ದೈಹಿಕ ಮತ್ತು ವೈದ್ಯಕೀಯ ಸಾಧನಗಳ ಬಗ್ಗೆ ಮಾಹಿತಿ ತಿಳುದಿಕೊಳ್ಳಿ

 ದೈಹಿಕ ಮತ್ತು ವೈದ್ಯಕೀಯ ಸಾಧನಗಳು: 

     ದೈಹಿಕ ಶಕ್ತಿಯ ಅಭಿವೃದ್ಧಿಗಾಗಿ, ಹೆಚ್ಚು ಶಕ್ತಿಶಾಲಿ ಆಗಲು, ಸುಂದರವಾಗಿ ಕಾಣಿಸಲು, ವೈಯಕ್ತಿಕ ಕಾಳಜಿಗಾಗಿ,  ಆರೈಕೆಗಾಗಿ, ಇತ್ಯಾದಿ ವಿಚಾರಗಳಿಗಾಗಿ ವಿವಿಧ ನವನವೀನ  ಸಾಧನಗಳು  ಮಾರುಕಟ್ಟೆಯಲ್ಲಿ ಇಂದು ಲಭ್ಯವಿವೆ. ಈ ರೀತಿ ವಿಷಯಗಳಲ್ಲಿ ಕೆಲಸ ಮಾಡುವ ಹಲವಾರು ಸಾಧನಗಳು ಸೆನ್ಸಾರ್ ಬಳಸಿ ಮಾಹಿತಿಯನ್ನು ಕಲೆ ಹಾಕುತ್ತೇವೆ. ಪುರುಷ ಹಾಗು ಮಹಿಳೆಯರ ವೈಯಕ್ತಿಕ ಸೌಂದರ್ಯ ಮತ್ತು ಆರೈಕೆಗಾಗಿ ಹಲವಾರು ಸಾಧನಗಳೂ ಲಭ್ಯ . 

೧೧ . ದೈಹಿಕ ಮತ್ತು ವೈದ್ಯಕೀಯ ಸಾಧನಗಳು.jpg


ಫಿಟ್ನೆಸ್ ಬ್ಯಾಂಡ್ (Fitness band):


fitness band images

      ಈ ಸಾಧನವು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಚಲಿತವಾಗಿದೆ. ಹಲವು ದೈಹಿಕ ಚಟುವಟಿಕೆಗಳ ವಿವರ ಶೇಖರಣೆಯಾಗುತ್ತದೆ. ಉದಾಹರಣೆಗೆ ಎಷ್ಟು ಹೆಜ್ಜೆಗಳನ್ನು ಇವತ್ತು ನಡೆದಿದ್ದೇವೆ ಮತ್ತು ಎಷ್ಟು ಕ್ಯಾಲೋರಿಯನ್ನು   ಕಡಿಮೆ ಮಾಡಿದ್ದೇವೆ. ಇನ್ನು ಹೆಚ್ಚು ದೈಹಿಕ ಚಟುವಟಿಕೆಗಳ ಬಗ್ಗೆ, ಹೃದಯ ಬಡಿತದ ಬಗ್ಗೆ, ನಿದ್ದೆಯ ವಿಚಾರವಾಗಿ  ಹಲವಾರು ‘ದೈಹಿಕ  ಶಕ್ತಿಯ'  ಅಭಿವೃದ್ಧಿಗಾಗಿ  ಫಿಟ್ನೆಸ್ ಬ್ಯಾಂಡ್ ಗಳು (Fitness band) ತುಂಬಾ ಸಹಕಾರಿಯಾಗಿವೆ. ಫಿಟ್ನೆಸ್ ಬ್ಯಾಂಡ್ (Fitness band) ಗಳಲ್ಲಿ ವೈಶಿಷ್ಟ್ಯತೆಗಳಿಗೆ ಅನುಗುಣವಾಗಿ ಹಲವಾರು ವಿಧಗಳಿವೆ. ಫಿಟ್ನೆಸ್ ಬ್ಯಾಂಡ್ (Fitness band) ಅನ್ನು ಮೊಬೈಲ್ ಫೋನಿಗೆ ಬ್ಲೂಟೂತ್ (Bluetooth) ಸಹಾಯದಿಂದ ಸಂಪರ್ಕಿಸಬಹುದು.  ಇದರಿಂದಾಗಿ ಎಲ್ಲಾ ರೀತಿಯ ದೈಹಿಕ ಚಟುವಟಿಕೆಗಳು ಅಪ್ಲಿಕೇಶನ್ ಸಹಾಯದಿಂದ ಮೊಬೈಲ್ನಲ್ಲಿ ಸಂಗ್ರಹಿಸಲ್ಪಡುತ್ತದೆ. ಅಪ್ಲಿಕೇಶನ್ ಸಹಾಯದಿಂದ ನಿಮ್ಮ ಪ್ರಗತಿಯನ್ನು ಅವಲೋಕಿಸಬಹುದು. ಅಷ್ಟೇ ಅಲ್ಲದೆ ಮೊಬೈಲ್ ಫೋನ್ ನ ಕೆಲವು ಚಟುವಟಿಕೆಗಳನ್ನು ಫಿಟ್ನೆಸ್ ಬ್ಯಾಂಡ್   ಸಹಾಯದಿಂದ ಮೊಬೈಲ್ ಫೋನ್ ಮುಟ್ಟದೆ ಮಾಡಬಹುದು. ಉದಾಹರಣೆಗೆ ಒಳಬರುವ ಕರೆಗಳ ಮಾಹಿತಿ, ಅಲಾರಂ, ನೋಟಿಫಿಕೇಶನ್ ಗಳು  ಮತ್ತು  ಇತ್ಯಾದಿ.

ಬಳಕೆಯ ಸಲಹೆಗಳು:

  • ಫಿಟ್ನೆಸ್ ಬ್ಯಾಂಡ್ ಅನ್ನು   ಸಮಯಕ್ಕೆ ಸರಿಯಾಗಿ ತಪ್ಪದೇ ‍ಚಾರ್ಜ್ ಮಾಡಿರಿ.  

  • ಅವಶ್ಯಕವಿದ್ದಾಗ ಮಾತ್ರ ಮೊಬೈಲ್ ನೊಂದಿಗೆ ಬ್ಲೂಟೂತ್ (Bluetooth) ಮೂಲಕ ಸಂ‍ಪರ್ಕಿಸಿ. ಆದರೆ ದಿನಕ್ಕೆ ಒಮ್ಮೆಯಾದರೂ ಮೊಬೈಲ್ ಗೆ ಸಂ‍ಪರ್ಕಿಸಿ (Data Sync) ಮಾಡುವುದು ಅವಶ್ಯಕ. 

  • ವಾಟರ್ ಪ್ರೂಫ್ (Water proof) ಸಾಧನ ಆಗಿಲ್ಲದಿದ್ದರೆ ನೀರಿನಿಂದ ದೂರ ಇಡಿ.

  • ಗೂಗಲ್ ಫಿಟ್ ಅಥವಾ ಇತರೆ ಮೊಬೈಲ್ ಆ್ಯಪ್ ಗಳ ಮೂಲಕ ಅಥವಾ ಸಾಧ್ಯವಾದರೆ ಒಮ್ಮೆ, ಮತ್ತೊಂದು ಸಾಧನದ ಮೂಲಕ ನಿಮ್ಮ ಚಟುವಟಿಕೆಗಳ ಮಾಹಿತಿ ಸರಿಯಾಗಿದೆಯೇ ಅನ್ನುವುದನ್ನು ಪರಿಶೀಲಿಸಿಕೊಳ್ಳಿ.

  • ಫಿಟ್ನೆಸ್ ಬ್ಯಾಂಡ್ ಅಪ್ಲಿಕೇಶನ್ ನಲ್ಲಿ ಸರಿಯಾದ ವಿವರಗಳನ್ನು ಕೊಡಿ. ಅಂದರೆ ಜನ್ಮ ದಿನಾಂಕ, ತೂಕ, ಅಳತೆ, ಇತ್ಯಾದಿ.  ಸರಿಯಾದ ಸಲಹೆಗಳು ಸಿಗಲು ಇದು ಉಪಯುಕ್ತ.

  • ಫಿಟ್ನೆಸ್ ಬ್ಯಾಂಡ್ ಗೆ ಹೆಚ್ಚು ಡೇಟಾವನ್ನು ನೀಡಿ, ಇದರಿಂದ ವಿಶ್ಲೇಷಣೆ ಹೆಚ್ಚು ನಿಖರವಾಗಿರುತ್ತದೆ.ಅಂದರೆ ಅಂತನಿರ್ಮಿತ ಹೃದಯ ಬಡಿತ ಮಾನಿಟರ್, ಸ್ಟೆಪ್ ಕೌಂಟರ್ , ಸ್ಲೀಪ್ ಟ್ರ‍್ಯಾಕರ್ ಇತ್ಯಾದಿ  ಚಟುವಟಿಕೆಯ ಮಾಹಿತಿ ದಿನವಿಡೀ ಸಂಗ್ರಹವಾದರೆ ಇದರಿಂದ  ವಿಶ್ಲೇಷಣೆ ಹೆಚ್ಚು ನಿಖರವಾಗಿರುತ್ತದೆ. ಮತ್ತು ನಿಮ್ಮ ಆರೋಗ್ಯ ಮತ್ತು ಫಿಟ್‌ನೆಸ್ ಅಂಕಿ ಅಂಶಗಳ ಸ್ಪಷ್ಟ ಚಿತ್ರವನ್ನು ನಿಮಗೆ ನೀಡುತ್ತದೆ.

ಮಸಾಜ್ ಮಾಡುವ ಸಾಧನ:



ಇಡೀ ದಿನದ ಕೆಲಸದ ನಂತರ, ಹೊರಗಡೆಯ ಓಡಾಟದಿಂದ ಸುಸ್ತು ಮತ್ತು ದಣಿವು ಆಗುವುದು ಸಹಜ. ಮೈ, ಕೈ ಮತ್ತು ದೇಹದ ಹಲವು ಭಾಗಗಳಲ್ಲಿ ನೋವು ಸಾಮಾನ್ಯ. ಕೆಲವು ದೈಹಿಕ ತೊಂದರೆಗಳಿಂದ, ವ್ಯಾಯಾಮ ಮಾಡುವುದರಿಂದ ಮತ್ತು ಇನ್ನೂ ಹಲವು ಕಾರಣಗಳಿಂದ ಮೈಯಲ್ಲಿ ನೋವು ಕಾಣಿಸುವುದು. ದೇಹದ ವಿವಿಧ ನೋವುಗಳಿಂದ ಪರಿಹಾರ ಪಡೆಯಲು ದೇಹದ ಮಸಾಜ್ ಉತ್ತಮ ತಂತ್ರವಾಗಿದೆ. ಇದು ದೈನಂದಿನ ಸಾಮಾನ್ಯ ಒತ್ತಡದಿಂದ ವಿಶ್ರಾಂತಿ ನೀಡುತ್ತದೆ. ನಿಮ್ಮ ನೆಚ್ಚಿನ ಸಲೂನ್‌ನಲ್ಲಿ ಕಾಲು ಮಸಾಜ್ ಅಥವಾ ತಲೆ ಮಸಾಜ್‌ನಂತಹ ಪೂರ್ಣ ಅಥವಾ ಭಾಗಶಃ ದೇಹದ ಮಸಾಜ್ ಅನ್ನು ನೀವು ಅನುಭವಿಸಿರಬಹುದು. ಆ ಸಮಯದಲ್ಲಿ ನೀವು ವಿಶ್ರಮಿಸಿ ಜೊತೆಗೆ ದೇಹದ ಆವಯವಗಳಿಗೆ ಒಳ್ಳೆಯ ಮಸಾಜ್ ಸಿಕ್ಕರೆ ತುಂಬಾ ಹಿತವೆನಿಸುತ್ತದೆ. ದಿನ ನಿತ್ಯ ನಿಮ್ಮ ಪ್ರೀತಿ ಪಾತ್ರರಾದವರು ಮಸಾಜ್ ಮಾಡಬಹುದು. ಆದರೂ ಮಸಾಜ್ ಮಾಡುವ ಸಾಧನವೊಂದು ನಿಮ್ಮ ಜೊತೆಯಲ್ಲಿದ್ದರೆ ನಿಮಗೆ ಬೇಕೆಂದಾಗ ಎಷ್ಟು ಬೇಕು  ಅಷ್ಟು ಮಸಾಜ್ ಅನ್ನು ನೀವೇ ಮಾಡಿಕೊಳ್ಳಬಹುದು. ಇದರಿಂದ ತುಸು ಹಿತವೆನಿಸಿ ಮತ್ತು ನೋವು ಕಡಿಮೆ ಅನಿಸಬಹುದು. ಮಸಾಜ್ ಸಾಧನಗಳು ವಿದ್ಯುತ್ ಶಕ್ತಿಯನ್ನು ಬಳಸಿಕೊಂಡು ಒಳಗಿರುವ ಮೋಟಾರಿನ ಸಹಾಯದಿಂದ ಕಂಪನವನ್ನು ಸೃಷ್ಟಿಸುತ್ತದೆ .ಮಸಾಜ್ ಮಾಡುವ ಸಾಧನದ ಹೊರಭಾಗದಲ್ಲಿ ವಿವಿಧ ರೀತಿಯ ಮೇಲ್ಭಾಗದಲ್ಲಿ ಜೋಡಿಸಬಹುದಾದ ವಿಭಾಗಗಳು (Header) ಲಗತ್ತಿಸಬಹುದು. ಇವುಗಳ ಸಹಾಯದಿಂದ  ದೇಹದ ವಿವಿಧ ಭಾಗಗಳಿಗೆ ಮಸಾಜ್ ಮಾಡಿಕೊಳ್ಳಬಹುದು.

  • ಮಸಾಜ್ ಮಾಡುವ ಸಾಧನಗಳಲ್ಲಿ ಹಲವಾರು ವಿಧಗಳು ಲಭ್ಯವಿವೆ.

  • ಸಾವಿರ ರೂಪಾಯಿಂದ ಹಿಡಿದು ಲಕ್ಷಾಂತರ ರೂಪಾಯಿಯವರೆಗೂ ಈ ಸಾಧನೆಗಳು ಲಭ್ಯ. ಸೋಫಾ ಕುರ್ಚಿಯ ರೂಪದಲ್ಲಿಯೂ ಸಿಗುತ್ತವೆ, ಆದರೆ ಅವು ಬಲು ದುಬಾರಿ.

  • ದಿನನಿತ್ಯದ ಬಳಕೆಗಾಗಿ ಈ ಸಾಧನಗಳನ್ನು ಉಪಯೋಗಿಸಬಹುದು. ಯಾಕೆಂದರೆ ನಮಗೆ ಬೇಕೆಂದಾಗಲೆಲ್ಲಾ ಸ್ಪಾ (Spa) ಗಳಿಗೆ ಹೋಗಿ ಮಸಾಜ್ ಮಾಡಿಸಿಕೊಂಡು ಬರಲಾಗುವುದಿಲ್ಲ. ಜೊತೆಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

  • ಈ ಸಾಧನ ಉಪಯೋಗಿಸಿ ಮಸಾಜ್ ಮಾಡಿಕೊಳ್ಳುವಾಗ ಒಂದೇ ಜಾಗದಲ್ಲಿ ತುಂಬಾ ಸಮಯ ಮಾಡಿಕೊಳ್ಳಬಾರದು. ಕೆಲವು ನಿಮಿಷಗಳ ನಂತರ ವಿವಿಧ ಭಾಗಗಳಲ್ಲಿ ಮಸಾಜ್ ಮಾಡಿಕೊಳ್ಳಬೇಕು. 

  • ಸಾಧನದಲ್ಲಿ ಲಭ್ಯವಿರುವಂತೆ ನಿಮಗೆ ಬೇಕಾದಷ್ಟು ವೇಗವನ್ನು ಆರಿಸಿಕೊಳ್ಳಿ.

  • ಸಾಧನಗಳ ಬಳಕೆ ಮಾಹಿತಿಯಲ್ಲಿ ಕೊಟ್ಟಿರುವಂತೆ ಜಾಗರೂಕತೆಯಿಂದ ಬಳಸಿ. 

  • ದಿನವೂ ಬಳಸುವುದಕ್ಕಿಂತ ಅವಶ್ಯಕವಿದ್ದಾಗ ಅದು ತುಸು ಸಮಯ ಮಾತ್ರ ಬಳಸುವುದು ಉತ್ತಮ. ಬಳಸುವಾಗ ಏನಾದರೂ ತೊಂದರೆ ಎನಿಸಿದರೆ ಬಳಸದೇ ಇರುವುದು ಒಳಿತು. 

  • ಕಾಲುಗಳಿಗೆ ಎಂದೆ ವಿಶೇಷವಾದ ಪುಟ್ಟ ಮಸಾಜ್ ಗಳು ಸಿಗುತ್ತವೆ.

 ಉಷ್ಣಮಾಪಕ (Thermometer) :

thermometer images

ನಿಮಗೆ ಅಥವಾ ನಿಮ್ಮ ಮಗುವಿಗೆ ಜ್ವರ, ಮೈ ಬಿಸಿಯಾದಾಗ ಬಂದಿರಬಹುದೆಂದು  ನೀವು ಭಾವಿಸಿದರೆ, ಪರೀಕ್ಷಿಸಲು ನಿಮಗೆ  ‍ಥರ್ಮೋಮೀಟರ್ (Thermometer)  ಉಪಯೋಗಕ್ಕೆ ಬರುತ್ತದೆ. ನಿಮ್ಮಲ್ಲಿರುವ ಥರ್ಮೋಮೀಟರ್ (Thermometer) ಸಹಾಯದಿಂದ ಮತ್ತು ಅದರ ವೈಶಿಷ್ಟ್ಯತೆಯಿಂದ ಆದಷ್ಟು ನಿಖರವಾಗಿ ಉಷ್ಣಾಂಶವನ್ನು ತಿಳಿಯಬಹುದು. ಡಿಜಿಟಲ್ ‍ಥರ್ಮೋಮೀಟರ್ (Thermometer), ಇನ್ಫ್ರಾರೆಡ್ ‍ಥರ್ಮೋಮೀಟರ್ (Infrared Thermometer)   ಮತ್ತು ಇನ್ನೂ ಹಲವು ಬಗೆಯ ‍ಥರ್ಮೋಮೀಟರ್ ಗಳಿವೆ (Thermometer).  

  • ಡಿಜಿಟಲ್ ‍ಥರ್ಮೋಮೀಟರ್ (Thermometer) ಸೆಲ್ಸಿಯಸ್ ಮತ್ತು ಫ್ಯಾರನ್ಹೀಟ್ ಎರಡು ಬಗೆಯ ದಿನಗಳಲ್ಲಿ ಉಷ್ಣಾಂಶವನ್ನು ತೋರಿಸುತ್ತವೆ.

  • ಬ್ಯಾಟರಿ ಸಹಾಯದಿಂದ ಡಿಜಿಟಲ್ ‍ಥರ್ಮೋಮೀಟರ್ (Thermometer) ಗಳು ಕೆಲಸ ಮಾಡುತ್ತವೆ.

  • ಸಾಧನದ ಮೇಲಿರುವ ಪುಟ್ಟ ಪರದೆಯ ಮೇಲೆ ಉಷ್ಣಾಂಶ ತೋರಿಸಲ್ಪಡುತ್ತದೆ.

  • ಉಷ್ಣಾಂಶ ಜಾಸ್ತಿ ಇದ್ದರೆ ಸಾಧನವು ಲಭ್ಯವಿರುವ ವಿಶಿಷ್ಟ್ಯೆತೆಯ ಪ್ರಕಾರ ಎಲ್ಇಡಿ (LED) ದೀಪ (light) ಬೆಳಗುತ್ತದೆ. ಮತ್ತು ಅಲಾರಂ ಹೊಡೆಯಲು ಶುರು ಮಾಡುತ್ತದೆ.

  • ಡಿಜಿಟಲ್ ‍ಥರ್ಮೋಮೀಟರ್ (Thermometer) ಬೇಕೆಂದಾಗ ಆನ್ ಮಾಡಿ ಮತ್ತೆ  ಬಂದು ಮಾಡಿ  ಇಡಬಹುದು.

  • ಇನ್ಫ್ರಾರೆಡ್ ‍ಥರ್ಮೋಮೀಟರ್ (Infrared Thermometer) ಸಹಾಯದಿಂದ ವ್ಯಕ್ತಿಯನ್ನು ಮುಟ್ಟದೆ ದೂರದಿಂದಲೇ ಉಷ್ಣಾಂಶವನ್ನು ಪರೀಕ್ಷಿಸಬಹುದು. 

ರಕ್ತದಲ್ಲಿನ ಗ್ಲೂಕೋಸ್ ಮಾನಿಟರ್ ( Blood Glucose Monitor):

Blood Glucose Monitor images

     ಈ ಸಾಧನವನ್ನು ಬಳಸಿಕೊಂಡು ಅವಶ್ಯಕತೆಗೆ ತಕ್ಕಂತೆ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಅರಿಯಬಹುದು. ರಕ್ತದಲ್ಲಿನ ಗ್ಲೂಕೋಸ್ (Glucose) ಮಟ್ಟವನ್ನು ತ್ವರಿತವಾಗಿ, ನಿಖರವಾಗಿ ಮತ್ತು ಆರಾಮವಾಗಿ ಅಳೆಯಲು ಗ್ಲೂಕೋಸ್ ಮಾನಿಟರ್ (Glucose monitor) ಸಹಾಯ ಮಾಡುತ್ತದೆ.  ಈ ಸಾಧನವು ಬ್ಯಾಟರಿ ಸೆಲ್ ಬಳಸಿ ಕೆಲಸ ಮಾಡುತ್ತದೆ. ಪುಟ್ಟ ಸೂಜಿಯಿಂದ ಒಂದೇ ಒಂದು ಸಣ್ಣ ಹನಿಯಷ್ಟು ರಕ್ತವನ್ನು ಬೆರಳಿನಿಂದ ತೆಗೆದು 'ಪರೀಕ್ಷಾ ಪಟ್ಟಿಗಳ' ಸಹಾಯದಿಂದ ಸಕ್ಕರೆ ಪ್ರಮಾಣವನ್ನು ತಿಳಿಯಬಹುದು. ಗ್ಲುಕೋಸ್ (Glucose) ಮೀಟರ್‌ ಸೂಚಿಸುವ ಸಕ್ಕರೆ ಪ್ರಮಾಣವು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು. ಮತ್ತು ಸಾಧನದಿಂದ ಅಳೆದ ಪ್ರಮಾಣವನ್ನು ನೋಂದಾಯಿತ ವೈದ್ಯರಿಂದ ವೈದ್ಯಕೀಯ ಪರೀಕ್ಷೆಗೆ ಬದಲಿಯಾಗಿ ಬಳಸಬಾರದು. ನಿಮ್ಮ ಔಷಧಿ, ಆಹಾರ ಪದ್ಧತಿ, ದೈಹಿಕ ಚಟುವಟಿಕೆ ಅಥವಾ ರಕ್ತದಲ್ಲಿನ ಗ್ಲೂಕೋಸ್ (Glucose) ಪರೀಕ್ಷೆಯ ವೇಳಾಪಟ್ಟಿಗಳಲ್ಲಿ ಬದಲಾವಣೆಗಳನ್ನು ಮಾಡುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ದೇಹದ ತೂಕ ಮಾಪನ ಸಾಧನ (Body weigh scale device) :

     ಉತ್ತಮ ಆರೋಗ್ಯಕ್ಕಾಗಿ ಎಲ್ಲರಿಗೂ, ದೈಹಿಕ ಪರೀಕ್ಷೆ ತಯಾರಿ ನಡೆಸುವವರಿಗೆ, ದೈಹಿಕ ಕಸರತ್ತು ಮಾಡಿ ಬಲಶಾಲಿ ಆಗ ಬಯಸುವವರು, ಹೀಗೆ ಎಲ್ಲರಿಗೂ ದೇಹದ ತೂಕ ಅತಿ ಮುಖ್ಯ. ವೈದ್ಯರಕಡೆ ಹೋದಾಗ, ವ್ಯಾಯಾಮ ಶಾಲೆಗಳಲ್ಲಿ ಅಥವಾ ಇನ್ನೂ ಕೆಲವು ಸ್ಥಳಗಳಲ್ಲಿ ದೇಹದ ತೂಕವನ್ನು ಪರೀಕ್ಷೆ ಮಾಡಿಕೊಳ್ಳಬಹುದು. ಈಗ ಲಭ್ಯವಿರುವ ಡಿಜಿಟಲ್ ದೇಹದ ತೂಕದ ಸಾಧನ ಬಳಸಿ ನಿಮ್ಮ ದೇಹದ ತೂಕವನ್ನು ಮತ್ತು ನಿಮ್ಮ ಮನೆಯವರ ದೇಹದ ತೂಕವನ್ನು ಸ್ವಯಂ ಪರೀಕ್ಷೆ ಮಾಡಿಕೊಳ್ಳಬಹುದು. ಹೀಗೆ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ತೂಕ ನೋಡಿ ಕೊಳ್ಳುವುದರಿಂದ ನಿಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಬಹುದು. ನಿರಂತರವಾಗಿ ತೂಕವನ್ನು ಮಾಪನ ಮಾಡುವುದರಿಂದ ಒಂದೇ ಸಮನಾದ ತೂಕವನ್ನು  ಸಾಧಿಸಲು  ಇದು ನೆರವಾಗುತ್ತದೆ .

  • ಪುಟ್ಟ (LCD) ಪರದೆಯಲ್ಲಿ ತೂಕವು ತೋರಿಸಲ್ಪಡುತ್ತದೆ.

  • ಈ ಸಾಧನವು ಬ್ಯಾಟರಿ ಶೆಲ್ಗಳ ಸಹಾಯದಿಂದ ಕೆಲಸ ಮಾಡುತ್ತದೆ.

  • ದಯವಿಟ್ಟು ಸಮತಟ್ಟಾದ ನೆಲದ ಮೇಲೆ ಸಾಧನವನ್ನು ಬಳಸಿ ಮತ್ತು ಸ್ವಿಚ್ ಆನ್ ಮಾಡಿದ ಮೇಲೆ ಸಾಧನದ ಜಾಗ ಬದಲಿಸಬೇಡಿ.

  • ನೀವು ನಿಂತಿರುವ ಶೈಲಿಯ ಮೇಲೆ ಸಾಧನವು ತುಸು ಹೆಚ್ಚು ಕಡಿಮೆ ತೂಕವನ್ನು ತೋರಿಸಬಹುದು. ಹಾಗಾಗಿ ಸಾಧನದ ಮೇಲೆ ನಿಂತುಕೊಂಡಾಗ ಅಲುಗಾಡಬೇಡಿ.

  • ನಿಮ್ಮ ಸಾಧನದ ವೈಶಿಷ್ಟ್ಯತೆಗೆ ಅನುಗುಣವಾಗಿ ತೂಕದ ಜೊತೆಗೆ ಅದರಲ್ಲಿ ಉಷ್ಣಾಂಶವು ತೋರಿಸಬಹುದು.

  • ಸಾಧ್ಯವಾದಷ್ಟು ಪ್ರತಿದಿನ ಒಂದೇ ಸಮಯದಲ್ಲಿ ತೂಕವನ್ನು ಪರೀಕ್ಷಿಸಿ.

ದೈಹಿಕ ಮತ್ತು ವೈದ್ಯಕೀಯ ಸಾಧನಗಳ ಬಗ್ಗೆ ಮಾಹಿತಿ ತಿಳುದಿಕೊಳ್ಳಿ  ದೈಹಿಕ ಮತ್ತು ವೈದ್ಯಕೀಯ ಸಾಧನಗಳ ಬಗ್ಗೆ ಮಾಹಿತಿ  ತಿಳುದಿಕೊಳ್ಳಿ Reviewed by Admin on ಸೆಪ್ಟೆಂಬರ್ 29, 2023 Rating: 5

ಕಾಮೆಂಟ್‌ಗಳಿಲ್ಲ