೆಯೇ ರಿಯಾಯಿತಿ ಮತ್ತು ಕೆಲವು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್ ಬಳಸಿದಾಗ ಸಿಗುವ ಕ್ಯಾಶ್ ಬ್ಯಾಕ್ (Cashback) ಮಾಹಿತಿಯನ್ನು ತಪ್ಪದೇ ತಿಳಿದು, ಖರೀದಿಸಿ.
ವಸ್ತುಗಳನ್ನು ಖರೀದಿ ಮಾಡಲು ಏನಾದರೂ ಸಂಶಯಗಳಿದ್ದರೆ, ಯುಟ್ಯೂಬ್ ನಲ್ಲಿ ಅಥವಾ ಬೇರೆ ಜಾಲತಾಣಗಳಲ್ಲಿ ವಸ್ತುಗಳ ಬಗ್ಗೆ ಕೊಟ್ಟಿರುವ ವಿಮರ್ಶೆಯನ್ನು ಮತ್ತು ಪೆಟ್ಟಿಗೆ ತೆರೆಯುವಿಕೆಯನ್ನು (Unboxing video), ಅದರ ಬಳಕೆಯನ್ನು ಮತ್ತು ಇತರೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಖರೀದಿಸಿ.
ವಿವಿಧ ರೀತಿಯ ವಸ್ತುಗಳನ್ನು ಹುಡುಕಿ, ನೋಡಿ ಕೆಲವು ವಸ್ತುಗಳು ನಿಮಗೆ ಎಲ್ಲಿಯೋ ನೋಡಿ ಅಥವಾ ಯಾರಿಂದಲೂ ಕೇಳಿ ಗಮನಕ್ಕೆ ಬಂದಿರುತ್ತದೆ. ಇನ್ನೂ ಸಾಕಷ್ಟು ಉತ್ಪನ್ನಗಳು ನಮ್ಮ ಗಮನಕ್ಕೆ ಬಂದಿಲ್ಲದೆ ಇರಬಹುದು, ಅಥವಾ ತಯಾರಿ ಆಗಿರಬಹುದು. ಇತರ ಉತ್ಪನ್ನಗಳು ನಮಗೆ ಯಾವುದೋ ಒಂದು ಸಮಸ್ಯೆಯನ್ನು ಬಗೆಹರಿಸಬಹುದು ಅಥವಾ ಒಂದು ಹೊಸ ಅನುಕೂಲವನ್ನು ಮಾಡಿಕೊಡಬಹುದು. ಆದಕಾರಣ ನೀವು ಬಿಡುವಿನ ಸಮಯದಲ್ಲಿ ಈ ತರಹದ ವಿಶೇಷ ಮತ್ತು ನಿಮಗೆ ಅರಿಯದ ವಸ್ತುಗಳನ್ನು ಹುಡುಕಾಡಿ ಮುಂದೆ ಯಾವಾಗಲಾದರೂ ಖರೀದಿ ಮಾಡಲು ಅಥವಾ ವಿಶ್ ಲಿಸ್ಟ್ (Wishlist) ಸೇರಿಸಿಕೊಳ್ಳಿ.
ಮಾರಾಟ ಹಬ್ಬದ ಉಪಯೋಗ - ಖರೀದಿಸಬೇಕೆಂದು ಕೊಂಡ ವಸ್ತುಗಳು ತುಂಬಾ ದುಬಾರಿಯೆನಿಸಿದರೆ ಮತ್ತು ಸದ್ಯಕ್ಕೆ ನೀವು ಅವುಗಳನ್ನು ಬೇಗನೆ ಖರೀದಿ ಮಾಡುವ ಅವಶ್ಯಕತೆ ಇಲ್ಲದಿದ್ದರೆ ನೀವು ಇ-ಕಾಮರ್ಸ್ ಜಾಲತಾಣಗಳಲ್ಲಿ ನಡೆಸುವ ಮಾರಾಟ ಹಬ್ಬಗಳಿಗಾಗಿ ಕಾಯಲು ಅಡ್ಡಿ ಇಲ್ಲ. ವಿವಿಧ ಹಬ್ಬಗಳು ಇರುವಾಗ ಅಥವಾ ಕೆಲವು ಸಂದರ್ಭಗಳಲ್ಲಿ ಇ-ಕಾಮರ್ಸ್ ಜಾಲತಾಣಗಳು "ಮಾರಾಟ ಹಬ್ಬಗಳನ್ನು" ಆಯೋಜಿಸುತ್ತವೆ. ಆಗ ವಸ್ತುಗಳ ಮೇಲೆ ಕಡಿಮೆಯಾಗುವುದರ ಜೊತೆಗೆ ಕೆಲವು ಬ್ಯಾಂಕಿಂಗ್ ಸೇವೆಗಳನ್ನು ಉಪಯೋಗಿಸುವುದರಿಂದ ಕ್ಯಾಶ್ ಬ್ಯಾಕ್ / ರಿಯಾಯಿತಿ ಕೂಡ ಪಡೆಯಬಹುದು.
ನಿಮಗೆ ಬೇಕಾಗಿರುವ ವಸ್ತುವನ್ನು ಆಯ್ದುಕೊಂಡ ನಂತರ, ಅದರ ವಿವರಗಳನ್ನು ಸಂಪೂರ್ಣ ಪರಿಶೀಲಿಸಿ. ಮತ್ತು ವಸ್ತು ತಲುಪಬೇಕಾದ ವಿಳಾಸ ಸರಿಯಾಗಿದೆ ಎಂದು ನೋಡಿಕೊಳ್ಳಿ. ಪೇಮೆಂಟ್ ಮಾಡಲು ಯಾವ ವಿಧದ ಬ್ಯಾಂಕಿಂಗ್ ಸೇವೆಯನ್ನು ನೀವು ಬಳಸುತ್ತೀರಿ ಅನ್ನುವುದನ್ನು ಮೊದಲೇ ಖಚಿತಪಡಿಸಿಕೊಳ್ಳಿ.
ಪೇಮೆಂಟ್ ಮಾಡುವಾಗ ಯಾವುದೇ ಕಾರಣಕ್ಕೂ ಕಿಟಕಿಯನ್ನು (Window) ಬಂದು ಮಾಡಬೇಡಿ. ಇ-ಕಾಮರ್ಸ್ ಜಾಲತಾಣವು ಅಥವಾ ಪೇಮೆಂಟ್ ಗೇಟವೇ (Payment gateway) ಸ್ಪಂದಿಸುವವರೆಗೂ ಕಾಯಿರಿ. ಯಾವುದೇ ಕಾರಣಗಳಿಂದಾಗಿ ಪೇಮೆಂಟ್ (Payment) ಸಂಪೂರ್ಣವಾಗದಿದ್ದರೆ, ಕೂಡಲೇ ಪ್ರಯತ್ನಿಸದೆ ಕೆಲವು ಗಂಟೆಗಳವರೆಗೆ ಕಾಯಿರಿ. ಮತ್ತೆ ಬೇರೆ ಬ್ಯಾಂಕಿಂಗ್ ಸೇವೆಯನ್ನು ಉಪಯೋಗಿಸಿಕೊಂಡು ಪೇಮೆಂಟ್ ಮಾಡಿ. ಆರ್ಡರ್ ಪೂರ್ಣಗೊಳ್ಳದೆ, ಪೇಮೆಂಟ್ ಸಂಪೂರ್ಣವಾಗಿ ಬ್ಯಾಂಕ್ ಖಾತೆಯಿಂದ ದುಡ್ಡು ಕಡಿತಗೊಂಡಿದ್ದರೆ ಐದು ದಿನದವರೆಗೆ ಕಾಯಲು ಅಡ್ಡಿ ಇಲ್ಲ. ಆದರೆ ಖಂಡಿತವಾಗಿಯು ಇ-ಕಾಮರ್ಸ್ ಜಾಲತಾಣಕ್ಕೆ ಮತ್ತು ಉಪಯೋಗಿಸಿದ ಬ್ಯಾಂಕಿನವರಿಗೆ ತಪ್ಪದೇ ಮಾಹಿತಿ ತಿಳಿಸಿ.
ಪೇಮೆಂಟ್ ಮಾಡಿದ ಮೇಲೆ ಬರುವ ಸಂದೇಶ, ಇ-ಮೇಲ್, ಪರದೆ (Screen) ಮೇಲೆ ಕಾಣಿಸುವ ಮಾಹಿತಿಯನ್ನು ಸ್ಕ್ರೀನ್ ಶಾಟ್ ಇತ್ಯಾದಿ ವಿವರಗಳನ್ನು ಖಂಡಿತವಾಗಿ ನಿಮ್ಮ ವಸ್ತು ನಿಮಗೆ ತಲುಪುವವರೆಗೂ ಉಳಿಸಿಕೊಳ್ಳಿ.
ಇ-ಕಾಮರ್ಸ್ ಜಾಲತಾಣದಲ್ಲಿರುವ ಸಾರ್ಟಿಂಗ ವೈಶಿಷ್ಟ್ಯತೆಯನ್ನು ಬಳಸಿಕೊಳ್ಳಿ. ಇದರಿಂದ ನೀವು ವಸ್ತುಗಳನ್ನು ವಿವಿಧ ಬೆಲೆ, ಗುಣಮಟ್ಟ, ಗ್ರಾಹಕರ ರೇಟಿಂಗ್ (Customers rating) ಮತ್ತು ಇತ್ಯಾದಿ ಆಧಾರದ ಮೇಲೆ ನೋಡಲು ಸಾಧ್ಯವಾಗುತ್ತದೆ.
ವಸ್ತುವನ್ನು ಮಾರಾಟ ಮಾಡುವವರ ಬಗ್ಗೆ ತಿಳಿದುಕೊಳ್ಳಿ ಇ-ಕಾಮರ್ಸ್ ಜಾಲತಾಣವು ನೋಂದಾಯಿಸಿಕೊಂಡು ಮಾರಾಟಗಾರರು ಸೇವೆಯನ್ನು ಹೇಗೆ ಪೂರೈಸುತ್ತಿದ್ದಾರೆ ಮತ್ತು ಅವರ ಸೇವಾ ಗುಣಮಟ್ಟ ತಿಳಿದುಕೊಂಡರೆ ಖರೀದಿ ಮಾಡಲು ವಿಶ್ವಾಸ ಹೆಚ್ಚಾಗುತ್ತದೆ.
ಯಾವುದೇ ರೇಟಿಂಗ್ ಮತ್ತು ವಿಮರ್ಶೆಯಿಲ್ಲದ ವಸ್ತುಗಳು ತುಂಬಾ ಕಡಿಮೆಬೆಲೆಗೆ ಸಿಗುತ್ತಿದ್ದರೆ ಅವುಗಳನ್ನು ಖರೀದಿಸದೇ ದೂರ ಇರುವುದೇ ಉತ್ತಮ.
ಯಾವುದಾದರೂ ಇ-ಕಾಮರ್ಸ್ ಜಾಲತಾಣವು ಅಗತ್ಯಕ್ಕಿಂತ ಹೆಚ್ಚಾಗಿ ವೈಯಕ್ತಿಕ ವಿವರಗಳನ್ನು ಕೇಳುತ್ತಿದ್ದರೆ ಜಾಗೃತರಾಗಿ ಮತ್ತು ಮಾಹಿತಿಯನ್ನು ಹಂಚಿಕೊಳ್ಳಬೇಡಿ.
Reviewed by Admin
on
ಸೆಪ್ಟೆಂಬರ್ 28, 2023
Rating:

ಕಾಮೆಂಟ್‌ಗಳಿಲ್ಲ