ಡಿಜಿಟಲ್ ಅಕೌಂಟ್ ಬಗ್ಗೆ ಮಾಹಿತಿ ತಿಳುದಿಕೊಳ್ಳಿ

 ಡಿಜಿಟಲ್ ಅಕೌಂಟ್ (Digital Account):

     ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಂತ್ರಜ್ಞಾನ ಆಧಾರದ ಮೇಲೆ ಡಿಜಿಟಲ್ ಬ್ಯಾಂಕಿಂಗ್ ಖಾತೆಯನ್ನು ತೆಗೆಯುವುದು ಒಂದು ವಿಶೇಷ ವೈಶಿಷ್ಟ್ಯತೆ ಎಂದರೆ ತಪ್ಪಾಗಲಾರದು.  ಹಲವಾರು ಬ್ಯಾಂಕುಗಳು ಡಿಜಿಟಲ್ ಖಾತೆಯನ್ನು ತೆರೆಯಲು ಅನುಕೂಲ ಮಾಡಿಕೊಟ್ಟಿವೆ.  ಈ ವಿಧಾನದಿಂದ ನೀವು ಕೇವಲ ಕೆಲವೇ ಕೆಲವು ಗಂಟೆಗಳಲ್ಲಿ ಸ್ವಯಂ ನೀವೇ ಒಂದು ಬ್ಯಾಂಕಿನಲ್ಲಿ ಖಾತೆಯನ್ನು ತೆರೆಯಬಹುದು. 

     ಡಿಜಿಟಲ್ ಉಳಿತಾಯ ಖಾತೆಯನ್ನು ತೆರೆಯಲು ನೀವು ಈ ಸೇವೆಯನ್ನು ಕೊಡುವ ಬ್ಯಾಂಕಿನ ಜಾಲತಾಣಕ್ಕೆ (Website) ಅಥವಾ ಬ್ಯಾಂಕಿನ ಮೊಬೈಲ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಬೇಕು.  ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮೊಬೈಲ್ ಸಂಖ್ಯೆ, ಮಿಂಚಂಚೆ ವಿಳಾಸ ಇತರೆ ವಿವರಗಳು ಇದ್ದರೆ ಸಾಕು.  ಎಲ್ಲ ವಿವರಗಳನ್ನು ಉಪಯೋಗಿಸಿಕೊಂಡು ನೀವು ಮೊಬೈಲ್ ಅಪ್ಲಿಕೇಶನ್ ಅಥವಾ ಜಾಲತಾಣದಿಂದ (Website) ನೋಂದಣಿ ಮಾಡಿಕೊಂಡು ಖಾತೆಯನ್ನು ತೆರೆಯಬಹುದು.  ಇತರ ಡಿಜಿಟಲ್ ಖಾತೆಗಳಿಗೆ ಒಂದಿಷ್ಟು ಇತಿ ಮಿತಿಗಳು ಇರುತ್ತವೆ. ಒಮ್ಮೆ ಖಾತೆ ತೆಗೆದ ಮೇಲೆ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ವಿವಿಧ ಸೇವೆಗಳನ್ನು ಪಡೆಯಬಹುದು.  ಮುಂದೆ ನೀವು ಅವಶ್ಯಕವಿದ್ದಲ್ಲಿ ಡಿಜಿಟಲ್ ಅಕೌಂಟ್ ನಿಂದ ಉಳಿತಾಯ ಖಾತೆ ಮಾಡಿಕೊಳ್ಳಲು ಬ್ಯಾಂಕಿಗೆ ಹೋಗಿ ನಿಮ್ಮ ದಾಖಲೆಗಳನ್ನು (KYC) ನೀಡಿದರೆ ಅದು ರೆಗ್ಯುಲರ್ ಉಳಿತಾಯ ಖಾತೆಯಾಗಿ ಬದಲಾವಣೆಗೊಳ್ಳುತ್ತದೆ. 

UPI  ಸೇವೆ :

     ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಆನ್‌ಲೈನ್ ಪಾವತಿಗಳಿಗೆ ಅನುಕೂಲವಾಗುವಂತೆ ಆರ್ಕಿಟೆಕ್ಚರ್ ಫ್ರೇಮ್‌‍ವರ್ಕ್ ಮತ್ತು ಅಪ್ಲಿಕೇಶನ್ ಪ್ರೊಗ್ರಾಮಿಂಗ್ ಇಂಟರ್ಫೇಸ್ (ಎಪಿಐ) ವಿಶೇಷಣಗಳನ್ನು ಕೊಡುತ್ತದೆ.  ಇದು ಎಲ್ಲಾ ಬ್ಯಾಂಕಿಂಗ್ ವ್ಯವಸ್ಥೆಗಳಲ್ಲಿ ಒಂದೇ ಇಂಟರ್ಫೇಸ್ ಒದಗಿಸಿ ಪಾವತಿಗಳನ್ನು ಸರಳಗೊಳಿಸುವಲ್ಲಿ ಅನುಕೂಲವಾಗಿದೆ. ಇದರಿಂದಾಗಿ ಬ್ಯಾಂಕುಗಳ ನಡುವೆ ಪರಸ್ಪರ ಕಾರ್ಯ ಸಾಧ್ಯತೆ ಮತ್ತು ಉತ್ತಮ ಗ್ರಾಹಕ ಅನುಭವವನ್ನು ಸೃಷ್ಟಿಸುತ್ತದೆ.  ವಿವಿಧ ರೀತಿಯ ಬ್ಯಾಂಕ್ ಗ್ರಾಹಕರೆಲ್ಲರೂ ಒಂದೇ ಅಪ್ಲಿಕೇಶನ್ ಮುಖಾಂತರ ವ್ಯವಹಾರಗಳನ್ನು ಮಾಡಬಹುದು.  ಒಬ್ಬರಿಂದ ಒಬ್ಬರಿಗೆ ಹಣ ಕಳುಹಿಸಬಹುದು, ಹಣ ಸ್ವೀಕರಿಸಬಹುದು, ವಿವಿಧ ರೀತಿಯ ಬಿಲ್ ಗಳನ್ನು ಪಾವತಿ ಮಾಡಬಹುದು ಮತ್ತು ಗ್ರಾಹಕರು ಏನಾದರೂ ಖರೀದಿ ಮಾಡಿದಾಗ ವ್ಯಾಪಾರಿಗಳಿಗೆ ಹಣವನ್ನು ಕಳಿಸಬಹುದು.

     UPI ಮುಖಾಂತರ ಗ್ರಾಹಕರು ಅಪ್ಲಿಕೇಶನ್ ಅನ್ನು ಬಳಸಿಕೊಂಡು ಖಾತೆಗೆ ಜೋಡಣೆಯಾಗಿರುವ ಮೊಬೈಲ್ ನಂಬರ್ ನಿಂದ ನೋಂದಣಿ ಮಾಡಿಕೊಳ್ಳಬಹುದು.  ನೀವು ಖಾತೆಗೆ ಜೋಡಣೆ ಮಾಡಿರುವ ಮೊಬೈಲ್ ನಂಬರ್ ನೀವು ಬಳಸುತ್ತಿರುವ ಮೊಬೈಲ್ ನಲ್ಲಿ ಇರಬೇಕಾದದ್ದು ಅವಶ್ಯಕ.  ನಿಮ್ಮ ಡೆಬಿಟ್ ‍ಕಾರ್ಡ್ ಮಾಹಿತಿ ಕೂಡ ನೋಂದಣಿ ಮಾಡಲು ಬೇಕಾಗುತ್ತದೆ.  ನೋಂದಣಿ ಮುಗಿದ ನಂತರ ನೀವು UPI PIN ಸೆಟ್ ಮಾಡಬಹುದು.  ಅದಾದ ನಂತರ ನಿಮಗೆ ಯಾವುದೇ UPI ಆಧಾರಿತ ಸೇವೆ ಬಳಸಲು ಮತ್ತು ಹಣ ಸ್ವೀಕರಿಸಲು ಮತ್ತು ಇತರೆ ಬಿಲ್ ಪಾವತಿ ಮಾಡಲು ಉಪಯೋಗಿಸಲ್ಪಡುತ್ತದೆ.  UPI ದಿನದ 24 ಗಂಟೆಯೂ ಮತ್ತು ‍ವರ್ಷದ 365 ದಿನವೂ ಹಣ ಕಳುಹಿಸಲು ಮತ್ತು ಸ್ವೀಕರಿಸಲು ಲಭ್ಯವಿರುತ್ತದೆ.  ಇದರ ಮತ್ತೊಂದು ವಿಶೇಷವೆಂದರೆ ಶೀಘ್ರವಾಗಿ ಹಣ ಕಳುಹಿಸಲು ಮತ್ತು ಸ್ವೀಕರಿಸಲು ನೆರವಾಗುತ್ತದೆ.

ಬ್ಯಾಂಕಿಂಗ್ ಸೇವೆಗಳಲ್ಲಿ ಸುರಕ್ಷತಾ ಕ್ರಮಗಳು:

     ಮೇಲೆ ‍ಚರ್ಚಿಸಿದ ಹಾಗೆ ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಇಂಟರ್ನೆಟ್ (Internet) ಬ್ಯಾಂಕಿಂಗ್, UPI, ಕಾರ್ಡ್ಗಳ ಬಳಕೆ ಸಂ‍ಪೂರ್ಣ ಗಣಕೀಕರಣಗೊಂಡಿರುವ ಬ್ಯಾಂಕಿಂಗ್ ವ್ಯವಸ್ಥೆ ಇಷ್ಟೆಲ್ಲಾ ಇದ್ದರೂ ಅದರ ಹಿಂದಿರುವ ತಂತ್ರಜ್ಞಾನದ ಬಳಕೆಯನ್ನು ತಿಳಿದುಕೊಂಡು ಸುರಕ್ಷಿತವಾಗಿ ಸೇವೆಗಳನ್ನು ಬಳಸುವುದು ಅತಿ ಮುಖ್ಯ. 

  • ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ (Internet) ಬ್ಯಾಂಕಿಂಗ್ ಪಾಸ್ ವರ್ಡ್ (Password)ನ್ನು ಮತ್ತು ಕಾರ್ಡ್ಗಳ ಪಿನ್ ಗಳನ್ನು(Pin) ಯಾರೊಂದಿಗೂ ಹಂಚಿಕೊಳ್ಳಬೇಡಿ ಮತ್ತು ಅವಾಗವಾಗ ಬದಲಾವಣೆ ಮಾಡುತ್ತಿರಿ.  ಸುಲಭವಾಗಿ ಊಹೆ ಮಾಡುವಂತ ಪಾಸ್ ವರ್ಡ್ (Password) ಗಳನ್ನು ಬಳಸಬೇಡಿ, ಹಾಗೂ ಎಲ್ಲಿಯೂ ಬರೆದಿಟ್ಟು ಕೊಳ್ಳಬೇಡಿ.

  • ಜಾಲತಾಣದಲ್ಲಿ (Website) ಎಲ್ಲಿಯಾದರೂ ಕಮೆಂಟ್ ಮಾಡುವಾಗ, ವಿಮರ್ಶೆ ಬರೆಯುವಾಗ, ಮತ್ತು ಯಾವುದೇ ಜಾಲತಾಣದಲ್ಲಿಯೂ (Website) ಏನಾದರೂ ಬರೆಯುವಾಗ ನಿಮ್ಮ ಬ್ಯಾಂಕಿಂಗ್ ವಿವರಗಳನ್ನು ಯಾವತ್ತು ಕೊಡಬೇಡಿ. 

  • ಯಾರು ಕರೆ ಮಾಡಿ ಕೇಳಿದರೂ, ಮಿಂಚಂಚೆ ಮಾಡಿದರೂ ಅಥವಾ ಇನ್ಯಾವುದೋ ವಿಧಾನದಿಂದ ಕೇಳಿದರೂ ಪಾಸ್ ವರ್ಡ್ (Password) ಗಳನ್ನು ಪಿನ್ ಗಳನ್ನು (Pin), OTP ಗಳನ್ನು ಯಾವುದೇ ಕಾರಣಕ್ಕೂ ಹಂಚಿ ಕೊಳ್ಳಬಾರದು. ನಿಮ್ಮದಲ್ಲದ ಕಂಪ್ಯೂಟರ್ ಅಥವಾ ಮೊಬೈಲ್ ನಿಂದ ಬ್ಯಾಂಕಿಂಗ್ ಸೇವೆಗಳನ್ನು ಉಪಯೋಗಿಸದೆ ಇರುವುದು ಒಳಿತು.  ಒಂದು ವೇಳೆ ಉಪಯೋಗಿಸುವ ಸಂಧರ್ಭ ಬಂದರೆ ಯಾವುದೇ ಕಾರಣಕ್ಕೂ ಪಾಸ್ ವರ್ಡ್ (Password) ಗಳನ್ನು ಕಂಪ್ಯೂಟರ್ ಅಥವಾ ಮೊಬೈಲ್ ನಲ್ಲಿ ಉಳಿಸಲು (save) ಅನುಮತಿ ನೀಡಬೇಡಿ.  ಇಂಕಾಗ್ನಿಟೋ (Incognito) ಅಥವಾ ಇನ್ ಪ್ರೈವೇಟ್ ಮೋಡಲ್ಲಿ ಬ್ಯಾಂಕಿಂಗ್ ಮಾಡಿ ಇದರಿಂದ ಇತಿಹಾಸ ಉಳಿಯುವುದಿಲ್ಲ.

  • ನಿಮ್ಮದೇ ಬ್ಯಾಂಕಿನಂತೆ ಹೋಲುವ ಬೇರೆ ಜಾಲತಾಣದಲ್ಲಿ (Website) ಭೇಟಿ ನೀಡಬೇಡಿ.  ನೀವು ಉಪಯೋಗಿಸಲು ಇಚ್ಚಿಸುವ ಬ್ಯಾಂಕಿನ ಜಾಲತಾಣದಲ್ಲಿ (Website) ಮತ್ತು ಮೊಬೈಲ್ ಅಪ್ಲಿಕೇಶನ್ ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳಿ.  ಹಾಗೂ ಜಾಲತಾಣದಲ್ಲಿ (Website) ಸುರಕ್ಷಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.  ಕೆಲವು ಸೂಕ್ಷ್ಮ ವಿಚಾರಗಳೆಂದರೆ ಜಾಲತಾಣವನ್ನು (Website) ತೆರೆದ ಮೇಲೆ URL ನಲ್ಲಿ https ಎಂದು ಇರಬೇಕು.  ಇಲ್ಲಿ s ಸುರಕ್ಷತೆಯನ್ನು (Secured connection) ತಿಳಿಸುತ್ತದೆ.   ಹಾಗೂ ಹಸಿರು ಬಣ್ಣದ ಕೀಲಿ ಇರಬೇಕು. 

  • ಎಟಿಎಂನಿಂದ ಹೊರ ಹೋಗುವ ಮೊದಲು 'ರದ್ದುಮಾಡು' (Cancel) ಕೀಲಿಯನ್ನು ಒತ್ತಿ.  ನಿಮ್ಮ ಕಾರ್ಡ್ ಮತ್ತು ವಹಿವಾಟು ಸ್ಲಿಪ್ ಅನ್ನು ನಿಮ್ಮೊಂದಿಗೆ ತೆಗೆದುಕೊಳ್ಳಲು ಮರೆಯದಿರಿ. ಸಾರ್ವಜನಿಕವಾಗಿ ಸಿಗುವ ವೈಫೈ (wi-fi) ಉಪಯೋಗಿಸಿಕೊಂಡು ಬ್ಯಾಂಕಿಂಗ್ ಮಾಡದಿರುವುದು ಒಳಿತು.

ಡಿಜಿಟಲ್ ಅಕೌಂಟ್ ಬಗ್ಗೆ ಮಾಹಿತಿ ತಿಳುದಿಕೊಳ್ಳಿ ಡಿಜಿಟಲ್ ಅಕೌಂಟ್ ಬಗ್ಗೆ ಮಾಹಿತಿ  ತಿಳುದಿಕೊಳ್ಳಿ Reviewed by Admin on ಸೆಪ್ಟೆಂಬರ್ 28, 2023 Rating: 5

ಕಾಮೆಂಟ್‌ಗಳಿಲ್ಲ