ಸಾಮಾಜಿಕ ಜಾಲತಾಣಗಳ ಬಗ್ಗೆ ಮಾಹಿತಿ ತಿಳುದಿಕೊಳ್ಳಿ

 ಸಾಮಾಜಿಕ ಜಾಲತಾಣಗಳು (Social Networking Sites):

     ಎಲ್ಲರಿಗೂ ತಿಳಿದಿರುವಂತೆ ಮನುಷ್ಯ ಒಬ್ಬ ಸಾಮಾಜಿಕ ಜೀವಿ.  ನೋವಿದ್ದರೂ, ನಲಿವಿದ್ದರೂ, ಎಲ್ಲರೊಂದಿಗೆ ಹಂಚಿಕೊಂಡಾಗಲೇ ಸಮಾಧಾನ ಮತ್ತು ತೃಪ್ತಿ.  ಏನನ್ನಾದರೂ ಸಾಧಿಸಲು ಹೊರಟಾಗ, ಸಾಧಿಸಿದ ಮೇಲೆ, ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ, ದಿನನಿತ್ಯದ ಬದುಕು, ಸುದ್ದಿ ಸಮಾಚಾರ, ಆಗು ಹೋಗುಗಳು ಹೀಗೆ ಹತ್ತು ಹಲವಾರು ವಿಷಯಗಳನ್ನು ಸ್ನೇಹಿತರೊಂದಿಗೆ, ಪರಿಚಯದೊಂದಿಗೆ, ಇತರರೊಂದಿಗೆ  ಹಂಚಿಕೊಳ್ಳಬೇಕೆಂಬ ಆತುರ ಎಲ್ಲರಿಗೂ ಸಾಮಾನ್ಯ.  ಹಳೆಯ ಸ್ನೇಹಿತರು,  ದೂರದ ಬಂಧುಗಳು,  ಜಗತ್ತಿನ ಮೂಲೆಯಲ್ಲಿರುವ  ಬಾಂಧವರು, ಕಚೇರಿಯ  ಸಹೋದ್ಯೋಗಿಗಳು, ಒಂದೇ ಬಗೆಯ ಆಸಕ್ತಿಯ ಜನರು, ಹೀಗೆ ಎಲ್ಲರನ್ನು ಬೆಸೆಯುವ, ಎಲ್ಲರಿಗೂ ತಲುಪುವ,  ಮುಕ್ತವಾಗಿ  ಭಾವನೆಗಳನ್ನು ವ್ಯಕ್ತಪಡಿಸಲು ಇರುವ ಮಹಾನ್  ತಂತ್ರಜ್ಞಾನ ಆಧಾರಿತ  ವೇದಿಕೆಗಳ  ಸಾಮಾಜಿಕ ಜಾಲತಾಣಗಳು (Social networking sites)  ಈ ಹೊತ್ತಿನಲ್ಲಿ ಬಹು ಜನಪ್ರಿಯವಾಗಿರುವ, ಪ್ರತಿಯೊಬ್ಬರೂ  ಮೊಬೈಲ್ ಬಳಸಲು ಅತಿ ಹೆಚ್ಚು ಕಾರಣವಾಗಿರುವ  ವಿಚಾರವೆಂದರೆ ಸಾಮಾಜಿಕ ಜಾಲತಾಣಗಳು ಅಂದರೆ ತಪ್ಪಾಗಲಾರದು. 

    ಸಾಮಾಜಿಕ ಜಾಲತಾಣಗಳಲ್ಲಿ ವಿಚಾರಗಳನ್ನು,  ಬರಹಗಳನ್ನು,  ಅನಿಸಿಕೆಗಳನ್ನು,  ವಿವಿಧ ಚಿತ್ರಗಳನ್ನು,  ಸುದ್ದಿಗಳನ್ನು,  ದೃಶ್ಯಗಳನ್ನು, ಯಾವುದು ಜಾಲತಾಣದ ಕೊಂಡಿಗಳನ್ನು (Link), ವಿಧವಿಧವಾದ ಮಾಹಿತಿಯನ್ನು  ಕ್ಷಣ ಮಾತ್ರದಲ್ಲಿ ಜಗತ್ತಿನೊಂದಿಗೆ  ಹಂಚಿಕೊಳ್ಳುವುದು  ಇಂದು ಸಾಧ್ಯವಾಗಿದೆ.  ಸಾಮಾಜಿಕ ಜಾಲತಾಣಗಳಿಂದ ಅದೆಷ್ಟೋ ಜನರಿಗೆ ಹಳೆಯ ಸ್ನೇಹಿತರು ಸಿಕ್ಕಿದ್ದಾರೆ, ಹೊಸ ಸ್ನೇಹಿತರು ಸಿಕ್ಕಿದ್ದಾರೆ.  ದೂರದಲ್ಲಿರುವ ನಮ್ಮವರು ಸಮೀಪದಲ್ಲಿದ್ದಾರೆ ಅನ್ನುವ ಅನುಭವ ಕೊಟ್ಟಿವೆ ಈ ತಾಣಗಳು.

     ಸಾಮಾಜಿಕ ಮಾಧ್ಯಮ ಎಂದು ಕರೆಯಲ್ಪಡುವ ಜಾಲತಾಣಗಳು ಜನಸಾಮಾನ್ಯರಿಗೆ ಅಷ್ಟೇ ಅಲ್ಲದೆ  ಉದ್ದಿಮೆದಾರರಿಗೆ,  ವಿವಿಧ ಕೆಲಸ ಮಾಡುವವರಿಗೆ,  ಸಂಘ-ಸಂಸ್ಥೆಗಳಿಗೆ  ಹಾಗೂ ಇನ್ನೂ ಅನೇಕ  ಸಮುದಾಯಗಳಿಗೆ  ಬಹುದೊಡ್ಡ ವೇದಿಕೆಗಳಾಗಿವೆ.  ಆಯಾ ಸಂಘ-ಸಂಸ್ಥೆಗಳು ಸಂಬಂಧಪಟ್ಟ ಮಾಹಿತಿಯನ್ನು ಹಂಚಿಕೊಳ್ಳಲು,  ಮಾಹಿತಿಯನ್ನು ತಿಳಿಸಲು,  ತಮ್ಮ ಕೆಲಸವನ್ನು ಸರಿಯಾಗಿ ನಿಭಾಯಿಸಲು,  ಮತ್ತು  ಜಾಹಿರಾತುಗಳ ಮೂಲಕ ಅವುಗಳ ಗುರಿಯನ್ನು ಹೊಂದಲು  ಸಾಮಾಜಿಕ ತಾಣಗಳು    ಸಹಕಾರಿಯಾಗಿವೆ. 

social media icons images



ಇಷ್ಟೆಲ್ಲಾ ಅನುಕೂಲ ಮತ್ತು ವೈಶಿಷ್ಟ್ಯತೆಗಳನ್ನು ಹೊಂದಿರುವ ನಮ್ಮ ದಿನನಿತ್ಯದ ಅವಿಭಾಜ್ಯ ಅಂಗವಾಗಿರುವ,   ಕ್ಷಣಕ್ಷಣವೂ ನಮ್ಮನ್ನು ‍ರಕ್ಷಿಸುತ್ತಿರುವ ಸಾಮಾಜಿಕ ಜಾಲತಾಣಗಳ ಅಸಮರ್ಪಕ, ಅತಿಯಾದ, ಅಜಾಗರೂಕತೆ,  ಬಳಕೆಯಿಂದ  ಹಲವು ಅಡ್ಡಪರಿಣಾಮಗಳನ್ನು  ಮತ್ತು  ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ.  ಹಲವು ಸಾಮಾಜಿಕ ಜಾಲತಾಣಗಳ ಮಾಹಿತಿ, ಬಳಕೆಯ ಸಲಹೆಗಳು, ಸುರಕ್ಷತಾ ಕ್ರಮಗಳು ಇತ್ಯಾದಿ ವಿವರಗಳನ್ನು ತಿಳಿಯೋಣ ಬನ್ನಿ.

ವಿವಿಧ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಲು ಸ್ಮಾರ್ಟ್ ಫೋನ್, ಇಂಟರ್ನೆಟ್ ಕನೆಕ್ಷನ್ ಮತ್ತು ಮೊಬೈಲ್ ನಂಬರ್ ಬೇಕು.   ಇದನ್ನು ಬಳಸಲು ನೋಂದಣಿ ಮಾಡುವಾಗ ಇಮೇಲ್ ಐಡಿ (Email-id) ಅಥವಾ ಮೊಬೈಲ್ ನಂಬರ್ ಮತ್ತು ಇತರೆ ವಿವರ   ಬೇಕಾಗುತ್ತದೆ.

ಪ್ರಮುಖ ಸಾಮಾಜಿಕ ಜಾಲತಾಣಗಳು:

  1. ಫೇಸ್ ಬುಕ್: 

    facebook images

     ಇದು ಅತಿ ಹೆಚ್ಚು ಜನಪ್ರಿಯವಾಗಿರುವ ಮತ್ತು ಹಲವಾರು ಪ್ರತಿಸ್ಪರ್ಧಿಗಳನ್ನು ಮೀರಿ ಬೆಳೆದಿರುವ ಪ್ರಮುಖ ಸಾಮಾಜಿಕ ಜಾಲತಾಣ.  ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೋಸ್ಕರ ಮೊದಲು ಪ್ರಾರಂಭವಾದ ಫೇಸ್ಬುಕ್ ಇಂದು ಜಗತ್ತಿನ ಅತ್ಯಂತ ಕೋಟ್ಯಾಂತರ ಬಳಕೆದಾರರನ್ನು ಹೊಂದಿದೆ.  ಎಲ್ಲರೂ ಸಾಮಾನ್ಯವಾಗಿ ಬಳಸುವ ಫೇಸ್ ಬುಕ್ ತಾಣದಲ್ಲಿ ಬರಹಗಳನ್ನು, ಚಿತ್ರ, ದೃಶ್ಯ ಮತ್ತು ಇತರೆ ಮಾಹಿತಿಯನ್ನು ಹಂಚಿಕೊಳ್ಳಬಹುದು.  ಅಂ‍ತರ್ಜಾಲ ಸಂ‍ಪರ್ಕ ಬಳಸಿ   ಬ್ರೌಸರ್ ಸಹಾಯದಿಂದ, ಲ್ಯಾಪ್ ಟಾಪ್, ಕಂಪ್ಯೂಟರ್, ಮೊಬೈಲ್, ಟ್ಯಾಬ್ಲೆಟ್   ಹೀಗೆ ವಿವಿಧ ಸಾಧನಗಳಿಂದ ಬಳಸಬಹುದು.  ಮೊಬೈಲ್ ಟ್ಯಾಬ್ಲೆಟ್ ಗಳಲ್ಲಿ ಅಪ್ಲಿಕೇಶನ್ ರೂಪದಲ್ಲಿಯೂ ಬಳಸಬಹುದು.  

ಬಳಕೆಯ ಸಲಹೆಗಳು:

  • ಫೇಸ್ ಬುಕ್ (Facebook) ಖಾತೆಯಲ್ಲಿ ನಿಮಗೆ ಎಷ್ಟು ಬೇಕೋ ಅಷ್ಟು ಮಾಹಿತಿಯನ್ನು ಮಾತ್ರ ನೀವು ಸಾರ್ವಜನಿಕವಾಗಿ ತೋರಿಸಬಹುದು.  ನಿಮಗಿಷ್ಟವಾದ ಮಾಹಿತಿಯನ್ನು ನಮಗೆ ಮಾತ್ರ ಕಾಣುವಂತೆ ಮಾಡಿಕೊಳ್ಳಿ 'only for me’ ಆಯ್ಕೆಯ ಸಹಾಯದಿಂದ.  ಉದಾರಣೆಗೆ ನಿಮ್ಮ ಹೆಸರು, ಫೋಟೋ ಮತ್ತು ಕೆಲವು ವಿವರಗಳನ್ನು ಮಾತ್ರ ನೀವು ಬೇರೆಯವರೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೀರಿ ಆದರೆ ಮೊಬೈಲ್ ಸಂಖ್ಯೆ, ಇಮೇಲ್ ಐಡಿಯನ್ನು (Email-id), ಕೇವಲ ಖಾತೆ ಬಳಸಲು ಮಾತ್ರ ಉಪಯೋಗಿಸುತ್ತೀರಿ ಮತ್ತು   ನಿಮ್ಮ ಪ್ರೊಫೈಲ್ (Profile) ಗೆ ಭೇಟಿ ನೀಡುವವರಿಗೆ ತೋರಿಸುವ ಅವಶ್ಯಕತೆ ಇರುವುದಿಲ್ಲ. 

  • ಫೇಸ್ ಬುಕ್ (Facebook) ನಿಮ್ಮ ಎಲ್ಲ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ.   ಅಂದರೆ ನೀವು ಯಾವ ತರದ ಪೋಸ್ಟ್ ಇಷ್ಟಪಡುತ್ತೀರಿ, ಲೈಕ್ ಮಾಡುತ್ತೀರಿ,  ಶೇರ್ ಮಾಡುತ್ತೀರಿ,  ಯಾವ ತರದ  ಪೇಜ್ ಗಳನ್ನು ಮಾಡುತ್ತೀರಿ.  ಈ ಮಾಹಿತಿ ಆಧಾರದ ಮೇಲೆ ಫೇಸ್ ಬುಕ್ (Facebook) ನಿಮಗೆ ವಿವಿಧ ಜಾಹೀರಾತುಗಳನ್ನು, ಪ್ರಾಯೋಜಿತ ಪೋಸ್ಟ್ ಗಳನ್ನು  ತೋರಿಸುತ್ತದೆ.   ಆದಕಾರಣ ಎಷ್ಟು ಬೇಕು ಅಷ್ಟು ವಿವರಗಳನ್ನು ಮಾತ್ರ ಕೊಡಿ.

  • ನೋಂದಣಿ ಮಾಡುವಾಗ ಮತ್ತು ಪ್ರೊಫೈಲ್ ನಲ್ಲಿ (Profile) ಪ್ರತಿಯೊಂದು ಮಾಹಿತಿಯನ್ನು ಕೊಡಬೇಕೆಂದು ಏನೂ ಇಲ್ಲ. ಸಾರ್ವಜನಿಕವಾಗಿ ಹಂಚಿಕೊಳ್ಳಬಹುದಾದ ವಿಚಾರಗಳನ್ನು ಮಾತ್ರ ನೀವು ಇಲ್ಲಿ ಕೊಡಲು ಅಡ್ಡಿ ಇಲ್ಲ. ನಿಮ್ಮ ಕೆಲಸದ ಸ್ಥಳ, ನಿಮ್ಮ ಜೀವನದ ಘಟನೆಗಳು, ನಿಮ್ಮ ಕುಟುಂಬ ಸದಸ್ಯರು ಅಥವಾ ಇನ್ನಾವುದೇ ವಿವರಗಳನ್ನು ಹಂಚಿಕೊಳ್ಳಲು ಯಾವುದೇ ಅವಶ್ಯಕ ಕಾರಣಗಳಿಲ್ಲ.  

  • ಪೂರ್ವ ಸಂಯೋಜನೆ ಪ್ರಕಾರ ನಿಮ್ಮ ಫೇಸ್ ಬುಕ್ ಪ್ರೊಫೈಲ್ ನ್ನು (Profile) ಯಾರಾದರೂ ನೋಡಬಹುದು.  ನಿಮ್ಮ ಪ್ರೊಫೈಲ್ ಅನ್ನು ಲಾಕ್ ಮಾಡಿ ಪರಿಚಯದೊಂದಿಗೆ 10 ಸ್ನೇಹಿತರೊಂದಿಗೆ ಮಾತ್ರ ಹಂಚಿಕೊಳ್ಳಿ.

  • ನಿಮಗೆ ಬರುವ ಪೋಸ್ಟ್ ಗಳ (Post) ಮೇಲೆ ನಿಯಂತ್ರಣವಿರಲಿ.  ಯಾಕೆಂದರೆ ಫೇಸ್ ಬುಕ್ ನಲ್ಲಿ ವಸ್ತುಗಳನ್ನು ನೋಡುವಾಗ ನಿಮಗೆ ಕೆಲವೊಂದು ಅಹಿತಕರ ಅನುಭವ ಉಂಟುಮಾಡುವ  ಪೋಸ್ಟ್ ಗಳಿರಬಹುದು.  ಇತರ ಪೋಸ್ಟ್ ಗಳಲ್ಲಿ ನನಗೆ ಆಸಕ್ತಿ ಇಲ್ಲ, ಇವುಗಳನ್ನು ನನಗೆ ತೋರಿಸಬೇಡಿ ಎನ್ನುವ ಆಯ್ಕೆಯ ಮೂಲಕ ಅವುಗಳು ಮತ್ತೆ ನಿಮಗೆ ಕಾಣಿಸದಂತೆ ತಡೆಯಬಹುದು.

  • ಚಟುವಟಿಕೆ ವಿವರ (Activity log) ನಿಮ್ಮ ಎಲ್ಲಾ ಕ್ರಿಯೆಗಳನ್ನು ಫೇಸ್‌ಬುಕ್‌ನಲ್ಲಿ ದಾಖಲಿಸುತ್ತದೆ.ನೀವು ಹಂಚಿಕೊಂಡ ವಿಷಯವನ್ನು ಪರಿಶೀಲಿಸಲು ಮತ್ತು ನಿರ್ವಹಿಸಲು ಇದು ನಿಮ್ಮನ್ನು ಅನುಮತಿಸುತ್ತದೆ.  ಹಳೆಯ ಪೋಸ್ಟ್‌ಗಳನ್ನು ಅಳಿಸಲು, ನೀವು ಇನ್ನು ಮುಂದೆ ಸಂಪರ್ಕದಲ್ಲಿರದ ಜನರನ್ನು ಸ್ನೇಹಿತರ ಪಟ್ಟಿಯಿಂದ ತೆಗೆಯಲು, ನೀವು ಮಾಡಿದ ಪೋಸ್ಟ್‌ಗಳು ಎಲ್ಲಿ ಗೋಚರಿಸುತ್ತವೆ ಎಂಬುದನ್ನು ಬದಲಾಯಿಸಲು ಮತ್ತು ಇನ್ನೂ ಹೆಚ್ಚಿನದನ್ನು ಮಾಡಲು ನೀವು ಇದನ್ನು ಬಳಸಬಹುದು.

  • ನಿಮಗೆ ಬರುವ ನೋಟಿಫಿಕೇಶನ್ ಗಳನ್ನು ನಿಯಂತ್ರಿಸಿ.  ಇಲ್ಲದಿದ್ದರೆ ಪ್ರತಿಯೊಂದು ನೋಟಿಫಿಕೇಶನ್ ಅನ್ನು ನೋಡುವುದರಲ್ಲಿ ನಮ್ಮ ಅಮೂಲ್ಯ ಸಮಯ ವ್ಯರ್ಥವಾಗಬಹುದು. 

  • ನೀವು ಬೇಡವಾದ ವ್ಯಕ್ತಿಗಳ ಪ್ರೊಫೈಲ್ ಅನ್ನು ಬ್ಲಾಕ್ ಮಾಡಬಹುದು. 

  1. ವಾಟ್ಸಾಪ್:

     

whatsap information in kannada

180 ಕ್ಕೂ ಹೆಚ್ಚು ದೇಶಗಳಲ್ಲಿ ಕೋಟ್ಯಾಂತರ ಹೆಚ್ಚು ಜನರು ಯಾವುದೇ ಸಮಯದಲ್ಲಿ ಮತ್ತು ಎಲ್ಲಿಯಾದರೂ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂ‍ಪರ್ಕದಲ್ಲಿರಲು ವಾಟ್ಸಾಪ್ (Whatsapp) ಅನ್ನು ಬಳಸಬಹುದು.  ವಾಟ್ಸಾಪ್ (Whatsapp) ಉಚಿತವಾಗಿದೆ ಮತ್ತು ಸರಳ, ಸುರಕ್ಷಿತ, ವಿಶ್ವಾಸಾರ್ಹ ಸಂದೇಶ ಕಳುಹಿಸುವಿಕೆ ಮತ್ತು ಕರೆ ಮಾಡುವ ವೈಶಿಷ್ಟ್ಯತೆಯನ್ನು ನೀಡುತ್ತದೆ, ಇದು ಪ್ರಪಂಚದಾದ್ಯಂತ ಸ್ಮಾರ್ಟ್ ಫೋನ್‌ಗಳಲ್ಲಿ ಲಭ್ಯವಿದೆ.  ಫೋನ್ ನಲ್ಲಿ ವಾಟ್ಸಾಪ್ (Whatsapp) ಬಳಕೆಯಲ್ಲಿರುವ ಆಗ, ಬ್ರೌಸರ್ ಮುಖಾಂತರ ಕಂಪ್ಯೂಟರ್ ನಲ್ಲಿಯು ವಾಟ್ಸಾಪ್ (Whatsapp) ಬಳಸಬಹುದು.  ಪಠ್ಯ ಸಂದೇಶಗಳು,  ಧ್ವನಿ ಸಂದೇಶಗಳು,  ಚಿತ್ರಗಳು,  ದೃಶ್ಯಗಳು  ಇನ್ನು ಹಲವಾರು  ವಿಷಯಗಳನ್ನು  ಬೇರೆಯವರೊಂದಿಗೆ  ನೇರವಾಗಿ,  ಅಥವಾ  ಗುಂಪಿನಲ್ಲಿ  ಹಂಚಿಕೊಳ್ಳಬಹುದು.  

ವಾಟ್ಸಾಪ್ (Whatsapp) ಬಳಕೆಯ ಸಲಹೆಗಳು:

  • ಅಗತ್ಯವಿರುವ ಗುಂಪುಗಳಿಗೆ ಮಾತ್ರ ಸೇರಿಕೊಳ್ಳಿ.  ತುಂಬಾ ಗುಂಪುಗಳಿಗೆ ಸೇರಿಕೊಂಡರೆ ಅತಿ ಹೆಚ್ಚು ಮತ್ತು ಅನವಶ್ಯಕ ಸಂದೇಶ, ಫೋಟೋ, ವಿಡಿಯೋಗಳಿಂದ ನಿಮಗೆ ಕಿರಿಕಿರಿ ಉಂಟಾಗಬಹುದು.

  • ನಿಮ್ಮ ಮನೆಯವರ ‍ಚಾರ್ಟ್ ಗಳನ್ನು ಮತ್ತು ಗುಂಪುಗಳನ್ನು ಪಿನ್ ಮಾಡಿಕೊಳ್ಳಿ, ಇದರಿಂದ ನಿಮಗೆ ಬೇಕೆಂದಾಗ ಅವು ವಾಟ್ಸಪ್ (Whatsapp) ತೆರೆದ ನಂತರ ಕಾಣಿಸುತ್ತವೆ.   ಹೀಗೆ ಪಿನ್ ಮಾಡಿಕೊಳ್ಳದಿದ್ದರೆ ನಿಮ್ಮ ಮನೆಯವರ ಚಾಟ್ ಗಳು (chat) ಮತ್ತು ಗುಂಪುಗಳ ಸಾಲು ಸಾಲು ಮೆಸೇಜ್ ಗಳಿಂದಾಗಿ ಎಲ್ಲಿಯೋ ಕೆಳಗಡೆ ಹೋಗಿಬಿಡಬಹುದು. 

  • ಹಾಗೆಯೇ ನಿಮ್ಮ ಮನೆಯವರ ಚಾಟ್ (chat) ಮತ್ತು ಗುಂಪುಗಳ ಶಾರ್ಟ್ ಕಟ್ (Shortcut) ಅನ್ನು ನೀವು ಕ್ರಿಯೇಟ್ ಮಾಡಬಹುದು.   ಇದರಿಂದ ನೇರವಾಗಿ ಅವರನ್ನು ಸಂ‍ಪರ್ಕಿಸಲು ಅನುಕೂಲವಾಗುತ್ತದೆ.

  • ಒಂದು ಸಂದೇಶ, ಫೋಟೋ ಅಥವಾ ವಿಡಿಯೋವನ್ನು ತುಂಬಾ ಜನರಿಗೆ ಕಳುಹಿಸಬೇಕಾಗಿದ್ದಲ್ಲಿ ಬ್ರಾಡ್ ಕಾಸ್ಟ್ (Broadcast) ಮೂಲಕ ಕಳುಹಿಸಬಹುದು.   ಈ ವಿಧಾನವು ಹಬ್ಬದ ಶುಭಾಶಯ ತಿಳಿಸುವಾಗ ತುಂಬಾ ಅನುಕೂಲವಾಗುತ್ತದೆ. 

  • ಮುಖ್ಯವಾದ ಸಂದೇಶಗಳಿದ್ದರೆ * ಒತ್ತುವುದರ ಮೂಲಕ ಅವುಗಳನ್ನು ಬೇಕೆಂದಾಗ ಶೀಘ್ರವಾಗಿ ನೋಡಬಹುದು. 

  • ನಿಮ್ಮ ಪ್ರೊಫೈಲ್ (Profile) ಫೋಟೋ ಮತ್ತು ಇತರೆ ವಿವರ ನಿಮಗೆ ಗೊತ್ತಿರುವವರಿಗೆ ಮಾತ್ರ ಕಾಣಿಸುವಂತೆ ಸಂಯೋಜಿಸಿಕೊಳ್ಳಿ. 

  • ನಮಗೆ ಯಾವ ಗುಂಪಿಗೂ ಸೇರಿಕೊಳ್ಳಲು ಬೇಡವಾಗಿದ್ದರೆ ಅದನ್ನು ಕೂಡ ನೀವು ಸಂಯೋಜನೆಗಳ (Settings) ಮೂಲಕ ನಿಯಂತ್ರಿಸಬಹುದು.

  • ಪೂರ್ವ ಸಂಯೋಜಿತವಾಗಿ ಸಾಧಾರಣ (Normal) ಗಾತ್ರದ ಅಕ್ಷರಗಳು ಕಾಣಿಸುತ್ತವೆ ಬೇಕೆಂದಲ್ಲಿ ನೀವು ದೊಡ್ಡ ಗಾತ್ರದ ಅಕ್ಷರಗಳನ್ನು ಆಯ್ಕೆ ಮಾಡಬಹುದು. 

  • ನೀವು ಫೋನ್ ಬದಲಿಸುತ್ತೀರಿ ಮತ್ತು ವಾಟ್ಸಾಪ್ ನ (Whatsapp) ಹಳೆಯ ಸಂದೇಶಗಳನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ಎಂದಾದರೆ 'ಚಾಟ್ ಬ್ಯಾಕ್ ಅಪ್' (chat back up) ಆಯ್ಕೆ ಮೂಲಕ ಬ್ಯಾಕ್ ಅಪ್ (back up) ಮಾಡಿಕೊಂಡ ನಂತರ ಮತ್ತೊಂದು ಫೋನಿನಲ್ಲಿ ವಾಟ್ಸಪ್ ಮುಖಾಂತರ ರಿಸ್ಟೋರ್ (Restore) ಮಾಡಿಕೊಳ್ಳಬಹುದು.

  • ಪಾಪ್ ಅಪ್ ನೋಟಿಫಿಕೇಶನ್ (Pop up notification) ಬೇರೆ ಚಟುವಟಿಕೆ ಮಾಡುವಾಗ ಕಿರಿಕಿರಿ ಅನ್ನಿಸಿದರೆ ಅದನ್ನು ಬಂದು ಮಾಡಿಬಿಡಿ. 

  • ಸ್ವಯಂಚಾಲಿತವಾಗಿ ಫೈಲುಗಳು ಡೌನ್ಲೋಡ್ (Media audio download) ಆಗುವುದನ್ನು ತಪ್ಪಿಸಿ.  ಇದರಿಂದ ತುಂಬಾ ಅನುಕೂಲವಾಗುತ್ತದೆ.  ಮೊದಲನೆಯದಾಗಿ ಬೇಡವಾದ ಫೋಟೋ ಮತ್ತು ವಿಡಿಯೋಗಳು ತಾವಾಗಿಯೇ ಡೌನ್ಲೋಡ್ (Download) ಆಗುವುದಿಲ್ಲ ಎರಡನೆಯದು ಡೇಟಾ ಮತ್ತು ಬ್ಯಾಟರಿ ಉಳಿಯುತ್ತದೆ ಮೂರನೆಯದು ಎಲ್ಲಾ ಫೈಲ್ ಗಳನ್ನು ಡೌನ್ಲೋಡ್ (Download) ಮಾಡಿದ ಮೇಲೆ ಫೋನ್ ಮೆಮೊರಿ (Memory) ಕಡಿಮೆಯಾಗುವುದನ್ನು ತಪ್ಪಿಸಬಹುದು ಮತ್ತು ಅವುಗಳನ್ನು ಡಿಲೀಟ್ (Delete) ಮಾಡುವ ಅವಶ್ಯಕತೆಯೂ ಬರುವುದಿಲ್ಲ.  ಇದರಿಂದ ಬೇಕಾದ ವ್ಯಕ್ತಿಗಳಿಂದ, ಅವಶ್ಯಕ ಗುಂಪುಗಳಿಂದ, ನಿಮಗೆ ಇಷ್ಟವಾದಂತೆ ಡೌನ್ಲೋಡ್ (Download) ಮಾಡಿಕೊಳ್ಳಬಹುದು. 

  • ಆಗಾಗ ಗುಂಪುಗಳಿಗೆ ಬಂದಿರುವ ವಿವಿಧ ಫೋಟೋ ಮತ್ತು ವೀಡಿಯೋಗಳನ್ನು ಅಳಿಸಿಹಾಕಿ. ಬೇಕಾದರೆ ನೇರವಾಗಿ ಗುಂಪುಗಳಲ್ಲಿ ಅಥವಾ ಚಾಟ್ (Chat) ಗಳಲ್ಲಿ ಕ್ಲಿಯರ್ ಚಾಟ್ (Clear chat) ಆಯ್ಕೆಯನ್ನು ಆರಿಸಿಕೊಳ್ಳಿ. 

  • ಯಾವುದು ಮುಖ್ಯ ಮಾಹಿತಿಯನ್ನು ಅಥವಾ ಬೇಕಾದ ಹಳೆಯ ವಿಚಾರವನ್ನು ಹುಡುಕುವಾಗ ವಿವಿಧ ಚಾಟ್ ಗಳಲ್ಲಿ, ಗುಂಪುಗಳಲ್ಲಿ ಸ್ಕ್ರೋಲ್ (Scroll) ಮಾಡಿ ನೋಡೋ ಬದಲು ಮೇಲೆ ಕೊಟ್ಟಿರುವ ಹುಡುಕು (Search) ಆಯ್ಕೆ ಉಪಯೋಗಿಸಿಕೊಂಡು ಸಂಬಂಧಪಟ್ಟಂತ ಪದಗಳಿಂದ ನೋಡುವುದು ಸರಳ ವಿಧಾನ.

  1. ಇನ್ಸ್ಟಾಗ್ರಾಮ್ (Instagram):

    instagram images

     ಈ ವೇದಿಕೆಯಲ್ಲಿ ಚಿತ್ರಗಳು ಮತ್ತು ದೃಶ್ಯಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ನಿಮ್ಮಲ್ಲಿರುವ ಫೋಟೋಗಳನ್ನು, ಹೊಸದಾಗಿ ತೆಗೆದಿರುವ ಫೋಟೋಗಳನ್ನು, ವಿಡಿಯೋಗಳನ್ನು   ನಿಮ್ಮನ್ನು ಫಾಲೋ ಮಾಡುವವರೊಂದಿಗೆ ಹಂಚಿಕೊಳ್ಳಬಹುದು.  ಹಾಗೂ ನೀವು ಯಾರ ಫೋಟೋಗಳನ್ನು, ವಿಡಿಯೋಗಳನ್ನು ನೋಡಬಯಸುತ್ತಿರೊ ಅವರನ್ನು ಫಾಲೋ ಮಾಡಬೇಕಾಗುತ್ತದೆ.   ಇದು ಜಾಲತಾಣ ಮತ್ತು ಆ್ಯಪ್ (app) ರೂಪದಲ್ಲಿ ಲಭ್ಯ.  ಜಾಲತಾಣದ ಮೂಲಕ ನೀವು ಕೇವಲ ಫೋಟೋ ಮತ್ತು ವಿಡಿಯೋಗಳನ್ನು ನೋಡಬಹುದು.  ಆದರೆ ಆ್ಯಪ್ (app) ಸಹಾಯದಿಂದ ಫೋಟೋ ಮತ್ತು ವಿಡಿಯೋಗಳನ್ನು ಮಾಡಬಹುದು.   ಫೇಸ್ ಬುಕ್ (Facebook) ಖಾತೆಯ ಸಹಾಯದಿಂದಲೂ ಇದನ್ನು ಬಳಸಬಹುದು.

             ಇನ್ಸ್ಟಾಗ್ರಾಮ್ (Instagram) ಬಳಕೆಯ ಸಲಹೆಗಳು:

  • ಸಾರ್ವಜನಿಕವಾಗಿ ಹಂಚಿಕೊಳ್ಳಬಹುದಾದ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಮಾತ್ರ ಹಾಕಿ. 

  • ನಿಮ್ಮ ಖಾತೆಯು ಪ್ರೈವೇಟ್ (Private) ಅಥವಾ ಪಬ್ಲಿಕ್ (public) ಹೇಗೆ ಬೇಕೋ ಹಾಗೆ ಆರಿಸಿಕೊಳ್ಳಿ.  ಪ್ರೈವೇಟ್ (Private) ಮಾಡಿಕೊಂಡಿರಿ ಎಂದಾದರೆ ಯಾರಾದರೂ ನಿಮ್ಮನ್ನು ಫಾಲೋ ಮಾಡಬೇಕೆಂದರೆ ನೀವು ಅನುಮತಿ ನೀಡಬೇಕಾಗುತ್ತದೆ.  ಪಬ್ಲಿಕ್ (public) ಎಂದು ಮಾಡಿದರೆ ಯಾರಾದರೂ ಬಂದು ನಿಮ್ಮ ಪ್ರೊಫೈಲ್ ಅನ್ನು (Profile) ಫಾಲೋ ಮಾಡಬಹುದು.

  • ಎಷ್ಟು ಸಮಯ ನೀವು ಇನ್ಸ್ಟಾಗ್ರಾಮ್ (Instagram) ಬಳಸುತ್ತಿದ್ದೀರಿ ಎಂಬ ಮಾಹಿತಿಯನ್ನು ನೀವು ತಿಳಿಯಬಹುದು. ಇದರಿಂದ ನೀವು ಸಮಯ ನಿಗದಿಪಡಿಸಿಕೊಂಡು ಇನ್ಸ್ಟಾಗ್ರಾಮ್ (Instagram) ಬಳಸುವುದು ಸೂಕ್ತ, ಇಲ್ಲದಿದ್ದರೆ ಅನವಶ್ಯಕವಾಗಿ ಸಮಯವಾಗುವುದು. 

  1. ಟ್ವಿಟರ್ (Twitter):

    twitter images

     ಜಗತ್ತಿನಲ್ಲಿ ಏನೇನು ನಡೆಯುತ್ತಿದೆ ಮತ್ತು ಜನರು ಯಾವುದರ ಬಗ್ಗೆ ಹೆಚ್ಚು ‍ಚರ್ಚೆ ಮಾಡುತ್ತಿದ್ದಾರೆ   ಅನ್ನುವ ವಿಚಾರವನ್ನು ಅರಿತುಕೊಳ್ಳಲು ಟ್ವಿಟರ್ ಅನುಕೂಲವಾಗಿದೆ.  ಹಲವಾರು ಸುದ್ದಿ-ಸಮಾಚಾರಗಳು ಟ್ವಿಟರ್ (Twitter) ಸಿಗುವುದು ‍ಸರ್ವೇಸಾಮಾನ್ಯ.  ಯಾವುದಾದರೂ ಇಲಾಖೆ, ವ್ಯಕ್ತಿ, ಸಂಸ್ಥೆಗಳ ಆಗುಹೋಗುಗಳ ಬಗ್ಗೆ ತಿಳಿಯಬೇಕೆಂದರೆ ನೀವು ಅದಕ್ಕೆ ಸಂಬಂಧಪಟ್ಟಂತೆ ಖಾತೆಯನ್ನು ಅನುಸರಿಸಬೇಕಾಗುತ್ತದೆ (follow).  # ಹ್ಯಾಷ್ ಟ್ಯಾಗ್ ಬಳಸುವುದರ ಮೂಲಕ ಒಂದು ವಿಚಾರದ ಬಗ್ಗೆ ಆಗುತ್ತಿರುವ ‍ಚರ್ಚೆಯನ್ನು ಅರಿಯಬಹುದು ಮತ್ತು ಅದರ ಸುತ್ತ ಆಗುತ್ತಿರುವ ಎಲ್ಲಾ  ವಿವರಗಳನ್ನು ಟ್ವೀಟ್ ಗಳ  ರೂಪದಲ್ಲಿ ತಿಳಿಯಬಹುದು.  ಇಂದು ಯಾವ ವಿಷಯ ಟ್ರೆಂಡ್ ನಲ್ಲಿ (Trend) ಇದೆ ಅನ್ನುವುದನ್ನು ತಿಳಿದುಕೊಳ್ಳಬಹುದು.   

 




ಟ್ವಿಟರ್ (Twitter) ಬಳಕೆಯ ಸಲಹೆಗಳು:

  •      ಸುದ್ದಿ ಸಮಾಚಾರಗಳನ್ನು ಪ್ರಕಟಣೆಗಳನ್ನು ನೇರವಾಗಿ ಆಯಾ ಇಲಾಖೆಯ ಅಧಿಕೃತ ಟ್ವಿಟರ್ ಖಾತೆಯಿಂದ ತಿಳಿದುಕೊಳ್ಳಬಹುದು.

  • ಯಾವುದಾದರೂ ಉತ್ಪನ್ನ ಅಥವಾ ಸೇವೆಯಲ್ಲಿ ವ್ಯತ್ಯಯವಾಗಿದ್ದು ನಿಮಗೆ ಏನಾದರೂ ಸಮಸ್ಯೆ ಇದ್ದರೆ ಅದಕ್ಕೆ ಸಂಬಂಧಪಟ್ಟಂತೆ ಟ್ವಿಟರ್ (Twitter) ಖಾತೆಗೆ ನೇರ ಸಂದೇಶ ಕಳುಹಿಸುವುದರ ಮೂಲಕ ಸೇವೆಯನ್ನು ಪಡೆಯಬಹುದು. 

  • ನೀವಿರುವ ನಗರದ, ಇಂಗ್ಲಿಷ್ ಮಾತ್ರವಲ್ಲದೆ ಕನ್ನಡ ಮತ್ತು ಇತರೆ ಭಾಷೆಯ ಟ್ವೀಟ್ ಗಳನ್ನು ತೋರಿಸುವಂತೆ ಸಂಯೋಜಿಸಬಹುದು. 

  • ಸಂಯೋಜನೆಗಳ (Settings) ಸಹಾಯದಿಂದ ಡೇಟಾ ಸೇವರ್ (Data Saver) ಆಯ್ಕೆಯನ್ನು ಬೇಕಿದ್ದರೆ ಆರಿಸಿಕೊಳ್ಳಿ. ಇದರಿಂದ ಟ್ವಿಟರ್ (Twitter) ಬಳಸುವಾಗ ವಿಡಿಯೋಗಳು ತಾವಾಗಿಯೇ ಚಾಲನೆ (Play) ಆಗುವುದಿಲ್ಲ ಮತ್ತು ಕಡಿಮೆ ಗುಣಮಟ್ಟದ ಚಿತ್ರಗಳು ಡೌನ್ಲೋಡ್ (Download) ಆಗುತ್ತವೆ. 

  1. ಲಿಂಕಡಿನ್ (Linkedin):

    ಈ ಜಾಲತಾಣದ ವೇದಿಕೆಯಿಂದ ವಿವಿಧ ವೃತ್ತಿಯಲ್ಲಿ ತೊಡಗಿಕೊಂಡಿರುವ ವೃತ್ತಿಪರರನ್ನು ಬೆಸೆಯಲು ಸಹಾಯವಾಗಿದೆ.  ಪ್ರತಿ ವೃತ್ತಿಪರರು ನೋಂದಣಿ ಮಾಡಿಕೊಂಡು ತಮ್ಮ ಶಿಕ್ಷಣ, ಕೌಶಲ್ಯಗಳು, ಕೆಲಸ ಮಾಡುತ್ತಿರುವ ಕಚೇರಿ ವಿವರ, ಹೀಗೆ ಇನ್ನು ಹಲವು ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ.  ಇದು ವೃತ್ತಿಪರರು ನಿರಂತರವಾಗಿ ಹೊಸದನ್ನು ಕಲಿಯಲು,  ಬೇರೆ ವೃತ್ತಿಪರರು ಏನನ್ನು ಮಾಡುತ್ತಿದ್ದಾರೆ ಅನ್ನುವ ಅರಿವನ್ನು ಪಡೆಯಲು, ಬೇರೆ ಕಂಪನಿಯಲ್ಲಿ ಇರುವ ಉದ್ಯೋಗ ಮಾಹಿತಿ, ಉದ್ಯೋಗದಾತರಿಗೆ ಸೂಕ್ತ ವೃತ್ತಿಪರ ಆಯ್ಕೆಗೆ ಅನುಕೂಲ ಇತ್ಯಾದಿ  ಚಟುವಟಿಕೆಗಳಿಗೆ  ಸಹಾಯವಾಗುತ್ತದೆ. ಇದನ್ನು ಉಪಯೋಗಿಸಲು ಸ್ಮಾರ್ಟ್ ಫೋನ್ (Smartphone), ಇಂಟರ್ನೆಟ್ (Internet) ಕನೆಕ್ಷನ್ ಮತ್ತು ಮೊಬೈಲ ನಂಬರ್ ಬೇಕು.   

ಲಿಂಕ್ ಡಿನ್ (Linkedin) ಬಳಕೆಯ ಸಲಹೆಗಳು:

  • ಪ್ರತಿಯೊಬ್ಬ ವೃತ್ತಿಪರರು ಇದನ್ನು ಉಪಯೋಗಿಸಿಕೊಂಡು ಹೊಸದು ಏನನ್ನಾದರೂ ಕಲಿಯಲು ಸಹಾಯವಾಗುತ್ತದೆ.

  • ಕೆಲಸ ಹುಡುಕುವವರಿಗೆ ಮತ್ತು ಬೇರೆ ಕೆಲಸ ಮಾಡ ಬಯಸುವವರಿಗೆ ಇದು ಒಳ್ಳೆಯ ವೇದಿಕೆಯನ್ನು ಕಲ್ಪಿಸುತ್ತದೆ.

  • ನೀವು ಏನನ್ನು ಕಲಿಯುತ್ತಿದ್ದೀರಿ ಮತ್ತು ಯಾವ ಕೆಲಸವನ್ನು ಮಾಡುತ್ತಿದ್ದೀರಿ ಮತ್ತು ನಿಮಗೆ ಎಷ್ಟೆಲ್ಲಾ ಕೌಶಲ್ಯಗಳು ಗೊತ್ತು ಎನ್ನುವುದನ್ನು ತಿಳಿಯಪಡಿಸುವಿದರ ಮೂಲಕ ನೀವು ವೃತ್ತಿಯಲ್ಲಿ ಹೆಚ್ಚು ಪ್ರಗತಿ ಸಾಧಿಸಲು ಸಹಾಯವಾಗುತ್ತದೆ. 

  • ನೀವು ಕೆಲಸ ಬದಲಾವಣೆ ಮಾಡಿ ಹೊಸ ಕೆಲಸಕ್ಕೆ ಸೇರಿಕೊಂಡ ಮೇಲೆ, ನಿಮ್ಮ ಹಳೆಯ ಕಚೇರಿಯ ಬಗ್ಗೆ ಮಾಹಿತಿ ಮತ್ತು ಹಳೆಯ ಸಹೋದ್ಯೋಗಿಗಳೊಂದಿಗೆ ವೃತ್ತಿಪರ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಬಹುದು.

  • ನೀವು ಏನನ್ನಾದರೂ ಹೊಸ ಕೆಲಸ ಉದ್ಯೋಗ ಮಾಡಬೇಕಿದ್ದರೆ ಅಥವಾ ನಿಮ್ಮದೇ ಸ್ವಂತ ವ್ಯವಹಾರ ಆರಂಭಿಸಬೇಕೆಂದರೆ ನಿಮ್ಮ ಲಿಂಕಡಿನ್ ಜಾಲ (Linkedin website) ನೆರವಾಗುತ್ತದೆ. 

  • ವಿವಿಧ ರೀತಿಯ ವ್ಯವಹಾರಗಳು, ಸೆಮಿನಾರುಗಳು (Seminar), ಕಾರ್ಯಗಳು, ತರಬೇತಿ ಕಾರ್ಯಕ್ರಮಗಳು ಹೀಗೆ ಹಲವು ಮಾಹಿತಿಗಳು ಲಭ್ಯವಾಗುತ್ತವೆ. 

  • ಅಷ್ಟೇ ಅಲ್ಲದೆ ಲಿಂಕಡಿನ್ (Linkedin) ಅಲ್ಲಿ ಹಲವಾರು ಕೋರ್ಸುಗಳು (Courses) ಕಲಿಯಲು ಲಭ್ಯವಿವೆ.

  • ಬೇರೆಯವರೊಂದಿಗೆ ಕನೆಕ್ಟ್ ಮಾಡುವ ಮೊದಲು ಅವರ ಪ್ರೊಫೈಲ್ ಸರಿಯಾಗಿದೆಯೇ ಮತ್ತು ಅವರು ಕೊಟ್ಟಿರುವ ವಿವರ ವಿಶ್ವಾಸಾರ್ಹ ಎಂಬುದನ್ನು ಖಚಿತಪಡಿಸಿಕೊಳ್ಳಿ.

  1.  ಯೂಟ್ಯೂಬ್ (Youtube):

    create youtube account

     ಇದು ಕೂಡ ಅತ್ಯಂತ ಜನಪ್ರಿಯ ಮತ್ತು ಪ್ರತಿಯೊಬ್ಬರಿಗೂ ಮಹತ್ವಪೂರ್ಣ ವೇದಿಕೆಯಾಗಿದೆ ಅಂದರೆ ತಪ್ಪಾಗಲಾರದು.  ಯೂಟ್ಯೂಬ್ (Youtube) ಮೂಲಕ ಪ್ರತಿಯೊಬ್ಬರೂ ವಿಡಿಯೋಗಳನ್ನು ವೀಕ್ಷಿಸಬಹುದು. ಪ್ರತಿಯೊಬ್ಬ ಯೂಟ್ಯೂಬ್ (Youtube) ಬಳಕೆದಾರರು, ಸಂಘ-ಸಂಸ್ಥೆಗಳು, ಚಲನಚಿತ್ರ ‍ನಿರ್ಮಾಣ ಸಂಸ್ಥೆಗಳು, ವಿವಿಧ ಹವ್ಯಾಸ ಇರುವವರು, ಸಂಗೀತಗಾರರು, ಬರಹಗಾರರು, ತಂತ್ರಜ್ಞರು, ಹೀಗೆ ಪ್ರತಿಯೊಬ್ಬರಿಗೂ ತಾವು ತಯಾರಿಸಿದ ವಿವಿಧ ರೂಪದ ವಿಡಿಯೋಗಳನ್ನು ಜಗತ್ತಿನೊಂದಿಗೆ ಹಂಚಿಕೊಳ್ಳಲು ಯುಟ್ಯೂಬ್ ಮೂಲಕ ಸಾಧ್ಯವಾಗುತ್ತದೆ. ಈ ವೇದಿಕೆ ಮೂಲಕ ಪ್ರತಿಯೊಬ್ಬರೂ ಅನಿಸಿಕೆಯನ್ನು, ಅಭಿಪ್ರಾಯವನ್ನು, ಮಾಹಿತಿಯನ್ನು, ಅವರಲ್ಲಿರುವ ಪ್ರತಿಭೆಗೆ ಅವಕಾಶವನ್ನು, ವಿಡಿಯೋ ಮೂಲಕ ತಿಳಿಸಲು ವರದಾನವಾಗಿದೆ.  ಎಷ್ಟೋ ಜನರಿಗೆ ಯೂಟ್ಯೂಬ್ (Youtube) ವಿಡಿಯೋಗಳು ತಯಾರಿಕೆಯಿಂದ ಹಣಗಳಿಕೆಯು ಸಾಧ್ಯವಾಗಿದೆ. 

            ಯೂಟ್ಯೂಬ್ (Youtube) ಬಳಕೆ ಸಲಹೆಗಳು:

  • ಪ್ರತಿಯೊಬ್ಬರೂ ಯೂಟ್ಯೂಬ್ ನಲ್ಲಿ (Youtube) ವಿಡಿಯೋವನ್ನು ಅಪ್ಲೋಡ್ (Upload) ಮಾಡುವ ಅವಕಾಶವಿರುತ್ತದೆ.

  • ವಿಡಿಯೋ ನೋಡುವಾಗ ಸೆಟ್ಟಿಂಗ್ಸ್ (Settings) ನಲ್ಲಿ ವಿಡಿಯೋ ಗುಣಮಟ್ಟವನ್ನು ಖಂಡಿತ ಆರಿಸಿಕೊಳ್ಳಿ. ಇದರಿಂದ ಅನಾವಶ್ಯಕವಾಗಿ ಡೇಟಾ (Data) ಹಾಳಾಗುವುದನ್ನು ತಪ್ಪಿಸಬಹುದು.

  • ಎಲ್ಲರೂ ವಿಡಿಯೋದಲ್ಲಿ ನಿಜವಾದ ಮತ್ತು ಸರಿಯಾದ ಮಾಹಿತಿಯನ್ನು ಕೊಡುತ್ತಾರೆ ಎಂದೇನಿಲ್ಲ.  ಹಾಗಾಗಿ ವಿಡಿಯೋದಲ್ಲಿನ ಮಾಹಿತಿಯನ್ನು ನಂಬುವ ಮೊದಲು ಒಮ್ಮೆ ಯೋಚಿಸಿ.  ಮುಖ್ಯವಾಗಿ ಅದನ್ನು ಹಾಕಿದವರು ಯಾರು ಮತ್ತು ಅವರ ಅರ್ಹತೆಗಳು ಏನು ಎಂಬುದನ್ನು ತಿಳಿಯಲು ಪ್ರಯತ್ನಿಸಿ.  ಉದಾಹರಣೆಗೆ ಔಷಧಿಯೊಂದರ ವಿಡಿಯೋ ಯಾರೋ ಒಬ್ಬರು ಹಾಕಿದ್ದಾರೆ.  ಈ ವಿಡಿಯೋವನ್ನು ಹಾಕಿದವರು ಒಬ್ಬರು ವೈದ್ಯರೆ ಅಥವಾ ತಜ್ಞರೇ ಎಂಬುದನ್ನು ತಿಳಿಯಿರಿ.

  • ಕೆಲವು ಜನ ಸುಮ್ಮನೇ ತಮ್ಮ ವಿಡಿಯೋಗಳಿಗೆ ಹೆಚ್ಚು ವೀಕ್ಷಣೆಗಳನ್ನು ಪಡೆಯಲು ಸುಳ್ಳು ಮಾಹಿತಿ ಅಥವಾ ತಪ್ಪು ಮಾಹಿತಿ ಹಾಕಬಹುದು ಅಂತಹ ಚಾಲನ್ ಗಳಿಂದ ದೂರವಿರಿ.

  • ನಿಮ್ಮಲ್ಲಿ ಏನಾದರೂ ವಿಚಾರವಿದ್ದರೆ, ಜ್ಞಾನವಿದ್ದರೆ, ಪ್ರತಿಭೆ ಇದ್ದರೆ, ಹಾಗೂ ಬೇರೆಯವರೊಂದಿಗೆ ಹಂಚಿಕೊಳ್ಳಲು ಇಷ್ಟವಿದ್ದರೆ ನೀವು ವಿಡಿಯೋ ತಯಾರಿಸಿ ಹಾಕಬಹುದು.

  • ಕಮೆಂಟ್ (Comment) ಮಾಡುವಾಗ ಜಾಗರೂಕತೆಯಿಂದ ಮಾಡಿ ನೀವು ಮಾಡುವ ಕಮೆಂಟ್ ಎಲ್ಲರಿಗೂ ಕಾಣಿಸುತ್ತದೆ.

  •  ಕಮೆಂಟ್ ಮಾಡುವಾಗ ನಿಮ್ಮ ವೈಯಕ್ತಿಕ ವಿವರ, ಉದಾಹರಣೆಗೆ ಮಿಂಚಂಚೆ, ಬ್ಯಾಂಕ್ ಅಕೌಂಟ್ ನಂಬರ್, ಫೋನ್ ನಂಬರ್, ಮನೆ ವಿಳಾಸ ಯಾವತ್ತು ಹಂಚಿಕೊಳ್ಳಬೇಡಿ. 

  • ಮತ್ತೆ ಮತ್ತೆ ನೋಡಬಯಸುವ ವಿಡಿಯೋಗಳನ್ನು ಡೌನ್ ಲೋಡ್ (Download) ಮಾಡಿಟ್ಟುಕೊಂಡು ಇಂ‍ಟರ್ನೆಟ್ ಸಂಪರ್ಕ ಇಲ್ಲದೆ ನೋಡಬಹುದು. 

  • ನೀವು ಯಾವ ವಿಷಯದ ಮೇಲೆ ವಿಡಿಯೋಗಳನ್ನು ಹುಡುಕುತ್ತೀರಾ ಅದೇ ವಿಷಯಗಳ ವಿಡಿಯೋಗಳು ಮತ್ತು ಜಾಹೀರಾತುಗಳು ನಿಮಗೆ ದಿನೇದಿನೇ ಕಾಣಿಸುತ್ತಾ ಹೋಗುತ್ತವೆ.  ಹಾಗಾಗಿ ನೀವು ಹುಡುಕುತ್ತಿರುವ ವಿಷಯದ ಬಗ್ಗೆ ಜಾಗರೂಕರಾಗಿರಿ.

  • ಸೈನ್ ಚಾಲಿತ (Sign) ಮುಂದಿನ ವಿಡಿಯೋ (auto play) ಇದನ್ನು ಬೇಡ ಎಂದು ಸಂಯೋಜಿಸುವುದು ಉತ್ತಮ.  ಇಲ್ಲದಿದ್ದರೆ ಅವಶ್ಯಕತೆ ಇಲ್ಲದಿದ್ದರೂ ಮುಂದಿನ ವಿಡಿಯೋ ತಾನಾಗಿಯೇ ಪ್ಲೇ (Play) ಯಾಗುವುದು.

  • ನೀವು ಯೂಟ್ಯೂಬ್ (Youtube) ನಲ್ಲಿ ವಿಡಿಯೋ ವೀಕ್ಷಿಸಲು ಎಷ್ಟು ಸಮಯ ಕಳೆಯುತ್ತಿದ್ದೀರಾ ಎಂಬುದರ ಅರಿವಿರಲಿ.  Time watch ಈ ವೈಶಷ್ಟ್ಯತೆಯ ಮೂಲಕ ನೀವು ಎಷ್ಟು ಸಮಯ ಯೂಟ್ಯೂಬ್ (Youtube) ನಲ್ಲಿ ಕಳೆಯುತ್ತಿದ್ದೀರಾ, ಯಾವಾಗ ವಿಶ್ರಾಂತಿ ಬೇಕು ನಿಮಗೆ ಮತ್ತು ಇತರೆ ಮಾಹಿತಿಯನ್ನು ಕೊಟ್ಟು ಜಾಗ್ರತೆಯಿಂದ ಬಳಸುವಲ್ಲಿ ಸಹಾಯಮಾಡುತ್ತದೆ.  ಅಜ್ಞಾತ (in cognito) ಈ ಆಯ್ಕೆಯ ಸಹಾಯದಿಂದ ನೀವು ವಿಡಿಯೋಗಳನ್ನು ಹುಡುಕಬಹುದು ಮತ್ತು ವೀಕ್ಷಣೆಮಾಡಬಹುದು.  ಆದರೆ ಅದರ ಇತಿಹಾಸ ನಿಮ್ಮ ಫೋನಿನಲ್ಲಿ ಸಂಗ್ರಹವಾಗುವುದಿಲ್ಲ.  ಸೂಕ್ಷ್ಮ ಮತ್ತು ವೈಯಕ್ತಿಕ ವಿಚಾರಗಳ ಕುರಿತು ವಿಡಿಯೋಗಳನ್ನು ಹುಡುಕುವಾಗ ಮತ್ತು ನೋಡುವಾಗ ಇದು ಒಳ್ಳೆಯ ಆಯ್ಕೆ.




೫. ಮಿಂಚಂಚೆ (Email)

     ವಿದ್ಯುನ್ಮಾನ ತಂತ್ರಜ್ಞಾನ ಬಳಸಿ ಜಗತ್ತಿನ ಒಂದು ಮೂಲೆಯಿಂದ ಮತ್ತ್ಯಾವುದೋ ಮೂಲೆಗೆ ಕೆಲವು ಕ್ಷಣ ನಿಮಿಷಗಳಲ್ಲಿ ಮಾಹಿತಿಯನ್ನು, ಅರ್ಜಿಯನ್ನು ಅಥವಾ ಇನ್ಯಾವುದೋ ವಿವರಗಳನ್ನು ಮಿಂಚಿನಂತೆ ಇನ್ನೊಬ್ಬರಿಗೆ ಕಳಿಸುವುದು ಇಮೇಲ್ ನಿಂದ ಇವತ್ತು ಸಾಧ್ಯವಾಗಿದೆ.  ಮಿಂಚಿನ ಸೇವೆಯನ್ನು ನಾವು ಪರಸ್ಪರ ಸ್ನೇಹಿತರೊಂದಿಗೆ, ಕುಟುಂಬದವರೊಡನೆ, ಕಚೇರಿ ಕೆಲಸಗಳಿಗೆ, ಅಥವಾ ಇನ್ಯಾವುದೋ ಉದ್ಯೋಗ, ವ್ಯಾಪಾರ ಹೀಗೆ ಹಲವಾರು ವಿಷಯಗಳಿಗೆ ಪರಿಣಾಮಕಾರಿಯಾಗಿ ಬಳಸಬಹುದು. 

ಚಿತ್ರ ೫ ಮಿಂಚಂಚೆ.jpg


     ಮಿಂಚಂಚೆ (Email) ಸೇವೆಯನ್ನು ವಿವಿಧ ಜಾಲತಾಣಗಳು (Website) ನೀಡುತ್ತವೆ.  ಅವುಗಳಲ್ಲಿ ಪ್ರಮುಖವಾದವು ಜಿ-ಮೇಲ್ (Gmail), ಯಾಹೂ ಮೇಲ್ (Yahoo mail), ರೆಡಿಫ್ ಮೇಲ್ ಇತ್ಯಾದಿ.  ಹೆಚ್ಚು ಪ್ರಚಲಿತದಲ್ಲಿರುವ ಜಿ-ಮೇಲ್ (Gmail) ಅನ್ನು ಆಧಾರವಾಗಿಟ್ಟುಕೊಂಡು ಮಿಂಚಂಚೆ (Email) ಕುರಿತು ಕೆಲವು ವಿಚಾರಗಳನ್ನು ಈಗ ತಿಳಿಯೋಣ ಬನ್ನಿ.

ಮಿಂಚಂಚೆ ನೋಂದಣಿ (Email registration):

     Gmail.com ಇಂದು ಬ್ರೌ‍ಸರ್ ನಲ್ಲಿ (Browser) ಟೈಪ್ ಮಾಡುವ ಮೂಲಕ, ಜಿ-ಮೇಲ್ (Gmail) ಅಪ್ಲಿಕೇಶನ್ ಬಳಸಿಕೊಂಡು ಮೊಬೈಲ್, ಟ್ಯಾಬ್ಲೆಟ್ ಸಾಧನಗಳಿಂದ ಜಿಮೇಲ್ (Gmail) ಗೆ ನೋಂದಣಿ ಮಾಡಬಹುದು.  ನಿಮ್ಮ ಹೆಸರು, ನೀವು ಬಯಸುವ ಜಿ-ಮೇಲ್ ಐಡಿಯ (Gmail-Id) ರೂಪ, ‍ಪಾಸ್ ವರ್ಡ್ (Password) ಮತ್ತು ಇತರೆ ಸಾಮಾನ್ಯ ವಿವರಗಳು ಬೇಕಾಗುತ್ತವೆ.  ಪರದೆ (Screen) ಮೇಲೆ ಬರುವ ಹಂತಗಳನ್ನು ಓದಿ ಅನುಸರಿಸುತ್ತಾ ಹೋದರೆ ಸುಲಭವಾಗಿ ಜಿ-ಮೇಲ್ (Gmail) ಖಾತೆಯನ್ನು ಕೆಲವು ನಿಮಿಷಗಳಲ್ಲಿ ತೆರೆಯಬಹುದು.  ಜಿ-ಮೇಲ್ (Gmail) ಖಾತೆಯನ್ನು ತೆರೆದ ನಂತರ ನಿಮಗೆ ಜಿ-ಮೇಲ್ (Gmail) ನಿಂದ ಸ್ವಾಗತ ಮಿಂಚಂಚೆ (Email) ಬರುತ್ತದೆ.  ಈಗ ನೀವು ವಿವಿಧ ಆಯ್ಕೆಗಳನ್ನು ಒಮ್ಮೆ ಅವಲೋಕಿಸಿ. 

‍     ಸೂಚನೆ : ಪಾಸ್ ವರ್ಡ್ (Password) ಕುರಿತಂತೆ ಹೆಚ್ಚಿನ ವಿಚಾರವನ್ನು ತಿಳಿಯಲು ಅಂತರ್ಜಾಲ ಸುರಕ್ಷತೆ ಅಧ್ಯಾಯವನ್ನು ಓದಿರಿ. 

     ಹೊಸ ಮಿಂಚಂಚೆ (Email) ಕಳಿಸುವುದು ಯಾರಿಗಾದರೂ ನೀವು ಮಿಂಚಂಚೆಯನ್ನು (Email) ಕಳುಹಿಸಲು ಮೊದಲು ಕಾಂಪೋಸ್ (Compose) ಎಂದು ಕಾಣುವ ಗುಂಡಿಯನ್ನು (Button) ಒತ್ತಬೇಕು.  ನೀವು ಯಾರಿಗೆ ಮಿಂಚಂಚೆ (Email) ಯನ್ನು ಕಳಿಸಬೇಕಾಗಿದೆ ಅವರ ಮಿಂಚಂಚೆ (Email) ವಿಳಾಸವನ್ನು (Email-id) ಸರಿಯಾಗಿ ನಮೂದಿಸಬೇಕು. ಎರಡನೆಯದಾಗಿ ಮಿಂಚಂಚೆ ವಿಷಯ ಕುರಿತು ಚಿಕ್ಕದಾಗಿ ಎರಡರಿಂದ ನಾಲ್ಕು ಶಬ್ದಗಳಲ್ಲಿ ಬರೆಯಬೇಕು.  ವಿಷಯದ ಕೆಳಗಿರುವ ಬಾಕ್ಸಿನಲ್ಲಿ (Mail body) ಸಂಪೂರ್ಣ ವಿವರಗಳನ್ನು ಬರೆಯಬಹುದು.  ಬರೆಯುವಾಗ ನಿಮಗಿಷ್ಟವಾದ ಫಾಂಟ್, ವಿನ್ಯಾಸ, ಬಣ್ಣಗಳು, ಬೋಲ್ಡ್ ಮಾಡುವುದು, ಇಟಾಲಿಕ್ (italic) ಮುಂತಾದ ಆಯ್ಕೆಗಳನ್ನು ಬಳಸಿಕೊಳ್ಳಬಹುದು.  ಇನ್ನೊಂದು ಮಹತ್ವಪೂರ್ಣ ವಿಚಾರವೆಂದರೆ ಕಡತಗಳನ್ನು ಲಗತ್ತಿಸುವುದು.  ತಂತಿ ಐಕಾನ್ ಮೇಲೆ ಕ್ಲಿಕ್ ಮಾಡುವುದರಿಂದ ನಿಮಗೆ ಸಣ್ಣ ಕಿಟಕಿ (Window) ತೆರೆದುಕೊಳ್ಳುತ್ತದೆ.  ಅದರ ಮೂಲಕ ನೀವು ಕಳುಹಿಸ ಬೇಕಾಗಿರುವ ಕಡತವನ್ನು (ಚಿತ್ರ, ವಿಡಿಯೋ, ವರ್ಡ್ ಡಾಕ್ಯುಮೆಂಟ್ ಇತ್ಯಾದಿ) ಆರಿಸಿಕೊಳ್ಳಬೇಕು, ಕೆಲವು ಸೆಕೆಂಡು, ನಿಮಿಷಗಳ ನಂತರ ಕಡತವು ಇ-ಮೇಲ್ ಗೆ ಲಗತ್ತಿಸಲ್ಪಡುತ್ತದೆ.  ನಂತರ ನೀವು ಮಿಂಚಂಚೆ (Email) ಮುಖ್ಯ ಭಾಗದಲ್ಲಿ ಕೊನೆಯಲ್ಲಿ ಸಹಿಯನ್ನು (ನಿಮ್ಮ ಬಗ್ಗೆ ವಿವರಗಳನ್ನು) ಕೊಡಬಹುದು. 

     ಈಗ ನಿಮ್ಮ ಮಿಂಚಂಚೆ (Email) ಕಳುಹಿಸಲು ಸಿದ್ಧವಾಗಿದೆ.  ಸೆಂಡ್ (Send) ಅನ್ನು ಒತ್ತುವುದರ ಮೂಲಕ ಮಿಂಚಂಚೆ (Email) ಅನ್ನು ಕಳಿಸಬಹುದು.  ನೀವು ಒಬ್ಬರಿಗಿಂತ ಜಾಸ್ತಿ ಜನಕ್ಕೆ ಮಿಂಚಂಚೆ (Email) ಕಳುಹಿಸಬೇಕಾದಲ್ಲಿ ಹಲವಾರು ಜನರ ಮಿಂಚಂಚೆ (Email) ವಿಳಾಸಗಳನ್ನು "  ;  " ನಿಂದ ‍ಬೇರ್ಪಡಿಸಿ ಎಲ್ಲರಿಗೂ ಕಳುಹಿಸಬಹುದು. 

     ಕೆಳಗೆ ಕಾಣಿಸುವ ಸಿಸಿ (Cc) ಅಲ್ಲಿ ಅಂದರೆ ಕಾರ್ಬನ್ ಕಾಫಿಯನ್ನು (Copy) ಸಂಬಂಧಪಟ್ಟಂತ ಇತರೆ ಕೆಲವು ಜನರ ಮಿಂಚಂಚೆ (Email) ಗಳನ್ನು ಸೇರಿಸಬಹುದು. 

ಬಂದಿರುವ ಮಿಂಚಂಚೆಗಳು (Inbox):

     ಒಳಬರುವ ಮಿಂಚಂಚೆಗಳ (Email) ವಿಭಾಗವನ್ನು ಇನ್ ಬಾಕ್ಸ್ (Inbox) ಎಂದು ಕರೆಯುತ್ತಾರೆ.  ಇದನ್ನು ನೀವು ಎಸ್ಎಂಎಸ್ ಇನ್ ಬಾಕ್ಸಿಗೆ (Inbox) ಸಮನಾಗಿ ನೋಡಬಹುದು.  ಇದರಲ್ಲಿ ನೇರವಾಗಿ ನಿಮಗೆ ಇನ್ಯಾರೋ ಕಳಿಸಿರುವ ಮಿಂಚಂಚೆಗಳು (Email) ಇರುತ್ತವೆ, ಜೊತೆಗೆ ನೀವು ಪಡೆಯುತ್ತಿರುವ ಹಲವು ಸೇವೆಗಳ ಕುರಿತು ಮಿಂಚಂಚೆಗಳು (Email) ಬರುತ್ತವೆ.  ಉದಾಹರಣೆಗೆ ಆನ್ ಲೈನ್ ಶಾಪಿಂಗ್ (Online shooping) ಮಾಡಿದಾಗ ನಿಮ್ಮ ಆರ್ಡರ್ ಕುರಿತ ಸ್ಥಿತಿಗತಿ, ಬ್ಯಾಂಕಿಂಗ್ ವ್ಯವಹಾರ ಮಾಡಿದಾಗ ವ್ಯವಹಾರಗಳ ಕುರಿತ ಮಾಹಿತಿ ಇತ್ಯಾದಿ.  ನೀವು ಯಾವ ಜಾಲತಾಣಗಳಲ್ಲಿ (Website) ಅಂದುಕೊಂಡಿದ್ದೀರಿ, ನೋಟಿಫಿಕೇಶನ್ ಗಳಿಗಾಗಿ ಚಂದಾದಾರಿಕೆ (Subscribe) ಮಾಡಿದ್ದೀರಿ ಹೀಗೆ ವಿವಿಧ ರೀತಿಯ ಮಿಂಚಂಚೆಗಳು (Email) ಬಂದು ಸೇರುತ್ತವೆ.  ಹಾಗೂ ಹಲವಾರು ಪ್ರಾಯೋಜಿತ ಮಿಂಚಂಚೆಗಳು (Email) ಬರುತ್ತವೆ. 

     ಬಂದಿರುವ ಹಲವು ಮಿಂಚಂಚೆಗಳಲ್ಲಿ (Email) ನಿಮಗೆ ಬೇಕಾಗಿರುವ ಮಿಂಚಂಚೆಯನ್ನು (Email) ಆಯ್ಕೆ ಮಾಡಿಕೊಂಡಾಗ ಅದು ಒಳಗಡೆ ವಿಷಯಗಳೊಂದಿಗೆ ತೆರೆದುಕೊಳ್ಳುತ್ತದೆ.  ವಿಷಯವನ್ನು ಸಂಪೂರ್ಣವಾಗಿ ನೀವು ಓದಿಕೊಳ್ಳಬೇಕು ಮತ್ತು ಯಾವುದಾದರೂ ಕಡತಗಳನ್ನು ಲಗತ್ತಿಸಿದ್ದೇವೆ, ಅವುಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.  ಎಲ್ಲ ವಿವರಗಳನ್ನು ಓದಿದ ನಂತರ ನೀವು ಪ್ರತಿಕ್ರಿಯಿಸ ಬೇಕಾಗಿದ್ದಾರೆ ನಿಮಗೆ ಮಿಂಚಂಚೆ (Email) ಕಳಿಸಿರುವವರಿಗೆ ರಿಪ್ಲೈ (Reply) ಆಯ್ಕೆಯ ಮೂಲಕ ಅಥವಾ ರಿಪ್ಲೈ ಆಲ್ (Reply all) ಆಯ್ಕೆ ಮುಖಾಂತರ ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಬಹುದು.  ಹಾಗೆಯೇ ಮಿಂಚಂಚೆ (Email) ಅನ್ನು ಬೇರೆಯವರೊಂದಿಗೆ ಹಂಚಿ ಕೊಳ್ಳಬೇಕೆಂದರೆ ಫಾರ್ವರ್ಡ್ (Forward) ಆಯ್ಕೆಯನ್ನು ಮಾಡಿಕೊಳ್ಳಬಹುದು.  ಬೇಡವಾದ ಮಿಂಚಂಚೆಗಳನ್ನು (Email) ತೆಗೆದುಹಾಕಬಹುದು (Delete). 

ಹೊರ ಹೋಗಿರುವ ಮಿಂಚಂಚೆಗಳು (Sent items):

     ಹೊಸದಾಗಿ ಮಿಂಚಂಚೆ (Email) ಒಂದನ್ನು ನೀವು ಬರೆದು ಯಾರಿಗಾದರೂ ಕಳಿಸಿದಾಗ ಅದರ ಪ್ರತಿಯು ಹೊರಹೋಗಿರುವ ಮಿಂಚಂಚೆಗಳ (Email) ಪಟ್ಟಿಯಲ್ಲಿ (sent items) ಬಂದು ಸೇರುತ್ತದೆ.  ಇದುವರೆಗೂ ನೀವು ಯರ‍್ಯಾರಿಗೆ ಮಿಂಚಂಚೆಗಳನ್ನು (Email) ಕಳಿಸಿದ್ದೀರಿ, ಅವೆಲ್ಲವುಗಳ ಸಂಪೂರ್ಣ ಮಾಹಿತಿಯನ್ನು, ಅಂದರೆ ಮಿಂಚಂಚೆ (Email) ಪಡೆದವರ ವಿಳಾಸ (Email-id), ಯಾವ ದಿನ ಯಾವ ಸಮಯಕ್ಕೆ ಕಳಿಸಿದ್ದೀರಿ ಮತ್ತು ಯಾವ ಎಲ್ಲಾ ಕಡತಗಳನ್ನು ಲಗತ್ತಿಸಿದ್ದೀರಿ ಎಂಬ ಸಂಪೂರ್ಣ ಮಾಹಿತಿ ಮತ್ತು ಇತಿಹಾಸವನ್ನು ತಿಳಿಯಬಹುದು.  ನಿರೀಕ್ಷಿಸಿದ ಸಮಯದಲ್ಲಿ ನಿಮಗೆ ಪ್ರತಿಕ್ರಿಯೆ ಬರದಿದ್ದರೆ (sent items) ನಿಂದ ಮಿಂಚಂಚೆಯನ್ನು (Email) ತೆರೆದು (Reply) ಆಯ್ಕೆಯನ್ನು ಮಾಡಿಕೊಂಡು, ವಿಷಯದ ಕುರಿತು ಪ್ರತಿಕ್ರಿಯೆಗಾಗಿ (Follow up) ಮಿಂಚಂಚೆಯನ್ನು (Email) ಕಳುಹಿಸಬಹುದು. 

ಡ್ರಾಫ್ಟ್ (Draft) :

     ನೀವು ಯಾವುದಾದರೂ ಹೊಸ ಮಿಂಚಂಚೆಯನ್ನು (Email) ಬರೆಯುತ್ತಿರುವಾಗ, ಕಡತವನ್ನು ಲಗತ್ತಿಸುತ್ತಿರುವಾಗ, ಹೊರಹೋಗುವ ಪಟ್ಟಿಯಲ್ಲಿರುವ ಮಿಂಚಂಚೆಯನ್ನು (Email) ತೆರೆದು ಪ್ರತಿಕ್ರಿಯೆಯನ್ನು ನೀಡುತ್ತಿರುವಾಗ, ಹೀಗೆ ಯಾವುದೋ ಕಾರಣಕ್ಕೆ ಅಪೂರ್ಣವಾದ ಮಿಂಚಂಚೆಗಳು ಡ್ರಾಫ್ಟ್ (Draft) ವಿಭಾಗದಲ್ಲಿ ಉಳಿಸಲ್ಪಟ್ಟಿರುತ್ತವೆ. ಅವಶ್ಯಕವಾಗಿದ್ದರೂ ಅ‍ಪೂರ್ಣವಾಗಿರುವ ಮಿಂಚಂಚೆಗಳನ್ನು ಪೂರ್ಣಗೊಳಿಸಿ ಕಳಿಸಬಹುದು ಅಥವಾ ಅವುಗಳು ಅನವಶ್ಯಕ ಅನಿಸಿದರೆ ರದ್ದು (delete) ಮಾಡಬಹುದು. 

     ಜಿಮೇಲ್ (Gmail) ಅಲ್ಲಿ ಕೊಟ್ಟಿರುವ ಸಂಯೋಜನೆಗಳ (Settings) ವಿಭಾಗಕ್ಕೆ ಹೋಗಿ ವಿವಿಧ ರೀತಿಯ ಸಂಯೋಜನೆಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಿ.  ಬೇರೆಯವರ ಕಂಪ್ಯೂಟರ್ ಅಥವಾ ಮೊಬೈಲ್ ನಲ್ಲಿ ನಿಮ್ಮ ಜಿಮೇಲ್ (Gmail) ಬಳಸಬೇಕಾದ ಸಂ‍ಧರ್ಭದಲ್ಲಿ, ಬಳಸಿದ ನಂತರ ತಪ್ಪದೇ (Log out) ಮಾಡಿ.








೬. ಬ್ಯಾಂಕಿಂಗ್ ಸೇವೆಗಳು (Banking Services)

      ಗ್ರಾಹಕರು ಬ್ಯಾಂಕುಗಳ ಜೊತೆ ನಡೆಸುವ ವ್ಯವಹಾರಗಳು, ಒಂದೇ ಬ್ಯಾಂಕಿನೊಳಗೆ ನಡೆಯುವ ವ್ಯವಹಾರಗಳು, ಬ್ಯಾಂಕು ಬ್ಯಾಂಕುಗಳ ನಡುವೆನಡೆಯುವ ವ್ಯವಹಾರಗಳು ಮತ್ತು ಇತರೆ ಹಲವು ಹಣಕಾಸು ವ್ಯವಹಾರಗಳಿಗೆ ತಂತ್ರಜ್ಞಾನದ ಸಹಾಯದಿಂದ ಸಾಫ್ಟ್ ವೇರ್ ಉತ್ಪನ್ನ ಮತ್ತು ಸೇವೆಗಳನ್ನು ಬಳಸಲಾಗುತ್ತಿದೆ.ಈ ಸಮಯದಲ್ಲಿ ತಂತ್ರಜ್ಞಾನದ ಸ್ಪರ್ಶದಿಂದ ಬ್ಯಾಂಕಿನ ಹಲವಾರು ಸೇವಾ ಸೌಲಭ್ಯಗಳು ಗಣಕೀಕರಣಗೊಂಡಿವೆ.  ಗ್ರಾಹಕರು ಬ್ಯಾಂಕ್ ಸೇವಾ ಸೌಲಭ್ಯಗಳನ್ನು ಮನೆಯಲ್ಲಿ ಕುಳಿತು ಮೊಬೈಲ್, ಕಂಪ್ಯೂಟರ್, ಟ್ಯಾಬ್ಲೆಟ್ ಮತ್ತು ಇತರೆ ಸಾಧನೆಗಳಿಂದ ಬ್ಯಾಂಕ್ ಅವರೊಂದಿಗೆ ಸಂಪರ್ಕ ಸಾಧಿಸಿ ಪಡೆಯಬಹುದು.  ನಮಗೆಲ್ಲ ತಿಳಿದಿರುವ ಹಾಗೆ ಮೊದಲು ಒಬ್ಬರ ಖಾತೆಯಿಂದ ಮತ್ತೊಬ್ಬರು ಖಾತೆಗೆ ಹಣ‍ ವರ್ಗಾವಣೆಯಾಗಲು ಜಾಸ್ತಿ ಸಮಯ ಬೇಕಾಗುತ್ತಿತ್ತು.  ಆದರೆ ಈಗ ಕೆಲವೇ ಸೆಕೆಂಡು ನಿಮಿಷಗಳಲ್ಲಿ ಅವರು ಎಲ್ಲಿದ್ದರೂ ಅವರ ಖಾತೆಗೆ ಹಣವನ್ನು ಕಳುಹಿಸಬಹುದು.  ಈ ಎಲ್ಲಾ ಬ್ಯಾಂಕಿಂಗ್ ಸೇವೆಗಳನ್ನು ತಂತ್ರಜ್ಞಾನ ಬಳಸಿ ರಚಿಸಿರುವುದರಿಂದ ಪ್ರತಿಯೊಬ್ಬರು ಮೂಲಭೂತ ವಿಚಾರಗಳನ್ನು ಅರಿತು ಬಳಸುವುದರಿಂದ ತಂತ್ರಜ್ಞಾನದ ಪರಿಣಾಮಕಾರಿ ಸದುಪಯೋಗ, ವೇಗದ ವ್ಯವಹಾರಗಳು, ಸ್ವಯಂ ಸೇವೆ ಮತ್ತು ಸುರಕ್ಷಿತ ವಿಧಾನ ಇತರೆ ಅಂಶಗಳು ಸಾಧ್ಯವಾಗುತ್ತವೆ. ಬನ್ನಿ ಹಲವು ಬ್ಯಾಂಕಿಂಗ್ ಸೇವೆಗಳ ಕುರಿತು ವಿಚಾರಗಳನ್ನು ತಿಳಿಯೋಣ. 

ನೆಟ್ ಬ್ಯಾಂಕಿಂಗ್:

     ಈ ಸೇವೆಯನ್ನು ಬಳಸಿ ಹಲವಾರು ಬ್ಯಾಂಕಿಂಗ್ ಸೌಲಭ್ಯಗಳನ್ನು ನಾವು ಉಪಯೋಗಿಸಬಹುದು.  ಬ್ಯಾಂಕ್ ಖಾತೆಯ ಮಾಹಿತಿ, ವಿಳಾಸ ಮತ್ತು ಇತರ ವಿವರಗಳು, ಬ್ಯಾಂಕ್ ಶಾಖೆ ಮಾಹಿತಿ, ಖಾತೆಯಲ್ಲಿರುವ ಹಣ- ವಹಿವಾಟುಗಳು, ಹಣ ‍ವರ್ಗಾವಣೆ, ನಿಗದಿತ ಠೇವಣಿ, ಮರುಕಳಿಸುವ ಠೇವಣಿ.  ಡೆಬಿಟ್ ‍ಕಾರ್ಡ್, ಕ್ರೆಡಿಟ್ ಕಾರ್ಡ್ (Debit Card,Credit Card), ಸಾಲದ ವಿವರಗಳು, ಗ್ರಾಹಕ ಸೇವಾ ಮಾಹಿತಿ, ಹೀಗೆ ಇನ್ನೂ ಹತ್ತು ಹಲವು ಬ್ಯಾಂಕಿಂಗ್ ಗೆ ಸಂಬಂಧಪಟ್ಟಂತಹ ವೈಶಿಷ್ಟ್ಯತೆಗಳು ವೈಶಿಷ್ಟ್ಯತೆ ನೆಟ್ ಬ್ಯಾಂಕಿಂಗ್ ನಲ್ಲಿ ಲಭ್ಯ. ನೆಟ್ ಬ್ಯಾಂಕಿಂಗ್ ಎಂದರೆ ಅಂತರ್ಜಾಲ (WEBSITE) ಬಳಸಿ ನೀವು ಮಾಡಬಹುದಾದ ಬ್ಯಾಂಕಿಂಗ್ ಚಟುವಟಿಕೆಗಳು. 

ಚಿತ್ರ ೬ ಬ್ಯಾಂಕಿಂಗ್ ಸೇವೆಗಳು.jpg


ನೆಟ್ ಬ್ಯಾಂಕಿಂಗ್ (Net banking) ಸೇವೆಯನ್ನು ಬಳಸಲು ಮೊದಲು ನೋಂದಣಿ ಮಾಡಬೇಕಾಗುತ್ತದೆ.  ನೆಟ್ ಬ್ಯಾಂಕಿಂಗ್ ನೋಂದಣಿಗಾಗಿ ನಿಮ್ಮ ಖಾತೆಯಿರುವ ಶಾಖೆಯಲ್ಲಿ ‍ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಕೆಲವೊಂದು ಬ್ಯಾಂಕುಗಳು ನಿಮ್ಮ ಪಾಸ ಬುಕ್ (Passbook), ಡೆಬಿಟ್ ಕಾ‍ರ್ಡ್ (Debitcard), ಮೊಬೈಲ್ ಸಂಖ್ಯೆ, ಮಿಂಚಂಚೆ ವಿವರ ಮತ್ತು ಇತರೆ ಮಾಹಿತಿಗಳ ಆಧಾರದ ಮೇಲೆ ನೇರವಾಗಿ ಆನ್ ಲೈನ್ (Online) ಅಲ್ಲಿಯೇ ನೋಂದಣಿ ಮಾಡಲು ಅವಕಾಶ ಮಾಡಿಕೊಡುತ್ತವೆ. ನಿಮ್ಮ ಬ್ಯಾಂಕಿನ ನೆಟ್ ಬ್ಯಾಂಕಿಂಗ್ ವಿಳಾಸವನ್ನು (Website url) ತಪ್ಪದೇ ತಿಳಿದುಕೊಂಡು, ನೆನಪಿನಲ್ಲಿಟ್ಟುಕೊಳ್ಳಿ.  ಯೂಸರ್ ನೇಮ್ (User name), ಪಾಸ್ ವರ್ಡ್ (Password), ಗೌಪ್ಯ ಪ್ರಶ್ನೋತ್ತರಗಳು ಇದೆಲ್ಲವೂ ನೀವು ಮಾತ್ರ ತಿಳಿದುಕೊಳ್ಳಬೇಕು. ಬೇರೆ ಯಾರೂ ಕೇಳಿದರು ಅವರ ಜೊತೆ ಹಂಚಿಕೊಳ್ಳಬಾರದು.  ನೋಂದಣಿ ಮಾಡುವಾಗ ಖಾತೆ ಕುರಿತ ಎಲ್ಲಾ ವಿವರಗಳು ನಿಮ್ಮ ಜೊತೆಯಿರಲಿ.  ಒಳ್ಳೆಯ ಅಂತರ್ಜಾಲ (Website) ಸಂಪರ್ಕವಿರಲಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಗೆ ಸಂದೇಶಗಳು ಬರುತ್ತಿವೆಯೇ ಅನ್ನುವುದನ್ನು ಖಚಿತಪಡಿಸಿಕೊಳ್ಳಿ.  ಹಲವು ಬ್ಯಾಂಕಿಂಗ್ ಸೇವೆಗಳ ಆಧಾರವಾಗಿರುವ ಓಟಿಪಿ (OTP), ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಮಿಂಚಂಚೆಗೆ ಬರುತ್ತವೆ. ನೋಂದಣಿ ಮಾಡುವಾಗ ವಿವರಗಳನ್ನು ಸರಿಯಾಗಿ ಪರಿಶೀಲಿಸಿಕೊಂಡು ತುಂಬಿರಿ. ಯೂಸರ್ ನೇಮ್ (User Name), ಪಾಸ್ ವರ್ಡ್ (Password), ಮತ್ತು ಇತ್ಯಾದಿ ವಿವರಗಳು ಕೇಸ್ ಸೆನ್ಸಿಟಿವ್ (Case sensitive) ಆಗಿರುತ್ತವೆ.   ಕೊಡುವ ಮಾಹಿತಿಯು ದೊಡ್ಡ ಅಕ್ಷರ ಅಥವಾ ಸಣ್ಣ ಅಕ್ಷರ ಅಥವಾ ಎರಡು  ಬಳಸಿದ್ದರೆ ಮತ್ತೆ ನೀವು ಅದೇ ವಿಧಾನದಲ್ಲಿ ಬಳಸಬೇಕು. ಹಲವಾರು ಸಾಫ್ಟ ವೇರ್ ಗಳು ದೊಡ್ಡ ಅಕ್ಷರ ಮತ್ತು ಸಣ್ಣ ಅಕ್ಷರ ಮಾಹಿತಿಯನ್ನು ಬೇರೆಯೆಂದು ಪರಿಗಣಿಸುತ್ತವೆ. ಉದಾಹರಣೆಗೆ PASSWORD, Password ಮತ್ತು  password  ಈ ಮೂರು ಶಬ್ದಗಳನ್ನು ಓದುವಾಗ ಪಾಸ್ ವರ್ಡ್ (Password) ಎಂದೆ, ಓದಿದರೂ  ಸಾಫ್ಟ್ ವೇರ್ ಗೆ ಆ  ಮೂರು ಶಬ್ದಗಳು ಬೇರೆ ಬೇರೆಯೇ . 

ನೋಂದಣಿ ನಂತರ, ಅಂತರ್ಜಾಲ (Website) ಸಂಪರ್ಕದೊಂದಿಗೆ ಬ್ರೌಸರ್ ಬಳಸಿ, ನೆಟ್ ಬ್ಯಾಂಕಿಂಗ್ ವಿಳಾಸ (URL) ಯೂಸರ್ ನೇಮ್ (User name), ಪಾಸ್ ವರ್ಡ್ (Password), ಓಟಿಪಿ (OTP) ಮತ್ತು ಇತರೆ ಮಾಹಿತಿಯಿಂದ ನೆಟ್ ಬ್ಯಾಂಕಿಂಗ್ ಸೇವೆಗೆ ಕಿಟಕಿ (Window) ತೆರೆದುಕೊಳ್ಳುತ್ತದೆ.  ಅಲ್ಲಿ ಬ್ಯಾಂಕ್ ಖಾತೆ ವಿವರ, ಶಾಖೆಯ ವಿವರ, ಖಾತೆಯಲ್ಲಿರುವ ಬಾಕಿ ಮೊತ್ತ, ನೀವು ಮಾಡಿರುವ ವಿವಿಧ ವ್ಯವಹಾರಗಳು, ಸಂಖ್ಯೆ, ಮಿಂಚಂಚೆ, PAN ಸಂಖ್ಯೆ, ವಿಳಾಸ, ಎಲ್ಲ ಮಾಹಿತಿ ಸರಿ ಇರುವುದನ್ನು ಖಚಿತಪಡಿಸಿಕೊಳ್ಳಿ.  ಪಾಸ್ ವರ್ಡ್



ಸಾಮಾಜಿಕ ಜಾಲತಾಣಗಳ ಬಗ್ಗೆ ಮಾಹಿತಿ ತಿಳುದಿಕೊಳ್ಳಿ ಸಾಮಾಜಿಕ ಜಾಲತಾಣಗಳ ಬಗ್ಗೆ ಮಾಹಿತಿ  ತಿಳುದಿಕೊಳ್ಳಿ Reviewed by Admin on ಸೆಪ್ಟೆಂಬರ್ 28, 2023 Rating: 5

ಕಾಮೆಂಟ್‌ಗಳಿಲ್ಲ