ನೀವು ಬಳಸುವ ದೈನಂದಿನ ಗೃಹೋಪಯೋಗಿ ವಸ್ತುಗಳ ಬಗ್ಗೆ ಮಾಹಿತಿ ತಿಳುದಿಕೊಳ್ಳಿ
ಗೃಹೋಪಯೋಗಿ ವಸ್ತುಗಳು:
ಮನೆಯಲ್ಲಿ ಮಾಡುವ ವಿವಿಧ ಕೆಲಸ ಕಾರ್ಯಗಳಿಗೆ, ಮನರಂಜನೆಗಾಗಿ, ಬದುಕು ಸುಲಭಗೊಳಿಸಲು, ಚಟುವಟಿಕೆಗಳನ್ನು ಬೇಗ ಮಾಡಲು, ಹೀಗೆ ಹಲವಾರು ಕಾರ್ಯಗಳಿಗೆ ತಂತ್ರಜ್ಞಾನ ಆಧಾರಿತ ಹಲವಾರು ವಸ್ತುಗಳನ್ನು ಬಳಸುತ್ತಿದ್ದೇವೆ. ತಂತ್ರಜ್ಞಾನ ಬೆಳೆದಂತೆ ಇನ್ನೂ ಹೊಸ ಹೊಸ ವಸ್ತುಗಳು ಬರುತ್ತಿವೆ. ಈ ಅಧ್ಯಾಯದಲ್ಲಿ ಸಾಮಾನ್ಯವಾಗಿ ಮನೆಯಲ್ಲಿ ಬಳಸುವ ವಸ್ತುಗಳ ಬಳಕೆಯ ಮಾಹಿತಿಯನ್ನು, ಸರಿಯಾದ ನಿರ್ವಹಣೆ ಸಲಹೆಗಳನ್ನು ಕೊಡಲಾಗಿದೆ.
ದೂರದರ್ಶನ (ಟಿವಿ)
ಮೂರ್ಖರ ಪೆಟ್ಟಿಗೆ ಎಂದೇ ಪ್ರಸಿದ್ದಿ ಆಗಿದ್ದ ದೂರದರ್ಶನ (ಟಿವಿ) ಈಗ ಕೇವಲ ಮಾಹಿತಿ ಮತ್ತು ಮನರಂಜನೆಗೆ ಸೀಮಿತವಾಗದೆ ಮನೆಯ ಒಂದು ಅಲಂಕಾರಿಕ ವಸ್ತುವಾಗಿಯೂ ತನ್ನ ಅಸ್ತಿತ್ವವನ್ನು ವಿಸ್ತರಿಸಿಕೊಂಡಿದೆ. ಹಳೆಯ ತಂತ್ರಜ್ಞಾನ ಬಳಸುತ್ತಿದ್ದ ದಪ್ಪನೆಯ ಟಿವಿ ಈಗ ಮಾಯವಾಗಿ ಎಲ್ಲರ ಮನೆಯಲ್ಲಿ ತೆಳ್ಳನೆಯ ಸ್ಮಾರ್ಟ್ ಟಿವಿ ಅಂದರೆ ಟಿವಿ ಡಿಜಿಟಲ್ ಟಿವಿ ಉಪಯೋಗಿಸಲ್ಪಡುತ್ತಿದೆ. ತಂತ್ರಜ್ಞಾನ ಬೆಳೆದಂತೆಲ್ಲಾ ದೂರದರ್ಶನವು ಹೊಸ ಹೊಸ ಆವೃತ್ತಿಯೊಂದಿಗೆ ಜನಜೀವನದಲ್ಲಿ ಸಂಪೂರ್ಣ ಬೆರೆತುಹೋಗಿದೆ. ಸುದ್ದಿ, ಸಮಾಚಾರ, ಮನರಂಜನೆ, ಆಟ ಜೊತೆಗೆ ಇನ್ನೂ ಹಲವಾರು ವಿಚಾರಗಳಿಗೆ ಜನರು ಬಳಸುತ್ತಿದ್ದಾರೆ. ಬೆಳಗಿನಿಂದ-ರಾತ್ರಿಯವರೆಗೂ ತನ್ನತ್ತ ಆಕರ್ಷಿಸುವಂತೆ ಶಕ್ತಿಯನ್ನು ದೂರದರ್ಶನವು ಹೋಂದಿದೆ. ಬನ್ನಿ ದೂರದರ್ಶನದ ಬಗ್ಗೆ ಒಂದಿಷ್ಟು ವಿಚಾರಗಳನ್ನು, ಸರಿಯಾದ ಬಳಕೆ ಕ್ರಮಗಳನ್ನು, ಇತರೆ ಉಪಯೋಗಗಳ ಮಾಹಿತಿಯನ್ನು ತಿಳಿಯೋಣ.
ಬಳಕೆಯ ಮಾಹಿತಿ
ಈಗ ಬರುವ ಟಿವಿಗಳನ್ನು ಗೋಡೆಯ ಮೇಲೆ (ವಾಲ್ ಮೌಂಟ್ ) ಕೂಡಿಸಬಹುದು. ಇದರಿಂದ ಜಾಗದ ಉಳಿತಾಯವಾಗುತ್ತದೆ.
ನಿಮ್ಮ ಟಿವಿ ಆಗಿದ್ದು ಸ್ಮಾರ್ಟ್ ಟಿವಿ ಆಗಿಲ್ಲದಿದ್ದರೆ, ಅದನ್ನು ಕೇಬಲ್ ಮೂಲಕ ನಿಮ್ಮ ಲ್ಯಾಪ್ ಟಾಪ್ ಕನೆಕ್ಟ್ ಮಾಡಿ ಸ್ಮಾರ್ಟ್ ಟಿವಿಯಾಗಿ ಪರಿವರ್ತಿಸಬಹುದು. ಅಂದರೆ ಲ್ಯಾಪ್ ಟಾಪ್ ನಲ್ಲಿ ಬರುವ ವಿಡಿಯೋ (ಚಲನಚಿತ್ರಗಳನ್ನು), ಚಿತ್ರ ಮತ್ತು ಸಂಪೂರ್ಣ ಲ್ಯಾಪ್ ಟಾಪ್ ಪರದೆಯನ್ನು ನೀವು ಟಿವಿ ಪರದೆಯ ಮೇಲೆ ನೋಡಬಹುದು.
HDMI ಡೋಂಗಲ‍್ ಅಮೆಜಾನ್ ಗೂಗಲ್ ಇನ್ನಿತರೇ HDMI ಡೋಂಗಲ‍್ ಮೂಲಕವೂ ನೀವು ಸಾಮಾನ್ಯ ಟಿವಿಯನ್ನು ಸ್ಮಾರ್ಟ್ ಟಿವಿ ಆಗಿ ಪರಿವರ್ತಿಸಬಹುದು. ಆದರೆ ಇದಕ್ಕೆ ಅಂತರ್ಜಾಲ(INTERNET WI-FI) (ವೈಫೈ) ಅವಶ್ಯಕತೆ ಇರುತ್ತದೆ. ಇವುಗಳನ್ನು ಬಳಸುವುದರಿಂದ ‘ಕ್ಯಾಸ್ಟ್’ ಆಯ್ಕೆಯ ಮೂಲಕ ಮೊಬೈಲ್ ಪರದೆಯನ್ನು ಟಿವಿಯಲ್ಲಿ ನೋಡಬಹುದು.
ಪೆನ್ ಡ್ರೈವ್ ಉಪಯೋಗಿಸಿಕೊಂಡು ಅದರ ಮೂಲಕವೂ ನೀವು ವಿಡಿಯೋ, ಫೋಟೋ, ಮ್ಯೂಸಿಕ್ ಇತರೆ ಫೈಲ್ ಗಳನ್ನು ಟಿವಿ ಪರದೆಯ ಮೇಲೆ ನೋಡಬಹುದು.
AUX ಕೇಬಲ್ ಮೂಲಕ ಟಿವಿಯ ಧ್ವನಿಯನ್ನು ಅಥವಾ ಕನೆಕ್ಟ್ ಮಾಡಿ ಸಂಗೀತವನ್ನು ಆನಂದಿಸಬಹುದು.
ಟಿವಿಯನ್ನು ಲ್ಯಾಪ್ ಟಾಪ್ ಗೆ ಕನೆಕ್ಟ್ ಮಾಡುವ ಮೂಲಕ ಅದನ್ನು ನೀವು ವಿಸ್ತೃತ ಮಾನಿಟರ್ ಹಾಗೂ ಪ್ರೊಜೆಕ್ಟರ್ ಥರವು ಬಳಸಬಹುದು.
STABILIZER ಅವಶ್ಯಕತೆ:
ವೋಲ್ಟೇಜ್ ವ್ಯತ್ಯಾಸಗಳಿಂದ ಉಂಟಾಗುವ ಯಾವುದೇ ಹಾನಿಯಿಂದ LED/LCD ಟೆಲಿವಿಷನ್ ಗಳನ್ನು ರಕ್ಷಿಸಲು ಸಹಾಯ ಮಾಡುವ ಸಾಧನವೇ ‘ಎಲೆಕ್ಟ್ರಾನಿಕ್ ವೋಲ್ಟೇಜ್ ಸ್ಟೆಬಿಲೈಜರ್’. ಹೆಚ್ಚಿನ ವೋಲ್ಟೇಜ್ ಸಂದರ್ಭಗಳು ಅತ್ಯಂತ ಅಪಾಯಕಾರಿ. STABILIZER TV ಹೈ ವೋಲ್ಟೇಜ್ ನಿಂದ ರಕ್ಷಿಸುತ್ತದೆ. ಇತ್ತಿಚ್ಚಗೆ ಬರುವ TV ಗಳಲ್ಲಿ ಬರುತ್ತದೆ. ಆದಾಗಿಯೂ ಟೆಲಿವಿಷನ್ ಗಳನ್ನು ರಕ್ಷಿಸಲು ಸ್ಟೆಬಿಲೈಜರ್ ಗಳನ್ನು ಬಳಸುವುದು ಮುಖ್ಯ. ‘ತಡೆಗಟ್ಟುವಿಕೆ ಯಾವಾಗಲೂ ಗುಣಪಡಿಸುವುದಕ್ಕಿಂತ ಉತ್ತಮವಾಗಿದೆ’ ಎಂಬ ಮಾತಿನಂತೆ TVಗಳಿಗೆ ಅಗತ್ಯವಿದೆ.
ಟಿವಿ ರಿಮೋಟ್ ಬಳಕೆ
ಟಿವಿ ರಿಮೋಟ್ ಒಳಗೆ ಇರುವ ಬ್ಯಾಟರಿ ಸೆಲ್ ಗಳನ್ನೂ ಆಗಾಗ ಬದಲುಸುತ್ತಿರಿ.ಯಾಕೆಂದರೆ ಬ್ಯಾಟರಿ ಬಾಳಿಕೆ ಕಡಿಮೆ ಚಾಲನೆಯಲ್ಲಿರುವಾಗ ನಿಮಗೆ ತಿಳಿಸುವ ಯಾವುದೇ ಸೂಚಕಗಳಿಲ್ಲ. ಇದರಿಂದ ರಿಮೋಟ್ ಬ್ಯಾಟರಿ ವೀಕ್ ಆಗಿ ಸರಿಯಾಗಿ ಕೆಲಸ ಮಾಡದಿದ್ದಾಗ ಅದನ್ನು ಕಟ್ಟುವುದು ತಪ್ಪುತ್ತದೆ. ಇತ್ತೀಚಿಗೆ ಬರುವ ಹಲವು ವಿನೂತನ ರಿಮೋಟ್ ಕಂಟ್ರೊಲರ್ಬಳಕೆಯಿಂದ ನೀವು ಕೈ ಎತ್ತಿ ಟಿವಿ ಕಡೆ ಹಿಡಿದು ಬಟನ್ ಒತ್ತುವ ಅವಶ್ಯಕತೆ ಇರುವುದಿಲ್ಲ. ಟಿವಿ ಇಂದ ನಿರ್ದಿಷ್ಡ ದೂರದಲ್ಲಿ ಇವು ಯಾವುದೇ ಕೋನದಿಂದ ಕೆಲಸ ಮಾಡುತ್ತವೆ.ಸ್ವಚ್ಚಗೊಳಿಸುವಿಕೆ
ಟಿವಿಯನ್ನು ಆಗಾಗ ಸ್ವಚ್ಚಗೊಳಿಸುತ್ತಿರಬೇಕು ಅದರಲ್ಲೂ ವಿಶೇಷವಾಗಿ ಟಿವಿ ಪರದೆಯನ್ನು. ಮೊದಲು ಟಿವಿಯನ್ನು
ಆಫ್ ಮಾಡಿರಿ. ನಂತರ ಪರದೆ ಶುಚಿಗೊಳಿಸುವ ದ್ರಾವಣದಿಂದ ತೇವಗೊಳಿಸಲಾದ ಮೃದುವಾದ ಬಟ್ಟೆಯಿಂದ(MICROFIBER CLOTH) ಟಿವಿ ಪರದೆಯನ್ನು ಒರೆಸಿ ಶುಚಿಮಾಡಬಹುದು.
ಅಡ್ಡ ಪರಿಣಾಮಗಳು( Side Effects)
ಅತಿಯಾದ ಟಿವಿ ವೀಕ್ಷಣೆಯಿಂದ ಹಲವಾರು ಅಡ್ಡ ಪರಿಣಾಮಗಳು, ಮಾನಸಿಕ ಸಮಸ್ಯೆ ಉಂಟಾಗುವ ಕಾರಣ, ವೀಕ್ಷಣೆಯ ಸಮಯವನ್ನು ಮಿತಗೊಳಿಸುವುದು ಉತ್ತಮ.
ವಾಷಿಂಗ್ ಮಷೀನ್ (Washing Machine)
ವಿದ್ಯುಚ್ಛಕ್ತಿಯಿಂದ ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸಿ ಶುಚಿಗೊಳಿಸಲು ನೆರವು ಮಾಡುವ ಸಾಧನ ವಾಷಿಂಗ್ ಮಷೀನ್. ವಾಷಿಂಗ್ ಮಷೀನ್ ಅಲ್ಲಿ ಮಾನ್ಯುಯಲ್, ಸೆಮಿ-ಆಟೋಮ್ಯಾಟಿಕ್, ಆಟೋಮ್ಯಾಟಿಕ್ ಮತ್ತು ಇತರೆ ಮಾದರಿಗಳು ವೈಶಿಷ್ಟಕ್ಕೆ ತಕ್ಕಂತೆ ವಿವಿಧ ಬೆಳೆಗಳಲ್ಲಿ ಲಭ್ಯವಿದೆ. ಇತ್ತೀಚಿಗೆ ಲಭ್ಯವಿರುವ ವಾಷಿಂಗ್ ಮಷೀನ್ ಗಳು ಬಟ್ಟೆ ತೊಳೆಯುವುದಲ್ಲದೆ ಸಂಪೂರ್ಣ ಒಣಗಿಸಿಕೊಡುತ್ತವೆ.
ಬಳಕೆ ಸಲಹೆಗಳು:
ವಾಷಿಂಗ್ ಮಷೀನ್ (Washing Machine) ಅನ್ನು ತುಂಬಾ ಇಕ್ಕಟ್ಟಾದ ಜಾಗದಲ್ಲಿ ಇಡಬೇಡಿ. ಸುತ್ತ ಮುತ್ತ ಒಂದಿಷ್ಟು ಖಾಲಿ ಜಾಗ ಇರುವಂತೆ ನೋಡಿಕೊಳ್ಳಿ.
ವಾಷಿಂಗ್ ಮಷೀನ್ (Washing Machine) ಕಾರ್ಯಾಚರಣೆಯಲ್ಲಿರುವಾಗ ಅದರ ಮುಚ್ಚಳ ಅಥವಾ ಬೇರೆ ಭಾಗಗಳನ್ನು ತೆರೆಯಲು ಪ್ರಯತ್ನಿಸಬೇಡಿ.
ಮಷೀನ್ ಸಾಮರ್ಥ್ಯಕ್ಕಿಂತ ಹೆಚ್ಚಿಗೆ ಬಟ್ಟೆಗಳನ್ನು ಹಾಕಬೇಡಿ.
ಉತ್ತಮ ಮತ್ತು ಸರಿಯಾದ ಪ್ರಮಾಣದ ಡಿಟರ್ಜೆಂಟ್ ಬಳಸಿ.
ತಿಂಗಳಿಗೊಮ್ಮೆ ಸ್ವಲ್ಪ ಬಿಸಿ ನೀರಿನಿಂದ ತೊಳೆಯಿರಿ ಅಥವಾ ಬಟ್ಟೆ ಹಾಕದೆ ಸ್ವಲ್ಪ ಡಿಟರ್ಜೆಂಟ್ ಹಾಕಿ ಒಂದು ಸೈಕಲ್ ಆಗುವವರೆಗೂ ಕಾಯಿರಿ. ತೊಳೆದ ನಂತರ ಒಣ ಬಟ್ಟೆಯಿಂದ ಒರೆಸಿರಿ. ಇದರಿಂದ ವಾಷಿಂಗ್ ಮಷೀನ್ (Washing Machine) ಶುಭ್ರವಾಗಿರುವುದಲ್ಲದೆ, ಅಡ್ಡ ವಾಸನೆ ದೂರಮಾಡಬಹುದು. ತೊಳೆದ ಮೇಲೆ ನೆನೆದಿರುವ ಬಟ್ಟೆಗಳನ್ನು ಮಷೀನ್ ಒಳಗೆ ಬಿಡಬೇಡಿ.
ತಿಂಗಳಿಗೊಮ್ಮೆ ಮಷೀನ್ ಮತ್ತು ಅದರ ಭಾಗಗಳಲ್ಲಿ ಯಾವುದೇ ಉಬ್ಬುಗಳು ಅಥವಾ ಬಿರುಕುಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ.
ಒಮ್ಮೆ ಒಗೆಯುವ ಕೆಲಸ ಮುಗಿದ ನಂತರ ಬಾಗಿಲನ್ನು ತೆರೆದಿಡಿ- ಬಳಕೆಯಲ್ಲಿಲ್ಲದಿದ್ದಾಗ ಬಾಗಿಲು ತೆರೆದರೆ ಹೆಚ್ಚು ಗಾಳಿಯ ಪ್ರಸರಣವನ್ನು ಪೂರೈಸುತ್ತದೆ. ಅದರಿಂದ ಒಳ ಭಾಗವು ಒಣಗಬಹುದು.
ಲಿಂಟ್ ಪರದೆಯನ್ನು ಅವಾಗವಾಗ ಶುಚಿಗೊಳಿಸಿ.
ವಾಷಿಂಗ್ ಮಷೀನ್ (Washing Machine) ಅನ್ನು ಸಮತಟ್ಟಾದ ಜಾಗದ ಮೇಲೆ ಇಡಬೇಕು. ಒಳಗಿರುವ ಡ್ರಮ್ ಸರಿಯಾಗಿ ಕೆಲಸ ಮಾಡಲು ಇದು ಅವಶ್ಯಕ.
ಯಾವುದೇ ಸೋಪ್ ಅಥವಾ ಧೂಳಿನ ಅವಶೇಷಗಳನ್ನು ಒದ್ದೆಯಾದ ಸ್ಪಾಂಜ್ ಅಥವಾ ಬಿಸಿ ಒದ್ದೆಯಾದ ತೊಳೆಯುವ ಬಟ್ಟೆಯಿಂದ ಶುಚಿ ಮಾಡಬೇಕು.
ನಿಮ್ಮ ಮನೆಯಲ್ಲಿ ಮಕ್ಕಳು ಇದ್ದರೆ ಚೈಲ್ಡ್ ಲಾಕ್ ವೈಶಿಷ್ಟ್ಯತೆಯನ್ನು ಉಪಯೋಗಿಸಿ.
ಮೈಕ್ರೋವೇವ್ ಓವನ್ (Microwave Oven )
ಬೆಳಿಗ್ಗೆ ಇಟ್ಟಿರುವ ತಿಂಡಿಯನ್ನು ಮಾಡಲು, ಕೇಕ್ ಮಾಡಲು, ಪಿಜ್ಜಾ ಮತ್ತು ಇನ್ನಿತರೇ ಬೇಕಿಂಗ್ ಕೆಲಸಗಳಿಗೆ ಮೈಕ್ರೋವೇವ್ ಓವನ್ ತುಂಬಾ ಸಹಕಾರಿ. ಮೈಕ್ರೋವೇವ್ ಓವನ್ ಗಳು ತುಂಬಾ ತ್ವರಿತ ಮತ್ತು ಪರಿಣಾಮಕಾರಿಯಾಗಿದೆ. ಅವು ಶಾಖದ ಶಕ್ತಿಯನ್ನು ನೇರವಾಗಿ ಆಹಾರದೊಳಗಿನ ಅಣುಗಳಿಗೆ(ಸಣ್ಣ ಕಣಗಳು) ಪಸರಿಸುತ್ತವೆ. ಮೈಕ್ರೋವೇವ್ಸನಿಂದ ಬಿಸಿಯನ್ನು ಉತ್ಪತ್ತಿ ಮಾಡುತ್ತದೆ. ಈಗ ಓವನ್ ಕೂಡ ಅಡುಗೆ ಮನೆಯ ಉಪಯುಕ್ತ ಸಾಧನವಾಗಿದೆ. ಅಷ್ಟೇ ಅಲ್ಲದೆ ಹಲವಾರು ಆಫೀಸ್ ಗಳಲ್ಲಿ ಕೂಡ ಇದರ ಬಳಕೆ ಸರ್ವೇ ಸಾಮಾನ್ಯವಾಗಿದೆ.
ಬಳಕೆ ಸಲಹೆಗಳು:
ಮೈಕ್ರೋವೇವ್ ಓವನ್ ಒಳಗೆ ಇಡಲು ‘ಮೈಕ್ರೋವೇವ್ ಸುರಕ್ಷಿತ’ (ಮೈಕ್ರೋವೇವ್ ಸೇಫ್) ಪಾತ್ರೆಗಳನ್ನು ಮಾತ್ರ ಉಪಯೋಗಿಸಿ. ಮೈಕ್ರೋವೇವ್ ಮಾಡಲಾಗದ ಪ್ಲಾಸ್ಟಿಕ್ ಪಾತ್ರೆಗಳು ಕರಗಬಹುದು ಮತ್ತು ನಿಮ್ಮ ಆಹಾರದಲ್ಲಿ ವಿಷಕಾರಿ ಕಣಗಳನ್ನು ಬಿಡಬಹುದು. ಮೈಕ್ರೋವೇವ್ – ಸುರಕ್ಷಿತ ಎಂದು ನಿರ್ದಿಷ್ಟವಾಗಿ ಲೇಬಲ್ ಮಾಡಲಾದ ಪಾತ್ರೆಗಳನ್ನು ಬಳಸಿ ಹೆಚ್ಚಾಗಿ ಸೆರಾಮಿಕ್, ಗ್ಲಾಸ್ ಅಥವಾ ಕಠಿಣವಾದ ಪ್ಲಾಸ್ಟಿಕ್ ನಿಂದ ತಯಾರಿಸಲಾಗುತ್ತದೆ.
ಪ್ರತಿ ಬಾರಿ ಬಳಸಿದಾಗಲೂ ಒಳಗಡೆಯ ಭಾಗವನ್ನು ತಪ್ಪದೆ ಶುಚಿಗೊಳಿಸಿ.
ಒಳಗಿಡುವ ಪಾತ್ರೆಯ ಮೇಲೆ ಒಂದು ಸುರಕ್ಷಿತ ಮುಚ್ಚಳ ಮುಚ್ಚುವುದು ಒಳ್ಳೆಯದು. ದ್ರವ ಆಹಾರವು ಬಿಸಿಯಾಗುತ್ತಿದ್ದಂತೆ ಮೈಕ್ರೋವೇವ್ ಗೋಡೆಗಳನ್ನು ಹೊಡೆಯುವುದನ್ನು ಇದು ತಡೆಯುತ್ತದೆ.
ಯಾವುದೇ ಲೋಹದ ಪಾತ್ರೆಯನ್ನು ಓವನ್ ಒಳಗೆ ಹೊರಸೂಸುವ ಮೈಕ್ರೋವೇವ್ ಗಳು ಲೋಹೀಯ ವಸ್ತುಗಳಿಂದ ಪುಟಿಯುತ್ತವೆ, ಆದ್ದರಿಂದ ಒಲೆಯಲ್ಲಿರುವ ಲೋಹವು ಒಳಭಾಗವನ್ನು ಅಸಮಾನವಾಗಿ ಬಿಸಿಮಾಡಲು ಕಾರಣವಾಗುತ್ತದೆ ಮತ್ತು ಹಾನಿಯನ್ನುಂಟುಮಾಡುತ್ತದೆ.
ಓವನ್ ಬಳಸುವಾಗ ಬಾಗಿಲು ಸರಿಯಾಗಿ ಮುಚ್ಚಿದಿಯೇ ಅಂತ ಪರಿಶೀಲಿಸಿ. ಬಾಗಿಲು ಹಾನಿಗೊಳಗಾಗಿದ್ದರೆ ಅಥವಾ ಸೀಲ್ ಬಿರುಕು ಬಿಟ್ಟರೆ, ಆಹಾರವು ಸಮವಾಗಿ ಬೇಯಿಸುವುದಿಲ್ಲ ಮತ್ತು ವಿಕಿರಣ ಓವನ್ ಇಂದ ಹೊರಗೆ ಸೂಸಬಹುದು.
ಮೈಕ್ರೋವೇವ್ ಒಳಗೆ ಏನೂ ಇಲ್ಲದೆ ಚಲಾಯಿಸುವುದರಿಂದ ಗಂಭೀರ ಹಾನಿಯಾಗಬಹುದು. ಮೈಕ್ರೋವೇವ್ ಖಾಲಿಯಾಗಿದ್ಧಾಗ, ಮೈಕ್ರೋವೇವ್ ಉತ್ಪಾದಿಸುವ ಶಕ್ತಿಯನ್ನು ಗಾಜು ಅಥವಾ ಶಕ್ತಿಯನ್ನು ಉತ್ಪಾದಿಸುವ ಮ್ಯಾಗ್ನೆಟ್ರಾನ್ ನಂತಹ ತನ್ನದೇ ಆದ ಘಟಕಗಳಿಂದ ಹೀರಿಕೊಳ್ಳುವಷ್ಟು ಸಾಮಾರ್ಥ್ಯವಿಲ್ಲದಿರಬಹುದು.
ನಿಮ್ಮ ಮೈಕ್ರೋವೇವ್ ಓವನ್ ನ ಬ್ರಾಂಡ್ ಗೆ ಅನುಗುಣವಾಗಿ ಒಳಗೆ ಗಾಜಿನ ಟ್ರೇ, ಟರ್ನ್ ಟೇಬಲ್ ಅಥವಾ ಪ್ಲೇಟ್ ಅನ್ನು ಹೊಂದಿರಬಹುದು. ನಾಜೂಕಿನಿಂದ ಅದನ್ನು ತೆಗೆದು ತೊಳೆಯಿರಿ.
ಒಳಗೆ ತಟ್ಟೆ ತಿರುಗಿಸುವ ಸಣ್ಣ ಸಾಧನವನ್ನು ಶುಚಿಗೊಳಿಸಿ.
ಓವನ್ ತಟ್ಟೆಯ ಮೇಲೆ ಇಡುವ ಆಹಾರದ ಪದಾರ್ಥದ ತೂಕದ ಮೇಲೆ ನಿಗಾ ಇರಲಿ. ಸಾಮರ್ಥ್ಯಕ್ಕಿಂತ ಅಧಿಕ ತೂಕ ಓವನ್ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಬಹುದು.
ರೆಫ್ರಿಜೀರೆಟರ್ (Refrigerator)
ಹಣ್ಣು-ತರಕಾರಿ,ಹಾಲು,ಹೈನು ಉತ್ಪನ್ನಗಳು, ಔಷಧಿಗಳು, ಪೇಸ್ಟ್ರಿ ಕೇಕ್ ಮತ್ತು ಇನ್ನು ಹತ್ತು ಹಲವಾರು ಉಪಯುಕ್ತ ಪದಾರ್ಥಗಳನ್ನು ಸುರಕ್ಷಿತವಾಗಿ ಕೆಡದಂತೆ ಇಡಲು ಶೀತಲೀಕರಣ ಘಟಕ ತುಂಬಾ ನೆರವಾಗುತ್ತದೆ. ರೆಫ್ರಿಜರೇಟರ್ ವಸ್ತುಗಳನ್ನು ಅವುಗಳ ಮೂಲ ತಾಪಮಾನವನ್ನು ಕಡಿಮೆ ಮಾಡುವ ಮೂಲಕ ತಂಪಾಗಿಸುವುದಿಲ್ಲ. ಆವಿಯಾಗುವ ಅನಿಲವು ಶಾಖವನ್ನು ದೂರ ಮಾಡಿ ಸುತ್ತಮುತ್ತಲಿನ ಪ್ರದೇಶವನ್ನು ಹೆಚ್ಚು ತಣ್ಣಗಾಗಿಸುತ್ತದೆ.ರೆಫ್ರಿಜರೇಟರ್ ಮುಖ್ಯವಾಗಿ ಎರಡು ಶೇಖರಣಾ ವಿಭಾಗಗಳನ್ನು ಒಳಗೊಂಡಿದೆ- ಒಂದು ಹೆಪ್ಪುಗಟ್ಟುವ ವಸ್ತುಗಳಿಗೆ ಮತ್ತು ಇನ್ನೊಂದು ಶೀತಲೀಕರಣ ಅಗತ್ಯಕ್ಕೆ ಮಾತ್ರ. ನಿಮಗೆ ಗೊತ್ತಿರುವ ಹಾಗೆ ರೆಫ್ರಿಜರೇಟರ್ 24*7 ಕೆಲಸ ಮಾಡುವ ಸಾಧನ. ಆದ ಕಾರಣ ಸರಿಯಾದ ಬಳಕೆ ಮತ್ತು ನಿರ್ವಹಣೆ ಅಗತ್ಯ.
ಬಳಕೆ ಸಲಹೆಗಳು:
ತಿಂಗಳಿಗೊಮ್ಮೆ ಒಳಗೆ ಘನೀಕರಣವಾಗಿರುವ ಐಸ್ ಅನ್ನು ತೆರವುಗೊಳಿಸಿ. ಇದರಿಂದ ಹೆಚ್ಚು ಐಸ್ ಸಂಗ್ರಹವಾಗುವುದನ್ನು ತಪ್ಪಿಸಬಹುದು.
ಕೊಳಕು ಮತ್ತು ಹಾಳಾದ ಗ್ಯಾಸ್ಕೆಟ್ ಗಳು ರೆಫ್ರಿಜರೇಟರ್ ಬಾಗಿಲುಗಳನ್ನು ಬಿಗಿಯಾಗಿ ಮುಚ್ಚದಂತೆ ತಡೆಯುತ್ತವೆ ಮತ್ತು ಮೋಟರಗೆ ಒತ್ತಡವನ್ನುಂಟು ಮಾಡುತ್ತವೆ. ಕೊಳಕಾದ ಗ್ಯಾಸ್ಕೆಟ್ ಗಳನ್ನು ಸಾಬೂನು ನೀರಿನಿಂದ ಸ್ವಚ್ಚಗೊಳಿಸಿ ಮತ್ತು ಸಂಪೂರ್ಣವಾಗಿ ಒಣಗಿಸಿ.
ನಿಮ್ಮ ಫ್ರಿಜ್ ಹಿಂಭಾಗದಲ್ಲಿ ಕಂಡೆನ್ಸರ್ ಸುರುಳಿಗಳು ಧೂಳು ಮತ್ತು ಇತರೆ ಕಣಗಳಿಂದ ಮುಚ್ಚಿಹೋಗಿದ್ದರೆ ಅದು ಕಂಪ್ರೆಸರ್ ಮೇಲೆ ಒತ್ತಡವನ್ನು ಹೆರುತ್ತದಲ್ಲದೆ ಶಕ್ತಿಯ ನಾಶವಾಗುತ್ತದೆ. ಅದನ್ನು ಶುಚಿಗೊಳಿಸಿ.
ಬೇಡವಾದ, ಹಳೆಯ, ಕೊಳೆಯುತ್ತಿರುವ, ಸೋರುತ್ತಿರುವ ಪದಾರ್ಥಗಳನ್ನು ಅವಾಗಾವಾಗ ತೆಗೆದು ಹಾಕಿ.
ಕಾಲಮಾನ ಮತ್ತು ಹವಾಗುಣಕ್ಕೆ ತಕ್ಕಂತೆ ರೆಫ್ರಿಜರೇಟರ್ ಒಳಗಿನ ತಾಪಮಾನವನ್ನು ನಿಯಂತ್ರಣದಲ್ಲಿಡಿ(ಒಳಗಡೆ ಇರುವ ವರ್ತುಲ ಆಕಾರದ ನಿಯಂತ್ರಕದ ಸಹಾಯದಿಂದ).
ಸಾಧ್ಯವಾದಷ್ತು ಬಳಕೆಯಲ್ಲಿ ಇಲ್ಲದಿರುವಾಗ, ಏನಾದ್ರು ವಸ್ತು ಹೊರ ತೆಗೆದ ನಂತರ ರೆಫ್ರಿಜೆರೇಟರ್ ಬಾಗಿಲನ್ನು ಹಾಗೆ ತೆರೆದು ಬಿಡದೆ ಮುಚ್ಚಿರಿ.
ರೆಫ್ರಿಜೆರೇಟರ್ ಅನ್ನು ಸಮತಟ್ಟಾದ ನೆಲದ ಮೇಲೆ ಅಥವಾ ಸ್ಟಾಂಡ್ ಮೇಲೆ ಇಡೀ.
ಬಿಸಿ ಪದಾರ್ಥಗಳನ್ನು ರೆಫ್ರಿಜೆರೇಟರ್ ಒಳಗೆ ಇಡಬೇಡಿ. ತಣ್ಣಗಾದ ಮೇಲೆ ಅವುಗಳನ್ನು ಇಡೀ.
ರೆಫ್ರಿಜೆರೇಟರ್ ಅನ್ನು ಅಢುಗೆ ಮಾಡುವ ಮಾಡುವ ಜಾಗ,ಓವನ್ ಅಥವಾ ಶಾಖ-ಉತ್ಪಾದಿಸುವ ಮೂಲದಿಂದ ದೂರವಿಡಿ. ರೆಫ್ರಿಜೆರೇಟರ್ ಈ ಶಾಖ- ಉತ್ಪಾದಿಸುವ ಯಾವುದೇ ವಸ್ತುಗಳಿಗೆ ಹತ್ತಿರದಲ್ಲಿದ್ದರೆ, ಅದು ವಸ್ತುಗಳನ್ನು ತಣ್ಣಗಾಗಿಸಲು ಹೆಚ್ಚಿನ ಶಕ್ತಿಯನ್ನು ಬಳಸಿಕೊಳ್ಳಲು ಹೆಚ್ಚು ಶ್ರಮಿಸಬೇಕಾಗುತ್ತದೆ. ಅಲ್ಲದೆ,ಬಾಗಿಲುಗಳು ಸರಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲು ಅದರ ಸುತ್ತಲೂ ಸ್ಥಳಾವಕಾಶವಿದೆ ಎಂದು ಖಚಿತಪಡಿಸಿಕೊಳ್ಳಿ.
ನಿಮ್ಮ ರೆಫ್ರಿಜೆರೇಟರ್ ಅನ್ನು ನೀವು ಖಾಲಿ ಇಟ್ಟುಕೊಂಡರೆ, ನೀವು ಅದನ್ನು ತೆರೆದಾಗ, ಬೆಚ್ಚಗಿನ ಗಾಳಿಗೆ ನುಗ್ಗಲು ಹೆಚ್ಚು ಅನೂಕೂಲವಾಗುತ್ತದೆ. ಇದು ದಕ್ಷತೆಯನ್ನು ಕಡಿಮೆ ಮಾಡುತ್ತದೆ. ಅದನ್ನು ಪೂರ್ಣವಾಗಿ ತುಂಬಿಸಿ ಇಡುವುದು ನಿಮ್ಮ ರೆಫ್ರಿಜೆರೇಟರ್ನ ಒಟ್ಟಾರೆ ನಿರ್ವಹಣೆ ಮತ್ತು ಬಳಕೆಗೆ ಸಹಾಯ ಮಾಡುತ್ತದೆ.
ವ್ಯಾಕ್ಯೂಮ್ ಕ್ಲಿನರ್ (Vacuum Cleaner)
ಮನೆಯ ಕಾರ್ಪೆಟ್, ಸೋಫಾ, ಕಾರು ಸೀಟುಗಳು ಮತ್ತು ಇನ್ನು ಹಲವು ಜಾಗಗಳನ್ನು ಸ್ವಚ್ಚ ಮಾಡಲು ‘ವ್ಯಾಕ್ಯೂಮ್ ಕ್ಲೀನರ್ ‘ ತುಂಬಾ ಸಹಕಾರಿ. ವ್ಯಾಕ್ಯೂಮ್ ಕ್ಲೀನರ್ (Vacuum Cleaner) ಮೋಟಾರ್ ಸಹಾಯದಿಂದ ನಿರ್ವಾತ ಸೃಷ್ಟಿಸಿ ಧೂಳು ಮತ್ತು ಇತರೆ ಕಣಗಳನ್ನು ಸೆಳೆದು ಒಳಗೆ ಶೇಖರಿಸುತ್ತದೆ. ನೀವು ಹಣ್ಣಿನ ರಸವನ್ನು ಗ್ಲಾಸಿನಿಂದ ಹೀರುವ ಹಾಗೆ ಇದು ಕಸವನ್ನು ಹೀರಿ ಸ್ವಚ್ಚಮಾಡಲು ಸಹಾಯ ಮಾಡುತ್ತದೆ. ಇದರ ಮುಖ್ಯ ಭಾಗಗಳೆಂದರೆ ,ಗಾಳಿ ಒಳ ಬರುವ ಜಾಗ(INTAKE PORT) ,ಹೊರ ಹೋಗುವ ಜಾಗ(EXHAUT PORT), ಎಲೆಕ್ಟ್ರಿಕಲ್ ಮೋಟಾರ್, ಫ್ಯಾನ್, ಕಸ ಸಂಗ್ರಹಿಸುವ ಚೀಲ (POROUS BAG), ಇದನ್ನೆಲ್ಲಾ ಒಳಗೊಂಡಿದೆ. ವ್ಯಾಕುಮ್ ಕ್ಲಿನರ್ (VACUUM CLEANER) ಸಾಮರ್ಥ್ಯ, ಕಾರ್ಯ ವಿಧಾನ ಮತ್ತು ಬಳಕೆಗೆ ಸಂಬಂಧಿಸಿದಂತೆ ಹಲವಾರು ವಿಧಗಳಲ್ಲಿ ಲಭ್ಯವಿದೆ.
ಬಳಕೆ ಸಲಹೆಗಳು :
ಅವಾಗವಾಗ ಕಸ ಸಂಗ್ರಹಿಸುವ ಚೀಲವನ್ನು ಬದಲಿಸಿ. ಸಂಪೂರ್ಣವಾದ ಮೇಲೆ ಬದಲಿಸುವುದಕ್ಕಿಂತ ಮುಕ್ಕಾಲು ಭಾಗ ಕಸ ತುಂಬಿದ ಮೇಲೆ ಚೀಲವನ್ನು ಬದಲಿಸಿ ಬಿಡಿ. ಚೀಲವನ್ನು ಎಂದಿಗೂ ಮರುಬಳಕೆ ಮಾಡಬೇಡಿ ಎಕೆಂದರೆ ಇದು ಫಿಲ್ಟರ್ ವ್ಯವಸ್ಥೆಯ ಮುಖ್ಯ ಭಾಗವಾಗಿದೆ. ಇದು ಧೂಳಿನಿಂದ ಮುಚ್ಚಿಹೋಗಿದ್ದರೆ ಅದು ಯಂತ್ರದ ದಕ್ಷತೆಯನ್ನು ಕಡಿಮೆ ಮಾಡುತ್ತದೆ.
ಕಸ ಸಂಗ್ರಹಿಸುವ ಚೀಲ ಸರಿಯಾಗಿ ಜೋಡಿಸಿಲ್ಪಟ್ಟಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
ವ್ಯಾಕ್ಯೂಮ್ ಕ್ಲೀನರ್ ಫಿಲ್ಟರ್, ಬ್ರಶ್ ಮತ್ತು ವಿವಿಧ ಭಾಗಗಳ ಮೇಲೆ ಕುಳಿತಿರುವ ಕಸ ಮತ್ತು ಧೂಳಿನ ಕಣಗಳನ್ನು ಸ್ವಚ್ಚ ಮಾಡಿರಿ.
ಉಗುರುಗಳು, ಮೊಳೆಗಳು, ಮತ್ತು ನಾಣ್ಯಗಳಂತಹ ತೀಕ್ಷ್ಣವಾದ ವಸ್ತುಗಳನ್ನು ವ್ಯಾಕ್ಯೂಮ್ ಕ್ಲೀನರ್ ತೆಗೆದುಕೊಳ್ಳುವುದನ್ನು ತಪ್ಪಿಸಿ.
ನಿಮ್ಮ ವ್ಯಾಕ್ಯೂಮ್ ಕ್ಲೀನರ್ ಒಣ ಮತ್ತು ತೇವವಾದ ನೆಲವನ್ನು ಶುಚಿಗೊಳಿಸಲು ತಯಾರಿಸಲ್ಪಟ್ಟಿದ್ದರೆ ಅದನ್ನು ತೇವವಾದ ಜಾಗದಲ್ಲಿ ಬಳಸಬೇಡಿ. ತೇವವಾದ ಜಾಗದಲ್ಲಿ ಬಳಸುವುದರಿಂದ ಅದು ಹಾಳಾಗಬಹುದು ಅಥವಾ ಎಲೆಕ್ಟ್ರಿಕಲ್ ಶಾಕ್ ಹೊಡೆಯಬಹುದು.
ಏರ್ ಕಂಡಿಷನರ್ (Air Conditioner)
ಒಂದು ರೂಮಿನ, ಮನೆಯ, ಕಚೇರಿಯ ಅಥವಾ ಇನ್ಯಾವುದೋ ಕಟ್ಟಡದ ಜಾಗವನ್ನು ನಮ್ಮ ಅನೂಕೂಲಕ್ಕೆ ತಕ್ಕಂತೆ ತಾಪಮಾನವನ್ನು ನಿಯಂತ್ರಿಸಲು ಏರ್ ಕಂಡಿಷನರ್ (Air Conditioner) ತುಂಬಾ ಸಹಕಾರಿಯಾಗಿದೆ. ಹೆಸರೇ ಹೇಳುವ ಹಾಗೆ ನಮಗೆ ಬೇಕಾದ ಹಾಗೆ ವಾಯುವಿನ ತಾಪವನ್ನು ಬದಲಾಯಿಸಿ ಹತೋಟಿಯಲ್ಲಿಡುತ್ತದೆ. ನೀವು ರಿಮೋಟ್ ನ ಸಹಾಯದಿಂದ 23 ಡಿಗ್ರಿ ಸೆಲ್ಸಿಯಸ್ ತಾಪವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಹವಾ ನಿಯಂತ್ರಕದ ಸರಿಯಾದ ಬಳಕೆಯಿಂದ ನೀವು ಶಕ್ತಿಯನ್ನು ಉಳಿಸುವುದಲ್ಲದೆ ಅದರ ಕಾರ್ಯ ಕ್ಷಮತೆಯನ್ನು ಹೆಚ್ಚಿಸಲು ಅನುಕೂಲವಾಗುತ್ತದೆ. ಹವಾನಿಯಂತ್ರಣವು ಮೂರು ಮುಖ್ಯ ಭಾಗಗಳನ್ನು ಹೊಂದಿದೆ: ಕಂಪ್ರೆಸ್ಸರ್ (COMPRESSOR), ಕಂಡೆನ್ಸರ್ (CONDENSER), AND, (ಯೆವಾಪರೆಟರ್) EVAPORATOR, COMPRESSOR (ಕಂಪ್ರೆಸ್ಸರ್) ಮತ್ತು ಕಂಡೆನ್ಸರ್ (CONDENSER) ರೂಮಿನ ಹೊರಭಾಗಿನ ವ್ಯವಸ‍್ಥೆಯಲ್ಲಿರುತ್ತದೆ. EVAPORATOR (ಯೆವಾಪರೆಟರ್) ಮನೆಯೊಳಗಿನ ಘಟಕದೊಳಗೆ ಅಳವಡಿಸಲಾಗಿದೆ.
ಬಳಕೆ ಸಲಹೆಗಳು :
ಹೊರಗಡೆಯಿಂದ COMPRESSOR/CONDENSER ಭಾಗಗಳಲ್ಲಿ ಶೇಖರಣೆಯಾಗಿರಬಹುದಾದ ಕಸವನ್ನು ನಿಧಾನವಾಗಿ ಸ್ವಚ್ಚ ಮಾಡಿ.
ಅಗತ್ಯವಿದ್ದರೆ ಸುರುಳಿಗಳಿಂದ ಕಸ-ಕಡ್ಡಿಯನ್ನು ತೆಗೆದುಹಾಕಲು ಬ್ರಷ್ ಬಳಸಿ ಮತ್ತು ಗಾಳಿಯು ಕಂಡೆನ್ಸರ್ನಿಂದ ತಡೆಯಿಲ್ಲದೆ ಹೊರಸೂಸಬಹುದು ಎಂದು ಖಚಿತಪಡಿಸಿಕೊಳ್ಳಿ.
ಏನಾದರೂ ಪರೀಕ್ಷಿಸಬೇಕಿದ್ದರೆ ಅಥವಾ ಶುಚಿಗೊಳಿಸಬೇಕಿದ್ದರೆ ಸ್ವಿಚ್ ಆಫ್ ಮಾಡಿ ವಿದ್ಯುಚ್ಛಕ್ತಿ ಸಂಪರ್ಕ ಕಡಿತಗೊಳಿಸಿ ಮುಂದುವರೆಯಿರಿ.
ರಿಮೋಟ್ ಕಂಟ್ರೋಲ್ ಬಳಸಿ ಎಲೆಕ್ಟಾನಿಕ್ ನಿಯಂತ್ರಣದ ಕಾರ್ಯಗಳನ್ನು ಕಲಿಯುವುದರಿಂದ ನೀವು ಹವಾನಿಯಂತ್ರಣವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಮರ್ಥವಾಗುವಿರಿ. ನೀವು ಖರೀದಿಸಿದ ವ್ಯವಸ್ಥೆಯನ್ನು ಅವಲಂಬಿಸಿ ಆಪರೇಟಿಂಗ್ ಮೋಡ್ ಗಳನ್ನು ಆಯ್ಕೆಯನ್ನು ಬಳಸಿರಿ.
ದೀಪಗಳು, ಕಂಪ್ಯೂಟರಗಳು, ಟೆಲಿವಿ಼ಷನ್ ಗಳು ಮತ್ತು ಎಲ್ಲಾ ಬೆಳಕನ್ನು ಹೊರಸೂಸುವ ವಸ್ತುಗಳು ಶಾಖವನ್ನು ಹೊರಸೂಸುತ್ತವೆ. ಬಳಕೆಯಲ್ಲಿಲ್ಲದಿದ್ದಾಗ ಈ ಸಾಧನಗಳು ಸ್ಥಗಿತಗೊಂಡಿವೆ ಎಂದು ಖಚಿತಪಡಿಸಿಕೊಳ್ಳಿ.
ಏನಾದರು ಪರೀಕ್ಷಿಸಬೇಕಿದ್ದರೆ ಅಥವಾ ಶುಚಿಗೊಳಿಸಬೇಕಿದ್ದರೆ ಸ್ವಿಚ್ ಆಫ್ ಮಾಡಿ ವಿದ್ಯುಚ್ಛಕ್ತಿ ಸಂಪರ್ಕ ಕಡಿತಗೊಳಿಸಿ ಮುಂದುವರೆಯಿರಿ.
ರಿಮೋಟ್ ಕಂಟ್ರೋಲ್: ನಿಮ್ಮ ಘಟಕವು ರಿಮೋಟ್ ಕಂಟ್ರೋಲ್ ಹೊಂದಿದ್ದರೆ, ಪ್ರದರ್ಶನ ಪರದೆಯನ್ನು ಪರಿಶೀಲಿಸುವ ಮೂಲಕ ಘಟಕವನ್ನು ನಿಯಂತ್ರಿಸಬಹುದು. ರಿಮೋಟ್ ಕಂಟ್ರೋಲ್ ಬಳಸಿ ಎಲಾಕ್ಟ್ರಾನಿಕ್ ನಿಯಂತ್ರಣದ ಕಾರ್ಯಗಳನ್ನು ಕಲಿಯುವುದರಿಂದ ನೀವು ಹವಾನಿಯಂತ್ರಣವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಮರ್ಥವಾಗುವಿರಿ. ನೀವು ಖರೀದಿಸಿದ ವ್ಯವಸ್ಥೆಯನ್ನು ಅವಲಂಬಿಸಿ ಆಪರೇಟಿಂಗ್ ಮೋಡ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು, ಅಂದರೆ ಕೂಲಿಂಗ್, ತಾಪನ, ಫ್ಯಾನ್ ಅಥವಾ ಆಟೋ ಮೋಡ್ ಮತ್ತು ಇತರೆ. ಶಕ್ತಿಯನ್ನು ಉಳಿಸಲು ಟೈಮರ್ ಮತ್ತು ಇತರ ಇಂಧನ ಉಳಿತಾಯ ಆಯ್ಕೆಯನ್ನು ಬಳಸಿರಿ.
ದೀಪಗಳು, ಕಂಪ್ಯೂಟರ್ ಗಳು, ಟೆಲಿವಿಷನ್ ಗಳು ಮತ್ತು ಎಲ್ಲಾ ಬೆಳಕನ್ನು ಹೊರಸೂಸುವ ವಸ್ತುಗಳು ಶಾಖವನ್ನು ಹೊರಸೂಸುತ್ತವೆ. ಬಳಕೆಯಲ್ಲಿಲ್ಲದಿದ್ಧಾಗ ಈ ಸಾಧನಗಳು ಸ್ಥಗಿತಗೊಂಡಿವೆ ಎಂದು ಖಚಿತಪಡಿಸಿಕೊಳ್ಳಿ, ಇಲ್ಲದಿದ್ದರೆ ಅವು ಹವಾನಿಯಂತ್ರಕದ ಹೊರೆ ಹೆಚ್ಚಿಸಬಹುದು. ವಾಸ್ತವವಾಗಿ ಪ್ರಕಾಶಮಾನ ದೀಪಗಳು ಹೆಚ್ಚಿನ ಶಾಖವನ್ನು ಹೊರಸೂಸುತ್ತವೆ.
ಹವಾನಿಯಂತ್ರಕದ ಕಾರ್ಯಾಚರಣೆಯಲ್ಲಿರುವಾಗ ಹೊರಗಡೆಯಿಂದ ರೂಮಿನ ಒಳಗೆ ಗಾಳಿ ಬರದಂತೆ ನೋಡಿಕೊಳ್ಳಿ.
ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ(ಬಿಇಇ) ಮಾನದಂಡಗಳ ಪ್ರಕಾರ, 5-ಸ್ಟಾರ್ ರೇಟಿಂಗ್ ಹೊಂದಿರುವ ಎಸಿಯನ್ನು ಬಳಸಿ. ಚಾಲನೆಯಲ್ಲಿರುವ ವೆಚ್ಚವನ್ನು ಗಣನೀಯವಾಗಿ ಉಳಿಸಲು 5-ಸ್ಟಾರ್ ಇನ್ವರ್ಟರ್ ಎಸಿಯಲ್ಲಿ ಹೂಡಿಕೆ ಮಾಡುವುದು ಯಾವಾಗಲೂ ಸೂಕ್ತವಾಗಿದೆ.
ಹವಾನಿಯಂತ್ರಕಗಳಲ್ಲಿ ಬಳಸುವ CFC ಮತ್ತು ಇತರೆ ದ್ರವಗಳಿಂದ ವಾತಾವರಣಕ್ಕೂ ಹಾನಿಯಾಗುವುದರಿಂದ ಬಳಸುವುದು ಉತ್ತಮ.
ಮಿಕ್ಸರ್ ಗ್ರೈಂಡರ್ (Mixer Grinder)
ಪ್ರತಿಯೊಬ್ಬರ ಅಡುಗೆ ಮನೆಯಲ್ಲಿರುವ, ಅಡುಗೆ ಮಾಡುವವರ ಅತಿ ಅವಶ್ಯಕ ಸಾಧನಗಳಲ್ಲಿ ಮಿಕ್ಸರ್ ಕೂಡ ಬಹು ಮುಖ್ಯ ಅಂದರೆ ತಪ್ಪಾಗಲಾರದು. ದೋಸೆ, ಇಡ್ಲಿ, ವಡೆ, ಇತರೆ ತಿನಿಸು ಮಾಡಲು ಬೇಕಾಗುವ ಹಿಟ್ಟು ರುಬ್ಬಲು, ಮಸಾಲಾ ಪದಾರ್ಥಗಳು, ಚಟ್ನಿ ಪುಡಿಗಳು, ಹಣ್ಣು ಮತ್ತು ವಿವಿಧ ರಸಗಳನ್ನು ಮಾಡಲು, ಮತ್ತು ಇನ್ನು ಹತ್ತು ಹಲವಾರು ಪದಾರ್ಥಗಳನ್ನು ಕುಟ್ಟಿ ಪುಡಿ ಮಾಡುವುದರಲ್ಲಿ ತುಂಬಾ ಸಹಕಾರಿಯಾಗಿದೆ. ವಿದ್ಯುಚ್ಚಕ್ತಿಯ ಸಹಾಯದಿಂದ ಎಲೆಕ್ಟ್ರಾನಿಕ್ ಮೋಟರ್ ಮೂಲಕ, ಜಾರ್ ಒಳಗಿರುವ ಚೂಪಾದ ಬ್ಲೇಡ್ ಗಳು ತಿರುಗುತ್ತ ಒಳಗಿರುವ ಪದಾರ್ಥಗಳನ್ನು ಸಣ್ಣಗೆ ರುಬ್ಬಲ್ಪಡುತ್ತವೆ. ಹಸಿ ಮತ್ತು ಒಣ ಎರಡು ತರಹದ ಪದಾರ್ಥಗಳನ್ನು ಸಣ್ಣಗೆ ಮಾಡಬಹುದು.
ಬಳಕೆ ಸಲಹೆಗಳು :
ನಿಮ್ಮ ಮನೆಯೇ ಅನುಕೂಲಕ್ಕೆ ತಕ್ಕಂತೆ ಕಡಿಮೆ ಅಥವಾ ಹೆಚ್ಚಿನ ಸಾಮರ್ಥ್ಯದ ಮಿಕ್ಸರ್ ಖರೀದಿಸಿ.
ಮಿಕ್ಸರ್ ಜಾರ್ಗಳು ಸರಿಯಾಗಿವೆಯೇ ಎಂದು ಅವಾಗುವಾಗುವ ಪರಿಶೀಲಿಸಿ. ಸಾಮಾನ್ಯವಾಗಿ ಜಾರ್ ಗಳು
ಬಳಸಿದ ಹಾಗೆ, ಬಿರುಕು ಬಿಡಬಹುದು, ಸೋರಬಹುದು ಅಥವಾ ಇನ್ನಿತರೇ ಜಾರ್ ಸಮಸ್ಯೆ ಇದ್ದರೆ ಹೊಸತರಿಂದ ಬದಲಾಯಿಸಿ.
ಜಾರ್ ನಲ್ಲಿರುವ ಬ್ಲೇಡ್ ಗಳು ಲೂಸ್ ಆಗಿದ್ದರೆ, ಅವುಗಳನ್ನು ಒಮ್ಮೆ ಪರಿಶೀಲಿಸಿ. ಸಾಮಾನ್ಯ ಸ್ಕ್ರೂಡ್ರೈವರ್ ಸಹಾಯದಿಂದ ಸರಿ ಪಡಿಸಬಹುದು.
ಜಾರುಗಳನ್ನು ಉಪಯೋಗಿಸಿದ ನಂತರ ನೀರಿನಿಂದ ತೊಳೆದು ಇಡುವ ಬದಲು, ಅದರಲ್ಲಿ ಸ್ವಲ್ಪ ಬಿಸಿ ನೀರು ಹಾಕಿ ಹಾಕಿ ಮಿಕ್ಸರ್ ಆನ್ ಮಾಡಿ ತಿರುಗಿಸಿ. ಇದರಿಂದ ಒಳಗೆ ಸಿಕ್ಕಿ ಕೊಂಡಿರುವ ಸೂಕ್ಷ್ಮ ಕಣಗಳು ಹೊರಗೆ ಬರಲು ಸಹಾಯವಾಗುತ್ತದೆ ಮತ್ತು ವಾಸನೆಯು ಕಡಿಮೆಯಾಗುತ್ತದೆ.
ಮಿಕ್ಷರ್ ಜಾರ್ ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿಗೆ ವಸ್ತುವನ್ನು ಹಾಕಬೇಡಿ.
ನೀರು ಶುದ್ಧಿಕರಣ ಘಟಕ (Water Purifier)
ಕುಡಿಯುವ ನೀರು ಎಂದರೆ ನದಿ, ಕೆರೆ, ಬಾವಿ ಮತ್ತು ಇತ್ಯಾದಿ ನೀರಿನ ಮೂಲಗಳು ನೆನಪಾಗುತ್ತವೆ. ಆದರೆ ಮೊದಲಿನ ಹಾಗೆ ಈಗಿಲ್ಲ. ಯಾಕೆಂದರೆ ನಾವು ಕುಡಿಯುವ ನೀರು ಎಷ್ಟು ಶುದ್ದ ? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಅಷ್ಟೇ ಅಲ್ಲದೆ, ನೀರಿನಲ್ಲಿರುವ ವಿವಿಧ ರೀತಿಯ ಖನಿಜ ಮತ್ತು ಇತರೆ ಅಂಶಗಳು ಎಷ್ಟು ಪ್ರಮಾಣದಲ್ಲಿವೆ ಎಂಬುದು ಕೂಡ ಒಂದು ಅವಶ್ಯ ವಿಚಾರವಾಗಿದೆ. ವಾಟರ್ ಪ್ಯೂರಿಫೈಯರ್ ಈಗ ಪ್ರತಿಯೊಬ್ಬರ ಮನೆಯಲ್ಲಿ ಸಾಮಾನ್ಯವಾಗಿದೆ. ಮಿನರಲ್ ವಾಟರ್ ಈಗ ಪ್ರತಿಯೊಬ್ಬರ ಕುಡಿಯಲು ಬಯಸುವ ನೀರು ಆಗಿದೆ ಎಂದರೆ ತಪ್ಪಾಗಲಾರದು.
ರಿವರ್ಸ್ ಆಸ್ಮೋಸಿಸ್ ವಾಟರ್ ಫಿಲ್ಟರೇಶನ್(RO) ಅಲ್ಟ್ರಾಫಿಲ್ಟರೇಶನ್ ಮತ್ತು ಅಲ್ಟ್ರಾವೈಲೆಟ್ ಸೋಂಕುಗಳಂತಹ (UF) ವಿವಿಧ ರೀತಿಯ ನೀರಿನ ಶುದ್ಧೀಕರಣ ಪ್ರಕ್ರಿಯೆಗಳಿವೆ. ರಿವರ್ಸ್ ಆಸ್ಮೋಸಿಸ್ ವ್ಯವಸ್ಥೆಯು ಸರಳವಾದ ನೀರಿನ ಶುದ್ದೀಕರಣ ಕಾರ್ಯವಿಧಾನವನ್ನು ಒಳಗೊಂಡಿರುತ್ತದೆ. ಶೋಧನೆ ವ್ಯವಸ್ಥೆಯು (UV) ಮೂಲಕ ನೀರು ಅಥವಾ ಇತರ ದ್ರಾವಕಗಳನ್ನು ನಿರ್ಬಂಧಿಸುತ್ತದೆ. ಸೂಕ್ಷ್ಮಜೀವಿಗಳು ಮತ್ತು ನೀರಿನಿಂದ ಬರುವ ಇತರ ರಾಸಾಯನಿಕಗಳಂತಹ ಎಲ್ಲಾ ರೀತಿಯ ಮಾಲಿನ್ಯಕಾರಕಗಳನ್ನು ಶೋಧಿಸುತ್ತದೆ. ಈ ಶುದ್ಧೀಕರಣ ಪ್ರಕ್ರಿಯೆಯು ನೀರಿನ ಶುದ್ಧೀಕರಣದ ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ.
ಬಳಕೆ ಸಲಹೆಗಳು :
ಪ್ರಿ-ಫಿಲ್ಟರ್ ನ್ನು ನೀವು ಸಾವಧಾನವಾಗಿ ತೆಗೆದು ಆಗಾಗ ಶುಚಿಗೊಳಿಸಬಹುದು. ಇದರಿಂದ ಮುಂದಿನ ಶೋಧನಾ ವ್ಯವಸ್ಥೆ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಪ್ರಿ-ಫಿಲ್ಟರ್ ಬಾಳಿಕೆಯೂ ಜಾಸ್ತಿ ಆಗುತ್ತದೆ. ಪ್ರಿ-ಫಿಲ್ಟರ್ ಒಳಗಿನ ಕ್ಯಾಂಡಲ್ ಅನ್ನು ಹೊರತೆಗೆದು ನಾಜೂಕಿನಿಂದ ನೀರಿನಲ್ಲಿ ತೊಳೆಯಿರಿ. ಇದರಿಂದ ಅದು ಸ್ವಚ್ಚವಾಗುತ್ತದೆ.
ವಾಟರ್ ಪ್ಯೂರಿಫೈಯರ್ ನೀರನ್ನು ಹೊರಗೆ ಚೆಲ್ಲುವುದರಿಂದ ಸಾಕಷ್ಟು ಪೋಲಾಗುತ್ತದೆ. ಸಾಧ್ಯವಾದರೆ ಈ ನೀರನ್ನು ಸಂಗ್ರಹಿಸಿ ಸ್ನಾನ ಗೃಹ ತೊಳೆಯಲು ಮತ್ತು ಇತ್ಯಾದಿ ಕೆಲಸಗಳಿಗೆ ಬಳಸಬಹುದು.
ವಿವಿಧ ರೀತಿಯ ಫಿಲ್ಟರ್ ಗಳನ್ನು 3 ತಿಂಗಳು ಅಥವಾ ವರ್ಷಕೊಮ್ಮೆ ಅವುಗಳ ಉಪಯೋಗದ ಆಧಾರದ ಮೇಲೆ ಬದಲಿಸಿರಿ.
ನೀವು ಯಾವ ರೀತಿಯ ನೀರನ್ನು ವಾಟರ್ ಫಿಲ್ಟರ್ ಗೆ ಕಳಿಸುತ್ತಿದ್ದಿರಿ ಎಂಬ ಅರಿವು ಇರಲಿ. ಆದಷ್ಟು ಶುದ್ದವಾಗಿರುವ ನೀರು ಹೋಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ.
ನೀವು ಬಳಸುವ ನೀರಿನ TDS ಲೆವೆಲ್ ಚೆಕ್ ಮಾಡಿರಿ. TDS ಸಾಧನದಿಂದ ಇದನ್ನು ಪರೀಕ್ಷಿಸಬಹುದು.
ನೀವು ತುಂಬಾ ದಿನ ಪ್ರಯಾಣ ಮಾಡುತ್ತಿದ್ದರೆ ವಾಟರ್ ಫಿಲ್ಟರ್ ಬಳಸುವ ವಿಚಾರ ಇಲ್ಲ ಅಂದ್ರೆ ಸಂಪೂರ್ಣ ನೀರು ಖಾಲಿ ಮಾಡಿ ಸ್ವಿಚ್ ಆಫ್ ಮಾಡುವುದು ಒಳಿತು.









ಕಾಮೆಂಟ್‌ಗಳಿಲ್ಲ