ಅಂತರ್ಜಾಲಗಳ ಬಗ್ಗೆ ಮಾಹಿತಿ ತಿಳುದಿಕೊಳ್ಳಿ
ಇಂಟರ್ನೆಟ್ ಮತ್ತು ಬ್ರೌಸರ್: (Internet and Browser)
ಮೊದಲೆಲ್ಲಾ ಏನಾದರೂ ಮಾಹಿತಿ ಬೇಕೆಂದರೆ ಸುದ್ದಿ ಸಮಾಚಾರಗಳಿಗೆ ಮತ್ತು ಇನ್ಯಾವುದೇ ರೀತಿಯ ವಿಚಾರಗಳಿಗಾಗಿ ನಾವು ಪರಿಣಿತರಿಂದ, ಸುದ್ದಿಪತ್ರಿಕೆಗಳಿಂದ, ವಿವಿಧ ರೀತಿಯ ಪುಸ್ತಕಗಳಿಂದ ಮತ್ತು ಹತ್ತು ಹಲವು ಜನರಿಂದ ಕೇಳಿ, ನೋಡಿ ಅಥವಾ ಓದಿ ತಿಳಿದುಕೊಳ್ಳಬೇಕಾಗಿತ್ತು. ಆದರೆ ಅಂತರ್ಜಾಲದ (Internet) ಸಹಾಯದಿಂದ ಇವತ್ತು ನಾವು ಮೊಬೈಲ್, ಲ್ಯಾಪ್ ಟಾಪ್, ಟ್ಯಾಬ್ಲೆಟ್ ಮತ್ತು ಇತರ ಸಾಧನಗಳಿಂದ ನಮ್ಮ ಬೆರಳ ತುದಿಯಿಂದಲೇ ಮಾಹಿತಿಯನ್ನು ಪಡೆಯಬಹುದು. ಅಂತರ್ಜಾಲದ (Internet) ಸಹಾಯದಿಂದ ನಾವು ನಮ್ಮ ಮೊಬೈಲ್ ಅಥವಾ ಲ್ಯಾಪ್ ಟಾಪ್ ಅಥವಾ ಇನ್ಯಾವುದೋ ಸಾಧನದಿಂದ ಹೊರಗಿನ ಜಗತ್ತಿನೊಂದಿಗೆ ಅಂತರ್ಜಾಲದ (Internet) ತಾಣಗಳಿಗೆ ಸಂಪರ್ಕಿಸಲು ಸಾಧ್ಯವಾಗುತ್ತದೆ. ಬ್ರಾಡ್ ಬ್ಯಾಂಡ್, ಡೊಂಗಲ್, ಹಾಟ್ ಸ್ಪಾಟ್ ಮತ್ತು ಇತರೆ ಆಯ್ಕೆಗಳಿಂದ ಅಂತರ್ಜಾಲದ (Internet) ಸಂಪರ್ಕ ಸಾಧಿಸಬಹುದು.
ಬ್ರೌಸರ್ ಗಳ ಬಳಕೆ:
ಕಂಪ್ಯೂಟರ್ ಬಳಸುವಾಗ ಅದರಲ್ಲಿ ಅಂತರ್ಜಾಲದ (Internet) ಎಕ್ಸಪ್ಲೋರರ್, ಸಫಾರಿ (Safari), ಕ್ರೋಮ್ (Chrome) ಹೀಗೆ ವಿವಿಧ ರೀತಿಯ ಬ್ರೌಸರ್ ಗಳು ಲಭ್ಯವಿವೆ. ಈ ಬ್ರೌಸರ್ ಗಳ ಸಹಾಯದಿಂದ ನಾವು ನಮಗೆ ಬೇಕಾದ ಮಾಹಿತಿಯನ್ನು ಹುಡುಕಬಹುದು (Search). ಇಂಜಿನ್ ಗಳಲ್ಲಿ ಉದಾಹರಣೆಗೆ ಗೂಗಲ್ ಸರ್ಚ್ ಇಂಜಿನ್ ನಲ್ಲಿ ಹುಡುಕಬಹುದು. ಅಷ್ಟೇ ಅಲ್ಲದೆ ಅಗತ್ಯವಿರುವ ಅಂತರ್ಜಾಲದ (Internet) ತಾಣಗಳಿಗೆ (Website) URL ಉಪಯೋಗಿಸಿಕೊಂಡು ಭೇಟಿ ನೀಡಬಹುದು. ಕಂಪ್ಯೂಟರ್ ಅಥವಾ ಮೊಬೈಲ್ ನಲ್ಲಿ ಹಲವಾರು ಬ್ರೌಸರ್ (Browser) ಗಳನ್ನು ಬಳಸಬಹುದು.
ಅಷ್ಟು ಬ್ರೌಸರುಗಳಲ್ಲಿ (Browser) ಒಂದು ಬ್ರೌಸರ್ (Browser) ನನ್ನು ನೀವು ಡೀಫಾಲ್ಟ್ ಬ್ರೌಸರ್ (Browser) ಎಂದು ಸಂಯೋಜಿಸಬಹುದು. ಅಂದರೆ ನೀವು ಯಾವುದಾದರೂ ಲಿಂಕ್ ಒತ್ತಿದರೆ ಅದು ಡೀಫಾಲ್ಟ್ ಬ್ರೌಸರ್ (Browser) ಅಲ್ಲಿ ತೆಗೆದುಕೊಳ್ಳುತ್ತದೆ. ನೀವು ಯಾವುದಾದರೂ ವೆಬ್ ತಾಣಗಳಿಗೆ ಭೇಟಿ ನೀಡಿದಾಗ ಅಥವಾ ಅಪ್ಲಿಕೇಶನ್ ಗಳನ್ನು ಉಪಯೋಗಿಸುತ್ತಿರುವ ಹಲವು ಜಾಹೀರಾತುಗಳನ್ನು ಒತ್ತಿದಾಗ ನಿಮಗೆ ತಿಳಿಯದಂತೆಯೇ ಬೇಡವಾದ ಬ್ರೌಸರ್ (Browser) ಇನ್ಸ್ಟಾಲ್ (Install) ಆಗಬಹುದು. ಆದಕಾರಣ ನೀವು ಆ ತರಹದ ಬ್ರೌಸರ್ (Browser) ಗಳನ್ನು ಉಪಯೋಗಿಸಬೇಡಿ ಮತ್ತು ಅವುಗಳನ್ನು ನಿಮ್ಮ ಮೊಬೈಲ್ ನಿಂದ ತೆಗೆದುಹಾಕಿ. ಇತರ ಕೆಲವೊಂದು ಬ್ರೌಸರ್ (Browser) ನಿಮಗೆ ವಿಧವಿಧವಾದ ಜಾಹೀರಾತುಗಳನ್ನು ತೋರಿಸಬಹುದು, ವಿಡಿಯೋಗಳನ್ನು ತೋರಿಸಬಹುದು, ನಿಮ್ಮ ಮಾಹಿತಿಯನ್ನು ಉಪಯೋಗಿಸಬಹುದು. ಆದ್ದರಿಂದ ಬೇರೆ ಯಾವುದೋ ಬ್ರೌಸರ್ (Browser) ಗಳನ್ನು ಬಳಸುವುದಕ್ಕಿಂತ ಸುರಕ್ಷಿತವಾಗಿರುವ ಬ್ರೌಸರ್ (Browser) ಗಳನ್ನು ಬಳಸುವುದು ಒಳಿತು. ಅಂದರೆ ನೀವು ಗೂಗಲ್ ಕ್ರೋಮ್ (Google Chrome), ಇಂಟರ್ನೆಟ್ ಎಕ್ಸಪ್ಲೋರರ್ (Internet Explorer), ಮೈಕ್ರೋಸಾಫ್ಟ್ ಎಡ್ಜ್ (Microsoft Edge), ಮೊಝಿಲ್ಲಾ ಫೈರ್ ಫಾಕ್ಸ್ (Mozilla Firefox), ಸಫಾರಿ (Safari), ಒಪೆರಾ (Opera) ಮತ್ತು ಇತರೆ ಬ್ರೌಸರ್ (Browser) ಗಳನ್ನು ಮಾತ್ರ ಬಳಸಿ.
ಅಂತರ್ಜಾಲ (Internet) ಬಳಕೆಯ ಸಲಹೆಗಳು
ನೀವು ಏನಾದರೂ ಒಂದು ಮಾಹಿತಿಯನ್ನು ಹುಡುಕುತ್ತಿದ್ದರೆ ಅದನ್ನು ನೀವು ಮಾಡಿದಾಗ ಬರುವ ಫಲಿತಾಂಶವನ್ನು ಸಂಪೂರ್ಣವಾಗಿ ಖಚಿತಪಡಿಸಿಕೊಂಡ ನಂತರ ಅದರ ಸರಿಯಾದ ಮಾಹಿತಿ ಸಿಗುತ್ತದೆ. ಕೆಲವು ಅಂತರ್ಜಾಲ (Internet) ತಾಣಗಳಲ್ಲಿ ಮಾಹಿತಿ ಅಪೂರ್ಣ ಅಥವಾ ತಪ್ಪು ಇರಬಹುದು. ಹಾಗಾಗಿ ಅಧಿಕೃತ ತಾಣಗಳಿಂದಲೇ ಮಾಹಿತಿಯನ್ನು ಪಡೆಯಿರಿ. ಉದಾಹರಣೆಗೆ ಒಂದು ಸಂಸ್ಥೆಯಲ್ಲಿ ಉದ್ಯೋಗದ ಅವಕಾಶ ಇದೆಯೆಂದು ಯಾವುದೋ ಜಾಲತಾಣದಲ್ಲಿ (Website) ಮಾಹಿತಿ ಇದೆ ಎಂದುಕೊಳ್ಳಿ, ಆಗ ನೀವು ಬೇರೆ ಬೇರೆಯ ಜಾಲತಾಣಗಳಿಗೆ (Website) ಭೇಟಿ ನೀಡುವುದಕ್ಕಿಂತ ಸಂಸ್ಥೆಯ ಅಧಿಕೃತ ಜಾಲತಾಣದಿಂದ (Website) ಉದ್ಯೋಗವಕಾಶಗಳ ಮಾಹಿತಿಯನ್ನು ಪಡೆಯಿರಿ.
ಬ್ರೌಸರ್ (Browser) ಗಳಲ್ಲಿ ನೀವು ಏನು ಹುಡುಕುತ್ತಿದ್ದೀರಿ ಎಂಬುದರ ಅರಿವು ನಿಮಗಿರಲಿ. ಯಾಕೆಂದರೆ ಉಪಯೋಗಿಸುತ್ತಿರುವ ಬ್ರೌಸರ್ (Browser) ಹಾಗೂ ವಿವಿಧ ಅಪ್ಲಿಕೇಶನ್ ಗಳು ನೀವು ಏನು ಹುಡುಕುತ್ತಿದ್ದೀರಿ ಎಂಬ ಇತಿಹಾಸವನ್ನು ತಿಳಿಯುತ್ತ ಇರುತ್ತವೆ. ಮತ್ತು ನೀವು ಹುಡುಕುತ್ತಿರುವ ಮಾಹಿತಿಯು ಬ್ರೌಸರ್ (Browser) ಇತಿಹಾಸದಲ್ಲಿ ಸಂಗ್ರಹವಾಗಿರುತ್ತದೆ.
ಬ್ರೌಸರ್ (Browser) ಅಲ್ಲಿ ಹುಡುಕುವ ಮಾಹಿತಿಯೂ ಸಂಗ್ರಹವಾಗಿದೆ ಇರಲು ಮತ್ತು ಸುರಕ್ಷಿತ ಬಳಕೆಗಾಗಿ ನೀವು ಬೇಕೆಂದಾಗ ಅಜ್ಞಾತ (Incognito) ಅಥವಾ ಪ್ರೈವೇಟ್ ಮೋಡ್ ಬಳಸಿ ಹುಡುಕಾಟ ನಡೆಸಬಹುದು.
ಏನನ್ನಾದರೂ ಹುಡುಕಾಟ ಮಾಡುವಾಗ ಮತ್ತು ಜಾಲತಾಣಗಳಿಗೆ (Website) ಭೇಟಿ ನೀಡಿದಾಗ ಸಾಕಷ್ಟು ಜಾಹೀರಾತುಗಳು ಬಂದು ನಿಮಗೆ ಕಿರಿಕಿರಿ ಉಂಟು ಮಾಡುತ್ತಿದ್ದರೆ ಆ ಜಾಹೀರಾತುಗಳನ್ನು ಬರದಂತೆ ತಡೆಯಬಹುದು. ಉದಾಹರಣೆಗೆ ನೀವು ಕ್ರೋಮ್ ಬ್ರೌಸರ್ (Chrome Browser) ಬಳಸುತ್ತೀರಿ ಎಂದಾದರೆ ಅದಕ್ಕೆ ನೀವು ಆ್ಯಡ್ ಬ್ಲಾಕರ್ ವಿಸ್ತರಣೆ ಅನ್ನು (Add Blocker Extension) ಹಾಕಿ ಮತ್ತು ಆಕ್ಟಿವೇಟ್ ಮಾಡಿದರೆ ಅದು ನಿಮಗೆ ಜಾಹೀರಾತುಗಳನ್ನು ತಡೆಯುವಲ್ಲಿ ಸಹಕಾರಿಯಾಗುತ್ತದೆ. ಇದರಿಂದ ನಿಮಗೆ ಕಿರಿಕಿರಿಯು ಇರುವುದಿಲ್ಲ ಜೊತೆಗೆ ಜಾಹೀರಾತುಗಳು ಬಳಸುವ ಡೇಟಾ ಉಳಿಯುತ್ತದೆ.
ವಿಸ್ತರಣೆ (Extension) ಗಳ ಬಳಕೆ-ಬ್ರೌಸರ್ (Browser) ಗಳಲ್ಲಿ ಹಲವು ವೈಶಿಷ್ಟ್ಯತೆಗಳು ಇದು ನಿಮಗೆ ಕೆಲವು ಚಟುವಟಿಕೆಯನ್ನು ಮಾಡಲು ಅನುಕೂಲ ಮಾಡಿಕೊಡುತ್ತವೆ. ಆದರೆ ನೀವು ಒಂದಿಷ್ಟು ನಿಖರವಾದ ಚಟುವಟಿಕೆಗಳನ್ನು ಮಾಡಲು ಬಯಸುತ್ತೀರಿ ಮತ್ತು ಅವುಗಳನ್ನು ಬ್ರೌಸರ್ (Browser) ಗಳ ಸಹಾಯದಿಂದ ಬೇಗನೆ ಉಪಯೋಗಿಸಲು ಇಷ್ಟಪಡುತ್ತೀರಿ ಎಂದಾದರೆ ವಿಸ್ತರಣೆ (Extension) ಅಥವಾ ಸೇರಿಸಿ (Add On) ತುಂಬಾ ನೆರವಾಗುತ್ತವೆ. ಉದಾಹರಣೆಗೆ ನೀವು ಉಪಯೋಗಿಸುವ ಬ್ರೌಸರ್ ಸಹಾಯದಿಂದ ಯಾವುದಾದರೂ ಜಾಲತಾಣಕ್ಕೆ (Website) ಭೇಟಿ ನೀಡಿದಾಗ ಕನ್ನಡ ಭಾಷೆಯನ್ನು ಟೈಪ್ ಮಾಡಲು ಇಚ್ಛಿಸುತ್ತೀರಾ ಎಂದಾದರೆ ನೀವು ಗೂಗಲ್ ಇಂಡಿಕ್ ಕಿಲಿಮಣಿ (Indic Keyboard) ಇದರ ವಿಸ್ತರಣೆ (Extension) ಅನ್ನು ಕ್ರೋಮ್ ಬ್ರೌಸರ್ (Chrome Browser) ಅಲ್ಲಿ ಅಳವಡಿಸಿಕೊಂಡರೆ. ಅದರ ಐಕಾನ್ (Icon) ನಿಮಗೆ ಬ್ರೌಸರ್ ಮೇಲ್ಭಾಗದಲ್ಲಿ ಕಾಣಿಸುತ್ತದೆ ಮತ್ತು ಅದರ ಸಹಾಯದಿಂದ ಬೇಕೆಂದಾಗ ದಿಢೀರನೆ ಕನ್ನಡದಲ್ಲಿ ಟೈಪ್ ಮಾಡಬಹುದು. ಹೀಗೆ ವಿಸ್ತರಣೆ (Extension) ಗಳು ನಿಮಗೆ ದಿಢೀರನೆ ಸಹಾಯಕ್ಕೆ ಬರುತ್ತವೆ.
ಅಂತರ್ಜಾಲ (Internet) ಬಳಸುವಾಗ ಒಂದು ಬಹುಮುಖ್ಯ ಅಂಶವೆಂದರೆ, ಯಾವುದೋ ಒಂದು ಜಾಲತಾಣಕ್ಕೆ (Website) ಭೇಟಿ ನೀಡಿದಾಗ ಅದು ಎಷ್ಟು ಡೇಟಾವನ್ನು ಬಳಸುತ್ತೇವೆ ಎಂಬುದು, ನೀವು ನಿಮ್ಮ ಬ್ರೌಸರ್ ಸಂಯೋಜನೆಗಳನ್ನು ಒಮ್ಮೆ ಪರಿಶೀಲಿಸಿಕೊಂಡು ಬ್ರೌಸಿಂಗ್ ಮಾಡಿರಿ, ಇದರಿಂದ ಸಾಕಷ್ಟು ಡೇಟಾವನ್ನು ಉಳಿಸಬಹುದು ಮತ್ತು ಕಾರ್ಯಕ್ಷಮತೆಯು ಅಭಿವೃದ್ಧಿಯಾಗುತ್ತದೆ. ಜೊತೆಗೆ ಬ್ಯಾಟರಿ ಉಪಯೋಗಿಸಿಕೊಂಡು ನೀವು ಬ್ರೌಸಿಂಗ್ ಮಾಡುತ್ತಿದ್ದೀರಿ ಎಂದಾದರೆ ಕಡಿಮೆ ಬ್ಯಾಟರಿ ಬಳಸಲ್ಪಡುತ್ತದೆ.
ಬುಕ್ ಮಾರ್ಕ್ (Bookmark) ಪುಸ್ತಕವನ್ನು ಓದುತ್ತಿರುವಾಗ ಮಧ್ಯದಲ್ಲಿ ಓದುವುದನ್ನು ತಿಳಿಸಬೇಕಾದಾಗ ಬುಕ್ ಮಾರ್ಕ್ (Bookmark) ಅನ್ನು ಬಳಸುತ್ತೇವೆ. ಹಾಗೆಯೇ ನಾವು ಒಂದು ಜಾಲತಾಣ (Website) ಭೇಟಿ ನೀಡಿದಾಗ ಅದು ನಮಗೆ ಉಪಯುಕ್ತ ಅನಿಸಿದರೆ ಮತ್ತು ಭವಿಷ್ಯದಲ್ಲಿ ನಾವು ಮತ್ತೆ ಅದನ್ನು ಬಳಸುತ್ತೇವೆ ಅಥವಾ ಅದನ್ನು ನಾವು ದಿನದಿನವೂ ಬಳಸುತ್ತೇವೆ ಎಂದಾದರೆ ನಾವು ಬ್ರೌಸರ್ ನಲ್ಲಿರುವ ಆಯ್ಕೆಯನ್ನು ಬಳಸಿಕೊಂಡು ಇಷ್ಟವಾದ ಜಾಲತಾಣ (Website) ಪುಟವನ್ನು ಬುಕ್ ಮಾರ್ಕ್ (Bookmark) ಅಲ್ಲಿ ಇಟ್ಟುಕೊಳ್ಳುವುದು ಅಥವಾ ಫೇವರಿಟ್ ಗಳಲ್ಲಿ ಸೇರಿಸಿಕೊಳ್ಳಬಹುದು. ಸುರಕ್ಷತಾ ದೃಷ್ಟಿಯಿಂದ ನಿಮ್ಮ ಬ್ರೌಸರ್ ನಲ್ಲಿರುವ ಸಂಯೋಜನೆಗಳನ್ನು (Browser settings) ತಪ್ಪದೇ ಆಯ್ಕೆಮಾಡಿಕೊಳ್ಳಿ. ಇದರಿಂದ ಬ್ರೌಸರ್ ನಿಮಗೆ ಸುರಕ್ಷಿತವಾಗಿ ಬ್ರೌಸಿಂಗ್ ಮಾಡಲು ಸಹಾಯ ಮಾಡುತ್ತದೆ.
ಬ್ರೌಸರ್ ಸಂಯೋಜನೆ (Browser settings) ಸಹಾಯದಿಂದ ನೀವು ಬೇಕೆಂದಾಗ ಬ್ರೌಸಿಂಗ್ ಇತಿಹಾಸವನ್ನು ಅಳಿಸಿ ಹಾಕಬಹುದು.
ಕೆಲವು ಜಾಲತಾಣ (Website) ಸಾಧನದ ಹಲವು ವೈಶಿಷ್ಟ್ಯತೆಗಳನ್ನು ಬಳಸಲು ಅನುಮತಿಯನ್ನು ಕೇಳುತ್ತವೆ. ನೀವು ನಂಬಲಾರದ ಜಾಲತಾಣ (Website) ಗಳಿಗೆ ಮಾತ್ರ ಅನುಮತಿಯನ್ನು ನೀಡಿರಿ. ಉದಾಹರಣೆಗೆ ಜಾಲತಾಣವೊಂದು (Website) ತೆರೆದುಕೊಂಡ ನಂತರ ನಿಮಗೆ ಸಾಧನದ ಕ್ಯಾಮರಾವನ್ನು ಬಳಸಲು ಅನುಮತಿಯನ್ನು ಕೇಳಬಹುದು. ಈ ಬೇಡಿಕೆಯು ನಿಮಗೆ ಸರಿ ಅನಿಸಿದರೆ ಮತ್ತು ಜಾಲತಾಣವು (Website) ಸುರಕ್ಷಿತ ಅನಿಸಿದರೆ ಮಾತ್ರ ಅನುಮತಿಯನ್ನು ನೀಡಿ.
ಬ್ರೌಸರ್ ಗಳಲ್ಲಿ ನಿಮಗೆ ಇಷ್ಟವಾದ ಫಾಂಟ್, ಝೂಮ್ ಮತ್ತು ಇತರೆ ವೈಶಿಷ್ಟ್ಯತೆಗಳನ್ನು ನೀವು ಅನುಕೂಲಕ್ಕೆ ತಕ್ಕಂತೆ ಆರಿಸಿಕೊಳ್ಳಬಹುದು.
ಜಾಲತಾಣವನ್ನು (Website) ನೋಡುತ್ತಿರುವಾಗ ನಿಮಗೆ ಮತ್ತೆ ಏನಾದರೂ ಬೇಕೆನಿಸಿದರೆ ಅಥವಾ ಇನ್ಯಾವುದೋ ಲಿಂಕ್ (Link) ಬೇಕಾದರೆ ಈಗಿರುವ ಕಿಟಕಿಯನ್ನು (Window) ಮುಚ್ಚದೆ ಬೇರೊಂದು ಟ್ಯಾಬ್ (Tab) ಬಳಸಿ ಹೊಸ ಕಿಟಕಿ (Window) ವನ್ನು ತೆರೆದು ಅದರಲ್ಲಿ ಬ್ರೌಸಿಂಗ್ ಮಾಡಬಹುದು. ಇತರ ಟ್ಯಾಬ್ ಬಳಸುವುದರಿಂದ ಮಲ್ಟಿಟಾಸ್ಕಿಂಗ್ ಮಾಡಲು ಮತ್ತು ವಿವಿಧ ಮಾಹಿತಿಯನ್ನು ಕಲೆ ಹಾಕಲು ಅನುಕೂಲವಾಗುತ್ತದೆ.
ಪಾಪ್ಅಪ್ (Popup) ಬ್ಲಾಕರ್ - ಜಾಲತಾಣಕ್ಕೆ (Website) ಭೇಟಿ ನೀಡಿದಾಗ ಅದೇ ಕಿಟಕಿಯ (Window) ಮೂಲಕ ಮತ್ತೊಂದು ಹೊಸ ಕಿಟಕಿ (Window) ತೆರೆದುಕೊಳ್ಳುತ್ತದೆ. ಇದು ಚಟುವಟಿಕೆಯ ಅವಶ್ಯಕ ಭಾಗವಾಗಿರಬಹುದು ಅಥವಾ ಬೇಡವಾದ ವಿಷಯಕ್ಕೆ ನಿಮ್ಮನ್ನು ಕೊಂಡೊಯ್ಯಬಹುದು. ಆದಕಾರಣ ಸಂಯೋಜನೆಗಳನ್ನು (Settings) ಉಪಯೋಗಿಸಿಕೊಂಡು ಪಾಪ್ಅಪ್ (Popup) ಅನ್ನು ನಿರ್ಬಂಧಿಸಿ ಇಡುವುದು ಉತ್ತಮ ಮತ್ತು ಜಾಲತಾಣ (Website) ಅನುಮತಿ ಕೇಳಿದಾಗಲೆಲ್ಲ ಅವಲೋಕಿಸಿ ಅನುಮತಿ ನೀಡುವುದು ಯೋಗ್ಯ. ಉದಾಹರಣೆಗೆ ನೀವು ಶಾಪಿಂಗ್ ತಾಣದಲ್ಲಿ ಏನಾದರೂ ಖರೀದಿ ಮಾಡುವಾಗ ಶುಲ್ಕ ಪಾವತಿಸುವ ವಿಧಾನಗಳು ಹೊಸ ಕಿಟಕಿ (Window) ಅಥವಾ ಪಾಪ್ಅಪ್ ನಲ್ಲಿ ತೆರೆಯಬಹುದು ಮತ್ತು ಅಲ್ಲಿ ನೀವು ಮುಂದುವರೆಯುವುದು ಒಳ್ಳೆಯದು. ಆದರೆ ಕೆಲವೊಂದು ಜಾಲತಾಣಗಳು (Website) ಅನವಶ್ಯಕವಾಗಿ ಯಾವುದೋ ಜಾಹೀರಾತಿನೊಂದಿಗೆ ಅಥವಾ ಮತ್ತ್ಯಾವುದೋ ಜಾಲತಾಣಕ್ಕೆ (Website) ನಿಮ್ಮನ್ನು ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದ್ದರೆ ಅದನ್ನು ತಿರಸ್ಕರಿಸಿ. ಒಂದು ವೇಳೆ ಅದು ತೆರೆದುಕೊಂಡರೆ ಕೂಡಲೇ x ಒತ್ತುವ ಮೂಲಕ ನಿರ್ಗಮಿಸಿ.
X – ಬ್ರೌಸಿಂಗ್ ಮಾಡುವಾಗ ಜಾಹೀರಾತುಗಳು ಸರ್ವೇಸಾಮಾನ್ಯ. ಆದರೆ ಜಾಹೀರಾತನ್ನು ನಾವು ಸ್ಮರಿಸಬಹುದು, ನಿರ್ಗಮಿಸಲು X ಚಿಹ್ನೆಯನ್ನು ಒತ್ತಬೇಕಾಗುತ್ತದೆ. ಅನೇಕ ಬಾರಿ ಈ ಚಿಹ್ನೆಯು ಅತಿ ಸಣ್ಣದಾಗಿ ಮತ್ತು ಯಾವುದೋ ಮೂಲೆಯಲ್ಲಿ ಕಾಣಿಸುತ್ತಿರುತ್ತದೆ. ಅದನ್ನು ಹುಡುಕಿ ಮತ್ತು ಅದರ ಮೇಲೆ ಸರಿಯಾಗಿ ಒತ್ತುವುದರ ಮೂಲಕ ಜಾಹೀರಾತಿನಿಂದ ನಿರ್ಗಮಿಸಿ.
ಬ್ರೌಸರ್ ಅಲ್ಲಿ ಯಾವುದಾದರೂ ಜಾಲತಾಣಕ್ಕೆ (Website) ಭೇಟಿ ನೀಡುವಾಗ Url ಅಲ್ಲಿ http:// ಅಥವಾ www. ಟೈಪ್ ಮಾಡದೆಯೇ ತೆರೆಯಬಹುದು. ಉದಾರಣೆಗೆ https://www.vtu.ac.in/ ಅಥವಾ vtu.ac.in ಎಂದು ಟೈಪ್ ಮಾಡಬಹುದು.
ಜಾಲತಾಣದಲ್ಲಿ (Website) ಏನಾದರೂ ಮಾಹಿತಿಯನ್ನು ಅಥವಾ ಅರ್ಜಿಗಳನ್ನು ತುಂಬುವಾಗ, ಒಂದು ಫೀಲ್ಡ್ ನಿಂದ ಮತ್ತೊಂದು ಫೀಲ್ಡಿಗೆ ಹೋಗಲು ಟ್ಯಾಬ್ ಉಪಯೋಗಿಸಬಹುದು. ಹಾಗೆ ಹಿಂದಿನ ಫೀಲ್ಡ್ ಗೆ ಹೋಗಲು Shift+Tab ಬಳಸಬಹುದು.
ಬ್ರೌಸರ್ ಗಳನ್ನು ಸಮಯಕ್ಕೆ ಸರಿಯಾಗಿ (Internet) ಇತ್ತೀಚಿನ ಆವೃತ್ತಿಗೆ ತಪ್ಪದೆ ನವೀಕರಣಗೊಳಿಸಿ.
ನೀವು ಬಳಸುವ ಅಂತರ್ಜಾಲ (Internet) ಸಂಪರ್ಕ ಸಾಧನ ವ್ಯವಸ್ಥೆಗೆ ಊಹಿಸಲು ಕಷ್ಟವಾಗುವ ಪಾಸವರ್ಡಗಳನ್ನು ತಪ್ಪದೇ ಬಳಸಿ.
Fast.com ಮತ್ತು ಇತರೆ ಜಾಲತಾಣಗಳಿಂದ (website), ಹಲವು ಅಪ್ಲಿಕೇಶನ್ ಗಳಿಂದ ಅಂತರ್ಜಾಲ (Internet) ಸಂಪರ್ಕದ ವೇಗವನ್ನು ಅಳೆಯಬಹುದು.
ಬ್ರೌಸರ್ ಮೂಲಕ ದೃಶ್ಯಗಳನ್ನು ವೀಕ್ಷಿಸುತ್ತಿರುವಾಗ ನೀವು ಸಂಯೋಜನೆಗಳ (Settings) ಸಹಾಯದಿಂದ ದೃಶ್ಯದ ಗುಣಮಟ್ಟವನ್ನು ಹೆಚ್ಚು - ಕಡಿಮೆ ಮಾಡಬಹುದು. ಹೆಚ್ಚಿನ ಗುಣಮಟ್ಟದ ದೃಶ್ಯವೀಕ್ಷಣೆಗೆ ಹೆಚ್ಚು ಡೇಟಾ (Data) ಬಳಸಲ್ಪಡುತ್ತದೆ. ಮತ್ತೆ ಡೀಫಾಲ್ಟ್ (Defualt) ಆಗಿ 'ಆಟೋ (Auto)' ಅಂದರೆ ಸ್ವಯಂ ಚಾಲಿತವಾಗಿ ಅಂತರ್ಜಾಲ (Internet) ವೇಗದ ಆಧಾರದ ಮೇಲೆ ಗುಣ ಮಟ್ಟವು ನಿರ್ಧಾರವಾಗಿರುತ್ತದೆ.
ಸ್ವಯಂಚಾಲಿತ ಸಂಯೋಜನೆಗಳನ್ನು (Settings) ನಿಯಂತ್ರಿಸಿ - ನೀವು ಭೇಟಿ ನೀಡುವ ಹಲವು ಜಾಲತಾಣಗಳು (Website), ವಿವಿಧ ರೀತಿಯ ಸಂಯೋಜನೆಗಳನ್ನು (Settings) ಹೊಂದಿರುತ್ತವೆ. . ಉದಾಹರಣೆಗೆ ನೀವು ಫೇಸ್ ಬುಕ್ (Facebook) ಜಾಲತಾಣಗಳಿಗೆ (Website), ಭೇಟಿ ನೀಡಿದಾಗ ದೃಶ್ಯಗಳು (ನಿಮಗೆ ಬೇಕಿದ್ದರೂ / ಬೇಡದಿದ್ದರೂ ) ಚಲನೆಯಾಗುತ್ತವೆ. ಇದು ಅನವಶ್ಯಕ ಹಾಗಾಗಿ ದಿನ ನಿತ್ಯ ಬಳಸುವ ಜಾಲತಾಣಗಳ ಸಂಯೋಜನೆಗಳಿಗೆ (Settings) ಭೇಟಿ ನೀಡಿ, ಅವಲೋಕಿಸಿ, ಹಾಗೂ ಬೇಕೆಂದರೆ ಹಾಗೆ ನಿಯಂತ್ರಿಸಿ .
ಕಾಮೆಂಟ್‌ಗಳಿಲ್ಲ