ನಿಮಗೆ ಕಂಪ್ಯೂಟರ್ ಭಾಗಗಳ ಮಾಹಿತಿ ಬೇಕೆ
ಕಂಪ್ಯೂಟರ್ ಭಾಗಗಳು
ಸಾಮಾನ್ಯವಾಗಿ ಕಂಪ್ಯೂಟರ್ ಮಾನಿಟರ್, ಕೀಬೋರ್ಡ್, ಮೌಸ್ ಮತ್ತು ಸಿಸ್ಟಮ್ ಘಟಕವನ್ನು ಒಳಗೊಂಡಿರುತ್ತದೆ. ಮುದ್ರಕಗಳು ಮತ್ತು ಸ್ಕ್ಯಾನರ್ ಗಳಂತಹ ಬಿಡಿಭಾಗಗಳು ಕಂಪ್ಯೂಟರ್ ಗೆ ಜೋಡಿಸಲ್ಪಟ್ಟಿರುತ್ತವೆ. ಕೆಲಸದ ಸ್ಥಳದಲ್ಲಿ ಹೆಚ್ಚಾಗಿ ಕಂಪ್ಯೂಟರ್ ಗಳು ನೆಟ್ ವರ್ಕ್ ಮೂಲಕ ಮುದ್ರಕಗಳು ಮತ್ತು ಇತರ ಕಂಪ್ಯೂಟರ್ ಗಳಿಗೆ ಸಂಪರ್ಕ ಸಾಧಿಸಿರುತ್ತವೆ.
ಮಾನಿಟರ್: ಕಂಪ್ಯೂಟರ್ ಪರದೆ ಇದರ ಮೂಲಕ ನಾವು ಕಂಪ್ಯೂಟರ್ ಜೊತೆಗೆ ಕೆಲಸ ಮಾಡಲು ಸಹಾಯವಾಗುತ್ತದೆ. ನಾವು ಕೊಡಬೇಕಾಗಿರುವ ಮಾಹಿತಿ ಮತ್ತು ಕಂಪ್ಯೂಟರ್ ದಲ್ಲಿ ಏನು ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳಲು ಇದು ನೆರವಾಗುತ್ತದೆ. ಮಾನಿಟರ್ ಪರದೆಗೆ ಸಂಬಂಧಪಟ್ಟಂತೆ ವಿವಿಧ ತಂತ್ರಜ್ಞಾನಗಳಿವೆ. ಉದಾಹರಣೆಗೆ ಕ್ಯಾಥೋಡ್ ರೇ ಟ್ಯೂಬ್ (CRT) ಅಥವಾ ಲಿಕ್ವಿಡ್ ಕ್ರಿಸ್ಟಲ್ ಡಿಸ್ ಪ್ಲೇ (LCD), ಲೈಟ್ ಎಮಿಟಿಂಗ್ ಡಯೋಡ್ (LED) ಮತ್ತು ಇತರೆ. ವಿವಿಧ ಅಳತೆ ಮತ್ತು ಗಾತ್ರಗಳಲ್ಲಿ ಇವು ಲಭ್ಯವಿವೆ.
ಸಿಪಿಯು (CPU): ಇದನ್ನು ಕಂಪ್ಯೂಟರ್ನ ಮೆದುಳು ಎಂದು ಹೇಳುತ್ತಾರೆ. ಇದು ಕಂಪ್ಯೂಟರ್ನ ಪೂರ್ಣ ನಿಯಂತ್ರಕದ ಭಾಗವಾಗಿದೆ. ಇದು ಮದರ್ ಬೋರ್ಡ್, ಹಾರ್ಡ್ ಡಿಸ್ಕ್, RAM, ಸೇರಿದಂತೆ ಇನ್ನು ಹಲವು ಭಾಗಗಳನ್ನು ಒಳಗೊಂಡಿದೆ.
![]() |
ಕೀ ಬೋರ್ಡ್ ಮತ್ತು ಮೌಸ್: ಇವೆರಡು ಸಾಧನಗಳು ನಮಗೆ ಕಂಪ್ಯೂಟರ್ ಜೊತೆ ಬೆಸೆಯಲು ಕಾರಣವಾಗಿವೆ. ಇವುಗಳ ಮೂಲಕ ನಾವು ಕಂಪ್ಯೂಟರ್ ಗೆ ಮಾಹಿತಿ/ಡೇಟಾ ರವಾನಿಸುತ್ತೇವೆ. ಕೀ ಬೋರ್ಡ್ ಮೂಲಕ ನಾವು ಟೈಪ್ ಮಾಡಿ ಮಾಹಿತಿಯನ್ನು ಕಳಿಸಬಹುದು ಮತ್ತು ಹಲವಾರು ಚಟುವಟಿಕೆಗಳನ್ನು ಮಾಡಬಹುದು. ಮೌಸ್ ಮೂಲಕ ಬಾಣದ ಗೆರೆಯನ್ನು (Arrow) ನಿಯಂತ್ರಿಸಲು ಹಲವು ಚಟುವಟಿಕೆಗಳಲ್ಲಿ ಆಯ್ಕೆಗಳನ್ನು ಮಾಡಲು, ಒಂದು ಕಿಟಕಿಯಿಂದ ಇನ್ನೊಂದು ಕಿಟಕಿಗೆ (window to window) ಹೋಗಲು ಸಾಧ್ಯವಾಗುತ್ತದೆ.
Reviewed by Admin
on
ಸೆಪ್ಟೆಂಬರ್ 26, 2023
Rating:



ಕಾಮೆಂಟ್‌ಗಳಿಲ್ಲ