ಮೊಬೈಲ್ ಫೋನಿನ ಕೆಲವು ವಿಶಿಷ್ಟ ಉಪಯೋಗಗಳು
ಮೊಬೈಲ್ ಫೋನಿನ ಕೆಲವು ವಿಶಿಷ್ಟ ಉಪಯೋಗಗಳು
CAST ಆಯ್ಕೆಯ ಮೂಲಕ ನೀವು ಮೊಬೈಲ್ ಪರದೆಯನ್ನು ಸ್ಮಾರ್ಟ್ ಟಿವಿಯ ದೊಡ್ಡ ಪರದೆಯ ಮೇಲೆ ನೋಡಬಹುದು.
ಫೋನನ್ನು ಬಾಹ್ಯ ಸಾಧನೆಗಳಿಗೆ ಸಂಪರ್ಕಿಸಿ ಹಲವಾರು ಚಟುವಟಿಕೆಗಳನ್ನು ಮಾಡಬಹುದು. ಸಾಮಾನ್ಯವಾಗಿ ಬಳಸಲ್ಪಡುವ ಬಾಹ್ಯ ಸಂಪರ್ಕ ಸಾಧನಗಳು, ಹೆಡ್ ಫೋನ್ (Head phone), ಸ್ಪೀಕರ್, ಫಿಟ್ನೆಸ್ ಬ್ಯಾಂಡ್, ಎಸ್ ಡಿ (SD Card or Memory Card), ಲ್ಯಾಪ್ ಟಾಪ್ , ಡಿಜಿಟಲ್ ಕ್ಯಾಮೆರಾ, ಮತ್ತು ಇನ್ನು ಹಲವು .
ಗೂಗಲ್ ಇಂಡಿಕ್ (Indic), Just Kannada ಇನ್ನು ಹಲವು ಅಪ್ಲಿಕೇಶನ್ಸ್ ಉಪಯೋಗಿಸಿ ಕನ್ನಡದಲ್ಲಿ ಟೈಪ್ ಮಾಡಬಹುದು.
ಧ್ವನಿಯಿಂದ ಪಠ್ಯ: ಈ ವೈಶಿಷ್ಟ್ಯತೆಯನ್ನು ಗೂಗಲ್ ಇಂಡಿಕ್ ಕೀಲಿಮಣಿ ಬಳಸಿ ಅಥವಾ ಅದಕ್ಕೆಂದೇ ಸಿಗುವ ಅಪ್ಲಿಕೇಶನ್ ಬಳಸಿ ನಿಮ್ಮ ಧ್ವನಿಯನ್ನು ಪಠ್ಯವಾಗಿ ಬದಲಿಸಬಹುದು. ಉದಾಹರಣೆಗೆ ಮಾತನಾಡುವ ಸಾಲೊಂದನ್ನು ಮೊಬೈಲ್ ನಿಮಗೆ ಪಠ್ಯವಾಗಿ ಕೊಡುತ್ತದೆ. ಮಾತಿನಿಂದ ಪಠ್ಯ (Speech to Text) ಮೊಬೈಲ‍್ ನಲ್ಲಿರುವ ಕೀಲಿಮಣಿ ಬಳಸಿ ಕೆಲವು ಸಾಲುಗಳನ್ನು ಸರಳವಾಗಿ ಟೈಪ್ ಮಾಡಬಹುದು. ಆದರೆ ತುಂಬಾ ಪುಟಗಳಷ್ಟು ಟೈಪ್ ಮಾಡುವ ವಿಷಯವಿದ್ದರೆ ಆಗ ಮಾತಿನಿಂದ ಪಠ್ಯ (Speech to Text) ನಿಮ್ಮ ಸಹಾಯಕ್ಕೆ ಬರುತ್ತದೆ.
ಸ್ಕ್ರೀನ್ ಶಾಟ್ (Screenshot): ಈ ವೈಶಿಷ್ಟ್ಯತೆಯನ್ನು ನೀವು ಬಳಸಿಕೊಂಡು ನಿಮಗೆ ಮುಖ್ಯವಾದ ಮಾಹಿತಿಯನ್ನು ಅಥವಾ ಇನ್ಯಾವುದೋ ವಿಚಾರವನ್ನು ಫೋನ್ ಪರದೆ ತೋರಿಸುತ್ತಿರುವಾಗ ಅದರ ಒಂದು ಫೋಟೋವನ್ನು ತೆಗೆಯಬಹುದು. ಇದರಿಂದ ನಿಮಗೆ ಬೇಕಾದವರಿಗೆ ಮಾಹಿತಿಯನ್ನು ಕಳಿಸಬಹುದು ಅಥವಾ ನೀವು ಏನಾದರೂ ಮುಂದೆ ಉಪಯೋಗಿಸಲು ಬಳಸಬಹುದು.
ಷೆಡ್ಯೂಲ್ (Schedule): ಇದನ್ನು ಉಪಯೋಗಿಸಿ ಬೇಕಾದ ಸಮಯಕ್ಕೆ ಸಂದೇಶವನ್ನು (SMS) ಕಳಿಸಲು ಸಾಧ್ಯವಾಗುತ್ತದೆ.
ಕೆಲವು ಆ್ಯಪ್ ಗಳ ಸಹಾಯದಿಂದ ನಿಮ್ಮ ಫೋನನ್ನು ನೀವು ರಿಮೋಟ್ ಕಂಟ್ರೋಲರ್ ತರಹ ಬಳಸಬಹುದು.
ಫೋನ್ ನಲ್ಲಿ ಲಭ್ಯವಿರುವ ಅಸಿಸ್ಟೆಂಟ್ ಸಹಾಯದಿಂದ ನೀವು ಕೆಲವು ಚಟುವಟಿಕೆಗಳನ್ನು ಮಾಡಬಹುದು. ಉದಾಹರಣೆಗೆ ಆ್ಯಂಡ್ರ್ಯಾಡ್ (Android) ಫೋನಿನಲ್ಲಿ "ಓಕೆ ಗೂಗಲ್" ಎಂದು ಹೇಳಿದಾಗ ನಿಮ್ಮ ಅಸಿಸ್ಟೆಂಟ್ ನಿಮಗೆ ಉತ್ತರವನ್ನು ನೀಡುತ್ತದೆ. ಅದರ ಸಹಾಯದಿಂದ ನೀವು ಏನಾದರೂ ಮಾಹಿತಿಯನ್ನು ತಿಳಿಯಬಹುದು. ಹಾಗೆಯೇ ಬೇರೊಂದು ಅಪ್ಲಿಕೇಶನ್ ಓಪನ್ ಮಾಡಬಹುದು, ಅಥವಾ ಏನಾದರೂ ಟಾಸ್ಕ್, ರಿಮೈಂಡರ್ ಸೆಟ್ ಮಾಡಬಹುದು. ಸಾಧ್ಯವಾದಾಗಲೆಲ್ಲಾ ‘ ಅಸಿಸ್ಟೆಂಟ್’ ಅನ್ನು ಉಪಯೋಗಿಸಲು ಪ್ರಯತ್ನಿಸಿ ಇದರಿಂದ ನೀವು ಕೈಯಿಂದ ಫೋನನ್ನು ಬಳಸುವ ಸಮಯವನ್ನು ಕಡಿಮೆ ಮಾಡಬಹುದು.
ಯಾವುದಾದರೂ ಒಂದು ಜಾಗಕ್ಕೆ ಹೋದಾಗ ದಿಕ್ಕುಗಳನ್ನು ತಿಳಿಯಲು ಕಂಪಾಸ್ ಅಪ್ಲಿಕೇಶನ್ ನಿಮಗೆ ಸಹಾಯ ಮಾಡುತ್ತದೆ.
ಬಹುಕಾರ್ಯ (Multi-Task) ಮಾಡಲು ಬಯಸುವುದಾದರೆ ಫೋನ್ ಸಹಾಯದಿಂದ ಎರಡು ಕಿಟಕಿಗಳಲ್ಲಿ (Windows) ಅಪ್ಲಿಕೇಶನ್ ಗಳನ್ನು ತೆರೆಯಬಹುದು.
ಸುಲಭವಾಗಿ ನಿಮ್ಮ ಮಾತುಗಳನ್ನು ಪಠ್ಯವಾಗಿ ಪರಿರ್ವತಿಸಬಹುದು. ನಂತರ ಕೆಲವು ಶಬ್ದಗಳನ್ನು ಟೈಪ್ ಮಾಡುವ ಮುಖಾಂತರ ಸರಿ ಮಾಡಬೇಕು.
ನಿಮ್ಮ ಮೊಬೈಲ್ ನನ್ನು ಕಂಪ್ಯೂಟರ್ ಗೆ ಸಂಪರ್ಕಿಸುವ ಮೂಲಕ ಕೆಲವೊಂದು ಚಟುವಟಿಕೆಗಳನ್ನು ಮಾಡಬಹುದು. ಅಷ್ಟೇ ಅಲ್ಲದೆ ಫೋನ್ನಲ್ಲಿರುವ ಆ್ಯಪ್ ಗಳನ್ನು ಲ್ಯಾಪ್ ಟಾಪ್ ನಿಂದ ಬಳಸಬಹುದು. ಉದಾಹರಣೆಗೆ ಫೋನ್ ನಲ್ಲಿರುವ ‘ವಾಟ್ಸಪ್ ನಲ್ಲಿ ‘ವಾಟ್ಸಾಪ್ ವೆಬ್' (Whatsapp web) ಆಯ್ಕೆ ಮೂಲಕ ಲ್ಯಾಪ್ ಟಾಪ್ ನಿಂದಲೇ ಚಾಟ್ (Chat) ಮಾಡಬಹುದು.
ಆ್ಯಪ್ ಗಳ ಸಹಾಯದಿಂದ ಮೊಬೈಲ್ ಫೋನನ್ನು ಮೈಕ್ ಆಗಿಯೂ ಪರಿವರ್ತಿಸಿ ಬಳಸಬಹುದು.
ಒಳ್ಳೆಯ ಸ್ಕ್ಯಾನ್ (Scan) ಅಪ್ಲಿಕೇಶನ್ ಬಳಸಿ ನೀವು ಉಪಯುಕ್ತ ದಾಖಲೆಗಳನ್ನು ಸ್ಕ್ಯಾನ್ (Scan) ಮಾಡಿ ಇಟ್ಟುಕೊಳ್ಳಬಹುದು ಅಥವಾ ಅಗತ್ಯಕ್ಕೆ ತಕ್ಕಂತೆ ಬೇರೆಯವರಿಗೆ ಕಳಿಸಬಹುದು.
ಆಕಾಶವಾಣಿಯ ಆ್ಯಪ್ ನನ್ನು ಬಳಸಿಕೊಂಡು ನೀವು ವಿವಿಧ ರೇಡಿಯೋ ಕೇಂದ್ರಗಳನ್ನು ಕೇಳಬಹುದು. ವಿವಿಧ ಟಿವಿ ಚಾನಲ್ ಗಳ ಆ್ಯಪ್ಗಳನ್ನು ಡೌನ್ ಲೋಡ್ ಮಾಡಿಕೊಂಡು ಎಲ್ಲಾ ಟಿವಿ ಚಾನೆಲ್ ಗಳನ್ನು ನೋಡಬಹುದು.
ಡಿಜಿಲಾಕ್ ಅಪ್ಲಿಕೇಶನ್ ನನ್ನು ಬಳಸಿ ಮುಖ್ಯವಾದ ದಾಖಲೆಗಳನ್ನು, ಅಂಕಪಟ್ಟಿಗಳನ್ನು ಡಿಜಿಟಲ್ ರೂಪದಲ್ಲಿ ಉಳಿಸಿಕೊಳ್ಳಬಹುದು.
ಕಾಮೆಂಟ್‌ಗಳಿಲ್ಲ