ಅಂತರ್ಜಾಲ ಭದ್ರತೆಯ ಬಗ್ಗೆ ಮಾಹಿತಿ ತಿಳುದಿಕೊಳ್ಳಿ

 ಅಂತರ್ಜಾಲ ಭದ್ರತೆ (Internet Security)

     ಈಗ ಹಲವಾರು ಸೇವೆಗಳು ಮಾಹಿತಿ ತಂತ್ರಜ್ಞಾನದ ಸಹಾಯದಿಂದ ನಡೆಯುತ್ತಿವೆ.  ಅದರಲ್ಲೂ ಹಲವಾರು ಸೇವೆಗಳು ಆನ್ ಲೈನ್ ಅಲ್ಲಿ ನಡೆಯುತ್ತಿವೆ ಯಾವುದೇ ಒಂದು ಸೇವೆಗೆ ಮಾಹಿತಿಯು ಅತ್ಯಂತ ಅವಶ್ಯಕವಾಗಿರುತ್ತದೆ ಮತ್ತು ಈ ಮಾಹಿತಿಯು ಡೇಟಾ ಸಂಗ್ರಹವಾಗುತ್ತದೆ. ಬಳಕೆದಾರರು ಯಾವುದೇ ಒಂದು ಸೇವೆಯನ್ನು ಪಡೆಯಬೇಕಾದರೆ ಸೇವಾದಾರರೊಂದಿಗೆ, ಪೂರೈಕೆದಾರರಿಗೆ ತಮ್ಮ ವಿವರಗಳನ್ನು ಸಲ್ಲಿಸುತ್ತಾರೆ. ಬಹು ಬಳಕೆದಾರರಿಂದ ಇತರ ಸಂಗ್ರಹಗೊಂಡ ಡೇಟಾವು ಸರ್ವ‍ರ್ (Server) ಗಳಿಂದ ವ್ಯವಸ್ಥೆಗಳಲ್ಲಿ ಉಳಿಯುತ್ತದೆ.


ಚಿತ್ರ ೯.೧ ಅಂತರ್ಜಾಲ ಭದ್ರತೆ.jpg


    ಈ ರೀತಿ ಅಧಿಕೃತ ಸಂಗ್ರಹಿಸಲ್ಪಟ್ಟ ಡೇಟಾವು ಅಧಿಕೃತ ವ್ಯಕ್ತಿಗಳಿಗೆ ಅವಶ್ಯಕತೆ ಇದ್ದಾಗ ಮಾತ್ರ ತಿಳಿಯುತ್ತದೆ. ಉದಾಹರಣೆಗೆ ಒಬ್ಬ ಬಳಕೆದಾರನು ತನ್ನ ಮಾಹಿತಿಯನ್ನು ತಾನು ತನ್ನ ಖಾತೆಯಲ್ಲಿ ನೋಡಬಹುದು ಆದರೆ ಅವನು ಬೇರೋಬ್ಬರ ಬಳಕೆದಾರನ ಮಾಹಿತಿಯನ್ನು ನೋಡಲು ಆಗುವುದಿಲ್ಲ.  ಮತ್ತು ಅದರ ಅವಶ್ಯಕತೆಯೂ ಇರುವುದಿಲ್ಲ.

     ಹಣ ಬಂಗಾರ ಇತರೆ ವಸ್ತುಗಳನ್ನು ಭೌತಿಕ ಜಗತ್ತಿನಲ್ಲಿ ಕದಿಯುವರು ಇರುವ ಹಾಗೆ ಇತರೆ ಸಂಗ್ರಹಗೊಂಡ ಡೇಟಾವನ್ನು ಕದಿಯುವವರು ಇದ್ದಾರೆ.  ಅವರು ಕದ್ದ ಡೇಟಾವನ್ನು ದುರುಪಯೋಗ ಪಡಿಸಿಕೊಳ್ಳಬಹುದು ಅಥವಾ ಬೇರೊಬ್ಬರೊಂದಿಗೆ ಹಂಚಿಕೊಳ್ಳಬಹುದು ಹೀಗೆ ಒಂದಿಲ್ಲೊಂದು ಕೆಲಸಕ್ಕೆ ಬಳಸಿಕೊಳ್ಳಬಹುದು.  ಇದು ಒಂದು ಅಪರಾಧ.  ಹಾಗಾಗಿ ನಾವು ನಮ್ಮ ಡೇಟಾವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು. 


     ಮಾಹಿತಿ ಹೇಗೆ ಕದಿಯುತ್ತಾರೆ? ಇನ್ನೊಬ್ಬರ ಮಾಹಿತಿಯನ್ನು ಕದ್ದು ಅದರ ದುರುಪಯೋಗ ಪಡಿಸಿಕೊಳ್ಳುವವರು ಇರುತ್ತಾರೆ.  ಅವರು ವಿವಿಧ ರೀತಿಯ ಯೋಜನೆಗಳನ್ನು ಮಾಡಿ ದಾಳಿ ಮಾಡುತ್ತಾರೆ.  ಈಗಿನ ಹೊತ್ತಿನಲ್ಲಿ ಕೆಲವು ಮೂಲಭೂತ ಮಾಹಿತಿ ಕದಿಯುವ ತಂತ್ರಗಳ ಅರಿವು ಪ್ರತಿಯೊಬ್ಬರಿಗೂ ಅವಶ್ಯಕ. 

     ನಿಮ್ಮ ವಿಶ್ವಾಸ ಮತ್ತು ಕುತೂಹಲವನ್ನು ಬಳಸಿಕೊಂಡು ಡೇಟಾವನ್ನು ದುರುಪಯೋಗಿಸಿಕೊಳ್ಳುವ ಕೆಲವು  ತಂತ್ರಗಳು:

  • ಹ್ಯಾಕರ್ ಗಳಿಗೆ ಹ್ಯಾಕ್ ಮಾಡಿ ಅಥವಾ ಸೋಶಿಯಲ್ ಇಂಜಿನಿಯರಿಂಗ್ ಬಳಸಿ ನಿಮ್ಮ ಸ್ನೇಹಿತರ ಪಟ್ಟಿಯನ್ನು ಪಡೆದು.  ನಿಮ್ಮ ಸ್ನೇಹಿತರಂತೆ ಬಿಂಬಿಸಿ ಸಂದೇಶ, ಮಿಂಚಂಚೆ, ವಿವಿಧ ರೀತಿಯ ಕಡತಗಳನ್ನು ಕಳಿಸಿ, ಗೌಪ್ಯ  ಮಾಹಿತಿಯನ್ನು ಕದ್ದು  ದುರುಪಯೋಗ ಪಡಿಸಿಕೊಳ್ಳುತ್ತಾರೆ. 

  • ನಿಮಗೆ ಮಿಂಚಂಚೆ ಅಥವಾ ಯಾವುದೇ ಸಂದೇಶ ಬಂದಿರುತ್ತದೆ.  ಅದರೊಳಗೆ ಒಂದು ಅಥವಾ ಹೆಚ್ಚು ಕೊಂಡಿಗಳು (Links) ಇರಬಹುದು.  ಅದರಲ್ಲಿ ಕೊಟ್ಟಿರುವ ಮಾಹಿತಿ   ನಂಬಲು ಅರ್ಹವಾಗಿರುವ ಥರ ಇರುತ್ತದೆ.   ಕೊಂಡಿಯನ್ನು ನಂಬಿ ಒತ್ತಿದಾಗ (Click) ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಮಾಲ್ವೇರ್ ಸೋಂಕಿಗೆ ಒಳಗಾಗುತ್ತದೆ.  ಅಷ್ಟೇ ಅಲ್ಲದೆ ಅಪರಾಧಿಯು ನಿಮ್ಮ ಯಂತ್ರವನ್ನು ಸ್ವಾಧೀನಪಡಿಸಿಕೊಳ್ಳಬಹುದು ಮತ್ತು ನಿಮ್ಮ ಮಾಹಿತಿಯನ್ನು ಸಂಗ್ರಹಿಸಬಹುದು.

  • ಕೆಲವು ಮಿಂಚಂಚೆಗಳಲ್ಲಿ ದುರುದ್ದೇಶಪೂರಿತ ಸಾಫ್ಟ್ವೇರ್ ಹೊಂದಿರುವ ಚಿತ್ರಗಳು, ಸಂಗೀತ, ಚಲನಚಿತ್ರ, ಡಾಕ್ಯುಮೆಂಟ್ (Document) ಇತ್ಯಾದಿಗಳು ಇರುತ್ತವೆ.  ಅದು ನಿಮ್ಮ ಸ್ನೇಹಿತರಿಂದ ಬಂದಿರುವ ಸಂದೇಶ ಎಂದು ನೀವು ಡೌನ್ಲೋಡ್ ಮಾಡಿದರೆ ಆಗ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಸೋಂಕಿಗೆ ಒಳಗಾಗುತ್ತದೆ.  ಅಪರಾಧಿಯು ನಿಮ್ಮಸಾಧನ, ಇಮೇಲ್ ಖಾತೆ, ಸಾಮಾಜಿಕ ನೆಟ್ವರ್ಕ್ ಖಾತೆಗಳು ಮತ್ತು ಸಂಪರ್ಕಗಳಿಗೆ ಪ್ರವೇಶವನ್ನು ಹೊಂದಿದ್ದಾನೆ ಮತ್ತು ದಾಳಿ ನಿಮಗೆ ತಿಳಿದಿರುವ ಪ್ರತಿಯೊಬ್ಬರಿಗೂ ಹರಡಬಹುದು. 

  •  ನಿಮ್ಮ ‘ಸ್ನೇಹಿತ ಅಥವಾ ಪರಿಚಯದವರು ಒಂದು ತೊಂದರೆಯಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಅವರಿಗೆ  ನೀವು ಹಣವನ್ನು ತುರ್ತಾಗಿ ಕಳುಹಿಸುವ ಅಗತ್ಯವಿರುತ್ತದೆ.  ಹೀಗೆ ನೀವು ನಂಬಿ ಅವರಿಗೆ ಹಣವನ್ನು ಕಳಿಸಿ ಮೋಸಹೋಗಬಹುದು.

  • ವಿಶಿಷ್ಟವಾಗಿ, ಕಾನೂನುಬದ್ಧ, ಜನಪ್ರಿಯ ಕಂಪನಿ, ಬ್ಯಾಂಕ್, ಶಾಲೆ ಅಥವಾ ಸಂಸ್ಥೆಯಿಂದ ಬಂದಂತೆ ಕಂಡುಬರುವ ಇ-ಮೇಲ್, ಸಂದೇಶಗಳು, ಕಾಮೆಂಟ್ ಅಥವಾ ಪಠ್ಯ ಸಂದೇಶವನ್ನು ಕಳುಹಿಸುತ್ತಾರೆ. ನಂತರ ನೀವು ನಂಬಿದರೆ ಮಾಹಿತಿ ಮತ್ತು ಹಣದ ದುರುಪಯೋಗ ಪಡೆದುಕೊಳ್ಳುತ್ತಾರೆ.

  • ಯಾರಾದರೂ ನಿಮಗೆ ಕರೆ ಮಾಡಿ ತಾವು ಇತರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರೆ ಅಥವಾ ಏನಾದರೂ ನಿಮಗೆ ಸಹಾಯ ಮಾಡುವುದಾಗಿ ತಿಳಿಸಿದರೆ ತುಂಬಾ ಜಾಗರೂಕತೆಯಿಂದ ಮಾತನಾಡಿ.  ಅವರು ನಿಮಗೆ ಯಾವುದಾದರೂ ಅಪ್ಲಿಕೇಶನ್ ಇನ್ ಸ್ಟಾಲ್ (Application Install) ಮಾಡಲು ಹೇಳಿದರೆ, ಮಾಡದೇ ಇರುವುದು ಉತ್ತಮ.  ಹಾಗೂ ಅವರು ಪರದೆ ಹಂಚಿಕೆ (Screen share) ಮಾಡಲು  ಹೇಳಿದರೆ  ಯಾವುದೇ ಕಾರಣಕ್ಕೂ ಮಾಡಬೇಡಿ.  ಇಲ್ಲದಿದ್ದರೆ ನಿಮ್ಮ ಫೋನಿನ ಅಥವಾ ಕಂಪ್ಯೂಟರ್ ಸಂಪೂರ್ಣ ನಿಯಂತ್ರಣವನ್ನು ಅವರು ಪಡೆದುಕೊಳ್ಳುತ್ತಾರೆ.

ಚಿತ್ರ ೯ .೨  ಅಂತರ್ಜಾಲ ಭದ್ರತೆ.png

ಚಿತ್ರ .  ಅಂತರ್ಜಾಲ ಭದ್ರತೆ

  • ನಿಮಗೇನಾದರೂ  ನಿಮ್ಮ ಕೆಲವು ವಿವರಗಳೊಂದಿಗೆ  ಮಿಂಚಂಚೆ  ಅಥವಾ ಸಂದೇಶಗಳು ಬಂದಿದ್ದು  ಮತ್ತು  ಅದರಲ್ಲಿರುವ ನಿಮ್ಮ ವಿವರಗಳನ್ನು  ಸರಿಯಾಗಿವೆಯೇ  ತಿಳಿಸಿ ಎಂದು  ಕೇಳುವಂಥ ಮಾಹಿತಿ ಇದ್ದರೆ,  ಅದರ ಬಗ್ಗೆ ಸಂಪೂರ್ಣ ತಿಳಿಯದೆ  ಕೊಂಡಿಗಳನ್ನು   ಒತ್ತಬೇಡಿ   ಹಾಗೂ ಮಾಹಿತಿಯನ್ನು ಹಚ್ಚಿಕೊಳ್ಳಬೇಡಿ.

  • ನಿಮಗೆ ದೊಡ್ಡ ಬಹುಮಾನ ಸಿಕ್ಕಿದೆ,  ಲಾಟರಿಯಲ್ಲಿ ನೀವು  ಗೆದ್ದಿದ್ದೀರಾ,  ಇಷ್ಟು ಮೊತ್ತದ ರಿಚಾರ್ಜ್ (Recharge) ಉಚಿತ,  ಇಂತಹ ಕಂಪನಿಯವರು  ಉಚಿತ  ಉಡುಗೊರೆ  ನೀಡುತ್ತಿದ್ದಾರೆ,  ಅತ್ಯಂತ ಕಡಿಮೆ ಬೆಲೆಗೆ  ದೊಡ್ಡ ವಸ್ತು  ಲಭ್ಯವಿದೆ   ಹೀಗೆ ನೀವು ಸುಲಭವಾಗಿ ನಂಬಲಾಗದ  ಆದರೆ ನಿಮಗೆ ಅತ್ಯಂತ  ಆಕರ್ಷಕವಾದ ವಿಚಾರಗಳನ್ನು ಹೊಂದಿರುವ   ಈ ತರದ  ಮಿಂಚಂಚೆ  ಅಥವಾ  ಸಂದೇಶಗಳಲ್ಲಿ ಕೊಟ್ಟಿರುವ ಕೊಂಡಿಗಳನ್ನು   ಒತ್ತಬೇಡಿ.   ನೆನಪಿರಲಿ, ಯಾರು ಸುಮ್ಮನೆ ಉಚಿತವಾಗಿ ಏನು ಕೊಡುವುದಿಲ್ಲ!

  • ಮಾಲ್ವೇರ್ ವೈರಸ್ಗಳು:  ಅಂದರೆ ವಿವಿಧ ರೀತಿಯ ಹಾನಿಕಾರಕ ಸಾ‍‍ಫ್ಟ್ ವೇರ್ ಗ‍ಳನ್ನು ಸೂಚಿಸುತ್ತದೆ. ಮಾಲ್ವೇರ್ ನಿಮ್ಮ ಕಂಪ್ಯೂಟರ್ ನಲ್ಲಿದ್ದರೆ, ಅದು ನಿಮ್ಮ ಗಣಕಯಂತ್ರದ ನಿಯಂತ್ರಣವನ್ನು ತೆಗೆದುಕೊಳ್ಳುವುದರಿಂದ ಹಿಡಿದು, ನಿಮ್ಮ ಕಾರ್ಯಗಳು ಮತ್ತು ಇತರೆ ಮೇಲ್ವಿಚಾರಣೆ, ನಿಮ್ಮ ಕಂಪ್ಯೂಟರ್ ಅಥವಾ ನೆಟ್ವರ್ಕ್ ನಿಂದ ಎಲ್ಲಾ ರೀತಿಯ ಗೌಪ್ಯ ಡೇಟಾವನ್ನು ಮೌನವಾಗಿ ಆಕ್ರಮಣಕಾರರಿಗೆ ಕಳುಹಿಸುವವರೆಗೆ ಎಲ್ಲಾ ರೀತಿಯ ಹಾನಿಗಳನ್ನು ಉಂಟುಮಾಡಬಹುದು.

  • ಫಿಶಿಂಗ್ (Phishing): ಫಿಶಿಂಗ್ ದಾಳಿಯಲ್ಲಿ, ಆಕ್ರಮಣಕಾರರು ನಿಮ್ಮ ಸ್ನೇಹಿತ, ಉದ್ಯೋಗದಾತರು ಅಥವಾ ನೀವು ಖರೀದಿ ಮಾಡುವ ತಾಣದ  ವ್ಯಕ್ತಿ (Shopping site) ಮತ್ತು ಇತರೆ ನಂಬಲಾರ್ಹ  ಕಂಪನಿಯಂತೆ,  ನೀವು ವಿಶ್ವಾಸದಿಂದ ನಂಬುವ  ಮಿಂಚಂಚೆ ಇಮೇಲ್ ಅನ್ನು ಕಳುಹಿಸಬಹುದು. ಇಮೇಲ್ ಸರಿಯಾಗಿದೆ ಅನ್ನುವಂತೆ ತೋರುತ್ತದೆ, ಮತ್ತು ಅದರಲ್ಲಿ ತುರ್ತಾಗಿ ನೀವು ಏನಾದರೂ ಮಾಡ ಬೇಕಾಗುತ್ತದೆ (ಉದಾ. ನಿಮಗೆ ದೊಡ್ಡ ಮೊತ್ತದ ಬಹುಮಾನ ದೊರಕಿದೆ ಲಾಟರಿಯಲ್ಲಿ, ಬೇಗನೆ ವಿವರ ಸಲ್ಲಿಸಿ. ಇಮೇಲ್ ನಲ್ಲಿ, ತೆರೆಯಲು ಲಗತ್ತು ಅಥವಾ ಕ್ಲಿಕ್ ಮಾಡಲು ಲಿಂಕ್ ಇರುತ್ತದೆ. 

  • ನಿಮಗೆ ಪರಿಚಯದವರಂತೆ ಇತರೆ ಸಂಸ್ಥೆಯವರಂತೆ ನಿಮಗೆ ಕರೆ ಮಾಡಿ ಅಥವಾ ಸಂದೇಶ ಕಳಿಸಿ ಮಾಹಿತಿ ದೋಚಬಹುದು

ನಮ್ಮ  ಮಾಹಿತಿ ರಕ್ಷಣೆ ಹೇಗೆ?

     ನಾವು ಎಲ್ಲಿಯಾದರೂ ಯಾವುದೇ ವೆಬ್ ಸೈಟ್ ಅಪ್ಲಿಕೇಶನ್ ಮತ್ತು ಇನ್ನು ಎಲ್ಲೋ ನಮ್ಮ ಮಾಹಿತಿಯನ್ನು ಕೊಡುವಾಗ ಅತಿ ಜಾಗರೂಕರಾಗಿರಬೇಕು.  ನಾವು ಮಾಹಿತಿ ಕೊಡುವ ಮುಂಚೆ ಯಾರಿಗೆ ಮಾಹಿತಿ ಕೊಡುತ್ತಿದ್ದೇವೆ, ಎನ್ನುವುದರ ಬಗ್ಗೆ ಅರಿವಿರಬೇಕು ಮತ್ತು ಅವರಿಗೆ ಮಾಹಿತಿ ಕೊಟ್ಟರೆ ಸುರಕ್ಷಿತ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

     ವೈಯಕ್ತಿಕ ಅನಿಸುವ ಮತ್ತು ಅವುಗಳಿಗೆ ಬೇಕಾದ ಮಾಹಿತಿಯನ್ನು ನಾವು ಯಾರೊಂದಿಗೂ ಹಚ್ಚಿಕೊಳ್ಳಬಾರದು.  ನೀವು ಯಾವುದೋ ಒಂದು ವೆಬ್ ತಾಣದಲ್ಲಿ ನೋಂದಣಿ ಮಾಡಲು ಬಯಸಿದ್ದಲ್ಲಿ ನಿಮ್ಮ ಹೆಸರು ಮೊಬೈಲ್ ನಂಬರ್ ಇಮೇಲ್ ಐಡಿಯನ್ನು ಸಾಮಾನ್ಯವಾಗಿ ಕೊಡಬಹುದು. ಆದರೆ ನಿಮ್ಮ ಡೆಬಿಟ್ ಕಾರ್ಡ್ ರೆಕಾರ್ಡ್ , ಮನೆಯ ವಿಳಾಸ ಇನ್ನೂ ಹಲವು ಮಾಹಿತಿಯನ್ನು ಸಂಪೂರ್ಣ ವಿಶ್ವಾಸವಿರುವ ಸೇವಾ ಪೂರೈಕೆದಾರರಿಗೆ ಮಾತ್ರ ಕೊಡಬಹುದು.  ಇತರ ಕೆಲವು ಮಾಹಿತಿಯನ್ನು ನಾವು ಟೆಲಿಕಾಂ ಆಪರೇಟರ್, ಶಾಪಿಂಗ್ ವೆಬ್ ತಾಣಗಳು, ಪ್ರಯಾಣದ ಚೀಟಿ ಬುಕ್ ಮಾಡಲು ಮತ್ತು ಇತರೆ ನಂಬಲಾರ್ಹ ಸೇವಾ ಪೂರೈಕೆದಾರರೊಂದಿಗೆ ಹಂಚಿಕೊಳ್ಳಬಹುದು. 

     ಆದರೆ ಗೌಪ್ಯ ಮಾಹಿತಿಯಾದ ಸಿವಿವಿ ನಂಬರ್, ನಿಮ್ಮ ಮೊಬೈಲ್ ನಂಬರಿಗೆ ಅಥವಾ ಇಮೇಲ್ ಐಡಿಗೆ ಬರುವ ಓಟಿಪಿ (OTP), ಪಾಸ್ ವರ್ಡ್ (Password), ಪಾಸ್ ವರ್ಡ್ (Password) ಬದಲಾವಣೆ ಲಿಂಕ್, ವೆರಿಫಿಕೇಶನ್ ಕೋಡ್ (Verification Code), ಇತರ ಮಾಹಿತಿಯನ್ನು ಯಾರೊಂದಿಗೂ ಯಾವತ್ತು ಹಂಚಿಕೊಳ್ಳಬಹುದು. 

ಸುರಕ್ಷತಾ ಕ್ರಮಗಳು 

  • ವಿವಿಧ ಸೇವೆಗಳನ್ನು ಬಳಸಲು ಒಂದೇ ಪಾಸ್ ವರ್ಡ್ (Password) ಅನ್ನು ಉಪಯೋಗಿಸಬೇಡಿ.

  • ಪಾಸ್ ವರ್ಡ್ (Password) ಅನ್ನು ಆಗಾಗ ಬದಲಿಸುತ್ತಿರಿ.

  • ಪಾಸ್ ವರ್ಡ್ (Password) ಗಳಲ್ಲಿ ಸುಲಭವಾಗಿ ಊಹೆ ಮಾಡಬಹುದಾದಂತ ಶಬ್ದ ಸಂಖ್ಯೆಗಳನ್ನು ಬಳಸಬೇಡಿ.

  • ಕ್ಲಿಷ್ಟಕರವಾದ ಆದರೆ ನಿಮಗೆ ನೆನಪಿಡಲು ಸಾಧ್ಯವಾಗುವಂತಹ ಪಾಸ್ ವರ್ಡ್ (Password) ಗಳನ್ನು ಬಳಸಿ

  • ವಿವಿಧ ರೀತಿಯ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಿಟ್ಟು ಕೊಡಬೇಡಿ.

  •  ಯಾವುದೇ ಕಾರಣಕ್ಕೂ ನಿಮಗೆ ಗೊತ್ತಿಲ್ಲದ ವ್ಯಕ್ತಿ/ಸಂಸ್ಥೆಯಿಂದ ಬಂದಿರುವ ಮಿಂಚಂಚೆಯ ಅನುಮಾನಾಸ್ಪದ ಅಟ್ಯಾಚ್ಮೆಂಟ್ ಅನ್ನು ಡೌನ್ಲೋಡ್ ಮಾಡಬೇಡಿ.  ನಿಮಗೆ ಗೊತ್ತಿಲ್ಲದೇ, ನಿಯಂತ್ರಣವಿಲ್ಲದೆ ಏನಾದರೂ ವೈರಸ್ ಇನ್ ಸ್ಟಾಲ್ (Install) ಆಗಬಹುದು.

  • ಗೊತ್ತಿಲ್ಲದೇ ಏನಾದ್ರು ಡೌನ್ ಲೋಡ್ (Download) ಮಾಡಿದರೆ, ನಿಮಗೆ ಸಂಶಯ ಬಂದರೆ ಕೂಡಲೇ ಅಂತರ್ಜಾಲ ಸಂಪರ್ಕವನ್ನು ಕಡಿತಗೊಳಿಸಿ.  ಕಡತಗಳನ್ನು ಅಳಿಸಿ ಹಾಕಿ. 

  • ತಪ್ಪದೆ ಆ್ಯಂಟಿ ವೈರಸ್ ಸಾಫ್ಟ ವೇರ್ ಅನ್ನು ಇನ್ ಸ್ಟಾಲ್ ಮಾಡಿರಿ. 

  • ಆಮಿಷ ಒಡ್ಡುವ ಮತ್ತು ಅನುನಾಸ್ಪದ ಕೊಂಡಿಗಳನ್ನು ಯಾವತ್ತೂ ಒತ್ತಬೇಡಿ. 

  • ಯಾವದೋ ತಾಣದಿಂದ ಗೊತ್ತಲ್ಲಿದರೋ ಸಾಫ್ಟ ವೇರ್ ನ್ನು ಇನ್ ಸ್ಟಾಲ್ ಮಾಡಬೇಡಿ. 

  •  ಮಿಂಚಂಚೆ, ಬ್ಯಾಂಕ್ ಖಾತೆ, ವೈಯಕ್ತಿಕ ಸೇವೆಗಳು ಮತ್ತು ಇತರೆ ಮುಖ್ಯ ಸೇವೆಗಳನ್ನು ಬಳಸುವಾಗ ಬೇರೆ ಬೇರೆ ರೀತಿಯ ಕಠಿಣ ಪಾರ್ಸ್ ವರ್ಡ್ ಗಳನ್ನೂ ಉಪಯೋಗಿಸಿ. 

  • ನೀವು ಬಳಸುವ ಅಪ್ಲಿಕೇಶನ್ ಗಳು ಭೇಟಿ ನೀಡುವುದು ಜಾಲತಾಣಗಳು ಅವಶ್ಯಕತೆಗಿಂತ ಜಾಸ್ತಿ ಮಾಹಿತಿಯನ್ನು ಸಂಗ್ರಹಿಸಬಹುದು.  ಆದಕಾರಣ ಗೌಪ್ಯತೆ ಸಂಯೋಜನೆಗಳನ್ನು (Privacy Settings) ಅವಲೋಕಿಸಿ ಮತ್ತು ನಿಯಂತ್ರಿಸಿ.  ಇದರಿಂದ ನಿಮ್ಮ ಎಲ್ಲಾ ಮಾಹಿತಿ ಸಂಗ್ರಹವಾಗುವುದನ್ನು ಬೇಡ ಎಂದು ತಿಳಿಸಬಹುದು ಮತ್ತು ಮಾಹಿತಿಯು ಬೇರೆಯವರಿಗೆ ಲಭ್ಯವಾಗದಂತೆ ಮಾಡಬಹುದು.

  • ಸುರಕ್ಷಿತ   ಜಾಲತಾಣಗಳಿಂದ ಮಾತ್ರ ಖರೀದಿ ಮತ್ತು ಇತರೆ ವಿವರಗಳನ್ನು ಮಾಡಿ.  ಜಾಲತಾಣದ ವಿಳಾಸದಲ್ಲಿ https ಮತ್ತು ಹಸಿರು ಬಣ್ಣದ ಇರುವುದನ್ನು ಖಚಿತ ಪಡಿಸಿಕೊಳ್ಳಿ.  ಮೇಲೆ ಒತ್ತಿದಾಗ ಸುರಕ್ಷತೆಯ ಮಾಹಿತಿಯನ್ನು ತಿಳಿದು ಮುಂದುವರೆಯಿರಿ.

  • ದಿನನಿತ್ಯದ ನಮ್ಮ ಎಲ್ಲಾ ಚಟುವಟಿಕೆಗಳನ್ನು, ಜೀವನದ ಘಟನೆಗಳನ್ನು, ಹಲವಾರು ಫೋಟೋಗಳನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ. ಇಲ್ಲದಿದ್ದರೆ ನಿಮ್ಮ ಮಾಹಿತಿಯನ್ನು ಯಾರಾದರೂ ದುರುಪಯೋಗ ಪಡಿಸಿಕೊಳ್ಳಬಹುದು. 

  • ಪ್ರಮುಖ ವ್ಯವಹಾರಗಳನ್ನು ಮಾಡುವ ಜಾಲತಾಣಗಳನ್ನು ಮತ್ತು ಅಪ್ಲಿಕೇಶನ್ ಗಳನ್ನು ಬಳಸುವಾಗ  ತಪ್ಪದೇ  ಎರಡು ಹಂತದ  ಖಚಿತಪಡಿಸಿಕೊಳ್ಳುವಿಕೆಯನ್ನು  ಸಂಯೋಜಿಸಿ.  ಉದಾಹರಣೆಗೆ   ನೆಟ್ ಬ್ಯಾಂಕಿಂಗ್  ಲಾಗಿನ್ ಆಗಲು,  ಕೇವಲ ಬಳಕೆದಾರ  ಹೆಸರು,  ಪಾಸ್ ವರ್ಡ್ (Password)  ಕೊಡುವ ಬದಲು    OTP  ಅಥವಾ  ಮೊದಲೇ   ಉತ್ತರಿಸಿರುವ  ಗೌಪ್ಯ ಪ್ರಶ್ನೆಗೆ ಉತ್ತರವನ್ನು   ಸಹ  ಕೊಟ್ಟಮೇಲೆ  ಲಾಗಿನ್ ಆಗುವಂತೆ  ಸಂಯೋಜಿಸಬೇಕು.  

  • ವಿವಿಧ ಜಾಲತಾಣ ಬಳಸುವಾಗ, ಮೊಬೈಲ್ ಅಪ್ಲಿಕೇಶನ್ ಬಳಸುವಾಗ, ಅಥವಾ ಇನ್ನೂ ಹಲವಾರು ಸೇವೆಗಳನ್ನು ಬಳಸುವಾಗ ಪಾಸ್ ವರ್ಡ್ (Password) ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ.  ಅದರಲ್ಲೂ  ಸುರಕ್ಷತೆ ದೃಷ್ಟಿಯಿಂದ ಇದು ಅತಿ ಮುಖ್ಯ.  ಆದರೆ ಸರಿಯಾಗಿ ರಚಿಸುತ್ತಿದ್ದೇವೆ, ಅದು ಎಷ್ಟು ಕ್ಲಿಷ್ಟಕರವಾಗಿದೆ, ಅದು ಬೇರೆಯವರು ಊಹಿಸಲು ಸಾಧ್ಯವಾ?, ಉತ್ತಮ ಪಾಸ್ ವರ್ಡ್ (Password)  ಹೇಗಿರಬಹುದು  ಅನ್ನುವ  ಒಂದಿಷ್ಟು  ವಿವರಗಳನ್ನು   ಕೆಳಗೆ  ಕೊಡಲಾಗಿದೆ.

  • ಬಳಕೆದಾರರ ಹೆಸರು ( Username ) ಮತ್ತು ಪಾಸ್ ವರ್ಡ್ (Password)  ಎರಡು ಒಂದೇ ಇರಬಾರದು .ಪಾಸ್ ವರ್ಡ್ (Password) ನಲ್ಲಿ ನಿಮ್ಮ ಹೆಸರು, ಮಿಂಚಂಚೆ, ಜನ್ಮ ದಿನಾಂಕ, ಕುಟುಂಬ ಸದಸ್ಯರ ಹೆಸರು, ಅಡ್ಡ ಹೆಸರು, ಊರಿನ ಹೆಸರು ಇತರೆ ಸಾಮಾನ್ಯವಾಗಿ ಬೇರೆಯವರಿಗೆ ತಿಳಿದಿರಬಹುದಾದ ಮಾಹಿತಿಯು ಇರಬಾರದು. ಉದ್ದನೆಯ ಪಾಸ್ ವರ್ಡ್  (Password) ಅನ್ನು ಬಳಸಿ. ನಿಮ್ಮ ಪಾಸ್ ವರ್ಡ್ (Password) ಉದ್ದ ಕನಿಷ್ಠ 8 ಅಕ್ಷರಗಳು ಇದ್ದರೆ ಒಳ್ಳೆಯದು. 

  • ಪಾಸ್ ವರ್ಡ್ (Password) ಗಳಲ್ಲಿ ಸಂಖ್ಯೆಗಳು, ಚಿಹ್ನೆಗಳು, ದೊಡ್ಡಕ್ಷರ ಮತ್ತು ಸಣ್ಣ ಅಕ್ಷರಗಳನ್ನು ಸೇರಿಸಿ ಉದಾಹರಣೆಗೆ : Password@2, PASSWORD1990 ಇತ್ಯಾದಿ. 

ಅಂತರ್ಜಾಲ ಭದ್ರತೆಯ ಬಗ್ಗೆ ಮಾಹಿತಿ ತಿಳುದಿಕೊಳ್ಳಿ    ಅಂತರ್ಜಾಲ ಭದ್ರತೆಯ ಬಗ್ಗೆ ಮಾಹಿತಿ  ತಿಳುದಿಕೊಳ್ಳಿ Reviewed by Admin on ಸೆಪ್ಟೆಂಬರ್ 28, 2023 Rating: 5

ಕಾಮೆಂಟ್‌ಗಳಿಲ್ಲ