ಮೊಬೈಲ್ ನ ಸರಿಯಾದ ಬಳಕೆಯ ಸಲಹೆಗಳ ಕುರಿತು ಮಾಹಿತಿ

 ಮೊಬೈಲ್ ನ ಸರಿಯಾದ ಬಳಕೆಯ ಸಲಹೆಗಳು:

  • ನೀವು ಹೋದಲೆಲ್ಲ ನಿಮ್ಮ ಜೊತೆ ತೆಗೆದುಕೊಂಡು ಹೋಗುವ ಒಂದು ಸಾಧನವಾಗಿರುವ ಕಾರಣ ಮೊಬೈಲ್ನನ್ನು ತಪ್ಪದೇ ಪರದೆಯ ಕವಚ (Screenguard) ಮತ್ತು ಬ್ಯಾಕ್ ಕವರ್ ಹಾಕಿಸಿ.  ಹೀಗೆ ಮಾಡುವುದರಿಂದ ಅದಕ್ಕೆ ಆಗುವ ಹಾನಿಯನ್ನು ತಪ್ಪಿಸಬಹುದು.

  • ಮೊಬೈಲ್ನನ್ನು ಬ್ಯಾಗ್ ನೊಳಗೆ ಅಥವಾ ನಿಮ್ಮ ಜೇಬಿನೊಳಗೆ ಹೇಗೆ ಇಟ್ಟುಕೊಳ್ಳುತ್ತೀರಿ ಎಂಬುದರ ಅರಿವು ಇರಲಿ.  ಇದರಿಂದ ಮೇಲಾಗುವ ಗೀರುಗಳನ್ನು ಮತ್ತು ಇತರೆ ಹಾನಿಯನ್ನು ತಪ್ಪಿಸಬಹುದು.

  • ಮೊಬೈಲ್ನನ್ನು ನೀರಿನಿಂದ ದೂರವಿರಿಸಿ.  ಹಾಗೆಯೇ ಅತಿಯಾದ ಉಷ್ಣ ಅಥವಾ ಶೀತಕ್ಕೆ ಒಡ್ಡುವುದನ್ನು ತಪ್ಪಿಸಿ.

  • ಫೋನನ್ನು ಸ್ವಚ್ಛವಾಗಿಡಿ, ನಿಮಗೆ ಧೂಳಿನ ಕಣಗಳನ್ನು ನೋಡಲು ಸಾಧ್ಯವಾಗದಿರಬಹುದು, ಆದರೆ ನೀವು ಕೇಸ್ ಅಥವಾ ಸ್ಕ್ರೀನ್ ಪ್ರೊಟೆಕ್ಟರ್ನನ್ನು ಬಳಸುತ್ತಿದ್ದರೂ ಸಹ ಅವು ನಿಮ್ಮ ‍ಸ್ಮಾರ್ಟ್ ಫೋನ್‌ಗೆ ಬಂದು ಸೇರುತ್ತವೆ.  ತುಂಬಾ ಧೂಳು ನಿಮ್ಮ ಫೋನಿನ ‍ಕಾರ್ಯಕ್ಷಮತೆ ಮೇಲೆ ಪರಿಣಾಮ ಉಂಟು ಮಾಡಬಹುದು. ನಿಮ್ಮ ಪರದೆಯನ್ನು ನಿಧಾನವಾಗಿ ಒರೆಸಲು ಸೂಕ್ತವಾದ ಸ್ಕ್ರೀನ್ ಕ್ಲೀನರ್ ದ್ರಾವಣದೊಂದಿಗೆ, ಮೃದುವಾದ ಪರದೆಯ ಶುಚಿಗೊಳಿಸುವಿಕೆ (Screen cleaning) ಬಟ್ಟೆಯನ್ನು ಬಳಸಿ ಒರೆಸಿರಿ. 

  • ಫೋನ್ ಬ್ಯಾಟರಿಯನ್ನು ರಾತ್ರಿಯಿಡೀ ‍ಯಾವತ್ತೂ ಚಾರ್ಜ್ ಮಾಡಬೇಡಿ.  ಇದರಿಂದ ಫೋನ್ ಬ್ಯಾಟರಿ ಮೇಲೆ ಪರಿಣಾಮ ಬಿರಿ ಅದು ಬಾಳಿಕೆ ಬಾರದೇ ಹೋಗಬಹುದು. 

  • ನಿಮ್ಮ ಫೋನ್ ನಲ್ಲಿ ಲಭ್ಯವಿರುವ ಸಂಗ್ರಹಣಾ ಸಾಮರ್ಥ್ಯವನ್ನು (Storage capacity) ಸಂಪೂರ್ಣವಾಗಿ ಬಳಸಬೇಡಿ.  ಸಾಕಷ್ಟು ಸ್ಥಳಾವಕಾಶ ಇರುವಂತೆ ನೋಡಿಕೊಳ್ಳಿ.  ಇದರಿಂದ ‍ಕಾರ್ಯಕ್ಷಮತೆಗೆ ಯಾವುದೇ ಧಕ್ಕೆಯಾಗುವುದಿಲ್ಲ. 

  • ಹೆಚ್ಚಿನ ಸಂಗ್ರಹಣಾ ಸಾಮರ್ಥ್ಯ ಬೇಕೆಂದಲ್ಲಿ ನೀವು ಎಸ್ ಡಿ ‍ಕಾರ್ಡ್ (SD Card) ಬಳಸಿ ಸಂಗ್ರಹಣಾ ಸಾಮರ್ಥ್ಯ ಜಾಗವನ್ನು ಹೆಚ್ಚಿಸಿಕೊಳ್ಳಿ.   ಅಥವಾ ಕ್ಲೌಡ್ ಸ್ಟೋರೇಜ್ ಗೆ ವರ್ಗಾಯಿಸಿ.

  • ಬೇಕೆಂದಾಗ ಮಾತ್ರ ವಿಶಿಷ್ಟತೆಗಳನ್ನು ಬಳಸಿ ಬೇಡವಾದಾಗ ಅವುಗಳನ್ನು ಬಂದ್ ಮಾಡಿ.  ಉದಾಹರಣೆಗೆ ಬ್ಲೂಟೂತ್ (Bluetooth), ವೈಫೈ (Wi_Fi), ಜಿಪಿಎಸ್ (GPS), ಡೇಟಾ ಸೇವೆ, ಹೀಗೆ ಇತರ ಸೇವೆಗಳನ್ನು ಅವಶ್ಯಕತೆ ಇದ್ದಾಗ ಮಾತ್ರ ಚಾಲೂ ಸ್ಥಿತಿಯಲ್ಲಿ ಇಡಿ.  ಹೀಗೆ ಮಾಡುವುದರಿಂದ ಕಾರ್ಯಕ್ಷಮತೆ ಹತೋಟಿಯಲ್ಲಿರುತ್ತದೆ ಮತ್ತು ಬ್ಯಾಟರಿ ಬಾಳಿಕೆಯೂ ಚೆನ್ನಾಗಿ ಬರುತ್ತದೆ. 

  • ನೀವು ಪ್ರಯಾಣ ಮಾಡುವಾಗ ಮೊಬೈಲ್ ಫೋನನ್ನು ಬಳಸುವುದನ್ನು ಕಡಿಮೆ ಮಾಡಿ.  ಒಂದು ವೇಳೆ ಬಳಸಿದರೂ ಎಲ್ಲಾ ಅಪ್ಲಿಕೇಶನ್ ಗಳನ್ನು ತೆರೆದು ಇಡಬೇಡಿ.  ಇದರಿಂದ ಫೋನ್ ತುಂಬಾ ಬಿಸಿ ಆಗುವುದನ್ನು ತಪ್ಪಿಸಬಹುದು.

  • ಆಗಾಗ ನಿಮ್ಮ ಫೋನನ್ನು ಸ್ವಿಚ್ ಆಫ್ ಮಾಡಿ ಸ್ವಿಚ್ ಆನ್ ಮಾಡಿ ಮತ್ತೆ ಚಾಲನೆ ಮಾಡಿರಿ. 

  •  ನಿಮ್ಮ ಫೋನನ್ನು ನೇರವಾಗಿ ಸೂರ್ಯನ ಬಿಸಿಲಿಗೆ ಒಡ್ಡಿ ಬಳಸುವುದನ್ನು ತಪ್ಪಿಸಿ. 

  • ಮಲಗುವಾಗ ಫೋನನ್ನು ನಿಮ್ಮ ಪಕ್ಕದಲ್ಲಿ ಇಟ್ಟುಕೊಂಡು ಮಲಗಬೇಡಿ. 

  • ಫೋನ್ ಬ್ಯಾಟರಿ ಶಕ್ತಿ ಕಡಿಮೆ ಇರುವಾಗ, ಅಪ್ಲಿಕೇಶನ್ ಗಳನ್ನು ಬಳಸಬೇಡಿ.  ಅದರ ಬದಲು ಬ್ರೌಸರ್ (Browser) ಮೂಲಕ ಮಾಹಿತಿಯನ್ನು ಪಡೆಯಿರಿ. ‍ ಡಾರ್ಕ್ ಮೋಡ್ ಆಯ್ಕೆಯು ಕೂಡ ಒಂದು ಉತ್ತಮ ವಿಚಾರ.

  • ಅತಿಯಾದ ಪ್ರಕಾಶ ಮಾನವನ್ನು (Brightness) ಬಳಸಬೇಡಿ.  ಇದರಿಂದ ಫೋನ್ ಬ್ಯಾಟರಿ ಮತ್ತು ನಿಮ್ಮ ಕಣ್ಣು ಎರಡಕ್ಕೂ ಒಳ್ಳೆಯದು.  

  • ಲಭ್ಯವಿರುವ ಇತ್ತೀಚಿನ ಸಾಫ್ಟ್ ವೇರ್ ಆವೃತ್ತಿಗೆ ನಿಮ್ಮ ಸ್ಮಾರ್ಟ್ ಫೋನ್ ಅನ್ನು ನವೀಕರಣಗೊಳಿಸಿ.  ಹಾಗೆಯೇ ನೀವು ಬಳಸುವ ವಿವಿಧ ರೀತಿಯ ಆ್ಯಪ್ ಗಳನ್ನು ಕೂಡ ಲಭ್ಯವಿರುವಾಗ ಹೊಸ ಆವೃತ್ತಿಗೆ ನವೀಕರಣಗೊಳಿಸಿ.  ಇದು ವೈಶಿಷ್ಟ್ಯತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಉತ್ತಮ.

  • ಅಪ್ಲಿಕೇಶನ್ ಗಳನ್ನು ಕೇವಲ ಅಧಿಕೃತ ತಾಣದಿಂದ ಮಾತ್ರ ಇನ್ ಸ್ಟಾಲ್ (Install) ಮಾಡಿಕೊಳ್ಳಿ. 

  • ನಿಮ್ಮ ಫೋನ್ ಅನ್ ಲಾಕ್ ಮಾಡಲು ತಪ್ಪದೇ ಪಾಸ್ ವರ್ಡನ್ನು ಬಳಸಿ.  ಇದು ಸುರಕ್ಷತೆ ದೃಷ್ಟಿಯಿಂದ ತುಂಬಾ ಮುಖ್ಯವಾದ ವಿಚಾರ. 

  • ಅನಗತ್ಯವಾಗಿ ಮತ್ತು ತುಂಬಾ ವಿರಳವಾಗಿ ಉಪಯೋಗಿಸುವ ಅಪ್ಲಿಕೇಶನ್ ಗಳನ್ನು ಇನ್ಸ್ಟಾಲ್ (Install) ಮಾಡಬೇಡಿ.  ಇದರಿಂದ ಅವುಗಳು ಬಳಸುವ ಡೇಟಾ ಮತ್ತು ಜಾಗವನ್ನು ತಪ್ಪಿಸಬಹುದು.  ಇದರಿಂದ ಫೋನ್ ಕ್ಷಮತೆಯ ಮೇಲೆ ಭಾರ ಕಡಿಮೆಯಾಗುವುದು. 

  • ನಿಮ್ಮ ಫೋನ್ ಅಲ್ಲಿ ಆ್ಯಂಟಿವೈರಸ್ (Anti_Virus) ಅಪ್ಲಿಕೇಶನ್ ಇನ್ ಸ್ಟಾಲ್ (Install) ಮಾಡಿ.  ಆ್ಯಂಟಿವೈರಸ್ (Anti Virus) ಅಪ್ಲಿಕೇಶನ್ ನಿಮ್ಮ ಫೋನಿಗೆ ಆಗಬಹುದಾದ ಹಾನಿಯನ್ನು ತಪ್ಪಿಸುವಲ್ಲಿ ಸಹಕಾರಿಯಾಗಿದೆ. 

  • ಕೆಲವು ಆ್ಯಪ್ ಗಳು ಫುಲ್ ವರ್ಷನ್ ಮತ್ತು ಲೈಟ್ ವರ್ಷನ್ ‍ಗಳಲ್ಲಿ ಲಭ್ಯವಿವೆ.  ನಿಮಗೆ ಎಲ್ಲಾ ವೈಶಿಷ್ಟ್ಯತೆಗಳು ಬೇಕೆಂದಿಲ್ಲ ಎಂದರೆ ಅಥವಾ ನೀವು ಯಾವಾಗಲೋ ಒಮ್ಮೆ ಉಪಯೋಗಿಸುವ ಆ್ಯಪ್ ಗಳನ್ನು ತೆಗೆದುಹಾಕಿ.  ಅವುಗಳ ಲೈಟ್ ಆವೃತ್ತಿಯನ್ನು ಇನ್ ಸ್ಟಾಲ್ (Install) ಮಾಡಿಕೊಳ್ಳಬಹುದು. 

  • ಅಪ್ಲಿಕೇಶನ್‌ಗಳು ಮತ್ತು ವಿಜೆಟ್‌ಗಳು ನಿಮ್ಮ ಫೋನಿನ ಹಿನ್ನೆಲೆಯಲ್ಲಿ ನಿರಂತರವಾಗಿ ಚಲಿಸುತ್ತವೆ ಮತ್ತು ಬ್ಯಾಟರಿ ಕ್ಷಮತೆಯನ್ನು ಕಡಿಮೆ ಮಾಡುತ್ತದೆ.  ಆದ್ದರಿಂದ ಆಗಾಗ ಕ್ಯಾಶೆ (Cache) ಅನ್ನು ಸ್ವಚ್ಛಗೊಳಿಸಿ.


ಮೊಬೈಲ್ ನ ಸರಿಯಾದ ಬಳಕೆಯ ಸಲಹೆಗಳ ಕುರಿತು ಮಾಹಿತಿ ಮೊಬೈಲ್ ನ ಸರಿಯಾದ ಬಳಕೆಯ ಸಲಹೆಗಳ ಕುರಿತು  ಮಾಹಿತಿ Reviewed by Admin on ಸೆಪ್ಟೆಂಬರ್ 28, 2023 Rating: 5

ಕಾಮೆಂಟ್‌ಗಳಿಲ್ಲ