ಕಂಪ್ಯೂಟರ್ ಉಪಯುಕ್ತ ಮತ್ತು ಬಾ ಹ್ಯಸಾದನಗಳು

  ಒಂದಿಷ್ಟು ಉಪಯುಕ್ತ ಬಾಹ್ಯ ಸಾಧನಗಳ ಬಗ್ಗೆ ತಿಳಿಯೋಣ 

  • ಕೀಬೋರ್ಡ್ ಮತ್ತು ಮೌಸ್: ಈಗಲೇ ತಿಳಿಸಿದ ಹಾಗೆ ಲ್ಯಾಪ್ ಟಾಪ್ ಗಳಲ್ಲಿ ಕೀಬೋರ್ಡ್ ಮತ್ತು ಮೌಸ್ ಗಳನ್ನು ಬಾಹ್ಯದಿಂದ ಸಂಪರ್ಕಿಸಬಹುದು. ತಂತಿರಹಿತ (Wireless Keyboard) ಕೀಬೋರ್ಡ್ ಮತ್ತು ಮೌಸ್ ಬಳಸುವುದರಿಂದ ನಿಮಗೆ ಬೇಕಾದ ಹಾಗೆ ಕುಳಿತುಕೊಂಡು ಅಥವಾ ಸ್ವಲ್ಪ ದೂರದಿಂದ ಕೀಬೋರ್ಡ್ ಮತ್ತು ಮೌಸ್ ಅನ್ನು ಬಳಸಬಹುದು.

  • ಶಿರವಾಣಿ (Head Phone) ಮತ್ತು ಮೈಕ್: ಇದು ತಂತಿ ಅಥವಾ ತಂತಿರಹಿತವಾಗಿ ಲಭ್ಯವಿದೆ. ಇದರಿಂದ ನೀವು ನಿಮಗಿಷ್ಟವಾದ ಸಂಗೀತವನ್ನು, ಧ್ವನಿಯನ್ನು, ಕರೆಗಳನ್ನು ಸ್ವೀಕರಿಸಲು ಮತ್ತು ಇತರೆ ಸಂಭಾಷಣೆ ನಡೆಸಲು ಬಹು ಉಪಯೋಗಿ ಸಾಧನ.

  • ಧ್ವನಿವರ್ಧಕ (Speaker): ಧ್ವನಿ ವರ್ಧಕ ಸಹಾಯದಿಂದ ನಿಮ್ಮ ಕಂಪ್ಯೂಟರ್ ದಿಂದ ಹೊರಬರುವ ಧ್ವನಿಯನ್ನು ಜೋರಾಗಿ ಕೇಳಲು ಸಹಾಯವಾಗುತ್ತದೆ. ಸಂಗೀತ ಕೇಳಲು, ಹಾಡು ಹಾಡಲು, ಚಲನಚಿತ್ರ ವೀಕ್ಷಿಸುವಾಗ, ಜಿಮ್, ಮತ್ತು ಶಾಲಾ ಕಾಲೇಜುಗಳಲ್ಲಿ ಸಭೆ ಸಮಾರಂಭಗಳಲ್ಲಿ ತುಂಬಾ ಅನುಕೂಲ. 

  • ವೆಬ್ ಕ್ಯಾಮ್ (Web Cam): ಡೆಸ್ಕ ಟಾಪ್ ಗಳಲ್ಲಿ ಇದರ ಉಪಯೋಗ ಜಾಸ್ತಿ ಅಂತ ಹೇಳಬಹುದು. ಲ್ಯಾಪ್ ಟಾಪ್ ನಲ್ಲಿ ಇದು ಜೊತೆಯಲ್ಲಿಯೇ ನಿರ್ಮಿಸಲ್ಪಟ್ಟಿರುತ್ತದೆ. ಆದಾಗ್ಯೂ ಇದನ್ನು ಅವಶ್ಯಕತೆಗೆ ತಕ್ಕಂತೆ ಅಳವಡಿಸಿಕೊಂಡು ದೃಶ್ಯ ಕರೆ (Video Call), ಕಾನ್ಫರೆನ್ಸ್ (Conference) ನಡೆಸಲು, ಆನ್ ಲೈನ್ ಮೀಟಿಂಗ್ ನಡೆಸಲು ಬಳಸಬಹುದು.

  • ಮುದ್ರಕ (Printer): ನಾವು ಏನೇ ಮಾಹಿತಿ ಬರೆದಿದ್ದರೂ, ಬೇರೆಯವರಿಂದ ಪಡೆದಿದ್ದರೂ, ಚಿತ್ರಗಳನ್ನು (Photo) ತೆಗೆದಿದ್ದರೂ ಮತ್ತು ಇನ್ನಿತರೆ ಹಲವು ಕಾಗದ ಪತ್ರಗಳು ಕಂಪ್ಯೂಟರ್ನ ಹಾರ್ಡ ಡಿಸ್ಕ್ ನಲ್ಲಿ ಸಾಫ್ಟ್ ಕಾಪಿ ರೂಪದಲ್ಲಿ ಸಂಗ್ರಹವಾಗಿರುತ್ತವೆ. ಅವುಗಳನ್ನು ನಾವು ಮುದ್ರಿಸಬೇಕೆಂದರೆ ಮುದ್ರಣಯಂತ್ರ (Printer) ದಿಂದ ಮುದ್ರಿಸಬಹುದು. ಮುದ್ರಣಯಂತ್ರಗಳಲ್ಲಿ ಅವುಗಳ ಕಾರ್ಯವೈಖರಿಗೆ ತಕ್ಕಂತೆ, ವೈಶಿಷ್ಟ್ಯತೆಗೆ ತಕ್ಕಂತೆ ಹಲವಾರು ವಿಧಗಳಿವೆ.


  • ಮಾನಿಟರ್ (Monitor): ಕಂಪ್ಯೂಟರ್ನನ್ನು ನಾವು ಒಂದೇ ಮಾನಿಟರ್ ಮೂಲಕ ಉಪಯೋಗಿಸಬೇಕು. ಎಂದೇನಿಲ್ಲ. ಅವಶ್ಯಕತೆಗೆ ತಕ್ಕಂತೆ ಬಾಹ್ಯದಿಂದ ಮಾನಿಟರ್ ಗಳನ್ನು ಸಂಪರ್ಕಿಸಬಹುದು. ಇದರಿಂದ ಹೆಚ್ಚು ಪರಿಣಾಮಕಾರಿಯಾಗಿ ವೀಕ್ಷಿಸಲು ಮತ್ತು ಕೆಲಸ ಮಾಡಲು ಸಹಾಯವಾಗುತ್ತದೆ. ಅಲ್ಲದೇ ನಿಮ್ಮ ಮನೆಯಲ್ಲಿರುವ ದೂರದರ್ಶನವನ್ನು ಮಾನಿಟರ್ (HDMI) ಕೇಬಲ್ ಸಹಾಯದಿಂದ ಸಂಪರ್ಕಿಸಿ ಉಪಯೋಗಿಸಬಹುದು.


  • ಪ್ರೊಜೆಕ್ಟರ್ (Projector): ನೀವು ಸಭೆ-ಸಮಾರಂಭ ನಡೆಸಲು, ಕಾರ್ಯಾಗಾರ (Workshop) ನಡೆಸಲು, ತರಬೇತಿ ಕಾರ್ಯಕ್ರಮಗಳಿಗೆ, ಚಲನಚಿತ್ರ ವೀಕ್ಷಿಸಲು ಇನ್ನೂ ಹಲವಾರು ಕೆಲಸಗಳಿಗೆ ಪ್ರೊಜೆಕ್ಟರ್ ಸಹಾಯದಿಂದ ದೊಡ್ಡ ಪರದೆ ಮೇಲೆ ತೋರಿಸಲು ನೆರವಾಗುತ್ತದೆ.



  • ಬಾಹ್ಯ ಹಾರ್ಡ್ ಡಿಸ್ಕ್: ಕೆಲವು ಕಡತಗಳನ್ನು (Files) ನೀವು ಸಂಗ್ರಹಿಸಲು ಬಾಹ್ಯದಿಂದ ಹಾರ್ಡ್ ಡಿಸ್ಕನ್ನು ಬಳಸಬಹುದು. ಇವುಗಳ ಬೆಲೆ ಸಂಗ್ರಹ ಸಾಮರ್ಥ್ಯಕ್ಕೆ ತಕ್ಕಂತೆ ಹೆಚ್ಚು ಇರುತ್ತದೆ. ಕಡತಗಳನ್ನು ಇದರಲ್ಲಿ ಸಂಗ್ರಹಿಸುವುದರಿಂದ ನಮಗೆ ಬೇಕಾದಾಗ ಬೇರೆ ಕಂಪ್ಯೂಟರ್ ಗೆ ರವಾನಿಸಬಹುದು. ಅಲ್ಲದೇ ಸುರಕ್ಷಿತವಾಗಿ ಇಡಬಹುದು.

  • ಪೆನ್ ಡ್ರೈವ್, ಅಡಕ ಮುದ್ರಿಕೆ, ಡಿವಿಡಿ: ಈ ಸಾಧನಗಳನ್ನು ನಾವು ಬಾಹ್ಯದಿಂದ ಸಂಪರ್ಕಿಸಿ ಕಡತಗಳನ್ನು ಅವುಗಳಿಂದ ಪಡೆಯಬಹುದು ಅಥವಾ ಅವುಗಳಿಗೆ ನಕಲು (Copy) ಮಾಡಬಹುದು.

  • ಮೊಬೈಲ್ ಫೋನ್ (ಜಂಗಮವಾಣಿ-ಸಂಚಾರಿ ದೂರವಾಣಿ): ಮೊಬೈಲ್ ಫೋನನ್ನು ನಾವು ಕಂಪ್ಯೂಟರ್ ಗೆ ಸಂಪರ್ಕಿಸುವುದರಿಂದ ಹಲವಾರು ಕೆಲಸ ಮಾಡಬಹುದು. ಸಾಮಾನ್ಯವಾಗಿ ಮಾಡುವಂತಹ ಕೆಲಸಗಳು, ಕಡತ ನಕಲು ಮಾಡುವುದು, ಧ್ವನಿ, ದೃಶ್ಯ ಮತ್ತು ಇತರೆ ಡೇಟಾವನ್ನು ಮೊಬೈಲ್ ನಿಂದ ಕಂಪ್ಯೂಟರ್ ಗೆ ರವಾನಿಸಬಹುದು ಮತ್ತು ಪಡೆಯಬಹುದು, ಅಂತರ್ಜಾಲ ಸಂಪರ್ಕವನ್ನು ಸಾಧಿಸಬಹುದು ಮತ್ತು ಇನ್ನು ಹಲವಾರು ಪ್ರಯೋಜನಗಳಿವೆ.

  • ಸ್ಕ್ಯಾನರ್ (Scanner): ಇದನ್ನು ಕೂಡ ನಾವು ಕಂಪ್ಯೂಟರ್ ಗೆ ಸಂಪರ್ಕಿಸಿ, ಕಾಗದ ಪತ್ರಗಳನ್ನು ಹಾರ್ಡ್ ಕಾಪಿಯಿಂದ ಸಾಫ್ಟ್ ಕಾಪಿಗೆ ಪರಿವರ್ತಿಸಿ ಉಳಿಸಬಹುದು.

  • ಮೋಡೆಮ್ ಮತ್ತು ಡೊಂಗಲ್ : ಈ ಸಾಧನಗಳನ್ನು  ಬಾಹ್ಯದಿಂದ ಜೋಡಿಸುವುದರಿಂದ ಅಂತರ್ಜಾಲ ಸಂಪರ್ಕ ಮಾಡಲು ಸಾಧ್ಯವಾಗಿಸುತ್ತವೆ.

  • ವಿವಿಧ ಅಂಗಡಿ, ಕಾರ್ಖಾನೆ ಮತ್ತು ಸಂಸ್ಥೆಗಳಲ್ಲಿ ಬಳಸುವ ಬಾಹ್ಯ ಸಂಪರ್ಕ ಸಾಧನಗಳು:  ಬಾರ್ ಕೋಡ್ ಸ್ಕ್ಯಾನರ್, ಡಿಜಿಟಲ್ ಕ್ಯಾಮೆರಾ, ಗೇಮ್ ಕಂಟ್ರೋಲ್, ಗೇಮ್ ಪ್ಯಾಡ್, ಬೆರಳಚ್ಚು ಸ್ಕ್ಯಾನರ್, ವೈದ್ಯಕೀಯ ಯಂತ್ರಗಳು, ಇನ್ನೂ ಹಲವು ಬಗೆಯ ಯಂತ್ರಗಳು.

ಕಂಪ್ಯೂಟರ್ ಉಪಯುಕ್ತ ಮತ್ತು ಬಾ ಹ್ಯಸಾದನಗಳು ಕಂಪ್ಯೂಟರ್  ಉಪಯುಕ್ತ ಮತ್ತು ಬಾ ಹ್ಯಸಾದನಗಳು Reviewed by Admin on ಸೆಪ್ಟೆಂಬರ್ 26, 2023 Rating: 5

ಕಾಮೆಂಟ್‌ಗಳಿಲ್ಲ