ಕಂಪ್ಯೂಟರ್ ನಿರ್ವಹಣೆಯ ಕೆಲವು ಸೂತ್ರಗಳು

 ಕಂಪ್ಯೂಟರ್ ನಿರ್ವಹಣೆಯ ಕೆಲವು ಸೂತ್ರಗಳು

  • ಕಂಪ್ಯೂಟರ್ ಇರುವ ಜಾಗದ ಸುತ್ತಮುತ್ತ ಯಾವುದೇ ರೀತಿಯ ದ್ರವಗಳನ್ನು ಇಡಬೇಡಿ.

  • ಆ್ಯಂಟಿವೈರಸ್ ಸಾಫ್ಟ್ ವೇರ್ ಅನ್ನು ಕಂಪ್ಯೂಟರ್ ನಲ್ಲಿ ಅಳವಡಿಸಿ. ಇದರಿಂದ ಸಾಫ್ಟ್ ವೇರ್ ಗೆ ಯಾವುದಾದರೂ ಹಾನಿಯಾಗುವುದನ್ನು ತಪ್ಪಿಸಬಹುದು.

  • ನೀವು ಕಂಪ್ಯೂಟರ್ ಅನ್ನು ಉಪಯೋಗಿಸುತ್ತಾ ಆಹಾರವನ್ನು ಸೇವಿಸಬೇಡಿ. ಆಹಾರದ ಕಣಗಳು ಕೀ ಬೋರ್ಡ್ ಒಳಗೆ ಬಿದ್ದರೆ ಕಂಪ್ಯೂಟರ್ ಗೆ ಹಾನಿಯುಂಟು ಮಾಡಬಹುದು.  

  • ಸ್ವಚ್ಛವಾದ ಕೈಗಳಿಂದ ನಿಮ್ಮ ಕಂಪ್ಯೂಟರ್ನನ್ನು ಬಳಸಿರಿ.

  • ನಿಮ್ಮ ಲ್ಯಾಪ್ ಟಾಪ್ ಅನ್ನು ನೀವು ಮುಚ್ಚಿದಾಗ, ಕೀಲಿಮಣೆಯಲ್ಲಿ ಪೆನ್ ಅಥವಾ ಇಯರ್ ಫೋನ್ ಗಳಂತಹ ವಸ್ತುಗಳು ಇಲ್ಲ ಎಂದು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಮುಚ್ಚಳವನ್ನು ಮುಚ್ಚಿದಾಗ ಪ್ರದರ್ಶನ ಪರದೆಯನ್ನು (Screen) ಹಾನಿಗೊಳಿಸುತ್ತವೆ. ವಸ್ತು ಒರಟಾಗಿದ್ದರೆ ಅಥವಾ ಸಾಕಷ್ಟು ಒತ್ತಡವನ್ನು ಬೀರಿದರೆ ಪರದೆಯ ಮೇಲೆ ಗೀರು ಬಿದ್ದು ಹಾಳಾಗುತ್ತದೆ. ಮುಚ್ಚಳವನ್ನು ನಿಧಾನವಾಗಿ ಮುಚ್ಚಿ ಮತ್ತು ಮಧ್ಯದಿಂದ ಹಿಡಿದುಕೊಳ್ಳಿ. ಕೇವಲ ಒಂದು ಬದಿಯನ್ನು ಬಳಸಿ ಮುಚ್ಚಳವನ್ನು ಮುಚ್ಚುವುದರಿಂದ ಆ ಬದಿಗಳಲ್ಲಿ ಹಿಂಜ್ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಕಾಲಾನಂತರದಲ್ಲಿ ಅದು ಹಾಳಾಗಲು ಕಾರಣವಾಗಬಹುದು.

  • ನಿಮ್ಮ ಲ್ಯಾಪ್ ಟಾಪ್ ಅನ್ನು ನೀವು ಕೈಯಲ್ಲಿ ಹಿಡಿಯುವಾಗ ಅದರ ಮೇಲಿನ ಭಾಗವನ್ನು ಅಂದರೆ ಪರದೆಯ ಭಾಗವನ್ನು ಹಿಡಿಯದೆ, ಕೆಳಗಿನ ಭಾಗವನ್ನು ಹಿಡಿದುಕೊಂಡು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಬಹುದು. ನಿಮ್ಮ ಕಂಪ್ಯೂಟರ್ ನಲ್ಲಿ ಇರುವ ವಿವಿಧ ಪೋರ್ಟಗಳ ಸಹಾಯದಿಂದ ಸಾಧನಗಳನ್ನು ಸಂಪರ್ಕಿಸುವಾಗ ನಿಧಾನವಾಗಿ ಹಾಕಿರಿ ಮತ್ತು ಕಾಳಜಿಯಿಂದ ತೆಗೆಯಿರಿ.

  • ನಿಮ್ಮ ಲ್ಯಾಪ್ ಟಾಪ್ನನ್ನು ಅತಿ ಕಡಿಮೆ ಉಷ್ಣಾಂಶದಲ್ಲಿ ಬಳಸುವುದನ್ನು ತಪ್ಪಿಸಿ. ಹಾಗೆಯೇ ನೇರವಾಗಿ ಸೂರ್ಯನ ಬಿಸಿಲಿನಲ್ಲಿ ಬಳಸಬೇಡಿ.

  • ಲ್ಯಾಪ್ ಟಾಪ್ನನ್ನು ಕಾರ್ ನಲ್ಲಿ ಹಾಗೆಯೇ ಬಿಡಬೇಡಿ. ಕಾರುಗಳ ಒಳಭಾಗ ಲ್ಯಾಪ್ ಟಾಪ್ ಗೆ ಹಾನಿ ಉಂಟುಮಾಡುವ ದೊಡ್ಡ ತಾಪಮಾನದ ಬದಲಾವಣೆಗಳನ್ನು ಹೊಂದಿರುತ್ತದೆ.

  • ಧೂಳಿನ ಕಣಗಳು ಲ್ಯಾಪ್ ಟಾಪ್ ಒಳಗಡೆ ಹೋಗದಂತೆ ನೋಡಿಕೊಳ್ಳಿ. ಹಾಗೆಯೇ ವರ್ಷಕೊಮ್ಮೆ ವೃತ್ತಿಪರರಿಂದ ಲ್ಯಾಪ್ ಟಾಪ್ನನ್ನು ಸ್ವಚ್ಛಗೊಳಿಸಿ. ಇಲ್ಲದಿದ್ದರೆ ಧೂಳು ಕಂಪ್ಯೂಟರ್ನ ವಿವಿಧ ಭಾಗದ ಮೇಲೆ ಕುಳಿತು ಅವುಗಳ ಉಷ್ಣಾಂಶ ಹೆಚ್ಚಾಗಲು ಕಾರಣವಾಗುತ್ತದೆ. 

  • ಸಾಕಷ್ಟು ಗಾಳಿಯಾಡುವ ಜಾಗದಲ್ಲಿ ಕಂಪ್ಯೂಟರ್ನನ್ನು ಬಳಸಿರಿ. ಇದರಿಂದ ಕಂಪ್ಯೂಟರ್ ಗೆ ಅತಿ ಉಷ್ಣಾಂಶವನ್ನು ಹೊಂದುವುದನ್ನು ತಪ್ಪಿಸಬಹುದು. ಲ್ಯಾಪ್ ಟಾಪ್ ಕಿಂಡಿಗಳು ನಿರ್ಬಂಧಿಸದೆ ಗಾಳಿ ಅವುಗಳ ಒಳಗೆ ಹೋಗಲು ಅನುಕೂಲವಾಗುವಂತೆ ನೋಡಿಕೊಳ್ಳಿ.

  • ಕಂಪ್ಯೂಟರ್ ಬಳಕೆಯಲ್ಲಿ ಇಲ್ಲದಿರುವಾಗ ಸ್ಲೀಪ್, ಹೈಬರ್ ನೆಟ್ ಅಥವಾ ಶಟ್ ಡೌನ್ ಮಾಡಿರಿ. ಇದರಿಂದ ಕಾರ್ಯಕ್ಷಮತೆ ಮಟ್ಟವನ್ನು ಕಾಪಾಡಲು ಸಹಾಯವಾಗುವುದು.

  • ಕಂಪ್ಯೂಟರ್ ದಿಂದ ಬರುವ ಅಸಾಮಾನ್ಯ ಶಬ್ದವು ಹಾರ್ಡವೇರ್ ವೈಫಲ್ಯದ ಸೂಚನೆಯಾಗಿರಬಹುದು. ಹಾರ್ಡ್ ಡ್ರೈವ್ ಗಳು, ಫ್ಯಾನ್ ಗಳು, ಅಥವಾ ಇತರ ಆಂತರಿಕ ಸಿಸ್ಟಮ್ ಸಾಧನಗಳು ಏನಾದರೂ ಆಗಿ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದರೆ ಶಬ್ದ ಮಾಡಲು ಆರಂಭಿಸಬಹುದು.

  • ನೀವು ಯಾವಾಗಲೂ ಲ್ಯಾಪ್ ಟಾಪ್ ಅನ್ನು ಉತ್ತಮ ಗುಣಮಟ್ಟದ ಲ್ಯಾಪ್ ಟಾಪ್ ಬ್ಯಾಗ್ ಅಥವಾ ಕುಷನ್ ಕೇಸ್ ನಲ್ಲಿ ಕೊಂಡೊಯ್ಯಬೇಕು. 

  • ಕೆಲವು ದಿನಗಳಿಗೊಮ್ಮೆಯಾದರೂ ಲ್ಯಾಪ್ ಟಾಪ್ ನ್ನು ಶಟ್ ಡೌನ್ ಮಾಡಿ ಮತ್ತೆ ಚಾಲನೆ 

             ಮಾಡುವುದು ಉತ್ತಮ.

  • ನಿಮ್ಮ ಕಂಪ್ಯೂಟರ್ ನಲ್ಲಿ ಅಳವಡಿಸಿರುವ ವಿವಿಧ ಸಾಫ್ಟ್ ವೇರ್ ಗಳನ್ನು ಆಗಾಗ ಪರೀಶಿಲಿಸುತ್ತಾ ಇರಿ ಮತ್ತು ಬೇಡವಾದ ಸಾಫ್ಟ್ ವೇರ್ ಅಪ್ಲಿಕೇಶನ್ ಗಳನ್ನು ತೆಗೆದು ಹಾಕಿರಿ.

  • ಕಂಪ್ಯೂಟರ್ ಬಳಸುವಾಗ ಟಾಸ್ಕ್ ಮ್ಯಾನೇಜರ್ ಗೆ ಹೋಗಿ ಕಾರ್ಯಕ್ಷಮತೆಯನ್ನು ನೀವು ಪರೀಶಿಲಿಸಬಹುದು. ಸಿಪಿಯು 100% ಹತ್ತಿರವಾಗುತ್ತಿದ್ದರೆ ಬೇಡವಾದ ಅಪ್ಲಿಕೇಶನ್ ಗಳನ್ನು/ಪ್ರೊಗ್ರಾಮ್ಸ್ ಅಲ್ಲಿಂದಲೇ ಕೊನೆಗೊಳಿಸಿ. ಇದರಿಂದ RAM ಮೇಲಿನ ಒತ್ತಡ ಕಡಿಮೆಯಾಗಿ ಕಾರ್ಯಕ್ಷಮತೆ ಹೆಚ್ಚಾಗಲು ಅನುಕೂಲವಾಗುತ್ತದೆ.

  • ಆಪರೇಟಿಂಗ್ ಸಿಸ್ಟಮ್ ಮತ್ತು ಇತರೆ ಅಪ್ಲಿಕೇಶನ್ ಗಳನ್ನು ಲಭ್ಯವಿರುವ ಇತ್ತೀಚಿನ ಆವೃತ್ತಿಗೆ ನವೀಕರಿಸಿ. ಇದರಿಂದ ಹೊಸ ವೈಶಿಷ್ಟ್ಯಗಳು ಲಭ್ಯವಾಗುತ್ತವೆ ಮತ್ತು ಸುರಕ್ಷತಾ ದೃಷ್ಟಿಯಿಂದಲೂ ಇದು ಒಂದು ಒಳ್ಳೆಯ ವಿಚಾರ.

  • ಹಾಸಿಗೆಯ ಮೇಲೆ ಲ್ಯಾಪ್ ಟಾಪ್ ನ್ನು ಪದೇ ಪದೇ ಬಳಸುವುದರಿಂದ ಫ್ಯಾನ್ ಗಳು ಹಾಸಿಗೆಯಲ್ಲಿರುವ ಧೂಳು ಮತ್ತು ಇತರ ಅವಶೇಷಗಳನ್ನು ಹೀರಿಕೊಳ್ಳತ್ತವೆ. ಈ ಧೂಳಿನಿಂದ ನಿಮ್ಮ ಲ್ಯಾಪ್ ಟಾಪ್ ಆಂತರಿಕ ಭಾಗಗಳಿಗೆ ತೊಂದರೆಯಾಗಬಹುದು.

  • ಕಂಪ್ಯೂಟರ್ನಲ್ಲಿ ಬೇಡವಾದ ಹಳೆಯ ಫೋಟೊಗಳು, ವಿಡಿಯೋಗಳು, ಫೈಲುಗಳಿದ್ದರೆ ಅವುಗಳನ್ನು ತೆಗೆದು ಹಾಕಿರಿ. ಸಿ ಡ್ರೈವ್ ಗಳಲ್ಲಿ ಸಾಕಷ್ಟು ಸ್ಥಳ ಲಭ್ಯವಿರುವಂತೆ ನೋಡಿಕೊಳ್ಳಿ. ತುಂಬಾ ಕಡತಗಳು ಇದ್ದರೆ ಅವುಗಳನ್ನು ಎಕ್ಸಟರ್ನಲ್ ಸ್ಟೋರೇಜ್ ಅಥವಾ ಕ್ಲೌಡ್ ಶೇಖರಣೆ (Storage) ಹಾಕಿರಿ.

  • ರಿಸೈಕಲ್ ಬಿನ್ ಅನ್ನು ಆಗಾಗ ಸ್ವಚ್ಛಗೊಳಿಸಿ.

  • ಪರದೆ ಕ್ಲೀನ್ ಮಾಡುವ ದ್ರಾವಣದಿಂದ ಸ್ಪ್ರೇ ಮಾಡಿ ನಾಜೂಕಾದ ಬಟ್ಟೆಯಿಂದ ಪರದೆಯನ್ನು ಆಗಾಗ ಶುಚಿಗೊಳಿಸುತ್ತಾ ಇರಿ.

  • ಆ್ಯಂಟಿ ವೈರಸ್ ಸ್ಕ್ಯಾನ್ ಅನ್ನು ಆಟೋಮೆಟಿಕ್ ಆಗಿ ಚಾಲನೆ ಆಗುವಂತೆ ಶೆಡ್ಯೂಲ್ ಮಾಡಿರಿ.

ಕಂಪ್ಯೂಟರ್ ನಿರ್ವಹಣೆಯ ಕೆಲವು ಸೂತ್ರಗಳು  ಕಂಪ್ಯೂಟರ್ ನಿರ್ವಹಣೆಯ ಕೆಲವು ಸೂತ್ರಗಳು Reviewed by Admin on ಸೆಪ್ಟೆಂಬರ್ 26, 2023 Rating: 5

ಕಾಮೆಂಟ್‌ಗಳಿಲ್ಲ