ನಿಮಗೆ ತಿಳದಿರಲೆ ಬೇಕಾದ ಕಂಪ್ಯೂಟರ್ ಸಾಮಾನ್ಯ ಜ್ಞಾನ
೧. ಕಂಪ್ಯೂಟರ್ / ಗಣಕಯಂತ್ರ (Computer)
ನಮಗೆಲ್ಲ ತಿಳಿದಿರುವ ಹಾಗೆ ಕಂಪ್ಯೂಟರ್ (Computer) ಆವಿಷ್ಕಾರ ತಂತ್ರಜ್ಞಾನದ ಆವಿಷ್ಕಾರಗಳಲ್ಲಿ ಒಂದು ಅತಿ ಮಹತ್ವಪೂರ್ಣ ಹೆಜ್ಜೆ. ಈಗಂತೂ ಸಕಲ ಕ್ಷೇತ್ರಗಳಲ್ಲಿ ಕಂಪ್ಯೂಟರ್ ತನ್ನ ದಾಪುಗಾಲನ್ನು ಇಟ್ಟಿದೆ. ಕೋವಿಡ್ -19ರ ಸಮಯದಲ್ಲಿ ಜಗತ್ತಿನ ವಿವಿಧ ಕ್ಷೇತ್ರಗಳ ಉದ್ಯೋಗಸ್ಥರು, ಕಂಪ್ಯೂಟರ್ ಸಹಾಯದಿಂದ ತಮ್ಮ ತಮ್ಮ ಮನೆಯಿಂದಲೇ ಕೆಲಸ ಮಾಡಲು (Work From Home) ಸಹಾಯವಾಯಿತು. ಅಷ್ಟೇ ಅಲ್ಲದೆ ಆನ್ ಲೈನ್ ತರಗತಿ ನಡೆಸಲು ವೇದಿಕೆಯಾಯಿತು. ವೈದ್ಯಕೀಯ ಸೇವೆಗಳಲ್ಲೂ ಸಾಕಷ್ಟು ನೆರವಾಗಿದೆ. ಕಂಪ್ಯೂಟರ್ ಬಳಸದೆ ಇರುವ ಕ್ಷೇತ್ರವೇ ಇಲ್ಲ ಅನ್ನಬಹುದು.
ಕಂಪ್ಯೂಟರ್ ಕುರಿತು
ಕಂಪ್ಯೂಟರ್ ನಲ್ಲಿ ಹಾರ್ಡವೇರ್ ಮತ್ತು ಸಾಫ್ಟವೇರ್ ಎಂಬ ಎರಡು ಮುಖ್ಯ ಭಾಗಗಳಿವೆ. ಹಾರ್ಡವೇರ್ ಅಂದರೆ ನಮಗೆ ಕಣ್ಣಿಗೆ ಕಾಣುವ ಮತ್ತು ಮುಟ್ಟಲು ಸಾಧ್ಯವಾಗುವಂತಹ ಭಾಗಗಳು. ಸಾಫ್ಟವೇರ್ ಅಂದರೆ ಕಣ್ಣಿಗೆ ಕಾಣದ ಆದರೆ ಕಂಪ್ಯೂಟರ್ ಸಂಪೂರ್ಣ ಕೆಲಸ ಮಾಡಲು ಸಾಧ್ಯವಾಗುವಂತೆ ಮಾಡುವ ಪ್ರೋಗ್ರಾಮ್ ಮತ್ತು ಇತರೆ ಅಂಶಗಳನ್ನು ಒಳಗೊಂಡಿರುವಂಥದ್ದು. ಹಾರ್ಡವೇರ್ ಕಂಪ್ಯೂಟರ್ ಭೌತಿಕ ಘಟಕಗಳಿಗೆ ನೀಡಲಾದ ಪದವಾಗಿದೆ. ಉದಾಹರಣೆಗೆ: ಕೀಬೋರ್ಡ್, ಮಾನಿಟರ್, ಸಿಸ್ಟಮ್ ಬಾಕ್ಸ್ ಅಥವಾ ಫ್ಲಾಫಿ ಡಿಸ್ಕ್ ಡ್ರೈವ್. ಸಾಫ್ಟವೇರ್ ಅಂದರೆ ಎಲೆಕ್ಟ್ರಾನಿಕ್ ಮಾಹಿತಿ. ಫೈಲ್ ಗಳು, ಆಪರೇಟಿಂಗ್ ಸಿಸ್ಟಮ್, ಗ್ರಾಫಿಕ್ಸ್, ಕಂಪ್ಯೂಟರ್ ಪ್ರೋಗ್ರಾಂಗಳು.
Reviewed by Admin
on
ಸೆಪ್ಟೆಂಬರ್ 26, 2023
Rating:

ಕಾಮೆಂಟ್‌ಗಳಿಲ್ಲ