ನೀವು ಬಳಸುವ ವೈಯಕ್ತಿಕ ಉತ್ಪನ್ನಗಳ ಬಗ್ಗೆ ಮಾಹಿತಿ ತಿಳುದಿಕೊಳ್ಳಿ
ವೈಯಕ್ತಿಕ ಕಾಳಜಿ ಉತ್ಪನ್ನಗಳು
ಕೇವಲ ದಿನನಿತ್ಯದ ಜೀವನದಲ್ಲಿ ಹಲವಾರು ಕೆಲಸಕಾರ್ಯಗಳಿಗಷ್ಟೇ ತಂತ್ರಜ್ಞಾನ ಆಧಾರಿತ ಉತ್ಪನ್ನಗಳು ಸೀಮಿತವಾಗಿಲ್ಲ. ಲ್ಯಾಪ್ ಟಾಪ್, ಗಡಿಯಾರ, ಅವುಗಳಲ್ಲದೆ ವಿಭಿನ್ನ ರೀತಿಯ ವೈಯಕ್ತಿಕ ಕಾಳಜಿ ಮತ್ತು ಉಪಯೋಗಕ್ಕಾಗಿ ಹಲವು ಉತ್ಪನ್ನಗಳು ಇಂದು ಪ್ರಚಲಿತವಾಗಿವೆ. ತಂತ್ರಜ್ಞಾನ ಆಧಾರಿತ ವೈಯಕ್ತಿಕ ಕಾಳಜಿ ಉತ್ಪನ್ನಗಳನ್ನು ಬಳಸುವುದರಿಂದ ಚಟುವಟಿಕೆಗಳು ಸರಳವಾಗುವವು, ಸಮಯ ಉಳಿಯುವುದು, ಹಾಗೂ ಇನ್ನೂ ಹಲವು ಅನುಕೂಲಗಳಿವೆ. ವಿವಿಧ ವೈಯಕ್ತಿಕ, ಉತ್ಪನ್ನಗಳು, ಬಳಕೆಯ ಕ್ರಮಗಳು, ಮತ್ತು ಇತರೆ ಮಾಹಿತಿಯನ್ನು ತಿಳಿಯೋಣ ಬನ್ನಿ.
ಟ್ರಿಮ್ಮರ್ (Trimmer)
ಪುರುಷರಿಗೆ ಗಡ್ಡವನ್ನು ತಮಗೆ ಇಷ್ಟವಾದಂತೆ ವಿನ್ಯಾಸ ಮಾಡಲು, ಎಷ್ಟು ಬೇಕು ಅಷ್ಟೇ ಅಳತೆಯ ರೋಮವನ್ನು ಉಳಿಸಿ ಕೊಳ್ಳಲು, ಅಥವಾ ಸಂಪೂರ್ಣವಾಗಿ ಗಡ್ಡದ ಕ್ಷೌರವನ್ನು ಮಾಡಿಕೊಳ್ಳಲು ಇದು ತುಂಬಾ ಉಪಯುಕ್ತ ಸಾಧನ. ಟ್ರಿಮ್ಮರ್‌ನಲ್ಲಿ (Trimmer) ಎರಡು ಬ್ಲೇಡ್‌ಗಳಿರುತ್ತವೆ. ಇವುಗಳನ್ನು ಸಮಾನಾಂತರವಾಗಿ ಜೋಡಣೆ ಮಾಡಿರುತ್ತಾರೆ. ಒಂದು ಬ್ಲೇಡ್ ಸಾಮಾನ್ಯವಾಗಿ ಇನ್ನೊಂದಕ್ಕಿಂತ ಎತ್ತರವಾಗಿರುತ್ತದೆ. ಬ್ಲೇಡ್‌ಗಳು ಅನೇಕ ಹುಬ್ಬು ಮತ್ತು ತೆಗ್ಗುಗಳನ್ನು ಒಳಗೊಂಡಿರುತ್ತದೆ. ಟ್ರಿಮ್ಮರ್‌ನ ಬಳಕೆಯಲ್ಲಿ, ಮೊದಲ ಬ್ಲೇಡ್ ಚಲಿಸುವುದಿಲ್ಲ ಮತ್ತು ಎರಡನೆಯದು ಹಿಂದಕ್ಕೆ ಮತ್ತು ಮುಂದಕ್ಕೆ ವೇಗವಾಗಿ ಚಲಿಸುತ್ತದೆ. ರೋಮಗಳು ಬ್ಲೇಡ್‌ಗಳ ಮೂಲಕ ಹಾದುಹೋದಾಗ, ಕ್ಷಿಪ್ರ ಚಲನೆಯಿಂದ ರೋಮಗಳು ಕತ್ತರಿಸಲ್ಪಡುತ್ತದೆ. ಈ ರೀತಿ ಟ್ರಿಮ್ಮರ್ (Trimmer) ಕಾರ್ಯ ಸಾಧಿಸುತ್ತದೆ.
ಈ ಸಾಧನದ ವಿವಿಧ ಬ್ರಾಂಡ್ ಗಳ ಪ್ರಕಾರ ಹಲವು ವೈಶಿಷ್ಟ್ಯತೆಗಳೊಂದಿಗೆ ಕೂಡಿ ಬರುತ್ತದೆ. ನಿಮಗೆ ಇಷ್ಟವಾದ ರೋಮಗಳ ಅಳತೆಯ ಪ್ರಕಾರ ಸಂಖ್ಯೆಗಳನ್ನು ಆಯ್ದುಕೊಳ್ಳಬಹುದು. ನೀವು ಆರಿಸಿರುವ ಸಂಖ್ಯೆಗಳಿಗುಣವಾಗಿ ರೋಮಗಳ ಅಳತೆಯು ನಿರ್ಧರಿಸಲ್ಪಡುತ್ತದೆ. ಬ್ಲೇಡ್ ಮೇಲೆ ಇರುವ ಕವರನ್ನು ತೆಗೆದು ಕ್ಷೌರ ಮಾಡಿಕೊಂಡರೆ ಸಂಪೂರ್ಣ ಚೊಕ್ಕವಾಗಿ ಕ್ಷೌರ ಮಾಡಿಕೊಳ್ಳಬಹುದು.
ಬಳಕೆ ಸಲಹೆಗಳು:
ಒಳ್ಳೆಯ ಬ್ಲೇಡ್ ಗಳಿರುವ ಟ್ರಿಮ್ಮರ್ ಗಳನ್ನು ಆಯ್ಕೆಮಾಡಿಕೊಳ್ಳಿ, ಸಾಧಾರಣ ಗುಣಮಟ್ಟದ ಬ್ಲೇಡ್ ಗಳು ನಿಮ್ಮ ಕೆನ್ನೆಯನ್ನು ಘಾಸಿಗೊಳಿಸಿಬಹುದು.
ಟ್ರಿಮ್ಮರ್ ಬಳಸುವಾಗ ಮತ್ತು ಬೇರೆ ಸಮಯದಲ್ಲಿ ನೀರಿನಿಂದ ದೂರದಲ್ಲಿಡಿ.
ಚಾರ್ಜಿಂಗ್ ಬ್ಯಾಟರಿ ಆಧಾರಿತ ಟ್ರಿಮ್ಮರ್ ಬಳಸುತ್ತಿದ್ದರೆ ಬಳಸುವ ಮೊದಲು ಸಂಪೂರ್ಣವಾಗಿ ಚಾರ್ಜ್ ಮಾಡಿರಿ.
ಸ್ವಲ್ಪ ಬಳಸಿದ ನಂತರ ತಪ್ಪದೇ ಬ್ಲೇಡಿನ ಭಾಗವನ್ನು ಹೊರತೆಗೆದು ಸಿಕ್ಕಿಹಾಕಿಕೊಂಡಿರುವ ರೋಮಗಳನ್ನು ಹೊರತೆಗೆದು ನಿಮ್ಮನ್ನು ಕಳಿಸಿ.
ನಿಮ್ಮ ಮೀಸೆ ಅಥವಾ ದಪ್ಪ ಗಡ್ಡವನ್ನು ಟ್ರಿಮ್ ಮಾಡುವ ಮೊದಲು ಯಾವಾಗಲೂ ಮೊದಲು ಬಾಚಣಿಕೆಯಿಂದ ಬಾಚಿರಿ. ಇದು ರೋಮಗಳು ಸಮನಾಗಿರಲು ಅನುವು ಮಾಡಿಕೊಡುತ್ತದೆ. ಟ್ರಿಮ್ ಅನ್ನು ಒಂದೇ ದಿಕ್ಕಿನಲ್ಲಿ ಮಾಡಿರಿ, ಇಲ್ಲದಿದ್ದರೆ ಟ್ರಿಮ್ಮರ್ ನಿಮಗೆ ಸರಿಯಾದ ನೋಟವನ್ನು ಸಾಧಿಸಲು ಸಹಾಯ ಮಾಡಲು ಸಾಧ್ಯವಾಗುವುದಿಲ್ಲ.
ಮೇಕ್ ಓವರ್ ಆಪ್ ಬಳಸಿಕೊಂಡು ನಿಮಗೆ ಒಪ್ಪುವ ವಿನ್ಯಾಸಗಳನ್ನು ಆರಿಸಿ ಅದಕ್ಕೆ ತಕ್ಕಂತೆ ವಿವಿಧ ಶೈಲಿಗಳನ್ನು ಮಾಡಿಕೊಳ್ಳಬಹುದು. ಗಡ್ಡ ಅಥವಾ ಮೀಸೆಯ ಹೊಸ ಶೈಲಿಯೊಂದಿಗೆ ನೀವು ಹೇಗೆ ಕಾಣುತ್ತೀರಿ ಎಂಬುದನ್ನು ಪರಿಶೀಲಿಸಿ ಟ್ರಿಮ್ ಮಾಡಿಕೊಳ್ಳಬಹುದು.
ಟ್ರಿಮ್ಮರ್ ಬಳಸುವಾಗ ನಾಜೂಕಿನಿಂದ ಟ್ರಿಮ್ ಮಾಡಿಕೊಳ್ಳಿ. ಜೋರಾಗಿ ಉಜ್ಜುವುದರಿಂದ ತ್ವಚೆಗೆ ಹಾನಿಯಾಗಬಹುದು.
ಟ್ರಿಮ್ಮರ್ ಸರಿಯಾಗಿ ಕಾರ್ಯನಿರ್ವಹಿಸಲು ಮತ್ತು ದೀರ್ಘಕಾಲದ ಬಾಳಿಕೆಗಾಗಿ ಆದರೆ ಸರಿಯಾದ ನಿರ್ವಹಣೆ ಅಗತ್ಯ.
ಟ್ರಿಮ್ಮರ್ ಖರೀದಿಸುವಾಗ ಅದರ ತೂಕವನ್ನು ಪರೀಕ್ಷಿಸಿಕೊಳ್ಳಿ, ಸಾಧ್ಯವಾದಷ್ಟು ಕಡಿಮೆ ತೂಕದ ಸಾಧನವನ್ನು ಖರೀದಿಸಿ.
ಬ್ಲೇಡ್‌ಗಳ ಸುತ್ತಲಿನ ರೋಮಗಳನ್ನು ಸ್ವಚ್ಛ ಗೊಳಿಸಲು ನೀವು ಬ್ರಷ್ (Brush) ಅನ್ನು ಬಳಸಬಹುದು.
ಸ್ವಲ್ಪ ಸಮಯ ಬಳಸಿದ ನಂತರ ಬಿಸಿಯಾದರೆ ಕೆಲವು ನಿಮಿಷಗಳ ನಂತರ ಉಪಯೋಗಿಸದೆ ಹಾಗೆ ಇದ್ದು ಅದು ತಣ್ಣಗಾದ ನಂತರ ಬಳಸುವುದು ಉತ್ತಮ.
ಕೂದಲು ಒಣಗಿಸುವ ಯಂತ್ರ (Hair driyer)
ಕಾಲೇಜಿಗೆ, ಆಫೀಸಿಗೆ, ದಿಡೀರನೆ ಕಾರ್ಯಕ್ರಮವೊಂದಕ್ಕೆ ತಯಾರಾಗ ಬೇಕಾಗಿದೆ, ಇನ್ಯಾವುದೋ ಕೆಲಸಕ್ಕೆ ಹೋಗಬೇಕಾಗಿದೆ ಆದರೆ ತಲೆಸ್ನಾನ ಮಾಡಿದಿರಾ, ತಲೆಯಲ್ಲಾ ಒದ್ದೆಯಾಗಿದೆ. ಕೂದಲಿನಗಳು ಬಾಚಲು ಬರುವುದಿಲ್ಲ ಮತ್ತು ಒದ್ದೆ ಕೂದಲಿನೊಂದಿಗೆ ಹೊರಗೆ ಹೋಗಲು ಸರಿ ಅನಿಸುವುದಿಲ್ಲ. ಸಮಯದಲ್ಲಿ ನಮಗೆ ಕೂದಲು ಒಣಗಿಸುವ ಯಂತ್ರ (Hair driyer) ಅತಿ ಹೆಚ್ಚು ಪ್ರಿಯವಾಗುತ್ತದೆ. ಹೇರ್ ಡ್ರೈಯರ್ (Hair driyer) ಕೈಯಲ್ಲಿ ಹಿಡಿದುಕೊಂಡು ಬಟನನ್ನು ಒತ್ತಿದರೆ ಸಾಕು, ಬಿಸಿ ಗಾಳಿಯ ಸಾಧನದ ಮೂಲಕ ಹೊರಬರುತ್ತದೆ. ಈ ಬಿಸಿ ಗಾಳಿಯಿಂದ ಕೂದಲನ್ನು ಬಹುಬೇಗ ಒಣಗಿಸಲು ಸಾಧ್ಯವಾಗುತ್ತದೆ.
ನಿಮ್ಮ ಕೂದಲನ್ನು ಒಣಗಿಸುವ ಬಿಸಿ ಗಾಳಿಯನ್ನು ಉಂಟುಮಾಡಲು ಹೇರ್ ಡ್ರೈಯರ್‌ಗೆ (Hair driyer) ಎರಡು ಮುಖ್ಯ ಭಾಗಗಳು ಬೇಕಾಗುತ್ತವೆ ಅವುಗಳೆಂದರೆ ಮೋಟಾರ್-ಚಾಲಿತ ಫ್ಯಾನ್ ಮತ್ತು ಗಾಳಿ ಬಿಸಿ ಮಾಡುವ ವಸ್ತು. ಪ್ರತಿರೋಧಕವು (Resistor) ವಿದ್ಯುತ್ ಶಕ್ತಿಯ ಹರಿಯನ್ನು ಪ್ರತಿರೋಧಿಸುತ್ತದೆ, ಇದರಿಂದ ಶಾಖವು ಉತ್ಪನ್ನವಾಗಿ ಪರಿವರ್ತಿಸುತ್ತದೆ. ಹೇರ್ ಡ್ರೈಯರ್‌ನಲ್ಲಿ, ಗಾಳಿಯು ಪ್ರತಿರೋಧಕದ ಹಿಂದೆ ಬೀಸುತ್ತದೆ, ಅದು ಅದರ ಹಾದುಹೋಗುವಾಗ ಶಾಖವನ್ನು ಹೀರಿಕೊಳ್ಳುತ್ತದೆ. ಕೋಣೆಯಲ್ಲಿರುವ ಗಾಳಿಯು ಡ್ರೈಯರ್ ಒಳಗೆ ಪ್ರತಿರೋಧಕದ ತಂತಿ ಸುರುಳಿಗಳ ಮೇಲೆ ಹಾದುಹೋಗುತ್ತದೆ, ಇದರಿಂದಾಗಿ ಗಾಳಿಯು ಬಿಸಿಯಾಗಿ ಹೊರಬರುತ್ತದೆ. ಕೂದಲಿನ ಮೇಲೆ ಬಿಸಿಗಾಳಿ ಬೀಸುವ ಪ್ರಕ್ರಿಯೆಯಿಂದ ನೀರಿನ ಆವಿಯಾಗುವಿಕೆಯನ್ನು ವೇಗಗೊಳಿಸುತ್ತದೆ.
ಬಳಕೆಯ ಸಲಹೆಗಳು :
ಹೇರ್ ಡ್ರೈಯರ್ ಯಾವುದೇ ಕಾರಣಕ್ಕೂ ನೀರಿನ ಸಂಪರ್ಕಕ್ಕೆ ಬರದಂತೆ ನೋಡಿಕೊಳ್ಳಿ.
ಹೇರ್ ಡ್ರೈಯರ್ ಹೆಚ್ಚು ಬಿಸಿಗಾಳಿ ಬರುವ ಕಾರಣ ಸಾಧನವು ಬಿಸಿಯಾಗಿರುತ್ತದೆ ಆದ್ದರಿಂದ ಜಾಗೃತಿಯಿಂದ ಬಳಸಿ.
ಅತಿಯಾದ ಬಿಸಿಗಾಳಿಯನ್ನು ಬಳಸಬೇಡಿ, ಅದರ ಬದಲು ಸಹಾಯದಿಂದ ನಿಮಗೆ ಅನುಕೂಲ ಅನಿಸುವಷ್ಟು ಬಿಸಿಗಾಳಿಯನ್ನು ಮಾತ್ರ ಬಳಸಿ.
ನಿಮ್ಮ ತಲೆ ಮತ್ತು ಸಾಧನದ ಮಧ್ಯೆ ನಿಗದಿತ ಅಂತರವನ್ನು ಕಾಯ್ದುಕೊಳ್ಳಿ.
ಕೂದಲನ್ನು ಬುಡದಿಂದ ತುದಿಯವರೆಗೆ ಒಣಗಿಸಿ.
ಹೇರ್ ಡ್ರೈಯರ್ ನಿರಂತರವಾಗಿ ಒಂದೇ ಜಾಗದಲ್ಲಿ ಬಳಸಬೇಡಿ, ಆಗಾಗ ಬೇರೆ ಬೇರೆ ಭಾಗಗಳ ಕಡೆ ಬದಲಿಸುತ್ತ ಇರಿ .
ತಲೆ ಸ್ನಾನ ಮಾಡಿದ ನಂತರ ಕೂಡಲೇ ಹೇರ್ ಡ್ರೈಯರ್ ಬಳಸುವುದಕ್ಕಿಂತ ಕೆಲವು ನಿಮಿಷಗಳ ನಂತರ ಬಳಸುವುದು ಉತ್ತಮ.
ಹೇರ್ ಡ್ರೈಯರ್ ಕೆಲವು ಒಣಗಿಸುವ ಚಟುವಟಿಕೆಗಳಿಗೆ ಇತರೆ ಸಣ್ಣ ಪುಟ್ಟ ಒಣಗಿಸುವುದಕ್ಕೆ ಬಳಸಬಹುದು. ಉದಾಹರಣೆಗೆ ನೇಲ್ ಪಾಲಿಶ್ (Nail polish) ಹಚ್ಚಿಕೊಂಡ ಮೇಲೆ ಒಣಗಿಸಲು, ನಾಜೂಕಾದ ವಸ್ತುಗಳ ಮೇಲೆ ತೇವಾಂಶವಿದ್ದರೆ ನಿಧಾನವಾಗಿ ಒಣಗಿಸಲು, ಇತರೆ ಸಣ್ಣ ಪುಟ್ಟ ಒಣಗಿಸುವ ಕೆಲಸಗಳಿಗಾಗಿ.
ಶೃಂಗಾರ ಕಿಟ್ (Grooming kit):
ಈಗಾಗಲೇ ಟ್ರಿಮ್ಮರ್ ಬಗ್ಗೆ ವಿವರಗಳನ್ನು ನೋಡಿದ್ದೇವೆ. ಗ್ರೂಮಿಂಗ್ ಕಿಟ್ ಪುರುಷರಿಗೆ ಸಹಾಯವಾಗುವಂತಹ ಕೆಲವು ವಿಶೇಷತೆಗಳನ್ನು ಹೊಂದಿದೆ. ಮುಖದ ರೋಮಗಳನ್ನು ಟ್ರಿಮ್ ಮಾಡಲು, ಕ್ಷೌರ ಮಾಡಿಕೊಳ್ಳಲು ಉಪಯೋಗಿಸಲ್ಪಡುತ್ತದೆ. ಸಾಮಾನ್ಯವಾಗಿ ದೇಹದ ಯಾವ ಭಾಗದಲ್ಲಿ ಉಪಯೋಗಿಸುತ್ತಿದ್ದೇವೆ ಮತ್ತು ಯಾವ ಚಟುವಟಿಕೆಗಾಗಿ ಉಪಯೋಗಿಸುತ್ತಿದ್ದೇವೆ ಎನ್ನುವುದರ ಆಧಾರದ ಮೇಲೆ ಭಾಗಗಳನ್ನು ಲಗತ್ತಿಸಬೇಕಾಗುತ್ತದೆ ಮತ್ತು ಬೇರ್ಪಡಿಸಬೇಕಾಗುತ್ತದೆ. ಈ ಸಾಧನಗಳು ಜಲನಿರೋಧಕ (Water proof) ಆಗಿರುವುದರಿಂದ ಬಳಸಲು ತುಂಬಾ ಅನುಕೂಲವಾಗಿದೆ.
ಪ್ರತ್ಯೇಕ ಬಾಚಣಿಕೆಗಳೊಂದಿಗೆ ಬರುತ್ತವೆ, ಜೊತೆಗೆ ಲಗತ್ತಿಸಬಹುದಾದ ಭಾಗಗಳಿಂದ ಮೂಗು ಮತ್ತು ಕಿವಿಗಳಿಗೆ ರೋಮಗಳನ್ನು ಟ್ರಿಮ್ ಮಾಡಬಹುದು.
ಸಾಧನದ ತಲೆಯ ಭಾಗವು ಸಾಮಾನ್ಯವಾಗಿ ಸಂಪೂರ್ಣವಾಗಿ ತೊಳೆಯಬಹುದಾಗಿರುತ್ತದೆ. ಇದರಿಂದ ಪ್ರತಿ ಟ್ರಿಮ್ ನಂತರ ಅದನ್ನು ಸ್ವಚ್ಛಗೊಳಿಸಲು ಸುಲಭಗೊಳಿಸುತ್ತದೆ.
ತೀಕ್ಷ್ಣವಾದ ಬ್ಲೇಡ್‌ಗಳು ಇಡುವುದರಿಂದ ತುಂಬಾ ಸಮಯ ಬಾಳಿಕೆ ಬರುತ್ತವೆ.
ಈ ಸಾಧನವು ತಂತಿ ಮತ್ತು ತಂತಿರಹಿತ ಮಾದರಿಗಳಲ್ಲಿ ಇರುತ್ತವೆ. ತಂತಿರಹಿತ ಸಾಧನವನ್ನು ಖರೀದಿಸುವುದು ಉತ್ತಮ.
ಈ ತರಹ ಸಾಧಗಳು ವೈಯಕ್ತಿಕ ವಾಗಿರುವುದರಿಂದ ನೈರ್ಮಲ್ಯದ ದೃಷ್ಟಿಯಿಂದ ಒಬ್ಬರೇ ಬಳಸುವುದು ಸೂಕ್ತ.
ಆದರೆ ಬಳಸಿದ ನಂತರ ತಪ್ಪದೇ ಶುಚಿ ಮಾಡಿ ಮತ್ತು ತೆಗೆದು ಇಡುವ ಮುನ್ನ ಒಣಗಿಸಿ.
ಹೇರ್ ಸ್ರ್ಟೈಟ್ ನರ್ (Hair straightner):
ಕೇಶರಾಶಿಯನ್ನು ಶೃಂಗಾರಗೊಳಿಸುವಲ್ಲಿ ಕೂದಲನ್ನು ನೇರ ಗೊಳಿಸುವುದು ಒಂದು ಆಯ್ಕೆಯಾಗಿದೆ. ಒಬ್ಬೊಬ್ಬರ ಕೂದಲು ಒಂದೊಂದು ಬಗೆಯಿರುತ್ತದೆ, ಕೆಲವರದು ದಪ್ಪ, ಕೆಲವರದು ತೆಳು, ಮತ್ತೆ ಕೆಲವರದು ಗುಂಗುರು,ಇತ್ಯಾದಿ ಈ ಸಾಧನದ ಸಹಾಯದಿಂದ ವಿವಿಧ ರೀತಿಯಲ್ಲಿರುವ ಕೇಶರಾಶಿಯನ್ನು ನೇರಗೊಳಿಸಬಹುದು. ಆಧುನಿಕ ತಂತ್ರಜ್ಞಾನದ ಸಹಾಯದಿಂದ ಬಳಕೆದಾರ ಸ್ನೇಹಿ ಆಕರ್ಷಕ ಫ್ಲಾಟ್ ಐರನ್ ಸ್ಟ್ರೈಟನರ್ ಗಳೊಂದಿಗೆ (Hair straightner) ಲಭ್ಯವಿದೆ. ನೀವು ನೇರ ಕೂದಲು ಬಯಸಿದರೆ ಇನ್ನು ಮುಂದೆ ಸಲೂನ್ (Beauty parlour) ಗೆ ಭೇಟಿ ನೀಡಬೇಕಾಗಿಲ್ಲ. ಹೇರ್ ಸ್ರ್ಟೈಟನರ್ (Hair straightner) ಬಳಸಲು ಸರಳವಾಗಿದ್ದರೂ, ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಂಬಂಧಿತ ಅಂಶಗಳ ಬಗ್ಗೆ ತಪ್ಪದೇ ತಿಳಿದಿರಬೇಕು. ತಲೆ ಸ್ನಾನ ಮಾಡಿ, ಶುಭ್ರವಾಗಿರುವ ಒಣಗಿದ ಕೂದಲನ್ನು ನೆರಗೊಳಿಸಲು ಸಾಧನವನ್ನು ಉಪಯೋಗಿಸಬಹುದು. ಸಾಧನವನ್ನು ಉಪಯೋಗಿಸುವ ಮೊದಲು ನಿಮಗೆ ಬೇಕಾದ ಉಷ್ಣಾಂಶವನ್ನು (ಸಾಧನಕ್ಕೆ ಅನ್ವಯವಾಗುವಂತೆ) ಸಂಯೋಜಿಸಿ. ಸ್ವಿಚ್ ಆನ್ ಮಾಡಿದ ಮೇಲೆ ಸಾಧನದ ಮಧ್ಯಭಾಗದಲ್ಲಿ ಶಾಖ ಉತ್ಪತ್ತಿಯಾಗುತ್ತದೆ. ಎರಡು ಪಟ್ಟಿಗಳ ಮಧ್ಯೆ ಕೂದಲನ್ನು ಇಟ್ಟು ನಿಧಾನವಾಗಿ ಬಾಚಿದಂತೆ ಮಾಡುವುದರಿಂದ ನೇರ ಗೊಳಿಸಬಹುದು.
ಯಾವಾಗಲೂ ನಿಮ್ಮ ತಲೆಯ ಹಿಂಭಾಗದಿಂದ ನೇರಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ನಂತರ ನಿಧಾನವಾಗಿ, ಮುಂಭಾಗಕ್ಕೆ ಬನ್ನಿ. ಮುಂಭಾಗದ ಕೂದಲನ್ನು ಕೊನೆಯದಾಗಿ ನೇರಗೊಳಿಸಬೇಕು.
ಕೂದಲನ್ನು ನೇರಗೊಳಿಸಲು ಪ್ರತಿ ಬಾರಿ ನಿಮ್ಮ ಕೂದಲನ್ನು ವಿವಿಧ ಭಾಗಗಳಾಗಿ ವಿಂಗಡಿಸಿಕೊಳ್ಳಿ. ಒಂದು ಸಲಕ್ಕೆ ಒಂದು ಇಂಚಿನ ಕೂದಲು ಪೂರ್ಣಗೊಳಿಸಿ. ಒಂದು ಇಂಚಿನ ವಿಭಾಗವನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಇಸ್ತ್ರಿ ಮಾಡಿ.ತಾಳ್ಮೆಯಿಂದ ಮಾಡುವುದರಿಂದ ನಿಮಗೆ ಪರಿಪೂರ್ಣ ಮತ್ತು ಧೀರ್ಘಕಾಲದ ನೇರ ಕೂದಲನ್ನು ಹೊಂದಲು ಅನುವು ಮಾಡಿಕೊಡುತ್ತದೆ.
ನಿಮ್ಮ ಕೂದಲಿಗೆ ಸರಿಹೊಂದುವಂತಹ ಸಾಧನವನ್ನು ಖರೀದಿಸಿ. ಸಾಧನದ ಅಳತೆಗಳು ಮತ್ತು ಉಷ್ಣಾಂಶ ನಿಯಂತ್ರಣದ ಆಯ್ಕೆಯ ಬಗ್ಗೆ ಗಮನವಿರಲಿ.
ಉಪಯೋಗಿಸಿದ ನಂತರ ತಪ್ಪದೇ ಶುಚಿಗೊಳಿಸಿ.
Reviewed by Admin
on
ಸೆಪ್ಟೆಂಬರ್ 29, 2023
Rating:





ಕಾಮೆಂಟ್‌ಗಳಿಲ್ಲ