ಎಟಿಎಂ ಕಾರ್ಡಗಳ ಬಗ್ಗೆ ಮಾಹಿತಿ ಮತ್ತು ಸಲಹೆಗಳು

 ಎಟಿಎಂ ಕಾರ್ಡ್ ‍(ATM CARD) ಬಳಕೆಯ ಸಲಹೆಗಳು : 

atm tips in kannada

  • ಮೊದಲ ಬಾರಿ ಎಟಿಎಂ ‍ಕಾರ್ಡ್ ಅಥವಾ ಡೆಬಿಟ್ ‍ಕಾರ್ಡ್ ಬಳಸುವಾಗ ತಪ್ಪದೇ PIN ಬದಲಾವಣೆ ಮಾಡಿ. 

  • ಮೊದಲ ಬಾರಿ ಬಳಸುವಾಗ ನಿಮ್ಮದೇ ಬ್ಯಾಂಕಿನ ಎಟಿಎಂನಲ್ಲಿ ಬಳಸುವುದು ಅನುಕೂಲಕರ.

  • ಎಟಿಎಂ ‍ಕಾರ್ಡ್ ಪಿನ್ನನ್ನು ಅವಾಗವಾಗ ಬದಲಾವಣೆ ಮಾಡುತ್ತಾ ಇರಿ.

  • ಅವಶ್ಯಕತೆ ಇಲ್ಲದಿದ್ದರೆ ಪ್ರಿಂಟ್ ಸ್ಲಿಪ್ ಆಯ್ಕೆಗೆ ಬೇಡ ಎನ್ನಿ.

  • ಯಾವುದೋ ಊರಿಗೆ ಹೋದಾಗ, ಯಾವುದೇ ಬ್ಯಾಂಕ್ ಎಟಿಎಂನಲ್ಲಿ ದುಡ್ಡು ತೆಗೆಯುವಾಗ ಒಂದು ವಿಚಾರವನ್ನು ಪಾಲನೆ ಮಾಡಬಹುದು.  ದೊಡ್ಡ ಮೊತ್ತ ತೆಗೆಯುವ ಮುನ್ನ ಮೊದಲು ನೂರು ರೂಪಾಯಿ ತೆಗೆದುಕೊಂಡು ಎಟಿಎಂ ಮಷೀನ್ ಕಾರ್ಯಚರಣೆಯಲ್ಲಿರುವುದನ್ನು ಖಚಿತಪಡಿಸಿಕೊಂಡು ನಿಮಗಿಷ್ಟವಾದ ಮೊತ್ತವನ್ನು ಪಡೆಯುವುದು ಒಳಿತು. 

  • ಹಣ ಪಡೆಯುವಾಗ ಎಟಿಎಂ ಮಷೀನ್ ಅಲ್ಲಿ ತೊಂದರೆಯಾಗಿ ದುಡ್ಡು ಬರದೆ, ದುಡ್ಡು ಕಡಿತವಾಗಿರುವ ಸಂದೇಶ ಬಂದರೆ ಎಲ್ಲ ಮಾಹಿತಿಯನ್ನು ಪಡೆದು ಇಟ್ಟುಕೊಳ್ಳಿ.  ಏನಾದರೂ ತಾಂತ್ರಿಕ ತೊಂದರೆಯಾಗಿದ್ದರೆ ಕೂಡಲೇ ಮತ್ತೊಂದು ಸಂದೇಶದೊಂದಿಗೆ ದುಡ್ಡು ಜಮಾ ಆಗುತ್ತದೆ.  ಇಲ್ಲದಿದ್ದರೆ ಐದು ಕೆಲಸದ ದಿನಗಳ ಒಳಗೆ ಜಮಾ ಆಗುತ್ತದೆ.  ಒಂದು ದಿನದ ಒಳಗೆ ಜಮಾ ಆಗದಿದ್ದರೆ, ವ್ಯವಹಾರದ ಎಲ್ಲ ವಿವರಗಳೊಂದಿಗೆ ಸಂಬಂಧಪಟ್ಟ ಬ್ಯಾಂಕ್ ಗೆ ಕರೆ ಮಾಡಿ ಅಥವಾ ಮಿಂಚಂಚೆ ಮೂಲಕ ದೂರು ನೀಡಿರಿ. 

  • ಖರೀದಿ (POS) ಮಾಡುವಾಗ ಕಾರ್ಡ್ ಸರಿಯಾಗಿ ಕೆಲಸ ಮಾಡದಿದ್ದಲ್ಲಿ ಮತ್ತೊಮ್ಮೆ ಪ್ರಯತ್ನಿಸುವ ಬದಲು ಬೇರೆ ಕಾರ್ಡ್ ನಿಂದ ಅಥವಾ ಬೇರೆ ರೂಪದಲ್ಲಿ ಹಣ ಪಾವತಿಸುವುದು ಒಳ್ಳೆಯದು.

  • ವಿವಿಧ ಬ್ಯಾಂಕುಗಳು ಕಾರ್ಡ್ ‍ ಬಳಸಿ ವ್ಯವಹಾರ ಮಾಡಿದಾಗ ರಿವಾರ್ಡ್ (Reward) ಪಾಯಿಂಟುಗಳನ್ನು ಕೊಡುತ್ತವೆ.  ಈ ರಿವಾರ್ಡ್ (Reward) ಪಾಯಿಂಟುಗಳನ್ನು ಮುಂದೆ ಏನಾದರೂ ಖರೀದಿಸಲು ಉಪಯೋಗಿಸಬಹುದು, ಈ ಸೇವೆಗಳ ಕುರಿತು ಬ್ಯಾಂಕ್ ನಲ್ಲಿ ವಿಚಾರಿಸಿ ಅದರ ಉಪಯೋಗ ಮಾಡಿಕೊಳ್ಳಿ.

  • ನಿಮ್ಮ ಕಾರ್ಡ್ ‍ ಮೇಲಿರುವ ಸಂಯೋಜನೆಗಳನ್ನು ತಪ್ಪದೇ ತಿಳಿದು ನಿಮಗೆ ಬೇಕಾದ ಹಾಗೆ ಬದಲಾಯಿಸಿರಿ. ಉದಾಹರಣೆಗೆ ನೀವು ಒಂದು ದಿನಕ್ಕೆ ಎಷ್ಟು ಮೊತ್ತವನ್ನು ಎಟಿಎಂನಿಂದ ತೆಗೆಯಲು ಇಚ್ಛಿಸುತ್ತೀರೋ ಮತ್ತು ಆನ್ ಲೈನ್ ವ್ಯವಹಾರ ಮಾಡುವಾಗ ಗರಿಷ್ಠ ಎಷ್ಟು ಮೊತ್ತವನ್ನು ಒಂದೇ ಸಲಕ್ಕೆ ಬಳಸಲು ಇಷ್ಟಪಡುತ್ತೀರಿ ಮತ್ತು ಇತರೆ. 

  • ಕಾರ್ಡ್ ‍ಕಳೆದುಹೋದರೆ ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಅಥವಾ ಗ್ರಾಹಕ ಸೇವೆಗೆ ಕರೆಮಾಡಿ ಕೂಡಲೇ ಬ್ಲಾಕ್ ಮಾಡಿಸಿ.



ಎಟಿಎಂ ಕಾರ್ಡಗಳ ಬಗ್ಗೆ ಮಾಹಿತಿ ಮತ್ತು ಸಲಹೆಗಳು  ಎಟಿಎಂ  ಕಾರ್ಡಗಳ  ಬಗ್ಗೆ ಮಾಹಿತಿ  ಮತ್ತು ಸಲಹೆಗಳು Reviewed by Admin on ಸೆಪ್ಟೆಂಬರ್ 28, 2023 Rating: 5

ಕಾಮೆಂಟ್‌ಗಳಿಲ್ಲ